ಅಣ್ಣಾವ್ರು ರಿಜೆಕ್ಟ್ ಮಾಡಿದ ಆ ಚಿತ್ರದಲ್ಲಿ ವಿಷ್ಣುದಾದಾ ನಟಿಸಿ ಇತಿಹಾಸ ಸೃಷ್ಟಿಸಿದ್ರು! ಹಾಗಾದ್ರೆ ಆ ಚಿತ್ರ ಯಾವುದು? ಅದನ್ನು ರಾಜಕುಮಾರ್ ರಿಜೆಕ್ಟ್ ಮಾಡಿದ್ಯಾಕೆ?
ಸ್ನೇಹಿತರೆ, ಕೆಲವೊಂದು ಬಾರಿ ಹೀಗಾಗುವುದು ಸಹಜ ನಿರ್ದೇಶಕರು ಯಾವುದೋ ನಟನನ್ನು ತಮ್ಮ ತಲೆಯಲ್ಲಿ ಇಟ್ಟುಕೊಂಡು ಅವರಿಗಾಗಿ ಚಿತ್ರಕಥೆಯನ್ನು ಬರೆದಿರುತ್ತಾರೆ. ಆದರೆ ಕೆಲ ಕಾರಣಾಂತರಗಳಿಂದಾಗಿ ಆ ಸಿನಿಮಾದಲ್ಲಿ ಮತ್ಯಾವುದೋ ನಟ ಅಭಿನಯಿಸಿ ಸಿನಿಮಾವನ್ನು ಗೆಲ್ಲಿಸಿ ಕೊಡುತ್ತಾರೆ.
ಇಂತಹ ಸಾಕಷ್ಟು ಉದಾಹರಣೆಗಳು ನಮ್ಮ ಕನ್ನಡ ಚಿತ್ರರಂಗದಲ್ಲಿದ್ದು (Kannada Film Industry), ಡಾಕ್ಟರ್ ರಾಜಕುಮಾರ್ (Dr Rajkumar) ಅವರ ಕಾಲದಿಂದ ಹಿಡಿದು ಈಗಿನ ಯುವ ನಟರ ಕಾಲದವರೆಗೂ ಯಾರೋ ಮಾಡಬೇಕಿದ್ದ ಸಿನಿಮಾ ಮತ್ಯಾರದೋ ಪಾಲಾಗಿದೆ.
ಅಂತಹದ್ದೇ ಒಂದು ಚಿತ್ರ ಡಾಕ್ಟರ್ ರಾಜ್ ಮತ್ತು ವಿಷ್ಣು ನಡುವೆ ತಳುಕು ಹಾಕಿಕೊಂಡಿತ್ತು. ಹೌದು ಗೆಳೆಯರೇ ಮೊದಲಿಗೆ ನಿರ್ದೇಶಕರು ಡಾಕ್ಟರ್ ರಾಜಕುಮಾರ್ ಅವರಿಗೆ ಸಿನಿಮಾದ ಕಥೆಯನ್ನು ಬರೆದಿರುತ್ತಾರೆ. ಆದರೆ ರಾಜಕುಮಾರ್ ನೀವು ಎಷ್ಟೇ ಲಕ್ಷ ಸಂಭಾವನೆ (Remuneration) ನೀಡಿದರು ನಾನು ಈ ಚಿತ್ರದಲ್ಲಿ ಅಭಿನಯಿಸುವುದಿಲ್ಲ ಎಂದು ಕಡಾ ಖಂಡಿತವಾಗಿ ಹೇಳಿಬಿಡುತ್ತಾರೆ. ಆನಂತರ ಆ ಸಿನಿಮಾ ವಿಷ್ಣು ದಾದಾನ (Actor Vishnuvardhan) ಪಾಲಾಯಿತು.
ಕನ್ನಡದ ಬ್ಲಾಕ್ಬಸ್ಟರ್ ಹಿಟ್ ಸಿನಿಮಾ ಮತ್ಯಾವುದು ಅಲ್ಲ, ಕೃಷ್ಣಮೂರ್ತಿ ಪುರಾಣಿಕ್ ಅವರ ಕಾದಂಬರಿ ಆಧಾರಿತ ಚಿತ್ರ ಹಾಲುಂಡ ತವರು (Halunda Tavaru Kannada Cinema). ಹೌದು ಗೆಳೆಯರೇ ಈ ಸಿನಿಮಾದಲ್ಲಿ ಡಾಕ್ಟರ್ ರಾಜಕುಮಾರ್ ಅಭಿನಯಿಸಿದರೆ ಅದೆಷ್ಟರ ಮಟ್ಟಕ್ಕೆ ಸಕ್ಸಸ್ ಕಾಣುತ್ತಿದ್ದರೊ ಏನೋ, ಆದರೆ ವಿಷ್ಣುವರ್ಧನ್ ಅವರ ವೃತ್ತಿ ಬದುಕಿಗೆ ಮಹತ್ತರವಾದ ಮೈಲುಗಲ್ಲನ್ನು ಹಾಕಿ ಕೊಟ್ಟಂತಹ ಸಿನಿಮಾ ಇದು ಎಂದರೆ ತಪ್ಪಾಗಲಾರದು.
