Karnataka NewsBangalore News

ಹೊಸ ವೋಟರ್ ಐಡಿ ಪಡೆಯಲು ಕೊನೆಯ ಅವಕಾಶ! ಇಂದೇ ಮೊಬೈಲ್ ಮೂಲಕ ಅರ್ಜಿ ಹಾಕಿ

ಲೋಕಸಭಾ ಚುನಾವಣೆ 2024 ಇನ್ನೇನು ಆರಂಭವಾಗಲಿದೆ. 18 ವರ್ಷ ತುಂಬಿದ ಪ್ರತಿಯೊಬ್ಬ ಭಾರತೀಯ ಪ್ರಜೆ ಮತಗಟ್ಟೆಯಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಲು, ಅಂದರೆ ಮತದಾನ ಮಾಡಲು ಮುಖ್ಯವಾಗಿ ಮತದಾರರ ಗುರುತಿನ ಚೀಟಿ ಬೇಕಾಗುತ್ತದೆ. ಹಾಗಾಗಿ ನೀವು ನಿಮ್ಮ ವೋಟರ್ ಐಡಿ ಹೊಂದಿಲ್ಲದೆ ಇದ್ದರೆ ತಕ್ಷಣ ಅದನ್ನು ಮಾಡಿಸಿಕೊಳ್ಳಿ.

ಆನ್ಲೈನ್ ನಲ್ಲಿ ಮಾಡಿಸಿಕೊಳ್ಳಿ ವೋಟರ್ ಐಡಿ!

ಹೊಸದಾಗಿ ವೋಟರ್ ಐಡಿಗಾಗಿ (Voter ID) ಅರ್ಜಿ ಸಲ್ಲಿಸುವವರು ಈಗ ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್ ನಲ್ಲಿ ವೋಟರ್ ಐಡಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. https://voterportal.eci.gov.in/ ಮೊದಲು ಈ ಅಧಿಕೃತ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ. New registration for general elections ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

Link your phone number to Voter ID, Follow this easy method

ಈಗ ಕಾಣಿಸುವ ಅರ್ಜಿ ಫಾರ್ಮ್ ನಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ. ಈಗ ಹೊಸದಾಗಿ ವೋಟರ್ ಐಡಿ ಪಡೆದುಕೊಳ್ಳಲು ನಿಮ್ಮ ಅರ್ಜಿ ಸಲ್ಲಿಕೆ ಆಗಿರುತ್ತದೆ.

ಗೃಹಲಕ್ಷ್ಮಿ ಯೋಜನೆಯ 8ನೇ ಕಂತಿನ ಹಣಕ್ಕೆ ಕಡ್ಡಾಯ ರೂಲ್ಸ್ ಜಾರಿ! ಬಿಗ್ ಅಪ್ಡೇಟ್

ತಿದ್ದುಪಡಿ ಮಾಡಿಕೊಳ್ಳಲು!

ಇನ್ನು ನಿಮ್ಮ ವೋಟರ್ ಐಡಿಯಲ್ಲಿ ಹೆಸರು ಅಡ್ರೆಸ್ ಮೊದಲಾದ ತಿದ್ದುಪಡಿ ಆಗಬೇಕು ಎಂದಾದರೆ, ಇದಕ್ಕಾಗಿ ಫಾರಂ ನಂಬರ್ 8 ಭರ್ತಿ ಮಾಡಬೇಕು. ಇದೇ ವೆಬ್ ಸೈಟ್ ನಲ್ಲಿ ನಿಮಗೆ Shifting of residence / Correction of Entries in existing Electoral roll or replacement of EPIC ಎನ್ನುವ ಆಯ್ಕೆ ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ ನಂತರ ಅಗತ್ಯ ಇರುವ ತಿದ್ದುಪಡಿಯನ್ನ ಇಲ್ಲಿ ನೀವು ಮಾಡಿಕೊಳ್ಳಬಹುದು.

Voter idವೋಟರ್ ಐಡಿ ಕಳೆದು ಹೋದರೆ ಮತ್ತೆ ಪಡೆದುಕೊಳ್ಳುವುದು ಹೇಗೆ?

E-epic downloads ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಿಮ್ಮ ಒರಿಜಿನಲ್ ವೋಟರ್ ಐಡಿ ಸಂಖ್ಯೆ ನಮೂದಿಸಿದರೆ ಹೊಸದಾಗಿ ವೋಟರ್ ಐಡಿ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ಇರುತ್ತದೆ.

ಮೊಬೈಲ್ ನಲ್ಲಿಯೇ ಸುಲಭವಾಗಿ ಚೆಕ್ ಮಾಡಿಕೊಳ್ಳಿ ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್!

ಅರ್ಜಿ ಸಲ್ಲಿಸಿದ ಮೇಲೆ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಮೇಲೆ ತಿಳಿಸಲಾಗಿರುವ ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ. Voter Service Portal ಏನು ಆಯ್ಕೆ ಕಾಣಿಸುತ್ತದೆ, ಅದನ್ನು ಕ್ಲಿಕ್ ಮಾಡಿ. ಈಗ ನಿಮಗೆ ವೋಟರ್ ಐಡಿ ಗೆ ಸಂಬಂಧಪಟ್ಟ ಹಾಗೆ ಬೇರೆ ಬೇರೆ ಆಯ್ಕೆಗಳು ಇವೆ.

ಅವುಗಳಲ್ಲಿ ವೋಟರ್ ಐಡಿ ಸ್ಟೇಟಸ್ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ಮೊಬೈಲ್ ಸಂಖ್ಯೆ ಕ್ಯಾಪ್ಚರ್ ನಂಬರ್ ನಮೂದಿಸಿ. ಬಳಿಕ ಅರ್ಜಿ ಸಲ್ಲಿಸಿದ ನಂತರ ಸಿಕ್ಕ ಎಕನಾಲೆಜ್ಮೆಂಟ್ ಸಂಖ್ಯೆಯನ್ನು ಹಾಕಿ ನಿಮ್ಮ ಅರ್ಜಿ ಸ್ಟೇಟಸ್ ತಿಳಿದುಕೊಳ್ಳಬಹುದು.

ಇಂತಹವರಿಗೆ ಸಿಗದೇ ಇರಬಹುದು ಉಚಿತ ವಿದ್ಯುತ್! ಗೃಹಜ್ಯೋತಿ ಯೋಜನೆ ಹೊಸ ಅಪ್ಡೇಟ್

ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕು ಯಾವುದಾದರು ಸಣ್ಣಪುಟ್ಟ ಕಾರಣಗಳನ್ನ ಹೇಳಿ ಮತದಾನ ಮಾಡುವ ಕೆಲಸದಿಂದ ಜಾರಿ ಕೊಳ್ಳಬೇಡಿ. ವೋಟರ್ ಐಡಿ ಮಾಡಿಸಿದ್ರೆ ಮತದಾನಕ್ಕಾಗಿ ಮಾತ್ರವಲ್ಲದೆ ನೀವು ನಿಮ್ಮ ಅಡ್ರೆಸ್ ಪ್ರೂಫ್ ಆಗಿ ಬಳಸಿಕೊಳ್ಳಬಹುದು. ಹಾಗಾಗಿ ತಪ್ಪದೆ ಎಲ್ಲರೂ ವೋಟರ್ ಐಡಿ ಮಾಡಿಸಿಕೊಳ್ಳಿ ಮತ್ತು ಮತದಾನದ ಹಕ್ಕನ್ನು ಚಲಾಯಿಸಿ.

Get New Voter ID, Apply via mobile today in Online

Our Whatsapp Channel is Live Now 👇

Whatsapp Channel

Related Stories