ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ರೂ ಗೃಹಲಕ್ಷ್ಮಿ ಹಣ ಸಿಗುತ್ತೆ; ಸರ್ಕಾರದ ನಿರ್ಧಾರಕ್ಕೆ ಮಹಿಳೆಯರು ಖುಷ್
ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬ ಫಲಾನುಭವಿ ಮಹಿಳೆಯರ ಖಾತೆಗೆ (Bank Account) ಹಣ ವರ್ಗಾವಣೆ (Money Transfer) ಆಗುವುದು ಫಿಕ್ಸ್
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಸಂಬಂಧಪಟ್ಟ ಹಾಗೆ ರಾಜ್ಯ ಸರ್ಕಾರ ಸಾಕಷ್ಟು ಬದಲಾವಣೆಗಳನ್ನ ತರುತ್ತಿದೆ. ಅರ್ಜಿ ಸಲ್ಲಿಸಿದ ಕೋಟ್ಯಾಂತರ ಮಹಿಳೆಯರ ಖಾತೆಗೆ ಹಣ ವರ್ಗಾವಣೆ (DBT) ಮಾಡಬೇಕು ಎನ್ನುವ ಕಾರಣಕ್ಕೆ ಹಲವು ಬದಲಾವಣೆಗಳನ್ನು ತಂದಿದ್ದು ಕೆಲವು ನಿಯಮಗಳ ಸಡಿಲಿಕೆ ಕೂಡ ಮಾಡಲಾಗಿದೆ.
ಇತ್ತೀಚಿಗೆ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು ಇದರಿಂದ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬ ಫಲಾನುಭವಿ ಮಹಿಳೆಯರ ಖಾತೆಗೆ (Bank Account) ಹಣ ವರ್ಗಾವಣೆ (Money Transfer) ಆಗುವುದು ಫಿಕ್ಸ್!
ಗೃಹಲಕ್ಷ್ಮಿ ಯೋಜನೆ ಹಣ ಎಲ್ಲರಿಗೂ ಜಮಾ ಆಗೋದು ಫಿಕ್ಸ್! ಹೊಸ ತಂತ್ರ ರೂಪಿಸಿದ ಸರ್ಕಾರ
ಇನ್ನು ಹಲವರ ಖಾತೆಗೆ ಹಣ ಜಮಾ ಆಗುವುದು ಬಾಕಿ ಇದೆ!
ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮಹಿಳೆಯರು ಪ್ರತಿ ತಿಂಗಳು 2000ಗಳನ್ನು ಉಚಿತವಾಗಿ ಪಡೆಯಬಹುದು ಎಂದು ಘೋಷಣೆ ಆದಾಗ ರಾಜ್ಯದ್ಯಂತ ಅರ್ಜಿ ಸಲ್ಲಿಸಿದ (applicant) ಮಹಿಳೆಯರ ಸಂಖ್ಯೆ 1. 14 ಕೋಟಿಗೂ ಅಧಿಕ.
ಮೊದಲ ಕಂತಿನ ಹಣ 96 ಲಕ್ಷ ಮಹಿಳೆಯರ ಖಾತೆಗೆ ವರ್ಗಾವಣೆ ಆದರೆ ಎರಡನೇ ಕಂತಿನ ಹಣ 66 ಲಕ್ಷ ಮಹಿಳೆಯರ ಖಾತೆಗೆ ವರ್ಗಾವಣೆ ಆಗಿದೆ, ಅಂದರೆ ಸರ್ಕಾರದ ಲೆಕ್ಕಾಚಾರದ ಪ್ರಕಾರ 70% ನಷ್ಟು ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗಿದೆ. ಆದರೆ ಇನ್ನೂ 30% ಮಹಿಳೆಯರು ಅರ್ಜಿ ಸಲ್ಲಿಸಿದ್ದರು ಕೂಡ ಅಂತವರ ಖಾತೆಗೆ ಹಣ ವರ್ಗಾವಣೆ ಆಗಿಲ್ಲ.
