Karnataka Politics News

ಯಡಿಯೂರಪ್ಪ ಸಿಎಂ ಆಗಿ ಅಧಿಕಾರದಲ್ಲಿರಲು ನಾವೇ ಕಾರಣ : ಎಂಟಿಬಿ ನಾಗರಾಜ್

( Kannada News ) : ಬೆಂಗಳೂರು:  ಬಿ.ಎಸ್. ಯಡಿಯೂರಪ್ಪನವರು  ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇರಲು ನಾವೇ ಕಾರಣ ಎಂದು ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ( MTB Nagaraj ) ಹೇಳಿದ್ದಾರೆ.

ಅವರು ಇಂದು ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಎಸ್‌ಟಿ ಹೋರಾಟ ಸಮಿತಿ ಸಭೆಯಲ್ಲಿ ಭಾಗಿಯಾಗುವ ಮುನ್ನ ಮಾಧ್ಯಮದ ಜೊತೆ ಮಾತನಾಡಿದರು, ಮಾತನಾಡಿದ ಅವರು, ಬಿಜೆಪಿಯು ಅಧಿಕಾರದಲ್ಲಿ ಇರುವುದಕ್ಕೆ ಕಾರಣ ನಾವೇ, ಕುರುಬ ಸಮುದಾಯದ ಬೆಂಬಲದಿಂದ ನಾನು, ವಿಶ್ವನಾಥ್, ಆರ್. ಶಂಕರ್ ಕಂಬಳಿ ಬೀಸಿದ್ದೇ ಇದಕ್ಕೆ ಕಾರಣ, ಈಶ್ವರಪ್ಪ ಕೂಡ ಇವತ್ತು ಸಚಿವರಾಗಿರಲು, ಕುರುಬ ಸಮುದಾಯದ ನಾಯಕರ ಬೆಂಬಲವೇ ಕಾರಣ ಎಂದು ಹೇಳಿದರು.

ಇದನ್ನೂ ಓದಿ : ಕಾಲುವೆಯಲ್ಲಿ ಮುಳುಗಿ ಮೂವರು ಮಕ್ಕಳು ದುರ್ಮರಣ : ಬಂಗಾರಪೇಟೆಯಲ್ಲಿ ಘಟನೆ

ಬಿಜೆಪಿ ಮೇಲೆ ನಂಬಿಕೆ ಇಟ್ಟು ನಾವು ಬಿಜೆಪಿ ಪಕ್ಷಕ್ಕೆ ಬಂದಿದ್ದೇವೆ, ಈ ವಿಚಾರ ನೆನಪಿಟ್ಟು ಕೊಂಡು ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ನೀಡಬೇಕು ಎಂದು ಎಂಟಿಬಿ ನಾಗರಾಜ್ ರವರು ಒತ್ತಾಯಿಸಿದರು.

Our Whatsapp Channel is Live Now 👇

Whatsapp Channel

Related Stories

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