10ನೇ ತರಗತಿ (10th class) ಎನ್ನುವುದು ವಿದ್ಯಾರ್ಥಿ ಜೀವನದ ಬಹಳ ಪ್ರಮುಖ ಹಂತ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು (students) ಸರಿಯಾಗಿ ಅಧ್ಯಯನ ಮಾಡಿ ಉತ್ತೀರ್ಣರಾದರೆ ಮುಂದಿನ ಜೀವನ ರೂಪಿಸಿಕೊಳ್ಳಲು ಸಹಾಯಕವಾಗುತ್ತದೆ
ಹಾಗಾಗಿ ಉತ್ತಮ ಅಂಕಗಳೊಂದಿಗೆ (good marks) ತೇರ್ಗಡೆ ಹೊಂದುವುದು ಬಹಳ ಮುಖ್ಯ. ಶಿಕ್ಷಣ ಇಲಾಖೆ (education department) ಇತ್ತೀಚಿಗೆ ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಪಟ್ಟ ಹಾಗೆ ಸಾಕಷ್ಟು ಹೊಸ ನಿಯಮಗಳನ್ನು ಜಾರಿಗೆ ತರುತ್ತಿದ್ದು ಈಗ ಎಸ್ ಎಸ್ ಎಲ್ ಸಿ (SSLC marks card correction) ಅಂಕಪಟ್ಟಿಯಲ್ಲಿ ತಿದ್ದುಪಡಿ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಗೃಹಜ್ಯೋತಿ ಫ್ರೀ ಕರೆಂಟ್ ಬೆನ್ನಲ್ಲೇ, ರೈತರಿಗಾಗಿ ಹೊಸ ನಿರ್ಧಾರ ಕೈಗೊಂಡ ಸಿಎಂ ಸಿದ್ದರಾಮಯ್ಯ
10ನೇ ತರಗತಿ ಅಂಕ ಪಟ್ಟಿಯಲ್ಲಿ ಬದಲಾವಣೆ:
ಉನ್ನತ ವಿದ್ಯಾಭ್ಯಾಸಕ್ಕಾಗಿ ಅಥವಾ ಉದ್ಯೋಗಕ್ಕಾಗಿ (job) ಅನೇಕ ಸಂದರ್ಭ ದಲ್ಲಿ 10ನೇ ತರಗತಿಯ ಅಂಕಪಟ್ಟಿಯನ್ನು (marks card) ಮುಖ್ಯ ದಾಖಲೆಯಾಗಿ ಕೇಳಲಾಗುತ್ತದೆ. ಹಾಗಾಗಿ 10ನೇ ತರಗತಿಯ ಅಂಕಪಟ್ಟಿ ತಿದ್ದುಪಡಿ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸಲು ತೀರ್ಮಾನಿಸಲಾಗಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ, ತಂತ್ರಾಂಶ ಒಂದನ್ನು ಸಿದ್ಧಪಡಿಸಿ ಅದರಲ್ಲಿ ಲಾಗಿನ್ (login) ಆಗುವ ಮೂಲಕ ಸುಲಭವಾಗಿ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಕಳೆದ ತಿಂಗಳ ಅನ್ನಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ ಜಮಾ ಆಗಿದ್ಯಾ? ಒಂದೇ ಕ್ಲಿಕ್ ನಲ್ಲಿ ತಿಳಿದುಕೊಳ್ಳಿ
ತಿದ್ದುಪಡಿ ಇನ್ನಷ್ಟು ಸುಲಭ!
ಪ್ರಮುಖ ದಾಖಲೆಯಾಗಿರುವ 10ನೇ ತರಗತಿಯ ಅಂಕಪಟ್ಟಿಯಲ್ಲಿ ಯಾವುದೇ ಲೋಪದೋಷಗಳು (no mistakes) ಇರಬಾರದು ಎನ್ನುವ ಕಾರಣಕ್ಕೆ ಡಿಜಿಟಲ್ (digital) ಅದನ್ನು ತಿದ್ದುಪಡಿ ಮಾಡಲು ಇನ್ನು ಮುಂದೆ ಸಾಧ್ಯವಿದೆ.
