ರೇಷನ್ ಕಾರ್ಡ್ ವಿತರಣೆಗೆ ಮರುಚಾಲನೆ! ಯಾವಾಗಿಂದ ಸಿಗುತ್ತೆ ಹೊಸ ಕಾರ್ಡ್ ಗೊತ್ತಾ?

ಪಡಿತರ ಚೀಟಿ ವಿತರಣೆ ಕಾರ್ಯ ಮತ್ತೆ ಆರಂಭ ಹೊಸ ಅರ್ಜಿಗಳು ಸ್ವೀಕಾರ; ಯಾವಾಗಿಂದ ಗೊತ್ತೇ?

ಕಳೆದ ಒಂದುವರೆ ವರ್ಷದಿಂದ ವಿತರಣೆ ಮಾಡದೆ ಸ್ಥಗಿತಗೊಳಿಸಲಾಗಿದ್ದ ಎಪಿಎಲ್ ಕಾರ್ಡ್ (APL Card) ಅನ್ನು ವಿತರಣೆ ಮಾಡಲು ಆಹಾರ ನಾಗರಿಕ ಸರಬರಾಜು ಇಲಾಖೆ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಇಲಾಖೆ ಫಲಾನುಭವಿಗಳಿಗೆ ಗುಡ್ ನ್ಯೂಸ್ ನೀಡಿದ್ದು, ಇದೇ ಬರುವ ಜೂನ್ ತಿಂಗಳಿನಿಂದ ಮತ್ತೆ ಪಡಿತರ ಚೀಟಿ (Ration Card) ವಿತರಣೆ ಕಾರ್ಯ ಆರಂಭವಾಗಲಿದೆ.

ರೇಷನ್ ಕಾರ್ಡ್ (ration card) ದಿನದಿಂದ ದಿನಕ್ಕೆ ಮಹತ್ವ ಪಡೆದುಕೊಳ್ಳುತ್ತಿದೆ, ಆದರೆ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವುದಕ್ಕೆ ಎಲ್ಲರ ಬಳಿ ರೇಷನ್ ಕಾರ್ಡ್ ಇಲ್ಲ ಹೀಗಾಗಿ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಜನ ಕಾದು ಕುಳಿತಿದ್ದಾರೆ

ಈ ತಿಂಗಳ ಪಿಂಚಣಿ ಹಣ ಡಿಬಿಟಿ ಮೂಲಕ ಜಮಾ! ಈ ಲಿಸ್ಟ್ ನಲ್ಲಿ ಇರುವವರಿಗೆ ಮಾತ್ರ

ರೇಷನ್ ಕಾರ್ಡ್ ವಿತರಣೆಗೆ ಮರುಚಾಲನೆ! ಯಾವಾಗಿಂದ ಸಿಗುತ್ತೆ ಹೊಸ ಕಾರ್ಡ್ ಗೊತ್ತಾ? - Kannada News

ಈಗಾಗಲೇ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ (BPL Card) ವಿತರಣಾ ಕಾರ್ಯ ಆರಂಭಿಸಲಾಗುವುದು ಎಂದು ಸರ್ಕಾರ ತಿಳಿಸಿತ್ತು ಅದರ ಪ್ರಕಾರ ಕೆಲವರಿಗೆ ಹೊಸ ರೇಷನ್ ಕಾರ್ಡ್ ಸಿಕ್ಕಿದೆ ಆದರೆ ಎಲೆಕ್ಷನ್ ಇರುವ ಕಾರಣದಿಂದಾಗಿ ಈ ಕೆಲಸ ಸರಿಯಾಗಿ ಆಗುತ್ತಿಲ್ಲ.

ಜೂನ್ ನಿಂದ ಹೊಸ ಎಪಿಎಲ್ ಕಾರ್ಡ್ ವಿತರಣೆ!

ಈಗ ಎಪಿಎಲ್ ರೇಷನ್ ಕಾರ್ಡ್ ವಿತರಣೆಗೆ ಸಂಬಂಧಪಟ್ಟ ಹಾಗೆ ಹೊಸ ಅಪ್ಡೇಟ್ ಸಿಕ್ಕಿದ್ದು ಜೂನ್ ತಿಂಗಳಿನಿಂದ ಹೊಸ ಎಪಿಎಲ್ ರೇಷನ್ ಕಾರ್ಡ್ ವಿತರಣೆ ಮಾಡಲಾಗುವುದು. ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬರುತ್ತಿದ್ದಂತೆ ಹೊಸ ಐಪಿಎಲ್ ಕಾರ್ಡ್ ವಿತರಣೆಗೆ ಮರುಚಾಲನೆ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಗೃಹಲಕ್ಷ್ಮಿ ಯೋಜನೆ ಕುರಿತು ಬಿಗ್ ಅಪ್ಡೇಟ್; ಫಲಾನುಭವಿಗಳ ಹೊಸ ಲಿಸ್ಟ್ ಬಿಡುಗಡೆ!

BPL Ration Cardಒಂದೂವರೆ ವರ್ಷದಿಂದ ಕ್ಲೋಸ್ ಆದ ವೆಬ್ ಪೋರ್ಟಲ್!

ಕಳೆದ ಒಂದುವರೆ ವರ್ಷಗಳ ಹಿಂದೆ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸಲಾಗುತ್ತಿತ್ತು ಅಧಿಕಾರದಲ್ಲಿ ಇದ್ದ ಬಿಜೆಪಿ ಸರ್ಕಾರದ ಅವಧಿ ಮುಗಿದಿತ್ತು. ಹೀಗಾಗಿ ಚುನಾವಣಾ ತಯಾರಿಯಲ್ಲಿ ಇದ್ದ ಸರ್ಕಾರ ಮತ್ತು ವಿರೋಧ ಪಕ್ಷಗಳು ಜನರಿಗೆ ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್ ನೀಡುವ ಬಗ್ಗೆ ಹೆಚ್ಚು ಗಮನ ವಹಿಸಲಿಲ್ಲ. ಆಗ ವೆಬ್ ಪೋರ್ಟಲ್ (web portal) ಕೂಡ ಕ್ಲೋಸ್ ಆಯ್ತು, ಅಲ್ಲಿಗೆ ಒಂದುವರೆ ವರ್ಷದಿಂದ ಬಿಪಿಎಲ್ ಕಾರ್ಡ್ ವಿತರಣೆ ಸ್ಥಗಿತಗೊಂಡಿದೆ.

ಕೊನೆಗೂ ಹೊಸ ರೇಷನ್ ಕಾರ್ಡ್ ಅರ್ಜಿ ಆಹ್ವಾನ! ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಿ

ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಿ!

ಜೂನ್ ತಿಂಗಳ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದಕ್ಕೆ ವೆಬ್ ಪೋರ್ಟಲ್ ತೆರೆದುಕೊಳ್ಳಲಿದೆ. ಹಾಗಾಗಿ ಜೂನ್ ನಿಂದ ನೀವು ಮನೆಯಲ್ಲಿಯೇ ಕುಳಿತು ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರ ತಿಳಿಸಿದೆ.

Ration card distribution resumed, Do you know when the new card will be available

Follow us On

FaceBook Google News