ಕೈಮುಗಿತೀನಿ ಅವಕಾಶ ಕೊಡ್ರಿ ಎಂದು ಟೆನ್ನಿಸ್ ಕೃಷ್ಣ ಕಣ್ಣೀರು! ಅವಕಾಶಗಳಿಲ್ಲದೆ ಒಪ್ಪತ್ತು ಊಟಕ್ಕಾಗಿ ಪರದಾಡುತ್ತಿರುವುದು ನೋಡಿದ್ರೆ ಕರುಳು ಹಿಂಡಿದಂತಾಗುತ್ತೇ!

ಟೆನ್ನಿಸ್ ಕೃಷ್ಣ ಕನ್ನಡಿಗರಿಗೆ ನಗುವಿನ ಕಚಗುಳಿ ಇಡುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಟೆನ್ನಿಸ್ ಕೃಷ್ಣ ಅವರಿಗೆ ದೊಡ್ಡ ಹೆಸರು ತಂದು ಕೊಟ್ಟಂತಹ ಸಿನಿಮಾ ಎಂದರೆ ಅಪ್ಪ ನಂಜಪ್ಪ ಮಗ ಗುಂಜಪ್ಪ, ಆಗಿನ ಕಾಲದಲ್ಲಿ ಇವರ ಬೇಡಿಕೆ ಎಷ್ಟಿತ್ತೆಂದರೆ ಹೀರೋ ಆಗುವಂತಹ ರೇಂಜಿನವರೆಗೂ ಟೆನಿಸ್ ಕೃಷ್ಣ ತಲುಪಿರುತ್ತಾರೆ.

ಉತ್ತರ ಕರ್ನಾಟಕದವರಾದ ಟೆನ್ನಿಸ್ ಕೃಷ್ಣ (Kannada Actor Tennis Krishna) ಅವರು ತಮ್ಮ ತಂದೆ ತೀರಿಹೋದ ಬಳಿಕ ಮನೆಯ ಜವಾಬ್ದಾರಿಯನ್ನು ತಮ್ಮ ಮೇಲೆ ಹೊತ್ತುಕೊಂಡವರು, ಸಿನಿ ಬದುಕನ್ನು ಆಯ್ಕೆ ಮಾಡಿಕೊಂಡಿರುವ ಕೃಷ್ಣ ಅವರು ಟೆನ್ನಿಸ್ ಆಡುತ್ತಿದ್ದ ಕಾರಣ ಇವರಿಗೆ ಟೆನಿಸ್ ಕೃಷ್ಣ ಎಂಬ ಹೆಸರು ಬಂತು ಎಂಬ ಮಾಹಿತಿ ಇದೆ.

ಹೀಗೆ ಕನ್ನಡದಲ್ಲಿ (Kannada Movie) ತೆರೆಕಂಡ ರಾಜ ಕೆಂಪು ರೋಜಾ ಎಂಬ ಸಿನಿಮಾದ ಮೂಲಕ ಪ್ರಪ್ರಥಮ ಬಾರಿಗೆ ಟೆನಿಸ್ ಕೃಷ್ಣ ತೆರೆ ಮೇಲೆ ಕಾಣಿಸಿಕೊಂಡರು. ಆನಂತರ ಡಾ. ರಾಜಕುಮಾರ್ ಅವರೊಂದಿಗೆ ‘ಜೀವನ ಚೈತ್ರ’ ಎಂಬ ಸಿನಿಮಾದಲ್ಲಿ ನಟಿಸಿ ಜನರ ಮೆಚ್ಚುಗೆ ಪಡೆದುಕೊಂಡಂತಹ ಟೆನ್ನಿಸ್ ಅವರಿಗೆ ಆರಂಭಿಕ ದಿನಗಳಲ್ಲಿ ಅವಕಾಶಗಳ ಸುರಿಮಳೆಯೇ ಹರಿದು ಬಂತು.

ಹುಟ್ಟಿದ ಮೂರೇ ತಿಂಗಳಿಗೆ ತಂದೆಯನ್ನು ಕಳೆದುಕೊಂಡ ನಟ ದೇವರಾಜ್ ಬಾಲ್ಯದಲ್ಲೆ ಎಷ್ಟೆಲ್ಲಾ ಕಷ್ಟ ಅನುಭವಿಸಿದ್ರು ಗೊತ್ತಾ? ಒಪ್ಪತ್ತು ಊಟಕ್ಕೂ ಪರದಾಡಿದ ಅವರು ಚಿತ್ರರಂಗಕ್ಕೆ ಬಂದಿದ್ದೇಗೆ