ಸರ್ಕಾರಿ ಭೂಮಿಯಲ್ಲಿ ಕೃಷಿ ಮಾಡುವವರಿಗೆ ಸಿಹಿಸುದ್ದಿ! ಇನ್ಮುಂದೆ ಆ ಜಮೀನು ನಿಮ್ಮದೇ
ಆಧಾರ ಸೀಡಿಂಗ್ ಕಡ್ಡಾಯವಾಗಿತ್ತು
ಸರ್ಕಾರ ಈ ಹಿಂದೆಯೇ ತಿಳಿಸಿರುವಂತೆ ಆಧಾರ್ ಸೀಡಿಂಗ್ ಆಗದೇ ಇದ್ದಲ್ಲಿ ಅಂತವರ ಖಾತೆಗೆ ಹಣ ವರ್ಗಾವಣೆ ಆಗುವುದಿಲ್ಲ. ಆದ್ದರಿಂದ 12 ಲಕ್ಷ ಮಹಿಳೆಯರು ಇದುವರೆಗೆ ಒಂದೇ ಒಂದು ಕಂತಿನ ಹಣವನ್ನು ಕೂಡ ಪಡೆದುಕೊಳ್ಳಲು ಸಾಧ್ಯವಾಗಿಲ್ಲ.
ಸರ್ಕಾರಿ ಭೂಮಿಯಲ್ಲಿ ಕೃಷಿ ಮಾಡುವವರಿಗೆ ಸಿಹಿಸುದ್ದಿ! ಇನ್ಮುಂದೆ ಆ ಜಮೀನು ನಿಮ್ಮದೇ
ಆಧಾರ್ ಸೀಡಿಂಗ್ ಆಗದೇ ಇದ್ದರೂ ಮಹಿಳೆಯರ ಖಾತೆಗೆ ಹಣ ಜಮಾ ಆಗುತ್ತೆ!
ಇದೀಗ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು ಈ ನಿರ್ಧಾರದಿಂದ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಮುಂದಿನ ದಿನಗಳಲ್ಲಿ ಹಣ ವರ್ಗಾವಣೆ ಆಗುವುದು ಗ್ಯಾರಂಟಿ ಎನ್ನುತ್ತಿದೆ ಸರ್ಕಾರ.
ಮಹಿಳೆಯರ ಖಾತೆಗೆ ಆಧಾರ್ ಸೀಡಿಂಗ್ ಆಗುವುದು ಕಡ್ಡಾಯವಾಗಿತ್ತು ಆದರೆ ಇನ್ನು ಮುಂದೆ ಆಧಾರ್ ಲಿಂಕ್ ಆಗದೆ ಇದ್ದರೂ ಕೂಡ ಅಂತಹ ಮಹಿಳೆಯರಿಗೂ ಹಣ ವರ್ಗಾವಣೆ ಮಾಡಲಾಗುವುದು, ಸರ್ಕಾರದ ಈ ಹೊಸ ನಿರ್ಧಾರ ಲಕ್ಷಾಂತರ ಮಹಿಳೆಯರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಕಳೆದ ಎರಡು ತಿಂಗಳಿನ ಹಣ ಭಾರದೇ ಇದ್ದರು ಅಕ್ಟೋಬರ್ (October month) ತಿಂಗಳಿನ ಹಣ ನವೆಂಬರ್ ನಲ್ಲಿ ಬಿಡುಗಡೆ ಆಗುವ ಹೊತ್ತಿಗೆ ಇಲ್ಲಿಯವರೆಗೆ ಸಿಕ್ಕಿರುವ ಫಲಾನುಭವಿ ಮಹಿಳೆಯರು ಮಾತ್ರವಲ್ಲದೆ ಇನ್ನೂ ಲಕ್ಷಾಂತರ ಮಹಿಳೆಯರ ಖಾತೆಗೆ ಹಣ ಜಮಾ ಆಗಲಿದೆ ಎನ್ನಬಹುದು.
ಇನ್ಮುಂದೆ ಇಂತಹವರಿಗೆ ಉಚಿತ ವಿದ್ಯುತ್ ಸೌಲಭ್ಯ ಇಲ್ಲ, ಕಟ್ಟಲೇಬೇಕು ಪೂರ್ಣ ಬಿಲ್
Gruha Lakshmi Yojana money will be deposited even if Aadhaar card is not linked
Follow us On
Google News |