ಈ ಬ್ಯಾಂಕುಗಳಲ್ಲಿ ಸಾಲ ಮಾಡಿರುವ ರೈತರ ಸಾಲ ಮನ್ನಾ! ಹೊಸ ಪಟ್ಟಿ ಬಿಡುಗಡೆ

Story Highlights

ಬ್ಯಾಂಕ್ ನಲ್ಲಿ ಕೃಷಿ ಸಾಲಗಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ರೆ ನೀವೇ ಅದೃಷ್ಟವಂತರು; ಆಗಲಿದೆ ನಿಮ್ಮ ಸಾಲದ ಬಡ್ಡಿ ಮನ್ನಾ!

ಒಂದು ವೇಳೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ರೆ ಗ್ಯಾರಂಟಿ ನೀವು ಅದೃಷ್ಟವಂತರು. ಯಾಕಂದ್ರೆ ರಾಜ್ಯ ಸರ್ಕಾರ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ (Loan waiver) ಮಾಡಲು ನಿರ್ಧರಿಸಿದೆ. ನೀವು ಕೂಡ ಬ್ಯಾಂಕಿನಲ್ಲಿ ಕೃಷಿ ಸಾಲ (Bank Loan) ಪಡೆದುಕೊಂಡಿದ್ದರೆ ಬಡ್ಡಿ ಮನ್ನಾ ಆಗುವ ಸಾಧ್ಯತೆ ಇದೆ. ಹಾಗಾಗಿ ನಿಮ್ಮ ಹೆಸರು ಸರ್ಕಾರದ ರೈತರ ಲಿಸ್ಟ್ ನಲ್ಲಿ ಸೇರಿದ್ಯಾ ಎನ್ನುವುದನ್ನು ಚೆಕ್ ಮಾಡಿಕೊಳ್ಳಿ.

ರಾಜ್ಯದ್ಯಂತ ರೈತರ ಸಾಲದ ಬಡ್ಡಿ ಮನ್ನಾ!

ಇದು ನಿಜಕ್ಕೂ ರೈತರಿಗೆ ಬಹಳ ಪ್ರಯೋಜನಕಾರಿಯಾದ ಸರ್ಕಾರದ ನಿರ್ಧಾರ ಎಂದು ಹೇಳಬಹುದು, ಡಿಸಿಸಿ ಬ್ಯಾಂಕ್ ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕುಗಳಲ್ಲಿ ರೈತರು ಸಾಲ (Farmer Loan) ಮಾಡಿಕೊಂಡಿದ್ದರೆ ಅದರ ಮೇಲೆ ವಿಧಿಸಲಾಗುವ ಬಡ್ಡಿಯನ್ನು ಪಾವತಿ ಮಾಡಬೇಕಾಗಿಲ್ಲ ಸರ್ಕಾರ ಅದನ್ನ ಮನ್ನಾ ಮಾಡುತ್ತಿದೆ. ಇದಕ್ಕಾಗಿ ಸುಮಾರು 450 ಕೋಟಿಗಳನ್ನು ಬಜೆಟ್ ನಲ್ಲಿ ರಾಜ್ಯ ಸರ್ಕಾರ ಮೀಸಲಿಟ್ಟಿದೆ ಎಂದು ಹೇಳಲಾಗಿದೆ.

ಗೃಹಲಕ್ಷ್ಮಿ ಯೋಜನೆಯ 8ನೇ ಕಂತಿನ ಹಣಕ್ಕೆ ಕಡ್ಡಾಯ ರೂಲ್ಸ್ ಜಾರಿ! ಬಿಗ್ ಅಪ್ಡೇಟ್

ಕೃಷಿ ಅಭಿವೃದ್ಧಿ ಪ್ರಾಧಿಕಾರ ಕೃಷಿ ನೀತಿಗಳ ಪರಿಣಾಮಕಾರಿ ಅನುಷ್ಠಾನಕ್ಕೆ ತರುವ ಕಾರಣಕ್ಕಾಗಿ ಇದೀಗ ಈ ಸಾಲ ಮನ್ನಾ ಯೋಜನೆಯನ್ನು ಜಾರಿಗೆ ತಂದಿದೆ. ಗ್ರಾಮೀಣ ಭಾಗದಲ್ಲಿ ಇರುವ ರೈತರು ಸಾಲಮನ್ನಾ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಅದರಲ್ಲೂ ಮಧ್ಯಮ ಅವಧಿಯ ಮತ್ತು ದೀರ್ಘಾವಧಿಯ ಸಾಲವನ್ನು ತೆಗೆದುಕೊಂಡಿದ್ದರೆ ಆ ಸಾಲದ ಮೊತ್ತವನ್ನು ನೋಡಿ ಅದಕ್ಕೆ ವಿಧಿಸಲಾದ ಬಡ್ಡಿ ಬಡ್ಡಿ ದರ ಎಷ್ಟಿದೆಯೋ ಅಷ್ಟನ್ನೂ ಸರ್ಕಾರವೇ ಭರಿಸುತ್ತದೆ.

