ರಾಜ್ಯದ ಎಲ್ಲಾ ಶಾಲಾ ಹೆಣ್ಣುಮಕ್ಕಳಿಗೆ ಸಿಹಿಸುದ್ದಿ, ಹೊಸ ಯೋಜನೆಯ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

ಹೆಣ್ಣುಮಕ್ಕಳ ಬಗ್ಗೆ ವಿಶೇಷವಾದ ಕಾಳಜಿ ವಹಿಸಬೇಕು, ಹಾಗಾಗಿ ಶುಚಿ ಯೋಜನೆಯನ್ನು ಈ ಹಿಂದೆ ಜಾರಿಗೆ ತರಲಾಗಿತ್ತು. ಇದು ವಿಶೇಷವಾಗಿ ಸರ್ಕಾರಿ ಶಾಲೆಗಳಲ್ಲಿ ಓದುವ ಹೆಣ್ಣುಮಕ್ಕಳಿಗೋಸ್ಕರ ಜಾರಿಗೆ ತಂದ ಯೋಜನೆ ಆಗಿತ್ತು.

ಸರ್ಕಾರಿ ಶಾಲೆಯಲ್ಲಿ ಸಾಕಷ್ಟು ಮಕ್ಕಳು ಓದುತ್ತಾರೆ. ಸಾಮಾನ್ಯವಾಗಿ, ಆರ್ಥಿಕವಾಗಿ ಕಷ್ಟದಲ್ಲಿ ಇರುವವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ (Government School) ಸೇರಿಸುವುದು ಉಂಟು. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಸಹಾಯ ಆಗಬೇಕು ಎಂದು ಸರ್ಕಾರವು ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತದೆ.

ಅದರಲ್ಲು ಹೆಣ್ಣುಮಕ್ಕಳ ಬಗ್ಗೆ ವಿಶೇಷವಾದ ಕಾಳಜಿ ವಹಿಸಬೇಕು, ಹಾಗಾಗಿ ಶುಚಿ ಯೋಜನೆಯನ್ನು (Shuchi Scheme) ಈ ಹಿಂದೆ ಜಾರಿಗೆ ತರಲಾಗಿತ್ತು. ಇದು ವಿಶೇಷವಾಗಿ ಸರ್ಕಾರಿ ಶಾಲೆಗಳಲ್ಲಿ ಓದುವ ಹೆಣ್ಣುಮಕ್ಕಳಿಗೋಸ್ಕರ ಜಾರಿಗೆ ತಂದ ಯೋಜನೆ ಆಗಿತ್ತು.

ಈ ಯೋಜನೆಯ ಮೂಲಕ ಸರ್ಕಾರಿ ಶಾಲೆಯಲ್ಲಿ ಓದುವ ಹೆಣ್ಣುಮಕ್ಕಳಿಗೆ ಅಗತ್ಯ ಇರುತ್ತದೆ ಎಂದು ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ಕೊಡಲಾಗುತ್ತಿತ್ತು. ಇದರಿಂದ ಎಲ್ಲಾ ಹೆಣ್ಣುಮಕ್ಕಳಿಗೆ ಅನುಕೂಲ ಆಗಿದ್ದಂತೂ ನಿಜ.. ಆದರೆ ಇದ್ದಕ್ಕಿದ್ದ ಹಾಗೆಯೇ ಈ ಯೋಜನೆಯನ್ನು ನಿಲ್ಲಿಸಲಾಗಿತ್ತು.

ರಾಜ್ಯದ ಎಲ್ಲಾ ಶಾಲಾ ಹೆಣ್ಣುಮಕ್ಕಳಿಗೆ ಸಿಹಿಸುದ್ದಿ, ಹೊಸ ಯೋಜನೆಯ ಆದೇಶ ಹೊರಡಿಸಿದ ರಾಜ್ಯ ಸರ್ಕಾರ - Kannada News

ಹೊಸ BPL ರೇಷನ್ ಕಾರ್ಡ್ ಪಡೆಯಲು ಈ 6 ರೂಲ್ಸ್ ಪಾಲಿಸುವುದು ಕಡ್ಡಾಯ! ಹೊಸ ನಿಯಮಗಳನ್ನು ತಿಳಿಯಿರಿ

ಆದರೆ ಈಗ ಸರ್ಕಾರವು ಮತ್ತೆ ಶುಚಿ ಯೋಜನೆಯನ್ನು (Govt Scheme) ಮುಂದುವರೆಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಮುಂದಾಗಿದೆ. ಶಾಲೆಗೆ ಹೋಗುವ ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು ಪೀರಿಯೆಡ್ಸ್ ಆಗುವುದು ಕಾಮನ್, ಆದರೆ ಬಡತನದಲ್ಲಿರುವ ಹೆಣ್ಣುಮಕ್ಕಳಿಗೆ ಆ ರೀತಿ ಆದಾಗ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ಖರೀದಿ ಮಾಡುವುದಕ್ಕೂ ಕೂಡ ಕಷ್ಟವಾಗುತ್ತದೆ.

