10ನೇ ತರಗತಿ ಹಾಗೂ ಪಿಯುಸಿ ಆದವರಿಗೆ ಸರ್ಕಾರಿ ಕೆಲಸ! ಬೆಂಗಳೂರಿನಲ್ಲಿ ಪೋಸ್ಟಿಂಗ್; ಅರ್ಜಿ ಸಲ್ಲಿಸಿ

Story Highlights

ಈ ಕೆಲಸಕ್ಕೆ ಸೇರಲು ಆಸಕ್ತಿ ಇದ್ದರೆ 2023ರ ಆಕ್ಟೊಬರ್ 30ರ ಒಳಗೆ ಅರ್ಜಿ ಸಲ್ಲಿಸಬಹುದು. ಕೆಲಸ ಸಿಕ್ಕರೆ ಬೆಂಗಳೂರಿನಲ್ಲಿ ಪೋಸ್ಟಿಂಗ್ (Bengaluru Posting) ಸಿಗುತ್ತದೆ.

ಒಂದು ವೇಳೆ ನೀವು ಕೇಂದ್ರ ಸರ್ಕಾರದ ಕೆಲಸ (Central Government Job) ಬೇಕು ಎಂದುಕೊಂಡಿದ್ದರೆ, ಇದೀಗ ನಿಮಗಾಗಿ ಒಂದು ಒಳ್ಳೆಯ ಅವಕಾಶವಿದೆ, ಬೆಂಗಳೂರಿನ Institute of Wood Science and Technology ಯಲ್ಲಿ ಪ್ರಸ್ತುತ ಖಾಲಿ ಇರುವ ಕೆಲಸಗಳನ್ನು ಭರ್ತಿ ಮಾಡಲು ಸೂಚನೆ ನೀಡಲಾಗಿದ್ದು ಒಟ್ಟು, 14 ಡ್ರೈವರ್, ಟೆಕ್ನಿಶಿಯನ್ ಹುದ್ದೆಗಳು ಖಾಲಿ ಇದೆ.

ನಿಮಗೆ ಈ ಕೆಲಸಕ್ಕೆ ಸೇರಲು ಆಸಕ್ತಿ ಇದ್ದರೆ 2023ರ ಆಕ್ಟೊಬರ್ 30ರ ಒಳಗೆ ಅರ್ಜಿ ಸಲ್ಲಿಸಬಹುದು. ಕೆಲಸ ಸಿಕ್ಕರೆ ಬೆಂಗಳೂರಿನಲ್ಲಿ ಪೋಸ್ಟಿಂಗ್ (Bengaluru Posting) ಸಿಗುತ್ತದೆ. ಈ ಕೆಲಸಕ್ಕೆ ಸಂಬಂಧಿಸಿದ ಹಾಗೆ ಪೂರ್ತಿ ಮಾಹಿತಿ ತಿಳಿಸಿಕೊಡುತ್ತೇವೆ ನೋಡಿ..

ಪಿಯುಸಿ ಪಾಸ್ ಆಗಿದ್ರೆ ಸಾಕು ಗ್ರಾಮ ಪಂಚಾಯಿತಿಯಲ್ಲಿ ಸರ್ಕಾರಿ ಕೆಲಸ! ಇಲ್ಲಿದೆ ಹೆಚ್ಚಿನ ಮಾಹಿತಿ

ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ, ಟೆಕ್ನಿಕಲ್ ಅಸಿಸ್ಟಂಟ್ 3 ಹುದ್ದೆಗಳು, ಟೆಕ್ನಿಷಿಯನ್ 10 ಹುದ್ದೆಗಳು, ಡ್ರೈವರ್ 1 ಹುದ್ದೆ ಖಾಲಿ ಇದೆ. ಈ ಕೆಲಸಗಳಿಗೆ ಆಗತ್ಯವಿರುವ ವಿದ್ಯಾರ್ಹತೆ ಟೆಕ್ನಿಕಲ್ ಅಸಿಸ್ಟಂಟ್ ಹುದ್ದೆಗೆ ಪದವಿ ಪೂರ್ತಿಯಾಗಿರಬೇಕು, ಟೆಕ್ನಿಶಿಯನ್ ಕೆಲಸಕ್ಕೆ 10ನೇ ತರಗತಿ, 12ನೇ ತರಗತಿ ಅಥವಾ ITI ಪೂರ್ತಿ ಮಾಡಿರಬೇಕು.