Loan waiver of Farmerಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿರುವಂತೆ ರಾಜ್ಯಾದ್ಯಂತ ಸುಮಾರು 57,000 ರೈತರು ಬಡ್ಡಿ ಮನ್ನಾ ಪ್ರಯೋಜನವನ್ನು ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಡಿಸಿಸಿ ಬ್ಯಾಂಕ್ ನಲ್ಲಿ ಸುಮಾರು 497 ಕೋಟಿ ರೂಪಾಯಿಗಳ ಸಾಲ ಮರುಪಾವತಿ ಆಗಿದೆ ಇದಕ್ಕೆ ಮುಖ್ಯ ಕಾರಣ, ಇದುವರೆಗೆ ಯಾರು ಅಸಲು ಪಾವತಿ ಮಾಡುತ್ತಾರೋ, ಅಂಥವರ ಬಡ್ಡಿಯನ್ನು ಮಾತ್ರ ಮನ್ನ ಮಾಡಲಾಗುವುದು ಎಂದು ಸರ್ಕಾರ ತಿಳಿಸಿತು. ಹೀಗಾಗಿ ಸಾಕಷ್ಟು ಸಾಲ ಮರುಪಾವತಿ ಆಗಿದೆ.

ಮೊಬೈಲ್ ನಲ್ಲಿಯೇ ಸುಲಭವಾಗಿ ಚೆಕ್ ಮಾಡಿಕೊಳ್ಳಿ ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್!

ಸಾಲದ ಸಬ್ಸಿಡಿ ಮೊತ್ತ ಹೆಚ್ಚಳ!

ಮೂರು ಲಕ್ಷದಿಂದ ಐದು ಲಕ್ಷದವರೆಗೆ ಬಡ್ಡಿ ರಹಿತ ಅಲ್ಪಾವಧಿಯ ಸಾಲದ ಮಿತಿಯನ್ನು ಇನ್ನಷ್ಟು ವಿಸ್ತರಿಸಲು ತೀರ್ಮಾನಿಸಲಾಗಿದೆ. ಅದೇ ರೀತಿ ಮಧ್ಯಮ ಮತ್ತು ದೀರ್ಘಾವಧಿಯ ಸಾಲದ ಮಿತಿಯನ್ನು ಕೂಡ 10 ಲಕ್ಷದಿಂದ 15 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲು ನಿರ್ಧರಿಸಲಾಗಿದ್ದು, ಈ ಸಾಲಕ್ಕೆ ಮೂರರಷ್ಟು ಸಬ್ಸಿಡಿ ದರವನ್ನು ಏರಿಕೆ ಮಾಡಲಾಗಿದೆ.

ಹೀಗಾಗಿ 2024 – 25 ನೇ ಸಾಲಿನ ಸರ್ಕಾರದ ಬಜೆಟ್ ಪ್ರಕಾರ 27 ಸಾವಿರ ಕೋಟಿ ರೂಪಾಯಿಗಳ ಸಾಲವನ್ನು ರೈತರು ಸರ್ಕಾರದಿಂದ ಪಡೆದುಕೊಳ್ಳಬಹುದಾಗಿದೆ. ಇದರಿಂದ ರಾಜ್ಯದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ 36 ಲಕ್ಷಕ್ಕೂ ಹೆಚ್ಚಿನ ರೈತರಿಗೆ ಅನುಕೂಲವಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

ಇಂತಹವರಿಗೆ ಸಿಗದೇ ಇರಬಹುದು ಉಚಿತ ವಿದ್ಯುತ್! ಗೃಹಜ್ಯೋತಿ ಯೋಜನೆ ಹೊಸ ಅಪ್ಡೇಟ್

ಒಟ್ಟಿನಲ್ಲಿ ಕೃಷಿ ಚಟುವಟಿಕೆಗಾಗಿ ಹೆಚ್ಚು ಸಾಲ ಮಾಡಿಕೊಂಡಿರುವವರಿಗೆ ಬಡ್ಡಿ ಮನ್ನಾ ಮಾಡುವುದರಿಂದ ಸ್ವಲ್ಪ ಮಟ್ಟಿಗಾದರೂ ಸಹಾಯವಾಗಲಿದೆ ಎಂದು ಹೇಳಬಹುದು. ಆದರೆ ಅಸಲು ಪಾವತಿ ಮಾಡಿದವರಿಗೆ ಮಾತ್ರ ಬಡ್ಡಿ ಮನ್ನಾ ಆಗುವುದು. ಇಲ್ಲವಾದರೆ ಅಸಲು ಮತ್ತು ಬಡ್ಡಿ ಜೊತೆಗೆ ವಿಳಂಬ ಶುಲ್ಕವನ್ನು ಕೂಡ ಪಾವತಿಸಬೇಕು.

Loan waiver for farmers who have borrowed from these banks

Related Stories