ಮನೆ, ಜಮೀನು, ಆಸ್ತಿ ಖರೀದಿ ಮಾಡೋರಿಗೆ ಹೊಸ ರೂಲ್ಸ್ ತಂದ ರಾಜ್ಯ ಸರ್ಕಾರ

ಇನ್ನು ಮುಂದೆ ಆಸ್ತಿ ನೋಂದಣಿಗಾಗಿ (Property Registration) ಹೆಚ್ಚು ಸಮಯ ಕಾಯುವ ಅಗತ್ಯ ಇಲ್ಲ.

ರಾಜ್ಯ ಸರ್ಕಾರ (State government) ಸಾರ್ವಜನಿಕರ ಹಿತಾಸಕ್ತಿ ಕಾಯ್ದುಕೊಳ್ಳುವಲ್ಲಿ ಸಾಕಷ್ಟು ಉಪಕ್ರಮ (initiative) ಗಳನ್ನು ಕೈಗೊಂಡಿದೆ. ಅದರಲ್ಲೂ ಮುಖ್ಯವಾಗಿ, ರಾಜ್ಯ ಸರ್ಕಾರ ಆಡಳಿತಕ್ಕೆ ಬಂದ ನಂತರ ಕಂದಾಯ ಇಲಾಖೆಯಲ್ಲಿಯೂ ಕೂಡ ಹಲವು ನಿಯಮಗಳ ಬದಲಾವಣೆ ಮಾಡಲಾಗಿದೆ.

ಇದರಿಂದ ಯಾವುದೇ ವ್ಯಕ್ತಿ ಆಸ್ತಿ ಖರೀದಿ ಮಾಡುವುದಿದ್ದರೆ ಅಥವಾ ಮಾರಾಟ ಮಾಡುವುದಿದ್ದರೆ ಹಾಗೂ ತನ್ನ ಆಸ್ತಿಗೆ ಸಂಬಂಧಪಟ್ಟ ಯಾವುದೇ ಮಾಹಿತಿ ಪಡೆದುಕೊಳ್ಳುವುದಿದ್ದರೆ ಹಿಂದಿಗಿಂತಲೂ ಈಗ ಇನ್ನಷ್ಟು ಸುಲಭವಾಗಿದೆ, ಅದೇ ರೀತಿ ಅಕ್ರಮಗಳು ನಡೆಯದೇ ಇರುವ ರೀತಿಯಲ್ಲಿ ಕೆಲವು ಪ್ರಮುಖ ನಿಯಮಗಳನ್ನು ಕೂಡ ಸರ್ಕಾರ ಜಾರಿಗೆ ತಂದಿದೆ.

ಮಹಿಳೆಯರಿಗಾಗಿ ಯಾವುದೇ ಬಡ್ಡಿಯಿಲ್ಲದೆ 5 ಲಕ್ಷ ಘೋಷಣೆ! ಬಂಪರ್ ಅವಕಾಶ

ಮನೆ, ಜಮೀನು, ಆಸ್ತಿ ಖರೀದಿ ಮಾಡೋರಿಗೆ ಹೊಸ ರೂಲ್ಸ್ ತಂದ ರಾಜ್ಯ ಸರ್ಕಾರ - Kannada News

ಕಂದಾಯ ಇಲಾಖೆಯಿಂದ ವಿಶೇಷ ಸೂಚನೆ! (Revenue department)

ಕಂದಾಯ ಇಲಾಖೆಯ ಸಚಿವರಾಗಿರುವ ಕೃಷ್ಣ ಬೈರೇಗೌಡ ಅವರು ಇತ್ತೀಚಿಗೆ ಮಾಧ್ಯಮಗಳೊಂದಿಗೆ ಮಾತನಾಡಿ ಕಂದಾಯ ಇಲಾಖೆಯಲ್ಲಿ ಆಗಿರುವ ಕೆಲವು ಬದಲಾವಣೆಗಳ ಬಗ್ಗೆ ತಿಳಿಸಿದ್ದಾರೆ. ಮುಖ್ಯವಾಗಿ ಜನಪರ ಯೋಜನೆಗಳನ್ನ ಕಂದಾಯ ಇಲಾಖೆ ಕೈಗೊಂಡಿದ್ದು ಸರಳ ಸೇವೆಗಳು ಕಂದಾಯ ಇಲಾಖೆಯ ಮಂತ್ರವಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಈ ನಿಯಮ ಅನ್ವಯ!

ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಬೆಂಗಳೂರಿನಲ್ಲಿ ಎನಿವೇರ್ ರಿಜಿಸ್ಟ್ರೇಷನ್ (anywhere registration) ಎನ್ನುವ ನಿಯಮ ಇತ್ತು. ಅಂದರೆ ಯಾವುದೇ ಸ್ಥಳದಲ್ಲಿ ಬೇಕಾದರೂ ಆಸ್ತಿ ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದಿತ್ತು. ಈಗ ಈ ಒಂದು ಸೇವೆಯನ್ನು ಇತರ ಜಿಲ್ಲೆಗಳಿಗೂ ಕೂಡ ವಿಸ್ತರಿಸಲಾಗಿದೆ.

ಸಾಮಾನ್ಯವಾಗಿ ವ್ಯಕ್ತಿ ತನ್ನ ಆಸ್ತಿಗೆ ಸಂಬಂಧಿಸಿದಂತೆ ನೋಂದಣಿ ಮಾಡಿಸಿಕೊಳ್ಳಲು ತಾಲೂಕಿನ ಉಪನೋಂದಣಿ ಕಚೇರಿಗೆ ಹೋಗಬೇಕು. ಎನಿವೇರ್ ನೋಂದಣಿ ಸೇವೆಯ ಅಡಿಯಲ್ಲಿ ನೋಂದಣಿ ದಸ್ತಾವೇಜನ್ನು ಆಯಾ ಜಿಲ್ಲೆಯ ವ್ಯಾಪ್ತಿಯಲ್ಲಿ ಇರುವ ಯಾವುದೇ ಉಪ ನೋಂದಣಿ ಕಚೇರಿಗೆ ಹೋಗಿ ನೋಂದಾವಣೆ ಮಾಡಿಕೊಳ್ಳಲು ಇನ್ನು ಮುಂದೆ ಅವಕಾಶ ಇದೆ.

ಈ ಯೋಜನೆಯಲ್ಲಿ ಸಿಗುತ್ತೆ 300 ಯೂನಿಟ್ ಉಚಿತ ವಿದ್ಯುತ್ ಜೊತೆಗೆ 15,000 ರೂಪಾಯಿ

property documentsಎನಿವೆರ್ ರಿಜಿಸ್ಟ್ರೇಷನ್!

2011ರಲ್ಲಿ ಬೆಂಗಳೂರಿನಲ್ಲಿ (Bengaluru) ಎನಿವೇರ್ ರಿಜಿಸ್ಟ್ರೇಷನ್ ಸೇವೆಯನ್ನು ಆರಂಭಿಸಲಾಯಿತು. ರಿಜಿಸ್ಟ್ರೇಷನ್ ಆಕ್ಟ್ 1908, ವಿಧಿ (6) ಅಡಿಯಲ್ಲಿ ಈ ಸೌಲಭ್ಯ ಜಾರಿಯಲ್ಲಿ ಇದೆ. ಜನರಿಗೆ ಆಸ್ತಿ ನೋಂದಣಿ ವಿಚಾರದಲ್ಲಿ ತ್ವರಿತ ಸೇವೆ ಸಲ್ಲಿಸುವ ಸಲುವಾಗಿ ಎನ್ವಿರ ರಿಜಿಸ್ಟ್ರೇಷನ್ ಸೌಲಭ್ಯವನ್ನು ಒದಗಿಸಿ ಕೊಡಲಾಗಿತ್ತು.

ಪ್ರಾಯೋಗಿಕ ಹಂತದಲ್ಲಿ ಬೆಂಗಳೂರಿನಲ್ಲಿ ಮಾತ್ರ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಹಾಗೂ ಈಗ ಈ ಸೇವೆ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಕೂಡ ಎನಿವೇರ್ ರಿಜಿಸ್ಟ್ರೇಷನ್ ಸೌಲಭ್ಯ ಸಿಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 1 ಲಕ್ಷ ರೂಪಾಯಿಗಳ ಸ್ಕಾಲರ್ಶಿಪ್! ಇಂದೇ ಅಪ್ಲೈ ಮಾಡಿ

ಪ್ರಾಯೋಗಿಕ ಪರೀಕ್ಷೆ ಯಶಸ್ವಿ!

