ಈ ದಾಖಲೆಗಳು ರೆಡಿ ಇಟ್ಕೊಳ್ಳಿ, ಇಂತಹ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಘೋಷಿಸಿದ ಸರ್ಕಾರ

ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ (Free Laptop) ಕೊಡುವ ಸ್ಕೀಮ್ ಒಂದನ್ನು ಆರಂಭಿಸಿದೆ.

ಸರ್ಕಾರ ಈಗಾಗಲೇ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ, ಅದರಲ್ಲೂ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ (For Students) ಅವರ ಶಿಕ್ಷಣ (Education) ಕ್ಕೆ ಅನುಕೂಲವಾಗುವಂತಹ ಕೆಲವು ಪ್ರಮುಖ ನಿರ್ಧಾರಗಳನ್ನು ಸರ್ಕಾರ (Government) ಕೈಗೊಂಡಿದೆ.

ಪ್ರಾಥಮಿಕ ಪ್ರೌಢ ಶಿಕ್ಷಣ ಹಾಗೂ ಪಿಯುಸಿ (PUC) ಎಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷ ಶಿಕ್ಷಣ ಸೌಲಭ್ಯ ಮಾಡಿಕೊಡಲು ರಾಜ್ಯ ಸರ್ಕಾರ ಒಲವು ತೋರಿಸಿದೆ.

ಪಡಿತರ ಚೀಟಿ ತಿದ್ದುಪಡಿಗೆ ಇನ್ಮುಂದೆ ಇಲ್ಲ ಅವಕಾಶ! ಹೊಸ ಆದೇಶ ಹೊರಡಿಸಿದ ಸರ್ಕಾರ

ಈ ದಾಖಲೆಗಳು ರೆಡಿ ಇಟ್ಕೊಳ್ಳಿ, ಇಂತಹ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಘೋಷಿಸಿದ ಸರ್ಕಾರ - Kannada News

ಜೊತೆಗೆ ಕನ್ನಡ ಮಾಧ್ಯಮದಲ್ಲಿ (Kannada Medium) ಓದುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲ ಮಾಡಿಕೊಡುವುದರ ಮೂಲಕ ಶಿಕ್ಷಣ ಮಟ್ಟವನ್ನು ಸುಧಾರಿಸುವತ್ತ ಸರ್ಕಾರ ಹೊಸ ಕ್ರಮಗಳನ್ನು ಜಾರಿಗೆ ತರುತ್ತಿದೆ.

ಇದೀಗ ಪೋಷಕರಿಗೆ ದೊಡ್ಡ ರೆಲೀಫ್ ನೀಡಿರುವ ಸರ್ಕಾರ 2023- 24ನೇ ಸಾಲಿನಲ್ಲಿ ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ (Free Laptop) ಕೊಡುವ ಸ್ಕೀಮ್ ಒಂದನ್ನು ಆರಂಭಿಸಿದೆ.

ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್: (Free Laptop for Students)

ಇನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ ಟಾಪ್ ನೀಡುವ ಈ ಯೋಜನೆಯಲ್ಲಿ ಯಾರೆಲ್ಲಾ ಫಲಾನುಭವಿಗಳು ಅಂತ ನೋಡುವುದಾದರೆ ಕರ್ನಾಟಕ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ.

ಕಲಾ, ವಾಣಿಜ್ಯ, ಹಾಗೂ ವಿಜ್ಞಾನ ವಿಭಾಗದಲ್ಲಿ ಓದುತ್ತಿರುವ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತವಾಗಿ ಲ್ಯಾಪ್ಟಾಪ್ ನೀಡಲಿದೆ.

ಅನ್ನಭಾಗ್ಯ ಯೋಜನೆಯ ಅಕ್ಕಿ ಬೇಕೋ ಬದಲಿಗೆ ಹಣ ಬೇಕೋ? ನೀವೇ ಡಿಸೈಡ್ ಮಾಡಿ ಎಂದ ಸರ್ಕಾರ

ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಂಡ ಕಾರ್ಮಿಕರ ಮಕ್ಕಳು ಈ ಉಚಿತ ಲ್ಯಾಪ್ಟಾಪ್ ಪ್ರಯೋಜನವನ್ನು ಪಡೆದುಕೊಳ್ಳಲು ಕಾರ್ಮಿಕರ ಅಧಿಕಾರಿ ಕಚೇರಿ ಅಥವಾ ನಿಮ್ಮ ತಾಲೂಕಿನ ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಯಿಂದ ಅಧಿಕೃತ ಪ್ರಮಾಣ ಪತ್ರವನ್ನು ಪಡೆದುಕೊಂಡು ಅರ್ಜಿ ನಮೂನೆಯನ್ನು ಸಲ್ಲಿಸಬೇಕು.

ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಆಯಾ ಸಂಸ್ಥೆಯ ಪ್ರಾಂಶುಪಾಲರ ಸಹಿ (Signature of Principal) ಹಾಗೂ ಠಸ್ಸೆಯೊಂದಿಗೆ ಎಸ್ ಎಸ್ ಎಲ್ ಸಿ (SSLC Marks card) ಅಂಕ ಪಟ್ಟಿಯ ದೃಢೀಕೃತ ಪ್ರಮಾಣ ಪತ್ರವನ್ನು ಕೂಡ ನೀಡಬೇಕು.

ಈ ತಿಂಗಳ ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ ದಿನಾಂಕ ಘೋಷಣೆ; ಆದ್ರೆ ಇಂತಹವರಿಗೆ ಸಿಗೋಲ್ಲ ಉಚಿತ ಹಣ

ಅರ್ಜಿ ಸಲ್ಲಿಸುವುದು ಹೇಗೆ:

Free Laptop Scheme for Studentsಈ ಯೋಜನೆಯ ಫಲಾನುಭವಿಗಳು ಕಾರ್ಮಿಕ ಅಧಿಕಾರಿ 1, ಉಪ ವಿಭಾಗ ಬೆಂಗಳೂರು, ಇದರ ಅಡಿಯಲ್ಲಿ ನೋಂದಾಯಿತ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ಆಯಾ ವೃತ್ತ ಕಚೇರಿಯ ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಯಿಂದ ಸೌಲಭ್ಯ ಪಡೆಯಬಹುದಾಗಿದೆ.

ಜೊತೆಗೆ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳನ್ನು ಕೂಡ ಒದಗಿಸಬೇಕು. ಇನ್ನು ಉಚಿತ ಲ್ಯಾಪ್ಟಾಪ್ ಪಡೆದುಕೊಳ್ಳಲು ಅರ್ಜಿದಾರರಿಗೆ ಬೇಕಾಗಿರುವ ದಾಖಲೆಗಳು ಇಂತಿವೆ.

ಗೃಹಿಣಿಯರೇ, ಈ ತಿಂಗಳು ಕಷ್ಟಪಟ್ರೆ ಮುಂದಿನ ತಿಂಗಳಿನಿಂದ ಕುಳಿತಲ್ಲಿಯೇ ಸಿಗುತ್ತೆ 2,000 ರೂಪಾಯಿ! ನಿರ್ಲಕ್ಷ್ಯ ಮಾಡಬೇಡಿ

ನಿರ್ಮಾಣ ಕಾರ್ಮಿಕರ ನೋಂದಣಿ ಕಾರ್ಡ್ ಅಥವಾ ಪ್ರಮಾಣ ಪತ್ರ
ವಿದ್ಯಾರ್ಥಿ ಅಧ್ಯಯನ ಪ್ರಮಾಣ ಪತ್ರ
ಕಾಲೇಜು ದಾಖಲಾತಿಯ ರಶೀದಿ( Payment Slip)
ಆಧಾರ್ ಕಾರ್ಡ್ (Aadhaar Card)

ಉಚಿತ ಲ್ಯಾಪ್ಟಾಪ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 26. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿಯ ಕಚೇರಿ ಅಥವಾ ನಿಮ್ಮ ತಾಲೂಕಿನ ಹಿರಿಯ ಕಾರ್ಮಿಕರ ನಿರೀಕ್ಷಕರ ಕಚೇರಿಯನ್ನು ಸಂಪರ್ಕಿಸಬಹುದು.

Karnataka Free Laptop Scheme for Students

Follow us On

FaceBook Google News

Karnataka Free Laptop Scheme for Students