ಸ್ನೇಹಿತರೆ, 1990ರ ಸೆಪ್ಟೆಂಬರ್ 30ನೇ ತಾರೀಕು ಇಡೀ ಕರುನಾಡಿಗೆ ಕತ್ತಲು ಆವರಿಸಿತು, ಆಟೋ ರಾಜ ಶಂಕರ್ ನಾಗ್ (Actor Shankar Nag) ವಿಧಿವಶರಾದರು ಎಂಬ ಸುದ್ದಿ ಹೊರಬರುತ್ತಾ ಇದ್ದ ಹಾಗೆ ಯಾರಿಗೂ ಒಂದು ಕ್ಷಣ ಅದನ್ನು ನಂಬಲು ಸಾಧ್ಯವೇ ಆಗಲಿಲ್ಲ.
ಯಾರೋ ಕಿಡಿಗೇಡಿಗಳು ಇಲ್ಲಸಲ್ಲದ ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಎಂದು ಅದೆಷ್ಟೋ ಅಭಿಮಾನಿಗಳು ಈ ವಿಚಾರವನ್ನು ನೆಗ್ಲೆಟ್ ಮಾಡಿದರು. ಆದರೆ ಮಾಧ್ಯಮಗಳೆಲ್ಲವೂ ಅಧಿಕೃತವಾಗಿ ಅವರ ಆಕ್ಸಿಡೆಂಟ್ ಸಮಯದ ಫೋಟೋ ಹಾಗು ವಿಡಿಯೋಗಳನ್ನು ಹರಿಬಿಟ್ಟಾಗ ನಂಬುವುದು ಬಹಳ ಕಷ್ಟವಾಗಿ ಮಾರ್ಪಡಿಸಿತ್ತು.
ಹೀಗೆ ಸಿನಿಮಾಗಳಲ್ಲಿ ನೋಡಿ ಇಷ್ಟಪಟ್ಟಂತಹ ಶಂಕ್ರಣ್ಣನ ಸಾವು.. ಅಭಿಮಾನಿಗಳಿಗೆ (Shankar Nag Fans) ಅಘಾತವಾದ ನೋವನ್ನು ತಂದಿದ್ದಾಗ ಅವರ ಜೊತೆಯಲ್ಲೇ ಆಡಿ ಬೆಳೆದಂತಹ ಅನಂತನಾಗ್ ಅವರಿಗೆ ಎಷ್ಟು ದುಃಖವನ್ನು ತಂದಿರಬಹುದು? ನೀವೇ ಯೋಚಿಸಿ.
ತಮ್ಮ ಅದ್ಭುತ ಯೋಚನಾ ಶಕ್ತಿಯಿಂದ ಕನ್ನಡ ಚಿತ್ರರಂಗದ (Kannada Cinema Industry) ದಿಕ್ಕನ್ನೆ ಬದಲಿಸಿದಂತಹ ನಟ ನಮ್ಮ ಶಂಕ್ರಣ್ಣ ಎಂದರೆ ತಪ್ಪಾಗಲಾರದು. ಹೊಸ ಐಡಿಯಾಗಳು, ಹೊಸ ತಂತ್ರಗಾರಿಕೆ ಹಾಗೂ ಸಿನಿಮಾದಲ್ಲಿ ಹೊಸತನವನ್ನು ತರಬೇಕೆಂದು ಅವರು ಹಗಲು ರಾತ್ರಿ ಎನ್ನದೆ ಮಾಡುತ್ತಿದ್ದಂತಹ ಆಲೋಚನೆಗಳು (Ideas), ಬರೆಯುತ್ತಿದ್ದಂತಹ ಕಥೆಗಳು (Stories) ಇಂದಿಗೂ ಅದೆಷ್ಟೋ ಯುವ ಪ್ರತಿಭೆಗಳಿಗೆ ಸ್ಪೂರ್ತಿ.
ಹೀಗಾಗಿ ಇವರ ಸಿನಿಮಾ ಕೇವಲ ಸಿನಿಮಾವಾಗಿ ಉಳಿಯಬಾರದು, ಅದು ಜನರ ಮನಸ್ಸಿಗೆ ಆಳವಾಗಿ ಹೊಕ್ಕಿ ಜೀವನದಲ್ಲಿ ಪರಿವರ್ತನೆಯನ್ನು ತರಬೇಕೆಂಬುದು ಶಂಕ್ರಣ್ಣನ ಮುಖ್ಯ ಉದ್ದೇಶವಾಗಿತ್ತು. ಹೀಗಾಗಿ ಅವರ ಪ್ರತಿ ಸಿನಿಮಾದಲ್ಲಿಯೂ ಒಂದೊಂದು ನೀತಿ ಪಾಠ ಇದ್ದೆ ಇರುತ್ತಿತ್ತು.
ಹೌದು ಗೆಳೆಯರೇ ಹೊಸ ಜೀವನ ಸಿನಿಮಾದ ಶೂಟಿಂಗ್ ಕೊನೆ ದಿನ ಮುಗಿಸಿ ಅಲ್ಲಿಂದ ಹೊರಟಂತಹ ಶಂಕರ್ ನಾಗ್ ಅವರ ಕಾರು ಅಪಘಾತಕ್ಕೊಳಗಾಗುತ್ತದೆ. ಈ ಸುದ್ದಿ ಹೊರಬಂದಿದ್ದು ಅಭಿಮಾನಿಗಳಿಗೆ ಆಶ್ಚರ್ಯದ ಜೊತೆಗೆ ಆಘಾತದಂತಿತ್ತು.
ಅಂತಹ ಸಂದರ್ಭದಲ್ಲಿ ನಟ ಅನಂತನಾಗ್ (Actor Ananth Nag) ಸಂಪೂರ್ಣ ಕುಸಿದು ಹೋಗಿದ್ದರು ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ನಟ ಅನಂತನಾಗ್ ಅವರ ತಾಯಿ ಪತಿಯನ್ನು ಕಳೆದುಕೊಂಡ ಬಳಿಕ ಆನಂದಾಶ್ರಮದಲ್ಲಿ ಉಳಿದುಕೊಳ್ಳಲು ಯೋಚಿಸುತ್ತಾರೆ. ಅದರಂತೆ ಅಮ್ಮನನ್ನು ಆಶ್ರಮದಲ್ಲಿ ಬಿಟ್ಟು ಇತ್ತ ಶಂಕರ್ ನಾಗ್ ಹಾಗೂ ಅನಂತನಾಗ್ ಸಿನಿ ಬದುಕಿನಲ್ಲಿ ಕೆಲಸ ಮಾಡುತ್ತಿರುತ್ತಾರೆ, ಒಂದು ದಿನ ಇದ್ದಕ್ಕಿದ್ದ ಹಾಗೆ ಆಶ್ರಮದಿಂದ ಅವರ ತಾಯಿ ಕರೆದು ಅನಂತ್ ನಾಗ್ ಅವರ ಬಳಿ ನೀನು ರಾಮನಾಮ ಜಪ ಮಾಡು ಎಂದರು.
ಯಾಕೆ ಎಂದು ಕೇಳಿದಕ್ಕೆ ಕಳೆದ ವಿಜಯದಶಮಿ ಹಬ್ಬದಂದು ನಿಮ್ಮ ತಂದೆ ತೀರಿಕೊಂಡರು. ಈಗ ನಿಮ್ಮ ಚಿಕ್ಕಪ್ಪ, ಮುಂದೆ ಯಾರಾಗುತ್ತಾರೋ? ಎನ್ನುವ ಮುಖಾಂತರ ಶಂಕರ್ ನಾಗ್ ಸಾವಿನ ಮುನ್ಸೂಚನೆಯನ್ನು ನೀಡಿದ್ದರಂತೆ. ಹೀಗೆ ಅವರ ತಾಯಿ ಹೇಳಿದ ಹಾಗೆ ಶಂಕರ್ ನಾಗ್ ವಿಜಯದಶಮಿ ಸಮಯದಲ್ಲಿ ಇಹಲೋಕ ತ್ಯಜಿಸಿದರು. ಇದು ಅನಂತ ನಾಗ್ ಅವರಿಗೆ ಅಘಾದವಾದ ನೋವು ತಂದು ಕೊಟ್ಟಿತ್ತು.
ತನ್ನ ಆತ್ಮೀಯರು ಅಂತ ಇದ್ದವರೆಲ್ಲರನ್ನು ಕಳೆದುಕೊಂಡು ಅನಂತನಾಗ್ ಒಬ್ಬಂಟಿಯಾಗಿ ಬಿಟ್ಟಿದ್ದರು. ಸಿನಿಮಾಗಳಲ್ಲಿ ಅಭಿನಯಿಸುತ್ತಿರಲಿಲ್ಲ ಹಾಗೂ ಯಾವುದೇ ಸಂದರ್ಶನಗಳಲ್ಲಿ ಮಾತನಾಡಿದರು ತಮ್ಮನ ಕುರಿತು ಹೇಳುತ್ತಾ ಕಣ್ಣೀರು ಹಾಕುವುದನ್ನು ನಿಲ್ಲಿಸುತ್ತಿರಲಿಲ್ಲ. ಇಷ್ಟರ ಮಟ್ಟಿಗೆ ಶಂಕರ್ ನಾಗ್ ಅವರ ಸಾವು ಅನಂತನಾಗ್ ಅವರನ್ನು ಕಾಡಿತ್ತು.
ಇನ್ನು ಶಂಕರ್ ನಾಗ್ ಸಾಯುವ ಮುನ್ನ ಇಚ್ಚಾದಾರಿ ನಾಗಿಣಿ ಆಧಾರಿತ ಸಿನಿಮಾ (Kannada Movie) ಒಂದನ್ನು ತೆರೆಗೆ ತರುವ ಪ್ರಯತ್ನದಲ್ಲಿ ಇರುತ್ತಾರೆ. ಆ ಸಿನಿಮಾದ ಬಹುತೇಕ ಎಲ್ಲಾ ಹಂತದ ಶೂಟಿಂಗ್ ಮುಗಿದಿದ್ದವು, ಆದರೆ ಡಬ್ಬಿಂಗ್ ಕೆಲಸಗಳು ಬಾಕಿ ಇದ್ದ ಕಾರಣ ಸ್ವತಹ ಅನಂತನಾಗ್ ಅವರೇ ತಮ್ಮ ತಮ್ಮನ ಸಿನಿಮಾಗೆ ಧ್ವನಿ ಜೋಡಿಸಿ ಸಿನಿಮಾ ಯಶಸ್ವಿಯಾಗುವಂತೆ ಮಾಡಿದರು.
Kannada Actor Shankar Nag and His Brother Actor Ananth Nag Interesting Facts
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.