ತನ್ನ ಗಂಡನ ಎರಡನೇ ಪತ್ನಿಗೆ ಬಾಣಂತನ ಮಾಡಿದ ನಟಿ ರೇಖಾ ದಾಸ್ ಕಷ್ಟದ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ! ಅಷ್ಟಕ್ಕೂ ಇವರ ಪತಿ ಯಾರು ಗೊತ್ತಾ?

ಸ್ನೇಹಿತರೆ, 80-90 ರ ದಶಕದಲ್ಲಿ ಕನ್ನಡ ಸಿನಿಮಾ ರಂಗವನ್ನು (Kannada Film Industry) ಪ್ರವೇಶ ಮಾಡಿದಂತಹ ಕಲಾವಿದರ ಸಂಖ್ಯೆ ಅಪಾರ, ಕೇವಲ ನಾಯಕ ನಾಯಕಿಯಾಗಿ ಮಾತ್ರವಲ್ಲದೆ ಪೋಷಕ ನಟ ನಟಿಯರಾಗಿ, ಸಹ ಕಲಾವಿದರಾಗಿ, ಕಳನಟರಾಗಿ ಕನ್ನಡ ಚಿತ್ರರಂಗಕ್ಕೆ (Kannada Movies) ಸಾಕಷ್ಟು ಅಪ್ರತಿಮ ಕಲಾವಿದರು ಪ್ರವೇಶ ಮಾಡಿ ಎಂದಿಗೂ ಮರೆಯಲಾಗದ ಸಿನಿಮಾಗಳನ್ನು ನೀಡಿದ್ದಾರೆ.
ಅಂತಹ ಕಲಾವಿದರ ಪಟ್ಟಿಯಲ್ಲಿ ಬರುವ ನಟಿ ರೇಖಾ ದಾಸ್ (Kannada Actress Rekha Das) ಇಂದಿಗೂ ಸೆಲೆಬ್ರಿಟಿಗಳ ಸಂದರ್ಶನಗಳನ್ನು (Interviews) ಮಾಡುತ್ತಾ ಸಣ್ಣಪುಟ್ಟ ಸೀರಿಯಲ್ಗಳಲ್ಲಿ (TV Serials) ಅಭಿನಯಿಸುತ್ತ ಚಿತ್ರರಂಗದಲ್ಲಿ ಆಕ್ಟಿವ್ ಇರುವ ಈ ನಟಿ.
ಆಗಾಗ ಮಾಧ್ಯಮಗಳಲ್ಲಿ ತಮ್ಮ ಜೀವನದಲ್ಲಿ ಎದುರಾದಂತಹ ಸಂಕಷ್ಟಗಳ ಕುರಿತು ಮಾಹಿತಿಯನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಹೀಗೆ ನಟಿ ರೇಖಾ ದಾಸ್ ವೃತ್ತಿ ಹಾಗೂ ವೈಯಕ್ತಿಕ ಬದುಕಿನಿಂದಾಗಿ ಎಷ್ಟೆಲ್ಲಾ ನೊಂದು ಬೆಂದಿದ್ದಾರೆ ಎಂಬುದನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.
ನಿಮಗೂ ಕೂಡ ಈ ಅದ್ಭುತ ನಟಿಯ ಲೈಫ್ ಸ್ಟೋರಿ (Life Story) ಕುರಿತು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ, ಆಗಿನ ಸಿನಿ ಪ್ರಪಂಚದಲ್ಲಿ ಉಮಾಶ್ರೀ ಅವರನ್ನು ಹೊರತುಪಡಿಸಿ ದೊಡ್ಡಮಟ್ಟದ ಬೇಡಿಕೆ ಸೃಷ್ಟಿಸಿಕೊಂಡಿದ್ದ ಮತ್ತೊಂದು ಪೋಷಕ ನಟಿ ಎಂದರೆ ಅದು ರೇಖಾ ದಾಸ್… ಮೂಲತಃ ನೇಪಾಳದವರಾದ ಇವರು ಕೆಲಸ ಹರಿಸಿ ಬೆಂಗಳೂರಿಗೆ ಬರುತ್ತಾರೆ. ಹೀಗೆ ನೋಡಲು ಬಹಳ ಸುಂದರವಾಗಿದ್ದ ರೇಖಾ ದಾಸ್ ಅವರಿಗೆ ಅವಕಾಶ ಕೊಡುತ್ತೇನೆ ಎಂದು ಮೋಸ ಮಾಡಿದ ನಿರ್ದೇಶಕ ನಿರ್ಮಾಪಕರ ಸಂಖ್ಯೆ ಕೂಡ ಅಪಾರವಾಗಿತ್ತು.
