ಕನ್ನಡ ಟಾಪ್ ನಟರಾದ ನಟ ದರ್ಶನ್ ಹಾಗೂ ಕಿಚ್ಚ ಸುದೀಪ್ ಓದಿರುವುದು ಎಷ್ಟನೇ ತರಗತಿ? ಇಬ್ಬರಲ್ಲಿ ಯಾರು ಹೆಚ್ಚು ಓದಿದ್ದಾರೆ ಗೊತ್ತಾ?
ಚಿತ್ರ ಬದುಕಿನಲ್ಲಿ ನಮ್ಮ ಗಂಧದಗುಡಿಯನ್ನು ಬೇರೊಂದು ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಸತತ ಸಿನಿಮಾಗಳ ಮೂಲಕ ಪ್ರಯತ್ನ ಪಡುತ್ತಿರುವ ಸ್ಟಾರ್ ನಟರ ಪೈಕಿ ಅಗ್ರಸ್ಥಾನವನ್ನು ಅಲಂಕರಿಸುವುದು ಕಿಚ್ಚ ಸುದೀಪ್ ಹಾಗೂ ನಟ ದರ್ಶನ್
ಸ್ನೇಹಿತರೆ ಕನ್ನಡ ಚಿತ್ರರಂಗ (Kannada Cinema Industry) ಎಂದರೆ ನಮ್ಮೆಲ್ಲರಿಗೂ ಮೊದಲು ನೆನಪಿಗೆ ಬರುವುದು ಡಾ. ರಾಜಕುಮಾರ್, ಡಾಕ್ಟರ್ ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್ ರಂತಹ ಮೇರು ನಟರು.
ಇವರೆಲ್ಲರೂ ಆಗಿನ ಸಿನಿಕಾಲಕ್ಕೆ ಸೀಮಿತವಾದರೆ ಸದ್ಯದ ಚಿತ್ರ ಬದುಕಿನಲ್ಲಿ ನಮ್ಮ ಗಂಧದಗುಡಿಯನ್ನು (Kannada Movies) ಬೇರೊಂದು ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಸತತ ಸಿನಿಮಾಗಳ ಮೂಲಕ ಪ್ರಯತ್ನ ಪಡುತ್ತಿರುವ ಸ್ಟಾರ್ ನಟರ ಪೈಕಿ ಅಗ್ರಸ್ಥಾನವನ್ನು ಅಲಂಕರಿಸುವುದು ಕಿಚ್ಚ ಸುದೀಪ್ (Actor Kiccha Sudeep) ಹಾಗೂ ನಟ ದರ್ಶನ್ (Actor Darshan).
ಮೆಜೆಸ್ಟಿಕ್ ಹಾಗೂ ಸ್ಪರ್ಶ ಸಿನಿಮಾಗಳಿಂದ ಹಿಡಿದು ಇಂದಿನ ಬ್ಲಾಕ್ಬಸ್ಟರ್ ಹಿಟ್ ಸಿನಿಮಾದವರೆಗೂ ಸತತ ಪ್ರಯತ್ನದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಈ ಇಬ್ಬರು ಸ್ಟಾರ್ ನಟರು ಒಂದಲ್ಲ ಒಂದು ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ (Social Media) ಬಾರಿ ವೈರಲ್ ಆಗುತ್ತಲೇ ಇರುತ್ತಾರೆ.
ಜೊತೆಗೆ ಇವರಿಬ್ಬರ ಅಭಿಮಾನಿಗಳು ಕೂಡ ಸ್ಟಾರ್ ವಾರ್ ಮಾಡುತ್ತಾ ಟ್ವಿಟ್ಟರ್, ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ನಂತಹ ಜಾಲಗಳಲ್ಲಿ ಪೈಪೋಟಿ ನಡೆಸುತ್ತಿರುತ್ತಾರೆ.
