Karnataka NewsBengaluru News

ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಬೆನ್ನಲ್ಲೇ ಮಹಿಳೆಯರಿಗಾಗಿ ಮತ್ತೊಂದು ಮೇಘಾ ಯೋಜನೆ

ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು (Gruha lakshmi scheme) ಜಾರಿಗೆ ತಂದು ಪ್ರತಿ ಮಹಿಳೆಯ ಖಾತೆಗೆ (Bank Account) ಸಾವಿರ ರೂಪಾಯಿಗಳನ್ನು ಜಮಾ ಮಾಡುತ್ತಿದೆ. ಅದೇ ರೀತಿ ಶಕ್ತಿ ಯೋಜನೆಯನ್ನು (Shakti Yojana) ಜಾರಿಗೆ ತಂದು ಮಹಿಳೆಯರ ಜೇಬಿನಲ್ಲಿ ಪ್ರತಿ ತಿಂಗಳು ಒಂದಷ್ಟು ಹಣವನ್ನು ಉಳಿತಾಯ ಮಾಡುತ್ತಿದೆ.

ರಾಜ್ಯದ ಮಹಿಳೆಯರು ತಮ್ಮ ಖರ್ಚುಗಳಿಗೆ ಹಾಗೂ ಭವಿಷ್ಯಕ್ಕಾಗಿ ಸ್ವಲ್ಪ ಹಣ ಉಳಿತಾಯ (savings) ಮಾಡಲು ಈ ಯೋಜನೆಗಳು ಸಹಾಯಕವಾಗಬಹುದು, ಇದರ ಬೆನ್ನಲ್ಲೇ ಮಹಿಳೆಯರು ಹೂಡಿಕೆ ಮಾಡುವುದಕ್ಕೂ ಅನುಕೂಲವಾಗುವ ಮಾಸ್ಟರ್ ಪ್ಲಾನ್ (master plan) ಒಂದನ್ನು ಸರ್ಕಾರವೇ ಜಾರಿಗೆ ತಂದಿದೆ

Govt Scheme

ಇನ್ಮುಂದೆ ಹೊಸ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಈ 4 ಹೊಸ ಮಾನದಂಡಗಳು ಕಡ್ಡಾಯ

MSIL ಚಿಟ್ ಫಂಡ್! (Mysore sales international limited chit fund)

ದೇಶದ ಅತ್ಯಂತ ನಂಬಿಕೆ ಹಾಗೂ ಸರ್ಕಾರದ ಚಿಟ್ ಫಂಡ್ MSIL ಬಗ್ಗೆ ನೀವು ಕೇಳಿರಬಹುದು, ಈಗ ಈ ಚಿಟ್ ಫಂಡ್ ನಲ್ಲಿ (chit fund) ಹೆಣ್ಣು ಮಕ್ಕಳು ಹೂಡಿಕೆ ಮಾಡುವುದಕ್ಕೆ ಸರ್ಕಾರ ಹೆಚ್ಚು ಉತ್ತೇಜನ ನೀಡುತ್ತಿದೆ. ಇದರ ಜೊತೆಗೆ ಸರ್ಕಾರದ ಬೊಕ್ಕಸಕ್ಕೂ ಒಂದಷ್ಟು ಹಣ ಸೇರ್ಪಡೆಗೊಳ್ಳಲು ಸಾಧ್ಯವಿದೆ.

ಪ್ರೀಮಿಯರ್ ಚಿಟ್ ಫಂಡ್ MSIL ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸರ್ಕಾರ ನಿರ್ಧರಿಸಿದೆ. ಸಚಿವ ಎಂ ಬಿ ಪಾಟೀಲ್ (M.B Patil) ಅವರು ಈ ಬಗ್ಗೆ ತಮ್ಮ ಟ್ವಿಟ್ಟರ್ (Twitter) ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ಮಹಿಳೆಯರಿಗೆ ಎಂ ಎಸ್ ಐ ಎಲ್ ಹೂಡಿಕೆ (Investment) ಮಾಡಲು ಮನವಿ ಮಾಡಿದ್ದಾರೆ.

ಎಂ ಬಿ ಪಾಟೀಲ್ ಅವರ ಟ್ವಿಟರ್ ನಲ್ಲಿ ಏನಿತ್ತು?

MSIL (Mysore sales international limited) ಅನ್ನು ಭಾರತದ ಪ್ರಮುಖ ಚಿಟ್ ಫಂಡ್ ಮಾಡುವ ಮೂಲಕ ಚಿಟ್ ಫಂಡ್ ವಲಯವನ್ನು ಉನ್ನತ ಸ್ಥಾನಕ್ಕೆ ಒಯ್ಯಲು ಕರ್ನಾಟಕವು ಮಹತ್ತರ ಪ್ರಯಾಣ ಆರಂಭಿಸುತ್ತಿದೆ.

