ಹೊಸ ಸ್ಕೀಮ್! ರಾಜ್ಯದ 18 ರಿಂದ 55 ವರ್ಷದ ಒಳಗಿನ ಮಹಿಳೆಯರಿಗೆ ಸರ್ಕಾರದಿಂದ ಮತ್ತೊಂದು ಹೊಸ ಯೋಜನೆ

ಮಹಿಳೆಯರ ಉದ್ಯೋಗಕ್ಕೆ ಸರ್ಕಾರ ಈಗ ಹೊಸದೊಂದು ಯೋಜನೆ ತಂದಿದೆ. ಈ ಯೋಜನೆಯಲ್ಲಿ ನಿಮಗೆ ಸಾಲದ ಜೊತೆಗೆ ಸಬ್ಸಿಡಿ ಕೂಡ ಸಿಗುತ್ತದೆ.

ನಮ್ಮ ದೇಶದಲ್ಲಿ ಮಹಿಳೆಯರು ಆರ್ಥಿಕವಾಗಿ ಬೆಳೆಯಬೇಕು, ಮಹಿಳಾ ಸಬಲೀಕರಣ ಆಗಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರಿಗಾಗಿ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ.

ರಾಜ್ಯದಲ್ಲಿ ಈಗ ಮಹಿಳೆಯರಿಗೆ ವಿಶೇಷವಾಗಿ ಶಕ್ತಿ ಯೋಜನೆ (Shakti Yojane) ಮತ್ತು ಗೃಹಲಕ್ಷ್ಮಿ ಯೋಜನೆಯನ್ನು (Gruha Lakshmi Yojane) ಜಾರಿಗೆ ತರಲಾಗಿದೆ. ಶಕ್ತಿ ಯೋಜನೆಯ ಮೂಲಕ ಮಹಿಳೆಯರು ಫ್ರೀ ಬಸ್ ಪ್ರಯಾಣ ಸೌಲಭ್ಯ ಪಡೆದಿದ್ದಾರೆ. ಇನ್ನು ಗೃಹಲಕ್ಷ್ಮಿ ಯೋಜನೆಯಲ್ಲಿ ಮನೆಯ ಯಜಮಾನಿಗೆ ತಿಂಗಳಿಗೆ ₹2000 ಸಿಗುತ್ತದೆ.

ಇದಷ್ಟೇ ಅಲ್ಲ ಮಹಿಳೆಯರು ಓದಲಿ ಎಂದು, ಮಹಿಳೆಯರು ಸಣ್ಣ ಉದ್ಯಮ ಶುರು ಮಾಡಿ ಹಣ ಸಂಪಾದನೆ ಮಾಡಲಿ, ಆರ್ಥಿಕವಾಗಿ ಯಾರ ಮೇಲೂ ಅವಲಂಬಿಸಬಾರದು ಎಂದು ಕೆಂದ್ರ ಸರ್ಕಾರ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ತಂದಿದೆ.

ಹೊಸ ಸ್ಕೀಮ್! ರಾಜ್ಯದ 18 ರಿಂದ 55 ವರ್ಷದ ಒಳಗಿನ ಮಹಿಳೆಯರಿಗೆ ಸರ್ಕಾರದಿಂದ ಮತ್ತೊಂದು ಹೊಸ ಯೋಜನೆ - Kannada News

ಮಹಿಳೆಯರ ಫ್ರೀ ಬಸ್ ಹೊರೆ ಗಂಡಸರ ಮೇಲೆ! ಬಸ್ ನಲ್ಲಿ ಓಡಾಡೋ ಪುರುಷರಿಗೆ ಮತ್ತೊಂದು ಬ್ಯಾಡ್ ನ್ಯೂಸ್

