ಬಂತು ಗೃಹಲಕ್ಷ್ಮಿ ಯೋಜನೆಯನ್ನೇ ಮೀರಿಸುವ ಮತ್ತೊಂದು ಯೋಜನೆ! ಅರ್ಜಿ ಸಲ್ಲಿಸಲು ಕ್ಯೂ ನಿಂತ ಮಹಿಳೆಯರು
ಹೆಣ್ಣುಮಕ್ಕಳಿಗೆ ಇನ್ನು ಸಾಕಷ್ಟು ಹಳೆಯ ಯೋಜನೆಗಳು ಲಭ್ಯವಿದೆ. ಅಂಥ ಯೋಜನೆಗಳಲ್ಲಿ ಒಂದು ತಾಯಿ ಭಾಗ್ಯ ಯೋಜನೆ (Thayi Bhagya Yojane) ಆಗಿದೆ.
ರಾಜ್ಯ ಸರ್ಕಾರವು ಮಹಿಳೆಯರಿಗೆ ಅನುಕೂಲವಾಗಲಿ ಎಂದು ಬಹಳಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಯೋಜನೆಗಳಿಂದ ಮಹಿಳೆಯರಿಗೆ ಸಹಾಯವಾಗುತ್ತಿದೆ. ಈಗಾಗಲೇ ಶಕ್ತಿ ಯೋಜೆನಯಿಂದ (Shakti Yojane) ಮಹಿಳೆಯರು ಉಚಿತ ಪ್ರಯಾಣ ಭಾಗ್ಯ ಪಡೆದಿದ್ದಾರೆ, ಗೃಹಲಕ್ಷ್ಮಿ ಯೋಜನೆ (Gruhalakshmi Yojane) ಇಂದ ತಿಂಗಳಿಗೆ ₹2000 ಪಡೆಯುತ್ತಾರೆ.
ಇವು ಹೊಸ ಯೋಜನೆಗಳಾಗಿದ್ದು, ಹೆಣ್ಣುಮಕ್ಕಳಿಗೆ ಇನ್ನು ಸಾಕಷ್ಟು ಹಳೆಯ ಯೋಜನೆಗಳು ಲಭ್ಯವಿದೆ. ಅಂಥ ಯೋಜನೆಗಳಲ್ಲಿ ಒಂದು ತಾಯಿ ಭಾಗ್ಯ ಯೋಜನೆ (Thayi Bhagya Yojane) ಆಗಿದೆ. ಹೆಂಗಸರು ಈ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ಮಹಿಳೆಯರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಈ ತಾಯಿ ಭಾಗ್ಯ ಯೋಜನೆಯ ಮುಖ್ಯ ಉದ್ದೇಶ, ಗರ್ಭಿಣಿ ಮಹಿಳೆಯರಿಗೆ ಉಚಿತವಾಗಿ ಚಿಕಿತ್ಸೆ ನೀಡುವುದಾಗಿದೆ.
ಯುವಕರೆಲ್ಲ ಕಾಯುತ್ತಿದ್ದ ಯುವನಿಧಿ ಯೋಜನೆ ಬಗ್ಗೆ ಬಿಗ್ ಅಪ್ಡೇಟ್! ಯುವಪೀಳಿಗೆಗೆ ಭರವಸೆ ಕೊಟ್ಟ ಸರ್ಕಾರ
2009ರಲ್ಲಿ ಶುರುವಾದ ಯೋಜನೆ ಇದು, ಈ ಯೋಜನೆಯಲ್ಲಿ ಮಹಿಳೆಯರು ಮತ್ತು ಹಾಲುಣಿಸುವ ತಾಯಿಯರಿಗೆ ಉಚಿತ ಚಿಕಿತ್ಸೆ ಪೂರೈಸಲಾಗುತ್ತದೆ. ಈ ಯೋಜನೆಯ ಫಲ ಪಡೆಯುವ ಮಹಿಳೆ ಗರ್ಭಿಣಿ ಆಗಿ, ನಂತರ ಮಗು ಹುಟ್ಟಿ ಕೆಲ ಸಮಯದವರೆಗು ಹೆಣ್ಣಿಗೆ ಮತ್ತು ಮಗುವಿಗೆ ಸಂಪೂರ್ಣ ಚಿಕಿತ್ಸೆ (Mother and Child Treatment) ಕೊಡಲಾಗುತ್ತದೆ.
ಈ ಸೌಲಭ್ಯವನ್ನು ಗರ್ಭಿಣಿ ಹೆಂಗಸರು (pregnant ladies) ನಿಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ಕೆಲವು ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯಬಹುದು. ಈ ಯೋಜನೆಯನ್ನು ಜಾರಿಗೆ ತಂದಿರುವುದು ವಿಶೇಷವಾಗಿ ಬಡ ವರ್ಗದ ಹೆಣ್ಣುಮಕ್ಕಳಿಗೆ ಸಹಾಯ ಆಗಲಿ ಎಂದು, ಬಡವರ ಮನೆಯ ಹೆಣ್ಣುಮಕ್ಕಳು ತಾಯ್ತನದ ವೇಳೆ ಉಚಿತವಾಗಿ ಒಳ್ಳೆಯ ಚಿಕಿತ್ಸೆ ಪಡೆಯಬಹುದು.