Shuchi Yojaneಆ ಥರದ ಪರಿಸ್ಥಿತಿಯಲ್ಲಿ ಇರುವ ಹೆಣ್ಣುಮಕ್ಕಳಿಗೆ ಋತುಚಕ್ರದ ವೇಳೆ ಸ್ಯಾನಿಟರಿ ನ್ಯಾಪ್ಕಿನ್ ಇಲ್ಲದೆ ಓದಿಗೂ ತೊಂದರೆ ಆಗಿರುವ ಉದಾಹರಣೆ ಇದೆ, ಹಾಗಾಗಿ ಸರ್ಕಾರವು ಹೆಣ್ಣುಮಕ್ಕಳಿಗೆ ಶುಚಿ ಯೋಜನೆಯ ಮೂಲಕ ಇಡೀ ವರ್ಷ ಕೂಡ ಶಾಲೆಯಲ್ಲೇ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ಒದಗಿಸಲು ಮುಂದಾಗಿದೆ. ಈ ಶುಚಿ ಯೋಜನೆಯ ಮೂಲಕ ವರ್ಷದ 11 ತಿಂಗಳುಗಳ ಕಾಲ, ಹೆಣ್ಣುಮಕ್ಕಳಿಗೆ 10 ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ಹೊಂದಿರುವ ಯೂನಿಟ್ ಅನ್ನು ಕೊಡಲಾಗುತ್ತದೆ.

7ನೇ ತರಗತಿ ಪಾಸ್ ಆಗಿದ್ರು ಸಾಕು, ವಿಧಾನಸೌಧದಲ್ಲಿ ಸಿಗುತ್ತೆ ಕೆಲಸ! ಈಗಲೇ ಅರ್ಜಿ ಹಾಕಿ ಕೆಲಸ ಗಿಟ್ಟಿಸಿಕೊಳ್ಳಿ

ಆದರೆ ಈ ವರ್ಷ ಶಾಲೆಗಳು ಶುರುವಾಗಿ 3 ತಿಂಗಳು ಕಳೆದಿದೆ, ಹಾಗಾಗಿ ಈ ಸಮಯದಲ್ಲಿ ಸರ್ಕಾರವು ಉಳಿದಿರುವ ಇನ್ನು 8 ತಿಂಗಳುಗಳ ಕಾಲಕ್ಕೆ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ಕೊಡಬೇಕಾಗುತ್ತದೆ. ಸಧ್ಯಕ್ಕೆ ಈ ಯೋಜನೆಯ ಬಗ್ಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಶುಚಿ ಯೋಜನೆಯಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ಒದಗಿಸಲು, ಸ್ಯಾನಿಟರಿ ನ್ಯಾಪ್ಕಿನ್ ವಿತರಣೆಗಾಗಿ, ಟೆಂಡರ್ ಕೂಡ ಕರೆಯಲಾಗಿದೆ ಎಂದು ಹೇಳಲಾಗುತ್ತಿದೆ..

ಈ ಒಂದು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಕೂಡ ಪೂರ್ತಿಯಾಗಬಹುದು ಎನ್ನಲಾಗುತ್ತಿದ್ದು, ಈ ವರ್ಷ ಸೆಪ್ಟೆಂಬರ್ ಇಂದಲೇ ಸರ್ಕಾರಿ ಶಾಲೆಯಲ್ಲಿ ಎಲ್ಲಾ ಹೆಣ್ಣುಮಕ್ಕಳಿಗೆ ಉಚಿತವಾಗಿ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ನೀಡಲಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ. ನಮ್ಮ ರಾಜ್ಯದ ಒಟ್ಟು 17.99 ಲಕ್ಷ ವಿದ್ಯಾರ್ಥಿನಿಯರಿಗೆ ಈ ಶುಚಿ ಯೋಜನೆಯ ಸೌಲಭ್ಯ ಸಿಗುತ್ತದೆ ಎಂದು ಹೇಳಲಾಗುತ್ತಿದೆ. ವಿದ್ಯಾರ್ಥಿನಿಯರು ಶಾಲೆಗೆ ಬರಬೇಕು ಎನ್ನುವ ಪ್ರಯತ್ನದಲ್ಲಿ ಇದು ಕೂಡ ಒಂದು ಪ್ರಯತ್ನ ಆಗಿದೆ.

ಸಿಹಿ ಸುದ್ದಿ! ರಾಜ್ಯ ಸರ್ಕಾರದಿಂದ ಇನ್ನು 3 ಹೊಸ ಯೋಜನೆ ಜಾರಿಗೆ, ಈ ಬಾರಿ ಯಾರಿಗೆಲ್ಲ ಸಿಗಲಿದೆ ಯೋಜನೆಯ ಫಲ

Good news for all the school girls of the Karnataka state

Follow us On

FaceBook Google News

Good news for all the school girls of the Karnataka state