ಶಕ್ತಿ ಯೋಜನೆ ಬಗ್ಗೆ ಹೊಸ ಅಪ್ಡೇಟ್, ರಾಜ್ಯದ ಪುರುಷರಿಗೂ ಗುಡ್ ನ್ಯೂಸ್ ಕೊಟ್ಟ ಸರ್ಕಾರ! ಇಂದೇ ಅರ್ಜಿ ಹಾಕಿ

ಶಕ್ತಿ ಯೋಜನೆಯ ಪರಿಣಾಮ, ಈಗ ರಾಜ್ಯದಲ್ಲಿ ಹೆಚ್ಚುವರಿ ಬಸ್ ಗಳ ಅವಶ್ಯಕತೆ ಇದ್ದು, ಅವುಗಳನ್ನು ಪೂರೈಸುವುದರಿಂದ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿದೆ. ಇದರಿಂದ ನಿರುದ್ಯೋಗದ ಸಮಸ್ಯೆಗೆ ಪರಿಹಾರ ಸಿಗಲಿದೆ.

ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಮಹಿಳೆಯರಿಗೆ ಜಾರಿಗೆ ತಂದ ಯೋಜನೆಗಳಲ್ಲಿ ಒಂದು ಶಕ್ತಿ ಯೋಜನೆ (Shakti Yojane) ಆಗಿದೆ. ಈ ಯೋಜನೆಯ ಮೂಲಕ ರಾಜ್ಯದ ಸರ್ಕಾರಿ ಬಸ್ ಗಳಲ್ಲಿ, ಎಲ್ಲಾ ಮಹಿಳೆಯರು ಕೂಡ ಉಚಿತವಾಗಿ ಪ್ರಯಾಣ (Free Bus) ಮಾಡಬಹುದು ಎಂದು ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿತು.

ಮಹಿಳೆಯರು ಈಗ ಹೆಚ್ಚು ಹೆಚ್ಚಾಗಿ ಸರ್ಕಾರಿ ಬಸ್ ನಲ್ಲೇ ಪ್ರಯಾಣ ಮಾಡುತ್ತಿದ್ದಾರೆ. ಇದರಿಂದ ಪ್ರಯಾಣ ಮಾಡುವ ಹೆಣ್ಣುಮಕ್ಕಳ ಸಂಖ್ಯೆ ಜಾಸ್ತಿ ಆಗುತ್ತಿದೆ.

ಬಸ್ ನಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿರುವ ಹೆಂಗಸರ ಸಂಖ್ಯೆ ಜಾಸ್ತಿ ಆಗಿರುವುದರಿಂದ ಬಸ್ ನಲ್ಲಿ ಓಡಾಡುವ ಬೇರೆ ಪ್ರಯಾಣಿಕರಿಗೆ ತೊಂದರೆ ಆಗಿದೆ, ವಿದ್ಯಾರ್ಥಿಗಳು, ಪುರುಷರು, ಕೆಲಸಕ್ಕಾಗಿ ಓಡಾಡುವವರಿಗೆ ಹೆಚ್ಚು ತೊಂದರೆ ಆಗುತ್ತಿದೆ.

ರೇಷನ್ ಕಾರ್ಡ್ ಸಿಗದೆ ಇದ್ದವರಿಗೆ ಸರ್ಕಾರದಿಂದ ಹೊಸ ನಿರ್ಧಾರ! ಕಾರ್ಡ್ ಪಡೆಯೋದು ಈಗ ಇನ್ನಷ್ಟು ಸುಲಭ

ಮಹಿಳೆಯರು ತೀರ್ಥಕ್ಷೇತ್ರ ದೇವಸ್ಥಾನ ಎಂದು ಹೆಚ್ಚು ಓಡಾಡುತ್ತಿದ್ದು, ಇದರಿಂದ ಈ ರೀತಿ ತೊಂದರೆ ಆಗುತ್ತಿದೆ. ಹಾಗಾಗಿ ಸರ್ಕಾರ ಈಗ ಬಸ್ ಗಳ ಸಂಖ್ಯೆಯನ್ನು ಹೆಚ್ಚಿಸುವ ನಿರ್ಧಾರ ಮಾಡಿದೆ. ಸರ್ಕಾರದ ಈ ನಿರ್ಧಾರದಿಂದ ಹೆಚ್ಚು ಜನರಿಗೆ ಕೆಲಸ ಕೂಡ ಸಿಗುತ್ತದೆ ಎಂದು ಹೇಳಲಾಗುತ್ತಿದೆ.

ಶಕ್ತಿ ಯೋಜನೆಯಲ್ಲಿ ಹೆಣ್ಣುಮಕ್ಕಳು ಹೆಚ್ಚಾಗಿ ಓಡಾಡುತ್ತಿರುವ ಕಾರಣ ಬಸ್ ಗಳಲ್ಲಿ ರಶ್ ಜಾಸ್ತಿ ಆಗಿ, ಜನರಿಗೆ ತೊಂದರೆ ಆಗುತ್ತಿರುವ ಕಾರಣ ಈಗ ರಾಜ್ಯದಲ್ಲಿ ಹೆಚ್ಚು ಬಸ್ ಗಳ ಸಂಚಾರ ಆಗಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ಸರ್ಕಾರ ಕೂಡ ಇದಕ್ಕೆ ಒಪ್ಪಿಗೆ ಕೊಟ್ಟಿದ್ದು, ರಾಜ್ಯಕ್ಕೆ ಹೊಸದಾಗಿ 4000 ಬಸ್ ಗಳು ಬರಬಹುದು ಎಂದು ಹೇಳಲಾಗುತ್ತಿದೆ. ಇದರಿಂದ ಹೊಸದಾಗಿ ಉದ್ಯೋಗದ ಅವಕಾಶ ಕೂಡ ಶುರುವಾಗುವ ಸಾಧ್ಯತೆ ಇದೆ.