ಅದಾಗಲೇ ಕರುಳಿನ ಕೂಗು ಎಂಬ ಸಿನಿಮಾವನ್ನು ಮಾಡಿ ಗೆದ್ದಿದಂತಹ ರಾಜೇಂದ್ರ ಬಾಬು ಇಂತಹದೇ ಒಂದು ಹೆಂಗೆಳೆಯರ ಮನಸ್ಸನ್ನು ಸೆಳೆಯುವ ಕಥೆಯನ್ನು ಎದುರು ನೋಡುತ್ತಿರುತ್ತಾರೆ. ಆ ಸಮಯದಲ್ಲಿ ಕೃಷ್ಣಮೂರ್ತಿ ಪುರಾಣಿಕ್ ಅವರ ಹಾಲುಂಡ ತವರು ಚಿತ್ರದ ಕಥೆ ದೊರಕುತ್ತದೆ. ಈ ಸಿನಿಮಾವನ್ನು ಅಣ್ಣವ್ರಿಗೆ ಮಾಡಬೇಕೆಂದು ನಿರ್ಧರಿಸಿದರು, ಆದರೆ ರಾಜಕುಮಾರ್ ಈ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ತಿರಸ್ಕರಿಸಿ ಬಿಡುತ್ತಾರೆ.
ಹೌದು ಗೆಳೆಯರೇ ಡಾಕ್ಟರ್ ರಾಜಕುಮಾರ್ 1987ರ ಅವಧಿಯಲ್ಲಿ ನಾನು ಬೇರೆ ನಿರ್ಮಾಣ ಸಂಸ್ಥೆಗಳಲ್ಲಿ ಕೆಲಸ ಮಾಡುವುದಿಲ್ಲ, ನಮ್ಮ ನಿರ್ಮಾಣದಲ್ಲಿ ಬರುವಂತಹ ಸಿನಿಮಾದಲ್ಲಿ ಮಾತ್ರ ಅಭಿನಯಿಸುತ್ತೇನೆ ಎಂದು ಘೋಷಿಸಿ ಬಿಟ್ಟಿದ್ದರು.
ಇನ್ನು ಎರಡನೇ ಕಾರಣ ಡಾಕ್ಟರ್ ರಾಜಕುಮಾರ್ ಅವರ ವಯಸ್ಸಿಗೆ ಹಾಲುಂಡ ತವರು ಸಿನಿಮಾದ ಪಾತ್ರ ಸರಿದೂಗದ ಕಾರಣ ನಾನು ಈ ಚಿತ್ರದಲ್ಲಿ ಅಭಿನಯಿಸುವುದಿಲ್ಲ ಇದು ನನಗೆ ಸರಿ ಹೊಂದುವುದಿಲ್ಲ ಎಂದು ಹೇಳಿಬಿಡುತ್ತಾರೆ.
ಆನಂತರ ಯಾವ ನಟನನ್ನು ಹಾಕಿಕೊಳ್ಳುವುದು ಎಂದು ಯೋಚಿಸುತ್ತಿದ್ದಾಗ ಇವರೆಲ್ಲರ ತಲೆಗೆ ಹೊಳೆದಿದ್ದು ಡಾಕ್ಟರ್ ವಿಷ್ಣುವರ್ಧನ್ ಅವರ ಹೆಸರು. ನಟಿ ಸಿತಾರ ಅವರೊಂದಿಗೆ ತೆರೆಯ ಮೇಲೆ ವಿಷ್ಣುವರ್ಧನ್ ಮಾಡಿದಂತಹ ಮೋಡಿಯನ್ನು ಇಂದಿಗೂ ಜನ ಮರೆಯಲು ಸಾಧ್ಯವೇ ಇಲ್ಲ.
ವಿಷ್ಣುವರ್ಧನ್ ಅವರ ನಟನೆಯಲ್ಲಿ ಅಡಗಿದ್ದಂತಹ ಆಪ್ತತೆ ಎಂತವರನ್ನು ಕಣ್ಣೀರು ಸುರಿಸುವಂತೆ ಮಾಡಿಬಿಟ್ಟಿತ್ತು. ಕನ್ನಡದ ಬ್ಲಾಕ್ಬಸ್ಟರ್ ಹಿಟ್ ಪಟ್ಟಿಗಳಲ್ಲಿ ಸೇರಿಕೊಂಡ ಈ ಸಿನಿಮಾ ವಿಷ್ಣುವರ್ಧನ್ ಅವರಿಗೆ ಹೇಳಿ ಮಾಡಿಸಿದಂತ್ತಿದ್ದರು ಈ ಚಿತ್ರದಲ್ಲಿ ಡಾಕ್ಟರ್ ರಾಜಕುಮಾರ್ ಅಭಿನಯಿಸಬೇಕಿತ್ತು ಎಂಬುದೇ ಅಸಲಿ ಸತ್ಯ.
Actor Vishnuvardhan acted in that Kannada movie which was supposed to Act Dr Rajkumar
Our Whatsapp Channel is Live Now 👇