ಪಿಯುಸಿ ಆಗಿದ್ರೆ ಜಿಲ್ಲಾ ಕೋರ್ಟ್ ನಲ್ಲಿ ಸಿಗುತ್ತೆ ಕೆಲಸ, 52,000 ಸಂಬಳ; ಇಂದೇ ಅರ್ಜಿ ಸಲ್ಲಿಸಿ
ಜಿಲ್ಲಾ ಕೋರ್ಟ್ (Bidar district court) ನಲ್ಲಿ ಖಾಲಿ ಇರುವ ಸ್ಟೆನೋಗ್ರಾಫರ್ (stenographer Job) ಹುದ್ದೆಯನ್ನು ಭರ್ತಿ ಮಾಡಲು ಅಧಿ ಸೂಚನೆ ಹೊರಡಿಸಲಾಗಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು (interested candidate) ಅರ್ಜಿ ಸಲ್ಲಿಸಬಹುದು.
ಜಿಲ್ಲಾ ಕೋರ್ಟ್ (Bidar district court) ನಲ್ಲಿ ಖಾಲಿ ಇರುವ ಸ್ಟೆನೋಗ್ರಾಫರ್ (stenographer Job) ಹುದ್ದೆಯನ್ನು ಭರ್ತಿ ಮಾಡಲು ಅಧಿ ಸೂಚನೆ ಹೊರಡಿಸಲಾಗಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು (interested candidate) ಅರ್ಜಿ ಸಲ್ಲಿಸಬಹುದು.
ಆನ್ಲೈನ್ ಮೂಲಕವೇ ಈ ಕೆಲಸಕ್ಕೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ವಿವರ, ವಯೋಮಿತಿ, ವಿದ್ಯಾರ್ಹತೆ ಮೊದಲಾದ ವಿಷಯಗಳಿಗೆ ಸಂಬಂಧಪಟ್ಟಂತೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ಕೊಡಲಾಗಿದೆ.
ಜಿಲ್ಲಾ ಕೋರ್ಟ್ ಅಧಿಸೂಚನೆ ಹೊರಡಿಸಿರುವ ಪ್ರಕಾರ ಇಲ್ಲಿ 9 ಸ್ಟೆನೋಗ್ರಾಫರ್ ಹುದ್ದೆಗಳು ಖಾಲಿ ಇವೆ ಇದನ್ನ ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುಟ್ಟು ಒಂಬತ್ತು ಹುದ್ದೆಗಳು ಖಾಲಿ ಇದ್ದು ಅವುಗಳಲ್ಲಿ ಐದು ಸ್ಟೆನೋಗ್ರಾಫರ್ ಗ್ರೇಡ್-III (KKR) ಹಾಗೂ ನಾಲ್ಕು ಸ್ಟೆನೋಗ್ರಾಫರ್ ಗ್ರೇಡ್-III (RPC) ಹುದ್ದೆಗಳು ಖಾಲಿ ಇವೆ.
ವಿದ್ಯಾರ್ಹತೆ (Education Qualification)
ಜಿಲ್ಲಾ ಕೋರ್ಟ್ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪಿಯುಸಿ (PUC) ಅಥವಾ ಡಿಪ್ಲೋಮಾ ಕೋರ್ಸ್ (diploma) ಮಾಡಿರುವ ಬಗ್ಗೆ ಕಡ್ಡಾಯ ಪ್ರಮಾಣ ಪತ್ರ ಒದಗಿಸಬೇಕು.
ಜಿಲ್ಲಾ ಕೋರ್ಟ್ ಹೊರಡಿಸಿರುವ ಹುದ್ದೆಯ ಅಧಿಸೂಚನೆಯ ಪ್ರಕಾರ, ಅಜ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಯ ವಯಸ್ಸು ಡಿಸೆಂಬರ್ 6, 2023ಕ್ಕೆ 18ರಿಂದ 35 ವರ್ಷ ಮೀರಿರಬಾರದು. ಆದರೆ SC/ST/Cat-I ಅಭ್ಯರ್ಥಿಗಳಿಗೆ 05 ವರ್ಷಗಳು ಹಾಗೂ ಪ್ರವರ್ಗ 2A/2B/3A & 3B ಅಭ್ಯರ್ಥಿಗಳಿಗೆ 03 ವರ್ಷಗಳ ವಯೋಮಿತಿ ಸಡಿಲಿಕೆ ಇದೆ.
SC/ST/Cat-I ಅಭ್ಯರ್ಥಿಗಳಿಗೆ 100 ರೂ. ಹಾಗೂ ಇತರ ಅಭ್ಯರ್ಥಿಗಳಿಗೆ 200 ರುಪಾಯಿ ಅರ್ಜಿ ಶುಲ್ಕ ಇರುತ್ತದೆ. ಆನ್ಲೈನ್ ನಲ್ಲಿ ಅರ್ಜಿ ಭರ್ತಿ ಮಾಡಿದ ಬಳಿಕ ಈ ಶುಲ್ಕವನ್ನು ಆನ್ಲೈನ್ ಮೂಲಕವೇ ಪಾವತಿ ಮಾಡಬೇಕು.
ಆಯ್ಕೆ ಪ್ರಕ್ರಿಯೆ
ಮೆರಿಟ್ ಟೆಸ್ಟ್, ಟೈಪಿಂಗ್ ಟೆಸ್ಟ್ ಹಾಗೂ ಸಂದರ್ಶನಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಬೀದರ್ ಜಿಲ್ಲಾ ಕೋರ್ಟ್ ನಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಸಿಗುವ ಸಂಬಳ ₹ 27,650-52,650 ರೂಪಾಯಿಗಳು.
ಅರ್ಜಿ ಸಲ್ಲಿಸಲು ಡಿಸೆಂಬರ್ 6, 2023 ಕೊನೆಯ ದಿನಾಂಕವಾಗಿದೆ. ಅರ್ಜಿ ಶುಲ್ಕ ಪಾವತಿಸಲು 7 ಡಿಸೆಂಬರ್ 2023 ಕೊನೆಯ ದಿನಾಂಕ.
ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ; https://recruitmenthck.kar.nic.in/district/bdr/sgk/home.php
Those who have PUC pass will get job in court, 52,000 salary, Apply today
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
Those who have PUC pass will get job in court, 52,000 salary, Apply today