New update about Shakti Yojana, Free Bus Facilityಡ್ರೈವರ್, ಕ್ಲೀನರ್ ಮತ್ತು ಇನ್ನಿತರ ಉದ್ಯೋಗಗಳು ಸೃಷ್ಟಿಯಾಗುತ್ತದೆ. ಈ ವಿಚಾರದ ಬಗ್ಗೆ ಇನ್ನು 3 ತಿಂಗಳ ಒಳಗೆ ರಾಜ್ಯ ಸರ್ಕಾರ ನಿರ್ಧಾರ ಮಾಡುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದಾರೆ.

ಗೃಹಜ್ಯೋತಿ ಯೋಜನೆಯ ಫ್ರೀ ವಿದ್ಯುತ್ ಪಡೆಯುತ್ತಿರುವವರಿಗೆ ಸರ್ಕಾರದಿಂದ ಹೊಸ ರೂಲ್ಸ್!

ಸರ್ಕಾರ ಈಗ ಮಹಿಳೆಯರಿಗಾಗಿ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ರಾಜ್ಯದ ಪುಣ್ಯಕ್ಷೇತ್ರಗಳಿಗೆ ಮಹಿಳೆಯರು ಹೆಚ್ಚಾಗಿ ಭೇಟಿ ನೀಡುತ್ತಿರುವ ಕಾರಣ ದೇವಸ್ಥಾನಗಳ ಆವರಣದಲ್ಲಿ ಹೆಣ್ಣುಮಕ್ಕಳು ತಮ್ಮ ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕ ಕೋಣೆಗಳನ್ನು ನಿರ್ಮಿಸಲಾಗುತ್ತಿದೆ.

ಜೊತೆಗೆ ಶೌಚಾಲಯಗಳು, ಸ್ನಾನಗೃಹಗಳನ್ನು ಕೂಡ ನಿರ್ಮಾಣ ಮಾಡಲಾಗುತ್ತದೆ. ಈ ಕೆಲಸದಲ್ಲಿ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಲಾಗುತ್ತದೆ ಎಂದು ರಾಮಲಿಂಗಾರೆಡ್ಡಿ ಅವರು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಈಗ ಹೆಚ್ಚು ಬಸ್ ಗಳನ್ನು ತರುವ ಕಾರಣ, ಹೆಚ್ಚು ಕೆಲಸಗಳು ಸೃಷ್ಟಿಯಾಗುತ್ತದೆ. ಈ ಬಗ್ಗೆ ರಾಮಲಿಂಗಾರೆಡ್ಡಿ ಅವರು ಮಾತನಾಡಿದ್ದು, 1:2 ಮತ್ತು ಅನುಕಂಪವನ್ನು ಆಧರಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಹಾಗೂ ಬೆಂಗಳೂರು ಮಹಾನಗರ ಪಾಲಿಕೆ ಎರಡು ಕಡೆ ಬಸ್ ಡ್ರೈವರ್ ಗಳು, ಸಿಬ್ಬಂದಿಗಳು, ನಿರ್ವಾಹಕರು ಈ ಕೆಲಸಗಳಿಗೆ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಸುಮಾರು 13,000 ಹುದ್ದೆಗಳನ್ನು ಭರ್ತಿ ಮಾಡಲಾಗಲಿದ್ದು, ಮೊದಲಿಗೆ ಸುಮಾರು 150 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ನಿಮ್ಮ ವಿದ್ಯುತ್ ಬಿಲ್ ಜೀರೋ ಬಂದಿಲ್ವಾ? ಎಷ್ಟು ಅರ್ಜಿ ರಿಜೆಕ್ಟ್ ಆಗಿದೆ ಗೊತ್ತಾ? ಗೃಹಜ್ಯೋತಿ ಯೋಜನೆ ಬಗ್ಗೆ ಮತ್ತೊಂದು ಮುಖ್ಯ ವರದಿ ತಂದ ರಾಜ್ಯ ಸರ್ಕಾರ

ಹೆಣ್ಣುಮಕ್ಕಳಿಗಾಗಿ ತಂದ ಶಕ್ತಿ ಯೋಜನೆಯ ಪರಿಣಾಮ, ಈಗ ರಾಜ್ಯದಲ್ಲಿ ಹೆಚ್ಚುವರಿ ಬಸ್ ಗಳ ಅವಶ್ಯಕತೆ ಇದ್ದು, ಅವುಗಳನ್ನು ಪೂರೈಸುವುದರಿಂದ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿದೆ. ಇದರಿಂದ ನಿರುದ್ಯೋಗದ ಸಮಸ್ಯೆಗೆ ಪರಿಹಾರ ಸಿಗಲಿದೆ. ಇದರಿಂದ ಹೆಚ್ಚು ಪುರುಷರಿಗೆ ಕೆಲಸದ ಲಾಭ ಸಿಗಲಿರುವುದು ಒಳ್ಳೆಯ ವಿಚಾರ ಆಗಿದೆ.

New update about Shakti Yojana, Free Bus Facility

Follow us On

FaceBook Google News