ಅದರಂತೀಗ ದರ್ಶನ್ ಹಾಗೂ ಸುದೀಪ್ ಇಬ್ಬರಲ್ಲಿ ಓದಿರುವುದು (Study) ಎಷ್ಟು ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಚಾಲೆಂಜಿಂಗ್ ಸ್ಟಾರ್ ದರ್ಶನ್
ಕಳೆದ ಕೆಲವು ದಿನಗಳ ಹಿಂದೆ ದರ್ಶನ್ ಅವರ ಕ್ರಾಂತಿ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾದ ಪ್ರಮೋಷನ್ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳ ಕುರಿತು ಮಾತನಾಡುವಾಗ ತಮ್ಮ ವಿದ್ಯಾಭ್ಯಾಸದ (Education) ವಿಚಾರವನ್ನು ಬಯಲು ಮಾಡಿದ ದರ್ಶನ್ ನಾನು ಓದಿದ್ದೆ 10ನೇ ತರಗತಿ ಎಂದರು.
ಹೌದು ಗೆಳೆಯರೇ “ನಾನು ಕೂಡ ಸರ್ಕಾರಿ ಶಾಲೆ ಹುಡುಗನೇ ಮೈಸೂರಿನಲ್ಲಿ (Mysore) ಓದಿದ್ದು ಮೊದಲು ಟೆರಸಿಯನ್ ಎಂಬ ಸ್ಕೂಲಿನಲ್ಲಿ ಓದಿದೆ. ಅನಂತರ ಜೆಎಸ್ಎಸ್ನಲ್ಲಿ ಒಂದು ವರ್ಷ ಹಾಗೂ ವೈಶಾಲಿಯಲ್ಲಿ ನನ್ನ ಹತ್ತನೇ ತರಗತಿ ವಿದ್ಯಾಭ್ಯಾಸವನ್ನು ಮುಗಿಸಿದೆ.
ಅದಾದ ಬಳಿಕ ನಮ್ಮ ತಂದೆಯವರು ಸಿನಿಮಾ ಬದುಕಿನಲ್ಲಿದ್ದ ಕಾರಣ ನನಗೂ ಅದರ ಮೇಲೆ ಒಲವು ಹೆಚ್ಚಾಗಿ ವಿದ್ಯಾಭ್ಯಾಸವನ್ನು ತೊರೆದು ಲೈಟ್ ಬಾಯ್ ಆಗಿ ಸಿನಿ ರಂಗ ಪ್ರವೇಶಿಸಿದೆ” ಎಂದರು. ಹೀಗೆ ಸ್ವತಃ ದರ್ಶನ್ ಅವರೇ ಹೇಳಿದ ಹಾಗೆ ಹತ್ತನೇ ತರಗತಿ ಓದಿದ ನಂತರ ಪಿಯುಸಿ ಸೇರಿಕೊಳ್ಳುತ್ತಾರೆ, ಓದಿನ ಮೇಲೆ ಹೆಚ್ಚಿನ ಆಸಕ್ತಿ ಬಾರದ ಕಾರಣ ಅದನ್ನು ಡಿಸ್ಕಂಟಿನ್ಯೂ ಮಾಡಿ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದರು.
ಕಿಚ್ಚ ಸುದೀಪ್
ಮೂಲತಹ ನಮ್ಮ ಕರ್ನಾಟಕದ ಶಿವಮೊಗ್ಗದವರಾದ (Shivamogga) ಸುದೀಪ್ ಅವರು ವಿದ್ಯಾಭ್ಯಾಸ (Education) ಮಾಡುವ ಸಲುವಾಗಿ ಬೆಂಗಳೂರಿಗೆ (Bangalore) ಬಂದರು. ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್ನಲ್ಲಿ ಕೈಗಾರಿಕಾ ಮತ್ತು ಉತ್ಪಾದನಾ ವಿಷಯಕ್ಕೆ ಸಂಬಂಧಿಸಿದ ಇಂಜಿನಿಯರಿಂಗ್ ಪದವಿಯನ್ನು (Engineering Degree) ಪಡೆದಿದ್ದಾರೆ. ಆನಂತರ ಸಿನಿಮಾಗಳ ಮೇಲೆ ಒಲವು ಹೆಚ್ಚಾದ ಕಾರಣ ಇಂಜಿನಿಯರಿಂಗ್ (Engineering) ಕ್ಷೇತ್ರದಲ್ಲಿ ಕೆಲಸಕ್ಕೆ ಹೋಗದೆ ಬಣ್ಣದ ಬದುಕಿನತ್ತ ತಮ್ಮ ಗಮನವನ್ನು ಹರಿಸಿದರು.
Education Background Of Kannada Actor Darshan and Kiccha Sudeep