ಹಳೆಯ ವೋಟರ್ ಐಡಿ ಬಿಟ್ಟು ಹೊಸ ಡಿಜಿಟಲ್ ಐಡಿ ಪಡೆಯಿರಿ! ಇಲ್ಲಿದೆ ಮಾಹಿತಿ
ಇಂದು ದೇಶ ಡಿಜಿಟಲೀಕರಣದತ್ತ (digitalisation) ಸಾಗಿದೆ. ನಾವು ಯಾವುದೇ ರೀತಿಯ ವ್ಯವಹಾರವನ್ನು ಮಾಡಲು ಕೂಡ ಪೇಪರ್ ಲೆಸ್ (paperless) ಹಾಗೂ cashless ವ್ಯವಹಾರ ಮಾಡಲು ಸಾಧ್ಯವಿದೆ
ಮೊಬೈಲ್ ನಲ್ಲಿ ಅಥವಾ ಕಂಪ್ಯೂಟರ್ ಸಹಾಯದಿಂದ ಕೆಲವೇ ಕ್ಷಣಗಳಲ್ಲಿ ಅರ್ಜಿ ಹಾಕುವುದರಿಂದ ಹಿಡಿದು ಅಗತ್ಯ ಇರುವ ದಾಖಲೆಗಳನ್ನು ಪಡೆದುಕೊಳ್ಳುವುದಕ್ಕೂ ಕೂಡ ಆನ್ಲೈನ್ ಬಳಕೆ ಮಾಡಲಾಗುತ್ತದೆ. ಆನ್ಲೈನಲ್ಲಿ ನಮಗೆ ಬೇಕಾಗಿರುವ ಎಲ್ಲಾ ಮಾಹಿತಿಗಳು ಸಿಗುತ್ತವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕೆಲಸಗಳು ಕೂಡ ಆನ್ಲೈನ್ ಮೂಲಕವೇ ಆಗುತ್ತಿರುವುದು ವಿಶೇಷ.
ಯಾಕಂದ್ರೆ ಸರ್ಕಾರಿ ಕೆಲಸ ಅಂದ್ರೆ ವಿಳಂಬ ಎನ್ನುವ ನಂಬಿಕೆ ಎಲ್ಲರಲ್ಲೂ ಇತ್ತು. ಈಗ ಈ ಕಲ್ಪನೆ ಬದಲಾಗಿದೆ ನೀವು ಯಾವುದಾದರೂ ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕುವುದರಿಂದ ಹಿಡಿದು ಗುರುತಿನ ಚೀಟಿ ಪಡೆದುಕೊಳ್ಳುವುದಕ್ಕೂ ಕೂಡ ಆನ್ಲೈನ್ ಮೂಲಕ ಸಾಧ್ಯವಿದೆ.
ನಿಮ್ಮ ಮಗಳ ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡಿ, ಬೆಸ್ಟ್ ಪೋಸ್ಟ್ ಆಫೀಸ್ ಸ್ಕೀಮ್
ಡಿಜಿಟಲ್ ವೋಟರ್ ಐಡಿ! (Digital voter ID)
ಮತದಾನ ಪ್ರತಿಯೊಬ್ಬರ ಹಕ್ಕು. ಮತದಾನ ಮಾಡಲು ವೋಟರ್ ಐಡಿ ಎನ್ನುವುದು ಕಡ್ಡಾಯ. ಇನ್ನೇನು ಲೋಕಸಭಾ ಎಲೆಕ್ಷನ್ ಕೂಡ ಹತ್ತಿರ ಬರುತ್ತಿದೆ, ನಿಮಗೆ ವೋಟರ್ ಐಡಿ ಅಗತ್ಯ ಇದ್ದೇ ಇದೆ. 18 ವರ್ಷ ಆದವರು ಹೊಸ ವೋಟರ್ ಐಡಿ ಪಡೆದುಕೊಳ್ಳಬೇಕಿದ್ದರೆ ಅಥವಾ ನಿಮ್ಮ ಬಳಿ ಇರುವ ವೋಟರ್ ಐಡಿಯನ್ನು ಡಿಜಿಟಲ್ ಮಾಡಿಸಿಕೊಳ್ಳಬೇಕಿದ್ದರೆ, ನೀವು ಚುನಾವಣಾ ಆಯೋಗದ ಕಚೇರಿಗೂ ಭೇಟಿ ನೀಡಬೇಕಿಲ್ಲ. ಮನೆಯಲ್ಲಿ ಕುಳಿತು ಮೊಬೈಲ್ ನಲ್ಲಿ ಡಿಜಿಟಲ್ ವೋಟರ್ ಐಡಿ ಗೆ ಅಪ್ಲೈ ಮಾಡಿ.
