ಬಿಪಿಎಲ್ ಕಾರ್ಡ್ ಇದ್ದು, ಕಾರು ಮನೆ ಇದ್ರೆ ರದ್ದಾಗುತ್ತೆ ರೇಷನ್ ಕಾರ್ಡ್! ಶುರುವಾಯ್ತು ಮತ್ತೊಂದು ಆತಂಕ

ಈಗ ಯಾರ ಬಳಿ ಬಿಪಿಎಲ್ ರೇಷನ್ ಕಾರ್ಡ್ (BPL Ration card) ಇದೆಯೋ ಅವರಿಗೆ ಆತಂಕ ನೀಡುವಂತಹ ಆದೇಶ ಒಂದನ್ನು ಸರ್ಕಾರ ಹೊರಡಿಸಿದೆ.

ಸರ್ಕಾರದ ಬಹುತೇಕ ಎಲ್ಲಾ ಯೋಜನೆಗಳಿಗೆ ರೇಷನ್ ಕಾರ್ಡ್ (ration card) ಎನ್ನುವುದು ಕಡ್ಡಾಯ ಎನ್ನುವುದರ ಬಗ್ಗೆ ಈಗಾಗಲೇ ಜನರಿಗೆ ಅರಿವು ಮೂಡಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಜನ ರೇಷನ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಲು ಕೂಡ ಕಾಯುತ್ತಿದ್ದಾರೆ.

ಆದರೆ ಈಗ ಯಾರ ಬಳಿ ಬಿಪಿಎಲ್ ರೇಷನ್ ಕಾರ್ಡ್ (BPL Ration card) ಇದೆಯೋ ಅವರಿಗೆ ಆತಂಕ ನೀಡುವಂತಹ ಆದೇಶ ಒಂದನ್ನು ಸರ್ಕಾರ ಹೊರಡಿಸಿದೆ.

ಬಿಪಿಎಲ್ ಕಾರ್ಡ್ ಇರೋರಿಗೆ ಸಿಹಿ ಸುದ್ದಿ; ಇನ್ಮುಂದೆ ನಿಮ್ಮ ಮನೆಗೆ ಡೆಲಿವರಿ ಆಗಲಿದೆ ರೇಷನ್

ಬಿಪಿಎಲ್ ಕಾರ್ಡ್ ಇದ್ದು, ಕಾರು ಮನೆ ಇದ್ರೆ ರದ್ದಾಗುತ್ತೆ ರೇಷನ್ ಕಾರ್ಡ್! ಶುರುವಾಯ್ತು ಮತ್ತೊಂದು ಆತಂಕ - Kannada News

ಬಿಪಿಎಲ್ ಕಾರ್ಡ್ ರದ್ದಾಗಲಿದೆ

ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ (government guarantee scheme) ಬಿಪಿಎಲ್ ಕಾರ್ಡ್ ಇದ್ರೆ ಅಂಥವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಹಾಗೂ ಅನ್ನಭಾಗ್ಯ ಯೋಜನೆಯ (Annabhagya Yojana) ಹಣ ನೇರವಾಗಿ ಫಲಾನುಭವಿಗಳ ಖಾತೆಗೆ (Bank Account) ಜಮಾ ಆಗುತ್ತದೆ.

ಇತ್ತೀಚಿಗೆ ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಎರಡು ಕಂತಿನ ಹಣ ಕೂಡ ಬಿಡುಗಡೆ ಆಗಿದ್ದು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಈ ಪ್ರಯೋಜನ ಕೂಡ ಸಿಗಲಿದೆ.

ಆದರೆ ದುರಾದೃಷ್ಟವಶಾತ್ ಬಿಪಿಎಲ್ ಕಾರ್ಡ್ ರದ್ದಾಗುವ ಸಾಧ್ಯತೆಯು ಇದೆ. ರಾಜ್ಯದಲ್ಲಿ ಒಟ್ಟು 1.28 ಕೋಟಿ ಬಿಪಿಎಲ್ ಕಾರ್ಡ್ ಹೊಂದಿರುವವರು ಇದ್ದಾರೆ. ಇದರಲ್ಲಿ 97.27 ಲಕ್ಷ ಪಡಿತರ ಚೀಟಿ ಹೊಂದಿರುವವರು ಮಾತ್ರ ಪ್ರತಿ ತಿಂಗಳು ಪಡಿತರ ತೆಗೆದುಕೊಳ್ಳುತ್ತಿದ್ದಾರೆ ಹಾಗಾಗಿ ಆರು ತಿಂಗಳಿನಿಂದ ಯಾರು ರೇಷನ್ ಪಡೆಯುತ್ತಿಲ್ಲವೋ ಅಂತಹವರ ಬಿಪಿಎಲ್ ಕಾರ್ಡ್ ಹೊಂದಿರುವ ಫಲಾನುಭವಿಗಳ ಕಾರ್ಡ್ ರದ್ದಾಗಲಿದೆ.

