ವೈರಲ್ ವಿಡಿಯೋ: ರಸ್ತೆ ಅಪಘಾತದಲ್ಲಿ ಕಾರಿನಡಿ ಸಿಲುಕಿದ ವ್ಯಕ್ತಿ ರಕ್ಷಣೆ
Viral Video : ಯುಎಸ್‌ನಲ್ಲಿ, ಬೈಕರ್ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಾಗ ಆಕಸ್ಮಿಕವಾಗಿ ಕಾರಿನ ಕೆಳಗೆ ಸಿಕ್ಕಿಕೊಂಡಾಗ, ಪೊಲೀಸರು ಸೇರಿದಂತೆ ಸಾರ್ವಜನಿಕರು ಥಟ್ಟನೆ ಕಾರನ್ನು ಎತ್ತಿದರು. ಆ ಬೈಕ್ ಸವಾರ ಪ್ರಾಣ ಉಳಿಸಿದ ಈ ವಿಡಿಯೋ ವೈರಲ್ ಆಗಿದೆ.
ಅಮೆರಿಕದ ಸೌತ್ ಕೆರೊಲಿನಾದಲ್ಲಿ ಎರಡು ದ್ವಿಚಕ್ರವಾಹನಗಳು ಪ್ರಯಾಣಿಸುತ್ತಿದ್ದಾಗ ಹಿಂದಿನಿಂದ ಕಾರು ಡಿಕ್ಕಿ ಹೊಡೆದಿದೆ. ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿ ಸ್ವಲ್ಪ ದೂರ ಹಾರಿ ಹೋಗಿದ್ದು, ಹಿಂದೆ ಇದ್ದ ವ್ಯಕ್ತಿ ಕಾರಿನಡಿ ಸಿಲುಕಿಕೊಂಡಿದ್ದಾನೆ. ತಕ್ಷಣವೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಲ್ಲಿ ಜಮಾಯಿಸಿದರು.
ಅಷ್ಟರಲ್ಲಿ ಅದೇ ಮಾರ್ಗ ಬರುತ್ತಿದ್ದ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಸಿನಿಮೀಯ ಶೈಲಿಯಲ್ಲಿ ಕಾರನ್ನು ಮೇಲಕ್ಕೆತ್ತಿದ್ದಾರೆ. ವ್ಯಕ್ತಿಯನ್ನು ಜೀವಂತವಾಗಿ ರಕ್ಷಿಸಲಾಗಿದೆ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಲಾಗಿದ್ದು, 16 ಗಂಟೆಗಳಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.
Police Rush To Rescue Motorcylist Trapped Underneath A Car
View this post on Instagram