ಡಿಜಿಟಲ್ ವೋಟರ್ ಐಡಿ ಪಡೆದುಕೊಳ್ಳುವುದು ಹೇಗೆ? (How to get a digital voter ID)
ಭಾರತ ಸರ್ಕಾರದ ಎಲೆಕ್ಷನ್ ಕಮಿಷನ್ ಆಫ್ ಇಂಡಿಯಾ ಆರಂಭಿಸಿರುವ Voter helpline app ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ. ಒಂದು ಮೊಬೈಲ್ ನಲ್ಲಿ ಒಂದು ಅಪ್ಲಿಕೇಶನ್ ಮೂಲಕ ನಾಲ್ಕು ಜನ ಡಿಜಿಟಲ್ ವಾಟರ್ ಐಡಿ ಪಡೆದುಕೊಳ್ಳಲು ಅಪ್ಲೈ ಮಾಡಬಹುದು.
ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ, ಹೇಗಿದೆ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ; ಇಲ್ಲಿದೆ ಡೀಟೇಲ್ಸ್
ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡ ನಂತರ ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿ.
ವೋಟರ್ ರಿಜಿಸ್ಟ್ರೇಷನ್ ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ಈಗ ನ್ಯೂ ವೋಟರ್ ರಿಜಿಸ್ಟ್ರೇಷನ್ (new Voter ID registration) ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ನಂತರ ಮೊಬೈಲ್ ಸಂಖ್ಯೆಯನ್ನು ಹಾಕಿ. ಈಗ ನಿಮ್ಮ ಮೊಬೈಲ್ಗೆ ಒಂದು ಓಟಿಪಿ ಬರುತ್ತದೆ. ಅದನ್ನು ನಮೂದಿಸಿ.
ನೀವು ಲಾಗಿನ್ ಆದ ನಂತರ ಹೊಸದಾಗಿ ವೋಟರ್ ಐಡಿ ಪಡೆದುಕೊಳ್ಳುತ್ತಿದ್ದಿರೋ ಅಥವಾ ಈಗಾಗಲೇ ವೋಟರ್ ಐಡಿ ಇದ್ದು ಡಿಜಿಟಲ್ ಮಾಡಿಕೊಳ್ಳಲು ಬಯಸುತ್ತಿದ್ದೀರೋ ಎನ್ನುವ ಆಯ್ಕೆಯನ್ನು ಮಾಡಿಕೊಂಡು ಅದಕ್ಕೆ ಅನುಸಾರವಾಗಿ ಇರುವ ಮಾಹಿತಿಗಳನ್ನು ಭರ್ತಿ ಮಾಡಬೇಕು.
ಸ್ವಂತ ವ್ಯಾಪಾರ ಮಾಡುವ ಮಹಿಳೆಯರಿಗೆ ಸಿಗಲಿದೆ 10 ಲಕ್ಷ ರೂಪಾಯಿಗಳ ಸಾಲ!
ಈಗಾಗಲೇ ವೋಟರ್ ಐಡಿ ಇದ್ರೆ ವೋಟರ್ ಐಡಿಯಾ ಸಂಖ್ಯೆ, ಆಧಾರ್ ಕಾರ್ಡ್ ಕೂಡ ಬೇಕು. ನೀವು ನಿಮ್ಮ ಪಾಲಕರ ವೋಟರ್ ಐಡಿ ಡಿಜಿಟಲ್ ಮಾಡುವುದಿದ್ದರೆ, ಅದಕ್ಕೆ ರೇಷನ್ ಕಾರ್ಡ್ ಹಾಗೂ ಮೊದಲಾದ ಗುರುತಿನ ಪುರಾವೆಯನ್ನು ಸಲ್ಲಿಸಬೇಕು.
ಈ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಮೊಬೈಲ್ ನಲ್ಲಿ ಅಪ್ಲಿಕೇಶನ್ ಹಾಕಿ ನಂತರ ಡಿಕ್ಲರೇಷನ್ ನಲ್ಲಿ ಎಲ್ಲಾ ಮಾಹಿತಿಗಳು ಸರಿ ಇವೆ ಎನ್ನುವುದನ್ನು ಡಿಕ್ಲಾಯರ್ ಮಾಡಿ. ಇಷ್ಟು ಮಾಡಿದ್ರೆ ನೀವು ಸುಲಭವಾಗಿ ಡಿಜಿಟಲ್ ವೋಟರ್ ಐಡಿ ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ.
ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಡಬಲ್ ಆದಾಯ! ಕೈತುಂಬಾ ಹಣ
Leave the old voter ID and get a new digital ID, Here is the information
Our Whatsapp Channel is Live Now 👇