Karnataka NewsCrime News

ಮನೆಗೆ ಬಿಡುವುದಾಗಿ ಹೇಳಿ 2ನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ

ರಾಯಚೂರಿನಲ್ಲಿ ಮನೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದ ಆರೋಪಿ, ಬಸ್ ನಿಲ್ದಾಣಕ್ಕೆ ಕರೆದುಕೊಂಡು ಹೋಗಿ, 2ನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ.

  • ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಪ್ರಕರಣ ದಾಖಲು
  • ಆರೋಪಿ ಶಿವನಗೌಡ ಹಾಗೂ ಶಾಲಾ ವ್ಯವಸ್ಥಾಪಕ ರಾಜು ತಾಳಿಕೋಟೆ ಪೊಲೀಸರು ವಶಕ್ಕೆ
  • ಪೋಷಕರ ಆಕ್ರೋಶ, ಶಾಲಾ ನಿರ್ಲಕ್ಷ್ಯದಿಂದ ಬೇರೆ ಮಕ್ಕಳ ಮೇಲೂ ಅಪಾಯ

ರಾಯಚೂರು: ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಮಾಜವೇ ತಲೆ ತಗ್ಗಿಸುವ ಹಾಗೂ ನೋವು ತರುವ ಘಟನೆ ನಡೆದಿದೆ. ಎರಡನೇ ತರಗತಿ ಶಾಲಾ ವಿದ್ಯಾರ್ಥಿನಿಯನ್ನು ಶಿವನಗೌಡ ಎಂಬ ವ್ಯಕ್ತಿ ಅತ್ಯಾಚಾರ ಮಾಡಿದ್ದಾನೆ.

ಆರೋಪಿ ಬಾಲಕಿಯನ್ನು ಶಾಲೆಯಿಂದ ಮನೆಗೆ ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ, ಆ ಪುಟ್ಟ ಬಾಲಕಿಯ ಮೇಲೆ ಕೃತ್ಯ ಎಸಗಿದ್ದಾನೆ.

ರಾಯಚೂರಿನಲ್ಲಿ 2ನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ ಕೃತ್ಯ

ಅತ್ಯಾಚಾರ ಕೃತ್ಯಕ್ಕೆ ಕಾರಣವಾದ ಶಿವನಗೌಡ ಮತ್ತು ಖಾಸಗಿ ಶಾಲೆಯ ವ್ಯವಸ್ಥಾಪಕ ರಾಜು ತಾಳಿಕೋಟೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣವು ಪೋಕ್ಸೋ ಕಾಯ್ದೆ ಅಡಿಯಲ್ಲಿ ದಾಖಲಿಸಲಾಗಿದೆ.

ಪೇಂಟ್‌ನಲ್ಲಿ ಬಳಸುವ ಥಿನ್ನರ್ ಸೇವಿಸಿ 3 ವರ್ಷದ ಬಾಲಕ ಸಾವು

ಬಾಲಕಿಯ ಪೋಷಕರು ಶಾಲಾ ಸಿಬ್ಬಂದಿಯ ನಿರ್ಲಕ್ಷ್ಯವನ್ನು ಖಂಡಿಸಿ, ಪೋಷಕರ ಅನುಮತಿ ಇಲ್ಲದೆ ಬೇರೊಬ್ಬರೊಂದಿಗೆ ತಮ್ಮ ಮಗಳನ್ನು ಕಳುಹಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಪೋಷಕರು ಒತ್ತಾಯಿಸುತ್ತಿದ್ದಾರೆ.

ಆರೋಪಿ ಶಿವನಗೌಡ ”ಅಪ್ಪ ಅಮ್ಮನ ಬಳಿ ಕರೆದುಕೊಂಡು ಹೋಗುತ್ತೇನೆ” ಎಂದು ಹೇಳಿ, ಬಾಲಕಿಯನ್ನು ಬಸ್ಸು ನಿಲ್ದಾಣಕ್ಕೆ ಕರೆದುಕೊಂಡು ಹೋಗಿ ಕೃತ್ಯ ಎಸಗಿದ್ದಾನೆ ಎಂದು ಸಂತ್ರಸ್ತೆಯ ತಾಯಿ ಆರೋಪಿಸಿದ್ದಾರೆ. ಇಂತಹ ಕೃತ್ಯಗಳಿಗೆ ಕಠಿಣ ಶಿಕ್ಷೆ ಅಗತ್ಯವಿದೆ ಎಂದು ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

School Girl sexually assaulted in Raichur

English Summary

Our Whatsapp Channel is Live Now 👇

Whatsapp Channel

Related Stories