ಇನ್ನು ಎರಡನೆಯದಾಗಿ ವೈಟ್ ಬೋರ್ಡ್ ಕಾರನ್ನು (white board car) ಹೊಂದಿರುವವರ ರೇಷನ್ ಕಾರ್ಡ್ ಕೂಡ ರದ್ದುಪಡಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಕೆ. ಎಚ್ ಮುನಿಯಪ್ಪ (K.H muniyappa) ತಿಳಿಸಿದ್ದಾರೆ. ಈ ನಿಯಮ ಕೇವಲ ವೈಟ್ ಬೋರ್ಡ್ ಅಂದರೆ ಸ್ವಂತಕ್ಕಾಗಿ ಬಳಸುವ ವಾಹನ ಹೊಂದಿರುವವರಿಗೆ ಮಾತ್ರ ಅನ್ವಯವಾಗುತ್ತದೆ

10 ಲಕ್ಷ ಗೃಹಿಣಿಯರಿಗೆ ಇಲ್ಲ ಗೃಹಲಕ್ಷ್ಮಿ ಭಾಗ್ಯ! ಇಲ್ಲಿದೆ ಹಣ ಬಿಡುಗಡೆ ಆಗದಿರಲು ಸ್ಪಷ್ಟ ಕಾರಣ

Ration Cardಯಾರು ಬಾಡಿಗೆಗಾಗಿ ನಾಲ್ಕು ಚಕ್ರದ ವಾಹನ ಖರೀದಿ ಮಾಡಿರುತ್ತಾರೋ ಎಲ್ಲೋ ಬೋರ್ಡ್ (yellow board car) ಹೊಂದಿರುತ್ತಾರೋ ಅಂತಹ ಕಾರುಗಳನ್ನು ಹೊಂದಿದ್ದರೆ ಅವರ ಬಿಪಿಎಲ್ ಕಾರ್ಡ್ ರದ್ದಾಗುವುದಿಲ್ಲ ಎಂಬುದನ್ನು ಗಮನಿಸಿ.

ಇನ್ನು ಮೂರನೆಯದಾಗಿ ಬಿಪಿಎಲ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ (Aadhaar Card link) ಮಾಡಿಕೊಳ್ಳುವುದು ಕಡ್ಡಾಯ. ಇಲ್ಲವಾದರೆ ಮುಂಬರುವ ದಿನಗಳಲ್ಲಿ ಸರ್ಕಾರದಿಂದ ಸಿಗುವ ಯಾವ ಸವಲತ್ತು ಹಾಗೂ ಯೋಜನೆಗಳು ಕೂಡ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಲಭ್ಯವಾಗುವುದಿಲ್ಲ. ಹಾಗಾಗಿ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುವ ವಿಚಾರ.

ಗೃಹಜ್ಯೋತಿ ಫ್ರೀ ವಿದ್ಯುತ್ ಜೊತೆಗೆ ಮತ್ತೊಂದು ಸೌಲಭ್ಯ ನೀಡಲು ಮುಂದಾದ ರಾಜ್ಯ ಸರ್ಕಾರ

ಈ ಮೇಲೆ ತಿಳಿಸಿದ ಪ್ರತಿಯೊಂದು ವಿಚಾರದಲ್ಲಿಯೂ ಕೂಡ ನೀವು ಸರಿಯಾದ ದಾಖಲೆ ಹೊಂದಿದ್ದರೆ ಮಾತ್ರ ಸರ್ಕಾರದ ಗ್ಯಾರಂಟಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಒಂದು ವೇಳೆ ನೀವು ವೈಟ್ ಬೋರ್ಡ್ (Own Car) ನಾಲ್ಕು ಚಕ್ರದ ವಾಹನ ಹೊಂದಿದ್ದರೆ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಆಗದೆ ಇದ್ದರೆ ಕಳೆದ ಆರು ತಿಂಗಳಿನಿಂದ ಪಡಿತರ ತೆಗೆದುಕೊಂಡಿರದೆ ಇದ್ದರೆ ಅಂಥವರ ಬಿಪಿಎಲ್ ಕಾರ್ಡ್ ರದ್ದಾಗುವುದರ (BPL card cancellation) ಜೊತೆಗೆ ಈಗ ಸಿಗುತ್ತಿರುವ ಸೌಲಭ್ಯಗಳು ಕೂಡ ನಿಂತು ಹೋಗುತ್ತವೆ

ಅಂದರೆ ಅನ್ನಭಾಗ್ಯ ಯೋಜನೆಯ ಹಣ ಅಥವಾ ಪಡಿತರ ವಸ್ತುಗಳು ಸಿಗುವುದಿಲ್ಲ ಜೊತೆಗೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಕೂಡ ಖಾತೆಗೆ ಜಮಾ (Money Transfer) ಆಗುವುದಿಲ್ಲ.

If you have a BPL card and own a car, your ration card will be cancelled

Follow us On

FaceBook Google News

If you have a BPL card and own a car, your ration card will be cancelled