Karnataka NewsBangalore News

ಗೃಹಲಕ್ಷ್ಮಿ ಯೋಜನೆಗೆ ಏಕೆ ಬೇಕು ರೇಷನ್ ಕಾರ್ಡ್? ಎಲ್ಲಾ ಮಹಿಳೆಯರಿಗೆ ಏಕೆ ಕೊಡ್ತಾಯಿಲ್ಲ ₹2000 ಹಣ! ಕಾರಣ ತಿಳಿಸಿದ ಸರ್ಕಾರ

ಪ್ರಸ್ತುತ ನಮ್ಮ ರಾಜ್ಯದಲ್ಲಿ ಹೆಣ್ಣುಮಕ್ಕಳ ಅಭಿವೃದ್ಧಿಗಾಗಿ ಗೃಹಲಕ್ಷ್ಮಿ ಯೋಜನೆಯನ್ನು (Gruha Lakshmi Scheme) ಜಾರಿಗೆ ತರಲಾಗುತ್ತಿದೆ. ಪ್ರಸ್ತುತ ಈ ಯೋಜನೆಯು ಅರ್ಜಿ ಸಲ್ಲಿಕೆ ಹಂತದಲ್ಲಿದ್ದು, ಶೀಘ್ರದಲ್ಲೇ ಈ ಯೋಜನೆಯು ಅಧಿಕೃತವಾಗಿ ಲಾಂಚ್ ಆಗಲಿದೆ.

ಈ ರೀತಿ ಇರುವಾಗ, ಸರ್ಕಾರದಿಂದ ಈ ಯೋಜನೆಯ ಸೌಲಭ್ಯ ಪಡೆಯುವುದು ಅರ್ಹತೆ ಇರುವ ಹೆಣ್ಣುಮಕ್ಕಳು ಮಾತ್ರ, ಅರ್ಹತೆ ಇಲ್ಲದೆ ಇರುವವರಿಗೆ ಸೌಲಭ್ಯ ಸಿಗುವುದಿಲ್ಲ ಎಂದು ಸರ್ಕಾರ ಸೂಚನೆ ನೀಡಿದೆ.

Gruha Lakshmi balance Money deposit, money transferred only for such People

ಆದರೆ ಅರ್ಹತೆ ಇರದ ಹೆಣ್ಣುಮಕ್ಕಳಿಗೆ ಈ ಸೌಲಭ್ಯ ಯಾಕೆ ಸಿಗುವುದಿಲ್ಲ ಎಂದು ಪ್ರಶ್ನೆಗಳು ಶುರುವಾಗಿದ್ದು, ಇದಕ್ಕೆ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಉತ್ತರ ನೀಡಿದ್ದಾರೆ.

ಇನ್ಮುಂದೆ ಇಂತಹ ಕೇಸ್‌ಗಳಿಗೆ ಪೊಲೀಸ್ ಸ್ಟೇಷನ್​​ಗೆ ಹೋಗಬೇಕಾಗಿಲ್ಲ! ರಾತ್ರೋರಾತ್ರಿ ಬಂತು ಹೊಸ ರೂಲ್ಸ್

ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಜನರಲ್ಲಿ ನಿರೀಕ್ಷೆಗಳು ಹೆಚ್ಚಾಗಿದ್ದವು, ಒಂದೊಂದೇ ಯೋಜನೆಗಳನ್ನು ಕೂಡ ಜಾರಿಗೆ ತರಲಾಗುತ್ತಿದೆ. ಹಾಗೆಯೇ ಎಲ್ಲಾ ಯೋಜನೆಗಳಿಗೂ ಕೂಡ ಕೆಲವು ನಿಯಗಳನ್ನು ಜಾರಿಗೆ ತರಲಾಗಿದೆ.

ಈ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಪ್ರಶ್ನೆ ಕೇಳಲಾಗಿದ್ದು, ಅವರು ಕೊಟ್ಟಿರುವ ಉತ್ತರ ಏನು ಎಂದು ತಿಳಿಸುತ್ತೇವೆ ನೋಡಿ..

ಇತ್ತೀಚೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಒಂದು ಇಂಟರ್ವ್ಯೂನಲ್ಲಿ ಪಾಲ್ಗೊಂಡಿದ್ದರು, ಆ ವೇಳೆ ಅವರಿಗೆ ಅನೇಕ ಪ್ರಶ್ನೆಗಳನ್ನು ಕೇಳಲಾಗಿದೆ. ಪಂಜಾಬ್ ನಲ್ಲಿ ಅಧಿಕಾರಕ್ಕೆ ಬಂದಿರುವ ಆಮ್ ಆದ್ಮಿ ಪಕ್ಷವು, ಬಿಪಿಎಲ್ (BPL Card), ಎಪಿಎಲ್ ಕಾರ್ಡ್ (APL Card) ಎಂದು ಯಾವ ರೇಷನ್ ಕಾರ್ಡ್ ಇದೆ, ಅರ್ಹತೆ ಇದೆ ಎನ್ನುವುದನ್ನು ನೋಡದೆ ಟ್ಯಾಕ್ಸ್ ಕಟ್ಟುತ್ತಿರುವ ಮಹಿಳೆಯರಿಗು ಕೂಡ ₹1000 ಹಣ ನೀಡುತ್ತಿದೆ.. ನಮ್ಮ ರಾಜ್ಯದಲ್ಲಿ ಯಾಕೆ ಹಾಗೆ ಮಾಡಿಲ್ಲ ಎಂದು ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಉತ್ತರ ನೀಡಿದ್ದಾರೆ.