ವಿದ್ಯಾರ್ಥಿಯ ಹೆಸರು, ಪಾಲಕರ ಹೆಸರು, ಜನ್ಮ ದಿನಾಂಕ, ಇನಿಷಿಯಲ್, ವಿಳಾಸ ಶಾಲೆ ಅಥವಾ ಶಿಕ್ಷಣ ಸಂಸ್ಥೆಯ ಮಾಹಿತಿ ಮೊದಲಾದವುಗಳ ಬಗ್ಗೆ ಆಯಾ ಶಾಲೆಯ ಮುಖ್ಯ ಶಿಕ್ಷಕರು ಪ್ರಸ್ತಾವನೆ ಸಲ್ಲಿಸಿ ಈ ತಂತ್ರಾಂಶದಲ್ಲಿ ಲಾಗಿನ್ ಆಗಿ ತಿದ್ದುಪಡಿ ಮಾಡಬಹುದಾಗಿದೆ.
ಇನ್ನು ಇದಕ್ಕೆ ಲಾಗಿನ್ ಶುಲ್ಕವು ಕೂಡ ಇರುತ್ತದೆ. ಆನ್ಲೈನ್ ನಲ್ಲಿ ಚಲನ್ ಡೌನ್ಲೋಡ್ (download) ಮಾಡಿಕೊಂಡು ಸಮೀಪದ ಬ್ಯಾಂಕ್ (nearest bank) ಶಾಖೆಗೆ ಹೋಗಿ ಶುಲ್ಕ ಪಾವತಿಸಬೇಕು ನಂತರ ಅಂಕಪಟ್ಟಿ ಪಡೆಯಬಹುದು.
ಗೃಹಲಕ್ಷ್ಮಿ ಯೋಜನೆಯ ಎರಡೂ ಕಂತಿನ ಹಣ ನಾಳೆಯೇ ಬಿಡುಗಡೆ! ಇಂತಹ ಗೃಹಿಣಿಯರಿಗೆ ಮಾತ್ರ
ಮಾರ್ಕ್ಸ್ ಕಾರ್ಡ್ ತಿದ್ದುಪಡಿಯಲ್ಲಿ ಯಾವುದೇ ವಂಚನೆಗೆ ಅವಕಾಶವಿಲ್ಲ:
ಇದು ಸಂಪೂರ್ಣ ಆನ್ಲೈನ್ ಮೂಲಕವೇ ನಡೆಯುವಂತಹ ಪ್ರಕ್ರಿಯೆ ಆಗಿದ್ದು ಶಿಕ್ಷಕರು ಮಕ್ಕಳ ದಾಖಲಾತಿಯನ್ನು ತಿದ್ದುಪಡಿ ಮಾಡುವುದು ಅಥವಾ ನಕಲು ಮಾಡುವುದು ಸಾಬೀತಾದರೆ ಆದರೆ ಶಾಲೆಯ ಮುಖ್ಯ ಶಿಕ್ಷಕರ ವಿರುದ್ಧ ಶಿಕ್ಷಣ ಇಲಾಖೆ ಕಠಿಣ ಕ್ರಮ ಕೈಗೊಳ್ಳಬಹುದು.
ಹಾಗಾಗಿ ಬಹಳ ಮುತುವರ್ಜಿಯಿಂದ ಶಿಕ್ಷಕರು (teachers) ಈ ತಿದ್ದುಪಡಿ ಕೆಲಸ ಮಾಡಬೇಕಾಗುತ್ತದೆ. ಒಂದು ವೇಳೆ ಶಿಕ್ಷಕರು ಅಪ್ಲೋಡ್ ಮಾಡಿದ ಮಾಹಿತಿ ಅಥವಾ ದಾಖಲೆ ಸರಿ ಇದೆಯೋ ಇಲ್ಲವೋ ಎಂಬುದನ್ನು ಆಯಾ ಪರೀಕ್ಷಾ ಮಂಡಳಿ ಅಧಿಕಾರಿಗಳು ಪರಿಶೀಲನೆ ನಡೆಸಿ, ಪರಿಷ್ಕೃತ ಅಂಕ ಪಟ್ಟಿಯನ್ನು ಆಯಾ ಶಾಲೆಗಳಿಗೆ ಅಂಚೆ ಮೂಲಕ ಕಳುಹಿಸಲಾಗುತ್ತದೆ.
ಇದು ಶಿಕ್ಷಣ ಇಲಾಖೆಯ ಅಧಿಕೃತ ಮಾಹಿತಿಯಾಗಿದ್ದು ಇನ್ನು ಮುಂದೆ ಹತ್ತನೇ ತರಗತಿಯ ಅಂಕಪಟ್ಟಿ ಇನ್ನಷ್ಟು ಮಹತ್ವ ಪಡೆದುಕೊಳ್ಳಲಿದೆ.
New Rules Regarding SSLC Marks Card Corrections from education department
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.