✅ MSIL ವಿಶ್ವಾಸಾರ್ಹ ಬ್ರ್ಯಾಂಡ್
✅ ಸುಭದ್ರ, ಸುರಕ್ಷಿತ ಮತ್ತು ಪ್ರಗತಿ ವರ್ಧಕ
✅ AI ಪ್ಲಾಟ್ ಫಾರ್ಮ್ ನಲ್ಲಿ ಇರಲಿದೆ
✅ ಕೆಲವೇ ವರ್ಷಗಳಲ್ಲಿ ರೂ. 300 ಕೋಟಿಯಿಂದ 10,000 ಕೋಟಿ ವಹಿವಾಟು ತಲುಪುವ ಗುರಿ ಹೊಂದಿರುವುದಾಗಿ ಸಚಿವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಗೃಹಜ್ಯೋತಿ ಯೋಜನೆ ಫ್ರೀ ಕರೆಂಟ್ ಜೊತೆಗೆ ಇಂಥವರಿಗೆ ಸಿಗಲಿದೆ ಎಕ್ಸ್ಟ್ರಾ ಬೆನಿಫಿಟ್

Govt SchemeMSIL 305 ಕೋಟಿ ವ್ಯವಹಾರಗಳನ್ನು ಹೊಂದಿರುವ 22 ಸಾವಿರ ಚಂದದಾರರನ್ನು ಒಳಗೊಂಡಿರುವ ಚಿಟ್ ಫಂಡ್ ಆಗಿದೆ. ಸರ್ಕಾರಿ ಸ್ವಾಮ್ಯದ ಚಿಟ್ ಫಂಡ್ (government owned chit fund) ವ್ಯವಹಾರ 27 ಸಾವಿರ ಕೋಟಿ ರೂಪಾಯಿಗಳದ್ದಾಗಿದೆ.

ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮಹಿಳೆಯರು ಹಣ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಚಿಟ್ ಫಂಡ್ ವ್ಯವಹಾರ ಆರಂಭಿಸಲು ಸರ್ಕಾರ ಅನುಮೋದನೆ ನೀಡಿದೆ ಎಂದು ಹೆಚ್ಚುವರಿ ಮುಖ್ಯ ಹಣಕಾಸು ಕಾರ್ಯದರ್ಶಿ ಎಲ್ ಕೆ ಅತಿಕ್ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

ಇಷ್ಟು ದಿನ ಗೃಹಲಕ್ಷ್ಮಿ ಹಣ ಬಾರದವರಿಗೂ ಹಣ ವರ್ಗಾವಣೆ ಆಗಿದೆ, ಕೂಡಲೇ ಚೆಕ್ ಮಾಡಿಕೊಳ್ಳಿ

ಮಹಿಳೆಯರು ಹೂಡಿಕೆ ಮಾಡಬಹುದು!

ಸರ್ಕಾರಿ ಸ್ವಾಮ್ಯದ ಚಿಟ್ ಫಂಡ್ ನಲ್ಲಿ ಸುಲಭವಾಗಿ ಮಹಿಳೆಯರು ಹೂಡಿಕೆ ಮಾಡಬಹುದು. ಹೂಡಿಕೆ ಮಾಡಿರುವ ಮಹಿಳೆಯರ ಹಣಕ್ಕೆ ಯಾವುದೇ ರೀತಿಯ ನಷ್ಟದ ಅಪಾಯವು ಇರುವುದಿಲ್ಲ.

ಈ ಹೂಡಿಕೆ ಮಾಡಲು ಯಾವೆಲ್ಲ ದಾಖಲೆಗಳು ಬೇಕು? ಹೂಡಿಕೆ ಮಾಡುವುದು ಹೇಗೆ ? ಎಷ್ಟು ಹೂಡಿಕೆ ಮಾಡಿದರೆ ಎಷ್ಟು ಲಾಭ ಸಿಗುತ್ತದೆ ? ಮೊದಲಾದವುಗಳ ಬಗ್ಗೆ ಸರ್ಕಾರ ಸದ್ಯದಲ್ಲಿಯೇ ಸ್ಪಷ್ಟವಾದ ಸುತ್ತೋಲೆ ಹೊರಡಿಸಲಿದೆ. ಹಾಗಾಗಿ ರಾಜ್ಯದಲ್ಲಿ ಮಹಿಳೆಯರು ಇನ್ನು ಮುಂದೆ ಸರ್ಕಾರದ ಜೊತೆಗೆ ಕೈಜೋಡಿಸಿ ತಮ್ಮ ಭವಿಷ್ಯಕ್ಕಾಗಿ ಹೂಡಿಕೆ ಮಾಡಲು ಸಿದ್ಧರಾಗಬಹುದು.

Govt Tweet on MSIL chit fund Scheme for Woman

Our Whatsapp Channel is Live Now 👇

Whatsapp Channel

Related Stories