ಅದೇ ರೀತಿ ಮಹಿಳೆಯರ ಉದ್ಯೋಗಕ್ಕೆ ಸರ್ಕಾರ ಈಗ ಹೊಸದೊಂದು ಯೋಜನೆ ತಂದಿದೆ. ಈ ಯೋಜನೆಯಲ್ಲಿ ನಿಮಗೆ ಸಾಲದ ಜೊತೆಗೆ ಸಬ್ಸಿಡಿ ಕೂಡ ಸಿಗುತ್ತದೆ. ಈ ಹೊಸ ಯೋಜನೆ ಯಾವುದು? ಇದಕ್ಕೆ ಏನೆಲ್ಲಾ ಅರ್ಹತೆ ಇರಬೇಕು ಎಂದು ತಿಳಿಸುತ್ತೇವೆ ನೋಡಿ.

ಮಹಿಳೆಯರಿಗಾಗಿ ಇರುವ ಈ ಯೋಜನೆಯ ಹೆಸರು ಉದ್ಯೋಗಿನಿ ಯೋಜನೆ (Udyogini Scheme). ಮಹಿಳೆಯರು ಸ್ವಯಂ ಉದ್ಯೋಗ ಸೃಷ್ಟಿಸಿಕೊಳ್ಳಲು ಇರುವಂಥ ಯೋಜನೆ ಇದಾಗಿದ್ದು, ಈ ಯೋಜನೆಯಲ್ಲಿ ಸುಮಾರು 3 ಲಕ್ಷ ರೂಪಾಯಿಯವರೆಗು ಸಾಲ (Business Loan) ಸಿಗುತ್ತದೆ.

ಇದು ಬಡ್ಡಿ ಇಲ್ಲದೆ ಕೊಡುವ ಸಾಲ (Loan) ಆಗಿದೆ. ಜೊತೆಗೆ ಈ ಯೋಜನೆಯಲ್ಲಿ ನಿಮಗೆ ₹90,000 ರೂಪಾಯಿಯವರೆಗು ಸಬ್ಸಿಡಿ ಕೂಡ ಸಿಗುತ್ತದೆ. ಕೆಲಸಕ್ಕೆ ಹೋಗಲು ಬಯಸದ ಮಹಿಳೆಯರು, ಸ್ವಂತ ಉದ್ಯಮ ಶುರು ಮಾಡಬೇಕು ಎಂದುಕೊಂಡಿರುವ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಬಿಪಿಎಲ್ ಕಾರ್ಡ್ ಇರುವ ಇಂಥಹವರಿಗೆ ಆಗಸ್ಟ್ 1ರಿಂದ ಇಲ್ಲ ರೇಷನ್! ಸರ್ಕಾರದಿಂದ ಮಹತ್ವದ ಆದೇಶ

Udyogini Schemeಈ ಮೂಲಕ ಸರ್ಕಾರದಿಂದ 3 ಲಕ್ಷದವರೆಗು ಸಾಲ ಸಿಗುತ್ತದೆ. ಈ ಯೋಜನೆಯಲ್ಲಿ SC/ST ಮಹಿಳೆಯರಿಗೆ 50% ಅಂದ್ರೆ 1.50 ಲಕ್ಷ ರೂಪಾಯಿಯವರೆಗು ಸಬ್ಸಿಡಿ ಸಿಗಲಿದ್ದು, ಬೇರೆ ವರ್ಗದ ಹೆಣ್ಣು ಮಕ್ಕಳಿಗೆ 30% ವರೆಗು ಸಬ್ಸಿಡಿ ಸಿಗುತ್ತದೆ. ಈ ಯೋಜನೆಗೆ ಅರ್ಜಿ ಹಾಕುವ ಹೆಣ್ಣುಮಕ್ಕಳ ಹತ್ತಿರ ಕೆಲವು ಪ್ರಮುಖ ದಾಖಲೆಗಳು ಇರಬೇಕು. ಎಲ್ಲವೂ ಇದ್ದರೆ 3 ಲಕ್ಷದವರೆಗು ಸಾಲ ಸಿಗುತ್ತದೆ.

ಈ ದಿನದಂದು ಮಹಿಳೆಯರ ಖಾತೆಗೆ ಬರುತ್ತೆ ಗೃಹಲಕ್ಷ್ಮಿ ಯೋಜನೆಯ ₹2000 ಹಣ! ಅಕೌಂಟ್ ಚೆಕ್ ಮಾಡಿಕೊಳ್ಳಿ

*ಮೊದಲಿಗೆ ಅರ್ಜಿ ಸಲ್ಲಿಸುವ ಮಹಿಳೆ ಕರ್ಣಾಟಕದ (Karnataka) ಸದಸ್ಯರೇ ಆಗಿರಬೇಕು.
*ಈ ಯೋಜನೆ ಮಹಿಳೆಯರಿಗೆ (Women) ಮಾತ್ರ
*ಅರ್ಜಿ ಸಲ್ಲಿಸುವವರ ವಯಸ್ಸು 18 ರಿಂದ 55 ವರ್ಷಗಳ ಒಳಗೆ ಇರಬೇಕು.
*ಬರ್ತ್ ಸರ್ಟಿಫಿಕೇಟ್ ಬೇಕೇ ಬೇಕು (Birth Certificate)
*ಆಧಾರ್ ಕಾರ್ಡ್ ನ (Aadhaar Card) ಫೋಟೋಕಾಪಿ
*ನಿಮ್ಮ ಇನ್ಕಮ್ ಸರ್ಟಿಫಿಕೇಟ್ (income Certificate)
*ಸಾಮಾನ್ಯ ವರ್ಗಕ್ಕೆ ಸೇರಿದ ಜನರು BPL ರೇಷನ್ ಕಾರ್ಡ್ ಫೋಟೋಕಾಪಿ ಕೊಡಬೇಕು
*SC ST ವರ್ಗದವರು ಕ್ಯಾಸ್ಟ್ ಸರ್ಟಿಫಿಕೇಟ್ ಫೋಟೋಕಾಪಿ ಕೊಡಬೇಕು
*ಬ್ಯಾಂಕ್ ಪಾಸ್ ಬುಕ್ ಫೋಟೋ ಕಾಪಿ. (Bank Pass Book)

ನಿಮ್ಮ ಆಧಾರ್ ಕಾರ್ಡ್ ಈ ರೀತಿ ಇದ್ದರೆ, ಈಗಲೇ ಸೈಬರ್ ಸೆಂಟರ್ ಗೆ ಹೋಗಿ! ಸರ್ಕಾರದ ಹೊಸ ರೂಲ್ಸ್

ಈ ಯೋಜನೆಗೆ ನೀವು ಆಫ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು. ಶಿಶು ಅಭಿವೃದ್ಧಿ ಇಲಾಖೆಗೆ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ. ಕಚೇರಿಗೆ ಭೇಟಿ ನೀಡಿ, ಉದ್ಯೋಗಿನಿ ಯೋಜನೆಗೆ ಅರ್ಜಿಯನ್ನು ಅವರಿಂದ ಪಡೆದು, ಫಿಲ್ ಮಾಡಿ, ಅಗತ್ಯ ದಾಖಲೆಗಳನ್ನು ನಮೂದಿಸಿ ಅರ್ಜಿ ಸಲ್ಲಿಸಿ. ಅಧಿಕಾರಿಗಳು ಪರಿಶೀಲಿಸಿ, ಅರ್ಹತೆ ಪಡೆದ ಬಳಿಕ ಸಾಲದ ಹಣ ನಿಮ್ಮ ಬ್ಯಾಂಕ್ ಖಾತೆಗೆ (Bank Account) ಬರುತ್ತದೆ.

Udyogini Scheme For Women Between 18 to 55 Years

Follow us On

FaceBook Google News

Udyogini Scheme For Women Between 18 to 55 Years