ಡ್ರೈವರ್ ಕೆಲಸಕ್ಕೆ 10ನೇ ತರಗತಿ ಪೂರ್ತಿಯಾಗಿರಬೇಕು. ಈ ಕೆಲಸಕ್ಕೆ ಅಗತ್ಯವಿರುವ ವಯೋಮಿತಿ ಟೆಕ್ನಿಶಿಯನ್ ಕೆಲಸಕ್ಕೆ ಅಪ್ಲೈ ಮಾಡುವವರಿಗೆ 21 ರಿಂದ 30 ವರ್ಷಗಳ ಒಳಗೆ ಇರಬೇಕು.

ಟೆಕ್ನಿಶಿಯನ್ ಕೆಲಸಕ್ಕೆ 21 ರಿಂದ 30 ವರ್ಷಗಳ ಒಳಗೆ, ಡ್ರೈವರ್ ಕೆಲಸಕ್ಕೆ 18 ರಿಂದ 27 ವರ್ಷಗಳ ಒಳಗೆ ಇರಬೇಕು. ಆದರೆ ವಯೋಮಿತಿ ಸಡಿಲಿಕೆ ಇರುತ್ತದೆ.

Govt job vacancyಅರ್ಜಿ ಶುಲ್ಕದ ಬಗ್ಗೆ ಹೇಳುವುದಾದರೆ, SC/ST/PH ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ. ಬೇರೆ ಎಲ್ಲಾ ಅಭ್ಯರ್ಥಿಗಳು 100 ರೂಪಾಯಿ ಅರ್ಜಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು.

ಇಂತಹವರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 2ನೇ ಕಂತಿನ ಹಣವೂ ಬರುವುದಿಲ್ಲ! ಸರ್ಕಾರದ ಖಡಕ್ ಸೂಚನೆ

ಈ ಕೆಲಸಗಳಿಗೆ ತಿಂಗಳ ಸಂಬಳ ಎಷ್ಟಿರಬಹುದು ಎನ್ನುವುದು ಇನ್ನು ನಿರ್ಧಾರವಾಗಿಲ್ಲ. ಕೆಲಸಕ್ಕೆ ಆಯ್ಕೆ ಆಗುವವರಿಗೆ ಬೆಂಗಳೂರಿನಲ್ಲಿ ಕೆಲಸ (Bengaluru Jobs) ಇರುತ್ತದೆ. ಕೆಲಸದ ಆಯ್ಕೆ ಪ್ರಕ್ರಿಯೆ ನಡೆಯುವುದು ಲಿಖಿತ ಪರೀಕ್ಷೆ ಮತ್ತು ಇಂಟರ್ವ್ಯೂ ಮೂಲಕ.

ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯಲ್ಲಿ ಕೇಳಲಾಗುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಫಿಲ್ ಮಾಡಿ, ಅಗತ್ಯವಿರುವ ದಾಖಲೆಗಳ ಜೊತೆಗೆ ಈ ಅಡ್ರೆಸ್ ಗೆ ಕಳಿಸಬೇಕು.

ಹೊಸ ರೇಷನ್ ಕಾರ್ಡ್ ಅಪ್ಲೈ ಮಾಡಿರೋರಿಗೆ ಗುಡ್ ನ್ಯೂಸ್! ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆಯ ಬಿಗ್ ಅಪ್ಡೇಟ್

ನಿರ್ದೇಶಕರು

ICFRE-ಇನ್‌ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ & ಟೆಕ್ನಾಲಜಿ
18ನೇ ಕ್ರಾಸ್
ಮಲ್ಲೇಶ್ವರಂ
ಬೆಂಗಳೂರು-560003

ಈ ಅಡ್ರೆಸ್ ಗೆ ಅರ್ಜಿಗಳನ್ನು ಸಲ್ಲಿಸಿ. ಅರ್ಜಿ ಸಲ್ಲಿಕೆ ಶುರುವಾಗುತ್ತಿರುವ ದಿನಾಂಕ 22/9/2023. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 13/10/2023.

Govt jobs for 10th class and PUC Passers, Posting in Bengaluru