ಇಂತಹವರ ರೇಷನ್ ಕಾರ್ಡ್ ರದ್ದುಗೊಳಿಸಿ ಸರ್ಕಾರದ ಆದೇಶ, ನಿಮ್ಮ ಕಾರ್ಡ್ ಸ್ಥಿತಿ ಏನಾಗಿದೆ?

Gruha Lakshmi Yojaneಈ ವಿಚಾರಕ್ಕೆ ಸ್ವತಃ ಲಕ್ಷ್ಮೀ ಹೆಬ್ಬಾಲ್ಕರ್ ಅವರು ಉತ್ತರ ಕೊಟ್ಟಿದ್ದು ಹೀಗೆ.. “ಈ ಯೋಜನೆಯ ಬಗ್ಗೆ ಚರ್ಚೆಗಳು ಬಂದಾಗ, ನಾವು ಎಲ್ಲಾ ಮಹಿಳೆಯರಿಗೆ ಕೊಡಬೇಕು ಅಂತಾನೆ ಅಂದುಕೊಂಡಿದ್ವಿ, ನಮ್ಮ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರು ಕೂಡ ರಾಜ್ಯದ ಮಹಿಳೆಯರ ಅಭಿವೃದ್ಧಿಗೆ ಒತ್ತು ನೀಡುವವರು, ಅವರಿಬ್ಬರು ಕೂಡ ಶುರುವಿನಲ್ಲಿ ಈ ಯೋಜನೆಯನ್ನು ಎಲ್ಲಾ ಮಹಿಳೆಯರಿಗೆ ನೀಡಬೇಕು ಅಂತ ಅಂದುಕೊಂಡಿದ್ದರು..

ಆದರೆ ಈಗ ಸೂಚನೆಗಳನ್ನು ಬದಲಾಯಿಸಿ, ಒಟ್ಟು 1.53 ಕೋಟಿ ಲಕ್ಷ ಕುಟುಂಬಗಳ ಪೈಕಿ 1.28 ಕೋಟಿ ಲಕ್ಷ ಕುಟುಂಬಗಳಿಗೆ ಗೃಹಲಕ್ಷ್ಮಿ ಯೋಜನೆಯ (Gruha Lakshmi Yojane) ಸೌಲಭ್ಯ ಸಿಗುತ್ತದೆ ಎಂದು ತೀರ್ಮಾನ ಮಾಡಲಾಗಿದೆ.

ರೇಷನ್ ಕಾರ್ಡ್ ಇದ್ದು ರೇಷನ್ ತೆಗೆದುಕೊಳ್ಳದೆ ಇರೋರಿಗೆ, ರೇಷನ್ ಮಾರಿಕೊಳ್ಳೋರಿಗೆ ಸರ್ಕಾರ ಖಡಕ್ ವಾರ್ನಿಗ್! ರೇಷನ್ ಕಾರ್ಡ್ ಅಮಾನತ್ತು

ರಾಜ್ಯದ ಎಲ್ಲಾ ಮಹಿಳೆಯರಿಗೂ ಕೊಡಬೇಕು ಎಂದು ಆರಂಭದಲ್ಲಿ ತೀರ್ಮಾನ ಮಾಡಿದರು ಕೂಡ… ನಂತರ ಸರ್ಕಾರಕ್ಕೂ ಆರ್ಥಿಕವಾಗಿ ಹೊರೆ ಆಗಬಾರದು ಎಂದು, GST ಕಟ್ಟುವವರು, ಟ್ಯಾಕ್ಸ್ ಕಟ್ಟುವವರು ಮತ್ತು ಎಪಿಎಲ್ ಕಾರ್ಡ್ ಇರುವವರಿಗೆ ಕೊಡುವುದೋ ಬೇಡವೋ ಎನ್ನುವ ಚರ್ಚೆ ಶುರುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ..” ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ.

ಮುಂದುವರೆದು ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಗೃಹಲಕ್ಷ್ಮಿ ಯೋಜನೆ ಈಗ ಲಾಂಚ್ ಆಗಬೇಕಿದೆ.. ಈ ಯೋಜನೆ ಪೂರ್ತಿ ಲಾಂಚ್ ಆಗಲು ಇನ್ನು ಸಮಯ ಇದ್ದು, ಯೋಜನೆಯನ್ನು ವಿಸ್ತಾರ ಮಾಡಿದರೆ, ಎಪಿಎಲ್ ಕಾರ್ಡ್ ಇರುವವರಿಗೆ ಮತ್ತು GST ಕಟ್ಟುವವರಿಗೂ ಗೃಹಲಕ್ಷ್ಮೀ ಯೋಜನೆಯ ಸೌಲಭ್ಯ ಸಿಗಬಹುದು. ನಿರಾಸೆ ಮಾಡಿಕೊಳ್ಳಬೇಡಿ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

Why do you need a BPL Ration card for Gruha Lakshmi Yojana

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories