Video ಈ ಬಾಲ್ಯದ ಸ್ನೇಹ ನೋಡಿ, ಕಣ್ಣಲ್ಲಿ ನೀರು ಬರುತ್ತೆ..

ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಂದು ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಾಲಿನಲ್ಲಿ ಕುಳಿತು ಊಟ ಮಾಡುತ್ತಿರುವ ವಿಡಿಯೋ.

ಬಾಲ್ಯದ ಸ್ನೇಹವೇ ಹಾಗೆ ! ನಿಷ್ಕಲ್ಮಶ… ಇಂತಹದೊಂದು ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಂದು ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಾಲಿನಲ್ಲಿ ಕುಳಿತು ಊಟ ಮಾಡುತ್ತಿರುವ ವಿಡಿಯೋ.

ಎಲ್ಲಾ ವಿದ್ಯಾರ್ಥಿಗಳ ಮುಂದೆ ಅನ್ನದ ತಟ್ಟೆ ಇರುತ್ತದೆ, ಎಲ್ಲರೂ ಊಟ ತಿನ್ನುವಾಗ..  ಒಬ್ಬ ವಿದ್ಯಾರ್ಥಿ ಮಾತ್ರ ತಿನ್ನಿತ್ತಿಲ್ಲ. ಆದರೆ ಅವನ ಸ್ನೇಹಿತ ಅನ್ನವನ್ನು ಬೆರೆಸಿ ತನ್ನ ಸ್ನೇಹಿತನಾದ ಮತ್ತೊಬ್ಬ ವಿದ್ಯಾರ್ಥಿಗೆ ತಿನ್ನಿಸುತ್ತಾನೆ. ಏಕೆಂದರೆ ಆ ವಿದ್ಯಾರ್ಥಿಯ ಕಣ್ಣುಗಳು ಕಾಣಿಸುವುದಿಲ್ಲ. ಈ ವಿಡಿಯೋವನ್ನು ಟ್ವಿಟರ್ ಬಳಕೆದಾರರೊಬ್ಬರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ಸಂಸ್ಕೃತಿ ಕಾಣುವುದು ನಡವಳಿಕೆಯಲ್ಲಿ!’ ಎಂಬ ಕಾಮೆಂಟ್ ಸಹ ಮಾಡಿದ್ದಾರೆ.

ಈ ವಿಡಿಯೋ ನೋಡಿದ ನೆಟ್ಟಿಗರು ಅನ್ನ ತಿನ್ನಿಸಿದ ಹುಡುಗನ ಸ್ನೇಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಹುಡುಗನನ್ನು ಮುಟ್ಟಿ ಮುತ್ತು ಕೊಡಬೇಕು’ .. ಇದು ಶುದ್ಧ ಸ್ನೇಹ.. ಹುಡುಗನ ಸಂಸ್ಕೃತಿ ಎಲ್ಲರಲ್ಲೂ ಇರಬೇಕು ‘..’ ಅದ್ಬುತ! ಹಾಗೆ ಬೆಳೆಸಿದ ಮಗುವಿನ ಪೋಷಕರಿಗೆ ಕೃತಜ್ಞತೆಗಳು’.. ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

Video ಈ ಬಾಲ್ಯದ ಸ್ನೇಹ ನೋಡಿ, ಕಣ್ಣಲ್ಲಿ ನೀರು ಬರುತ್ತೆ..

Related Stories