ಸಿಂಹವನ್ನು ಬೆನ್ನಟ್ಟಿದ ನಾಯಿ.. ವಿಡಿಯೋ ವೈರಲ್
ಕಾಡಿನ ರಾಜನಿಗೆ ನಾಯಿ ಬೆನ್ನಟ್ಟಿದರೆ... ಹೇಗಿರುತ್ತದೆ, ಹೇಳಿ. ನಾಯಿ ಸಿಂಹವನ್ನು ಅಟ್ಟಿಸಿಕೊಂಡು ಹೋಗಿ ತನ್ನ ಹವಾ ತೋರಿಸಿದೆ
ಕಾಡಿನ ರಾಜನಿಗೆ ನಾಯಿ ಬೆನ್ನಟ್ಟಿದರೆ… ಹೇಗಿರುತ್ತದೆ, ಹೇಳಿ. ನಾಯಿ ಸಿಂಹವನ್ನು ಅಟ್ಟಿಸಿಕೊಂಡು ಹೋಗಿ ತನ್ನ ಹವಾ ತೋರಿಸಿದೆ, ನಾಯಿಯ ಹವಾ ನೋಡಿ ಸಿಂಹ ಓಡಿಹೋಗಿದೆ. ಗುಜರಾತ್ ನ ರಾಜ್ ಕೋಟ್ ಜಿಲ್ಲೆಯ ಲೋಧಿಕಾ ತಾಲೂಕಿನ ಮಾಗಾನಿ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದೆ.
ಮಾಗಣಿ ಗ್ರಾಮದ ರೈತರು ತಮ್ಮ ಬೆಳೆಯನ್ನು ಪ್ರಾಣಿಗಳಿಂದ ರಕ್ಷಿಸಲು ನಾಯಿಯನ್ನು ಕಾವಲಿಗಾಗಿ ಸಾಕಿದ್ದಾರೆ. ಆದರೆ ಎರಡು ದಿನಗಳ ಹಿಂದೆ ಸಿಂಹವೊಂದು ಗದ್ದೆಯತ್ತ ಬಂದಿತ್ತು. ಸಿಂಹವನ್ನು ಕಂಡ ಕಪ್ಪು ನಾಯಿ ಸ್ವಲ್ಪವೂ ಹೆದರಲಿಲ್ಲ.
ಗದ್ದೆಯಿಂದ ಗ್ರಾಮದ ಕಡೆಗೆ ಬರುತ್ತಿದ್ದ ಸಿಂಹವನ್ನು ನಾಯಿ ಬೆನ್ನಟ್ಟಿದೆ. ಈ ಘಟನೆ ಕಂಡು ರೈತರು ಬೆಚ್ಚಿಬಿದ್ದರು. ರೈತರು ನೀಡಿದ ಮಾಹಿತಿಯಿಂದ ಸಿಂಹವನ್ನು ನೋಡಲು ಜನಸಾಗರವೇ ಹರಿದು ಬಂದಿತ್ತು. ಗ್ರಾಮದ ಗಡಿಯಿಂದ ಸಿಂಹವನ್ನು ನಾಯಿ ಓಡಿಸಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
A Dog Attack On Lion In Gujarat
Follow Us on : Google News | Facebook | Twitter | YouTube