ಉಚಿತ ಬಸ್ ಪ್ರಯಾಣ! ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ
ಈ ಯೋಜನೆಯ ಮೂಲಕ ಮಹಿಳೆಯರು ರಾಜ್ಯ ಸರ್ಕಾರದ ಸಾರಿಗೆ ಬಸ್ಗಳಲ್ಲಿ (Karnataka State Bus) ಉಚಿತವಾಗಿ ರಾಜ್ಯಾದ್ಯಂತ ಪ್ರಯಾಣ ಮಾಡಬಹುದಾಗಿದೆ
ರಾಜ್ಯ ಕಾಂಗ್ರೆಸ್ ಸರ್ಕಾರ (state Congress government) ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಮೊದಲು ಜಾರಿಗೆ ತಂದಿದ್ದೆ ಶಕ್ತಿ ಯೋಜನೆ (Shakti Yojana ).
ಈ ಯೋಜನೆಯ ಮೂಲಕ ಮಹಿಳೆಯರು ರಾಜ್ಯ ಸರ್ಕಾರದ ಸಾರಿಗೆ ಬಸ್ಗಳಲ್ಲಿ (Karnataka State Bus) ಉಚಿತವಾಗಿ ರಾಜ್ಯಾದ್ಯಂತ ಪ್ರಯಾಣ ಮಾಡಬಹುದಾಗಿದೆ. ಇದರಿಂದ ಲಕ್ಷಾಂತರ ಜನ ಮಹಿಳೆಯರಿಗೆ ಉಪಯೋಗ ಆಗಿರುವುದು ಸುಳ್ಳಲ್ಲ, ರಾಜ್ಯ ಸರ್ಕಾರದ ಯಶಸ್ವಿ ಯೋಜನೆ ಎನಿಸಿಕೊಂಡಿದೆ ಶಕ್ತಿ ಯೋಜನೆ.
ಗೃಹಲಕ್ಷ್ಮಿ ಯೋಜನೆ 2ನೇ ಕಂತು ಬಿಡುಗಡೆ ಆದ್ರೂ ನಿಮಗಿನ್ನು ಬಂದೇ ಇಲ್ವಾ? ಅದಕ್ಕೆ ಇಲ್ಲಿದೆ ಕಾರಣ
ಮಹಿಳೆಯರಿಗೆ ಸಿಗಲಿದೆ ಇನ್ನಷ್ಟು ಬೆನಿಫಿಟ್!
ಶಕ್ತಿ ಯೋಜನೆಯ ಪ್ರಗತಿ ಪರಿಶೀಲನ ಸಭೆ ಯನ್ನು ಇತರ ಸಚಿವರ ಜೊತೆಗೆ ಹಾಗೂ ಸಾರಿಗೆ ಇಲಾಖೆಯ ಪ್ರಮುಖ ಅಧಿಕಾರಿಗಳ ಜೊತೆಗೆ ನಡೆಸಿರುವ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಶಕ್ತಿ ಯೋಜನೆಯಲ್ಲಿ ಹೊಸ ಸೇರ್ಪಡೆಯ ಬಗ್ಗೆಯೂ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಶಕ್ತಿ ಯೋಜನೆ ಜಾರಿಗೆ ಬಂದ ಮೇಲೆ ಕರ್ನಾಟಕ ಸಾರಿಗೆಯಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಶೇಕಡಾ 15% ನಷ್ಟು ಹೆಚ್ಚಳವಾಗಿದೆ ಎಂದು ಅಂಕಿ ಅಂಶಗಳನ್ನು ಸಾರಿಗೆ ಇಲಾಖೆ ನೀಡಿದೆ. ಆದ್ದರಿಂದ ಜನರ ಬೇಡಿಕೆ ಪೂರೈಸಲು ರಾಜ್ಯದಲ್ಲಿ 5675 ಹೆಚ್ಚುವರಿ ಬಸ್ ಗಳನ್ನು ಖರೀದಿ ಮಾಡಲು ಸರ್ಕಾರ ನಿರ್ಧರಿಸಿದೆ.
ಶೀಘ್ರದಲ್ಲಿಯೇ ಹೆಚ್ಚುವರಿ ಬಸ್ ಖರೀದಿಯ ಬಗ್ಗೆ ಸರ್ಕಾರ ಮಹತ್ವದ ಘೋಷಣೆ (government announcement) ಹೊರಡಿಸಲಿದೆ, 5675 ಬಸ್ಗಳ ಖರೀದಿಯ ಗುರಿ ಹೊಂದಿರುವ ರಾಜ್ಯ ಸರ್ಕಾರ ಇದಕ್ಕಾಗಿ 500 ಕೋಟಿಗಳನ್ನು ಸಾರಿಗೆ ಇಲಾಖೆಗೆ ಅನುದಾನ ನೀಡಲಿದೆ. ಹೆಚ್ಚುವರಿ ಬಸ್ ನೀಡುವ ಮೂಲಕ ಸಾರಿಗೆ ಇಲಾಖೆಯ ಕಾರ್ಯಕ್ಷಮತೆಯನ್ನು ಇನ್ನಷ್ಟು ಉತ್ತಮವಾಗಿಸುವುದು ಸರ್ಕಾರದ ಉದ್ದೇಶ.