ಈ ಉಚಿತ ಚಿಕಿತ್ಸೆ ಗರ್ಭಿಣಿ ಹೆಣ್ಣುಮಕ್ಕಳಿಗೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ (Hospital) ಲಭ್ಯವಿರುತ್ತದೆ. ಹಾಗೆಯೇ ಕೆಲವು ಖಾಸಗಿ ಅನುಮೋದಿತ ಆಸ್ಪತ್ರೆಯಲ್ಲಿ ಕೂಡ ಈ ಸೌಲಭ್ಯ ಲಭ್ಯವಿರುತ್ತದೆ. ಹಾಗಾಗಿ ನೀವು ಚಿಕಿತ್ಸೆ ಪಡೆಯುವ ಆಸ್ಪತ್ರೆಯಲ್ಲಿ ತಾಯಿ ಭಾಗ್ಯ ಯೋಜನೆ ಇದೆಯೇ ಎಂದು ಕೇಳಿ ಮಾಹಿತಿ ತಿಳಿದು ಅಲ್ಲಿ ಚಿಕಿತ್ಸೆ ಶುರು ಮಾಡಿ..
ಎಲ್ಲರಿಗಿಂತ ಮೊದಲು ಗೃಹಲಕ್ಷ್ಮಿ ಯೋಜನೆಯ ಮಂಜೂರಾತಿ ಪತ್ರ ಪಡೆಯಲು ಇದೊಂದು ಕೆಲಸ ಮಾಡಿ ಸಾಕು
ಈ ಯೋಜನೆಯ ಮೂಲಕ ಗರ್ಭಿಣಿ ಆದಾಗ ನೀವು ಆಸ್ಪತ್ರೆಗೆ ದಾಖಲಾಗುವುದರಿಂದ ನಿಮಗೆ ಮಗು ಜನಸಿ ಒಂದಷ್ಟು ಸಮಯ ಕಳೆಯುವವರೆಗು ಕೂಡ ನಿಮಗೆ ಉಚಿತ ಚಿಕಿತ್ಸೆ ಸಿಗುತ್ತದೆ (Free Treatment). ಅಷ್ಟೇ ಅಲ್ಲದೆ ಡೆಲಿವರಿ ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ತಾಯಿಗೆ ₹3000 ರೂಪಾಯಿ ಕೊಡಲಾಗುತ್ತದೆ, ಸರ್ಕಾರಿ ಆಸ್ಪತ್ರೆಯಲ್ಲಿ ₹1500 ರೂಪಾಯಿ ಕೊಡಲಾಗುತ್ತದೆ.
ಯಾವುದೇ ರೀತಿಯ ಡೆಲಿವರಿಗೆ ಈ ಹಣ ಕೊಡಲಾಗುತ್ತದೆ. ಹಾಗೆಯೇ ಈ ಸೌಲಭ್ಯ ಸಿಗುವುದು ಮೊದಲ ಎರಡು ಡೆಲಿವರಿಗಳಿಗೆ ಮಾತ್ರ ಆಗಿರುತ್ತದೆ. ಕರ್ನಾಟಕ ರಾಜ್ಯದ ಈ ತಾಯಿ ಭಾಗ್ಯ ಯೋಜನೆಯ ಅನುಕೂಲ ಪಡೆಯಲು ನೀವು ಆಶಾ ಕಾರ್ಯಕರ್ತೆಯರು ಅಥವಾ ಕಿರಿಯ ಮಹಿಳಾ ಸಹಾಯಕಿಯರ ಸಹಾಯ ಪಡೆದು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಈ ಯೋಜನೆಗೆ ಅರ್ಹತೆ ಪಡೆಯುವ ಮಹಿಳೆಯರು ತಮ್ಮ ಪ್ರದೇಶದ ಆಶಾ ಕಾರ್ಯಕರ್ತೆಯನ್ನು ತಾವೇ ಹೋಗಿ ಭೇಟಿ ಮಾಡಿ, ಯೋಜನೆ ಬಗ್ಗೆ ಚರ್ಚೆ ಮಾಡಬೇಕಾಗುತ್ತದೆ.. ಈ ವಿಚಾರ ತಿಳಿಸಿದ ನಂತರ ಆಶಾ ಕಾರ್ಯಕರ್ತೆಯರು ಅಥವಾ ಅಲ್ಲಿನ ಕಿರಿಯ ಆರೋಗ್ಯ ಸಹಾಯಕಿಯರು ಎಲ್ಲಾ ಮಾಹಿತಿ ಪಡೆದು ಅವರಿಗೆ ANC ಕಾರ್ಡ್ ಮಾಡಿಸಿಕೊಡುತ್ತಾರೆ. ಈ ಕಾರ್ಡ್ ಅನ್ನು ಆಸ್ಪತ್ರೆಯಲ್ಲಿ ತೋರಿಸಿದರೆ ನಿಮಗೆ ಉಚಿತ ಚಿಕಿತ್ಸೆ ಸಿಗುತ್ತದೆ.
New scheme for women form state government thayi bhagya
Follow us On
Google News |