ಎನಿವೆರ್ ರಿಜಿಸ್ಟ್ರೇಷನ್ ಆರಂಭಿಸಿದ ನಂತರ ಬೆಂಗಳೂರು ಜಿಲ್ಲೆಯ ಗಾಂಧಿನಗರ, ಬಸವನಗುಡಿ, ಜಯನಗರ, ರಾಜಾಜಿನಗರ ಹಾಗೂ ಶಿವಾಜಿನಗರ ಮೊದಲಾದ ಉಪನಂದಣಿ ಕಚೇರಿಯಲ್ಲಿ ಮಾತ್ರ ಪ್ರಯೋಗಿಕವಾಗಿ ಎನಿವೇರ್ ರಿಜಿಸ್ಟ್ರೇಷನ್ ಸೇವೆಯನ್ನು ಆರಂಭಿಸಲಾಯಿತು.

ಇಲ್ಲಿ ನಗರ ಜಿಲ್ಲಾ ನೋಂದಣಿ ಕಚೇರಿ ವ್ಯಾಪ್ತಿಯಲ್ಲಿ ಬರುವ ಯಾವುದೇ ಉಪನಂದಣಿ ಕಚೇರಿಯಲ್ಲಿ ಆಸ್ತಿ ನೋಂದಣಿ ಮಾಡಿಸಿಕೊಳ್ಳಲು ಅವಕಾಶ ಇತ್ತು. ಈ ಪ್ರಯೋಗ ಈಗ ಯಶಸ್ವಿಯಾಗಿದೆ ಇದರ ಪರಿಣಾಮವಾಗಿ ತುಮಕೂರು ಮತ್ತು ಬೆಳಗಾವಿಯಲ್ಲಿ ಮಾರ್ಚ್ 14 ರಿಂದ ಪ್ರಾಯೋಗಿಕ ಎನಿವೇರ್ ರಿಜಿಸ್ಟ್ರೇಷನ್ ಸೇವೆ ಆರಂಭಿಸಲಾಗಿದೆ.

ತುಮಕೂರು ಮತ್ತು ಬೆಳಗಾವಿ ಜಿಲ್ಲೆಗಳನ್ನು ಗಣನೆಗೆ ತೆಗೆದುಕೊಂಡರೆ ಸುಮಾರು 72 ಉಪ ನೋಂದಾವಣಿ ಕಚೇರಿಗಳು ಇದ್ದು, ಇಲ್ಲಿ ಸಾರ್ವಜನಿಕರು ಸೇವೆ ಪಡೆದುಕೊಳ್ಳಬಹುದು.

ನಾಟಿ ಕೋಳಿ ಸಾಕಾಣಿಕೆಗೆ ಸಿಗುತ್ತಿದೆ ಸಬ್ಸಿಡಿ ಹಣ! ಪ್ರತಿದಿನ 25,000 ಆದಾಯ ಪಕ್ಕಾ

ಈ ರೀತಿ ಎನಿವರ್ ರಿಜಿಸ್ಟ್ರೇಷನ್ ಜಾರಿಗೆ ಬಂದಿರುವುದರಿಂದ, ಆಸ್ತಿ ನೊಂದಣಿ ವಿಚಾರದಲ್ಲಿ ಯಾವುದೇ ವಿಳಂಬ ಆಗುವುದಿಲ್ಲ ಹೆಚ್ಚು ಸಮಯ ಕಾಯಬೇಕಾಗಿಲ್ಲ. ಜನರು ಎಲ್ಲಾ ಕಡೆ ಡಿವೈಡ್ ಆಗುವುದರಿಂದ ದಸ್ತಾವೇಜು ನೋಂದಾವಣಿಯಲ್ಲಿ ಪಾರದರ್ಶಕತೆ ತರಲು ಕೂಡ ಸಹಾಯಕವಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಹೀಗಾಗಿ ಇನ್ನು ಮುಂದೆ ಆಸ್ತಿ ನೋಂದಣಿಗಾಗಿ (Property Registration) ಹೆಚ್ಚು ಸಮಯ ಕಾಯುವ ಅಗತ್ಯ ಇಲ್ಲ.

The state government has brought new rules for buyers of houses, land and property

Follow us On

FaceBook Google News