ಶಾಲಾ ಮಕ್ಕಳಿಗೆ ಫುಲ್ ಖುಷ್, ದಸರಾ ರಜೆ ನವೆಂಬರ್ 1ರ ವರೆಗೆ ವಿಸ್ತರಣೆ ಸಾಧ್ಯತೆ! ಬಿಗ್ ಅಪ್ಡೇಟ್
ಶಕ್ತಿ ಯೋಜನೆ 100% ಯಶಸ್ವಿಯಾಗಿದೆ ಎಂದು ಸಚಿವ ರಾಮಲಿಂಗರೆಡ್ಡಿ (ramalinga Reddy) ತಿಳಿಸಿದ್ದಾರೆ, ಇದಲ್ಲದೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೆಚ್ಚುವರಿ ಬಸ್ ಖರೀದಿ ಮಾಡುವ ಗುರಿ ಹೊಂದಿದ್ದೇವೆ. ರಾಜ್ಯದಲ್ಲಿ ಕರ್ನಾಟಕ ಸಾರಿಗೆ ಅವಲಂಬಿಸುವವರ ಸಂಖ್ಯೆ ಕೂಡ ಜಾಸ್ತಿ ಆಗುತ್ತಿದೆ ಈ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ನಿಮ್ಮ ತೋಟ ಅಥವಾ ಜಮೀನಿಗೆ ಹೋಗಲು ರಸ್ತೆ ಇಲ್ಲವೇ? ಬಂತು ರೈತರಿಗಾಗಿ ಹೊಸ ರೂಲ್ಸ್
ಮಹಿಳೆಯರಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟ ಶಕ್ತಿ ಯೋಜನೆ!
ಶಕ್ತಿ ಯೋಜನೆ ಮಹಿಳೆಯರಿಗಾಗಿಯೇ ಸರ್ಕಾರ ಆರಂಭಿಸಿದ್ದು, ರಾಜ್ಯ ಸಾರಿಗೆಯಲ್ಲಿ ಮಹಿಳೆಯರು ಮಾತ್ರ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆಗಳಾಗಿರುವ ನಾಲ್ಕು ಪ್ರಮುಖ ಸಾರಿಗೆಗಳು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದು
ಆದರೆ ಸರ್ಕಾರದ ಯಾವುದೇ ಐಷಾರಾಮಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುವಂತಿಲ್ಲ, ಜೊತೆಗೆ ರಾಜ್ಯದಿಂದ ಹೊರಗೆ ಹೋಗುವ ಬಸಗಳಲ್ಲಿಯೂ ಉಚಿತ ಪ್ರಯಾಣ ಲಭ್ಯವಿಲ್ಲ. ಯೋಜನೆಯ ಅಡಿಯಲ್ಲಿ ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡಲು ಎಲ್ಲಾ ಮಹಿಳೆಯರು ಅರ್ಹರು.
ಅಲ್ಲದೆ ಮಹಿಳೆಯರು ತಮ್ಮ ಡ್ರೈವಿಂಗ್ ಲೈಸೆನ್ಸ್ (driving licence) ಆಧಾರ್ ಕಾರ್ಡ್ (Aadhaar card) ನಂತಹ ಪ್ರಮುಖ ದಾಖಲೆಗಳನ್ನು ತೋರಿಸಿ ಪ್ರಯಾಣ ಮಾಡಬಹುದು, ಮಹಿಳೆಯರಿಗೆ ಉಚಿತವಾದ ಟಿಕೆಟ್ ಕೂಡ ನೀಡಲಾಗುತ್ತದೆ.
ಗೃಹಜ್ಯೋತಿ ಫ್ರೀ ಕರೆಂಟ್! ಇಂತಹವರಿಗೆ ಮಾತ್ರ 250 ಯೂನಿಟ್ ವರೆಗೆ ಸಿಗುತ್ತೆ ಉಚಿತ ವಿದ್ಯುತ್
ಶಕ್ತಿ ಯೋಜನೆಯಲ್ಲಿ ಇನ್ನಷ್ಟು ಬದಲಾವಣೆಗಳನ್ನು ಸರ್ಕಾರ ತರಲಿದೆ, ಮಹಿಳೆಯರು ಯಾವುದೇ ಆಧಾರ್ ಕಾರ್ಡ್ ಅಥವಾ ಇತರ ದಾಖಲೆಗಳನ್ನು ತೋರಿಸಿದೆ ಶಕ್ತಿ ಯೋಜನೆಯ ಕಾರ್ಡ್ ಅನ್ನೇ ಬಳಸಲು ಸರ್ಕಾರ ವ್ಯವಸ್ಥೆ ಮಾಡಿಕೊಳ್ಳುತ್ತಿದೆ, ಸದ್ಯದಲ್ಲಿಯೇ ಮಹಿಳೆಯರಿಗೆ ಶಕ್ತಿ ಯೋಜನೆಯ ವಿಶೇಷವಾದ ಸ್ಮಾರ್ಟ್ ಕಾರ್ಡ್ (Smart Card) ಲಭ್ಯವಾಗಲಿದೆ.
The state government has given another good news on Free Bus Shakti Yojana
Follow us On
Google News |