ಬಹಳನೇ ಕಷ್ಟದ ದಿನಗಳನ್ನು ಅನುಭವಿಸುತ್ತಿದ್ದಂತಹ ರೇಖಾ ದಾಸ್ ಸಿಕ್ಕ ಸಿಕ್ಕ ಎಲ್ಲಾ ಪಾತ್ರಗಳಲ್ಲಿಯೂ ನಟಿಸಲು ಶುರು ಮಾಡ್ತಾರೆ. ಇದೆ ವೇಳೆ ನಿರ್ದೇಶಕ – ನಟ ಓಂ ಪ್ರಕಾಶ್ ರಾವ್ ಅವರ ಮೇಲೆ ರೇಖಾದಾಸ್ ಅವರಿಗೆ ಮನಸಾಗುತ್ತದೆ. ಇಬ್ಬರು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಮದುವೆಯಾದ ಕೇವಲ ಒಂದು ವರ್ಷಗಳವರೆಗೂ ಮಾತ್ರ ಇವರ ಸಂಬಂಧ ಬಹಳ ಅದ್ಭುತವಾಗಿರುತ್ತದೆ.

ಇನ್ನು ಮಗಳು ಜನಿಸಿದ ಮೇಲೆ ಶುರುವಾದಂತಹ ಸಂಸಾರಿಕ ರಗಳೆ ಡೈವರ್ಸ್ ಹಂತಕ್ಕೆ ತಲುಪುತ್ತದೆ. ಹೌದು ಗೆಳೆಯರೇ ಕಾಲ ಕಳೆದಂತೆ ಓಂ ಪ್ರಕಾಶ್ ರಾವ್ ಅವರ ನಡವಳಿಕೆ ರೇಖಾ ದಾಸ್ ಅವರಿಗೆ ಸಹಿಸಲಾಗುತ್ತಿರಲಿಲ್ಲ. ಇನ್ನೂ ಕೆಲವು ಘಟನೆಗಳಲ್ಲಿ ಅವರು ತನ್ನ ಗಂಡನ ಎರಡನೇ ಹೆಂಡತಿಯರಿಗೆ ರೇಖಾ ದಾಸ್ ಬಾಣಂತನ ಮಾಡುವಂತಹ ಸಂದರ್ಭಗಳು ಎದುರಾಗಿದ್ದವಂತೆ.
ಈ ಎಲ್ಲವನ್ನು ಸಹಿಸಿಕೊಳ್ಳುವಷ್ಟು ಸಹಿಸಿಕೊಂಡು ಆನಂತರ ರೇಖಾದಾಸ್ ತಮ್ಮ ಮಗಳನ್ನು ಕರೆದುಕೊಂಡು ಮನೆ ಬಿಟ್ಟು ಹೊರ ಬರುತ್ತಾರೆ. ಹೆಂಡತಿ ಮಗಳು ಎಲ್ಲೋದ್ಳು ಎಂಬುದನ್ನು ಚಿಂತಿಸಿದೆ ಓಂ ಪ್ರಕಾಶ್ ರಾವ್ ತಮ್ಮ ಎರಡನೇ ಹೆಂಡತಿಯರೊಂದಿಗೆ ಸುಖವಾಗಿದ್ದರು. ಇತ್ತ ರೇಖಾದಾಸ್ ಮಗಳನ್ನು ಓದಿಸಿ ದೊಡ್ಡವಳನ್ನಾಗಿ ಮಾಡುವವರೆಗೂ ಪಟ್ಟಂತಹ ಕಷ್ಟ ಅಷ್ಟಿಷ್ಟಲ್ಲ.
ಇದು ಸ್ವತಃ ಕೆಲವು ಸಂದರ್ಶನಗಳಲ್ಲಿ ರೇಖಾ ದಾಸ್ ಅವರೇ ಹಂಚಿಕೊಂಡ ಮಾಹಿತಿಯಾಗಿರುತ್ತದೆ, ಇಲ್ಲಿ ನೀಡಿರುವ ಮಾಹಿತಿ ಯಾರ ಮನಸ್ಸನ್ನು ನೋಯಿಸುವ ದೃಷ್ಟಿಯಿಂದಲ್ಲ…
Kannada Actress Rekha Das Unknow Facts of Rel Life Story