ಕೈಮುಗಿತೀನಿ ಅವಕಾಶ ಕೊಡ್ರಿ ಎಂದು ಟೆನ್ನಿಸ್ ಕೃಷ್ಣ ಕಣ್ಣೀರು! ಅವಕಾಶಗಳಿಲ್ಲದೆ ಒಪ್ಪತ್ತು ಊಟಕ್ಕಾಗಿ ಪರದಾಡುತ್ತಿರುವುದು ನೋಡಿದ್ರೆ ಕರುಳು ಹಿಂಡಿದಂತಾಗುತ್ತೇ! - Kannada News

ಸಿಕ್ಕಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡ ಟೆನ್ನಿಸ್ ಕೃಷ್ಣ ಕನ್ನಡಿಗರಿಗೆ ನಗುವಿನ ಕಚಗುಳಿ ಇಡುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಟೆನ್ನಿಸ್ ಕೃಷ್ಣ ಅವರಿಗೆ ದೊಡ್ಡ ಹೆಸರು ತಂದು ಕೊಟ್ಟಂತಹ ಸಿನಿಮಾ ಎಂದರೆ ಅಪ್ಪ ನಂಜಪ್ಪ ಮಗ ಗುಂಜಪ್ಪ, ಆಗಿನ ಕಾಲದಲ್ಲಿ ಇವರ ಬೇಡಿಕೆ ಎಷ್ಟಿತ್ತೆಂದರೆ ಹೀರೋ ಆಗುವಂತಹ ರೇಂಜಿನವರೆಗೂ ಟೆನಿಸ್ ಕೃಷ್ಣ ತಲುಪಿರುತ್ತಾರೆ. ಅವರ ನಟನೆ, ಬಾಡಿ ಲ್ಯಾಂಗ್ವೇಜ್, ಡೈಲಾಗ್ ಡೆಲಿವರಿ, ಅದರಲ್ಲೂ ಮಾರಮ್ಮನ್ ಡಿಸ್ಕೊ ಡೈಲಾಗನ್ನು ಇಂದಿಗೂ ಮರೆಯಲು ಸಾಧ್ಯವೇ ಇಲ್ಲ ಬಿಡಿ.

ಇನ್ನು ಆಗಿನ ಕಾಲದಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರು ಯಾರಿದ್ರೋ ಅವರೆಲ್ಲರೊಂದಿಗೆ ಅಭಿನಯಿಸಿದಂತಹ ಖ್ಯಾತಿ ಟೆನ್ನಿಸ್ ಕೃಷ್ಣ ಅವರದು.. ಗಡಿಬಿಡಿ ಅಳಿಯ, ಕೌರವ, ತುತ್ತ ಮುತ್ತ, ಯಜಮಾನ, ಸೂರಪ್ಪ, ದಿಗ್ಗಜರು, ಮೇಕಪ್, ಲವಕುಶ, ತರ್ಲೆ ನನ್ ಮಗ ಕಲಿಯುಗದ ಸೀತೆ, ವೀರಮದಕರಿ, ಬುಲ್ ಬುಲ್, ಉಪ್ಪಿಟ್ಟುದಂತಹ ಸಿನಿಮಾಗಳಲ್ಲಿ ಟೆನ್ನಿಸ್ ಕೃಷ್ಣ ಸಾಲು ಸಾಲು ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಸುನಿಲ್ ಅವರನ್ನು ಕಳೆದುಕೊಂಡ ಮೇಲೆ ಮಾಲಾಶ್ರೀ ಅವರ ಬದುಕು ಹೇಗಿತ್ತು ಗೊತ್ತಾ? ಆಕೆ ಅನುಭವಿಸಿದ ಕಷ್ಟ ಯಾರಿಗೂ ಬೇಡ!

ಇಂತಹ ನಟನಿಗೆ ಇತ್ತೀಚಿನ ದಿನಗಳಲ್ಲಿ ತೀರಾ ತೀರಾ ಅವಕಾಶಗಳು ಕಡಿಮೆಯಾಗಿ ಬಿಟ್ಟಿದ್ದು, ಕಮಿಷನ್ ಕೊಡ್ತೀನಿ ದಯವಿಟ್ಟು ಯಾವುದಾದರೂ ಒಂದು ಸಿನಿಮಾದಲ್ಲಿ ಅವಕಾಶ ಕೊಡಿ ಎಂದು ಯುವ ನಟರನ್ನು ಟೆನಿಸ್ ಕೃಷ್ಣ ಕೈ ಮುಗಿದು ಬೇಡಿಕೊಳ್ಳುವಂತಹ ಸ್ಥಿತಿ ಎದುರಾಗಿದೆ. ಇನ್ನು ಟೆನಿಸ್ ಕೃಷ್ಣ ಅವರಿಗೆ ಅವಕಾಶಗಳು ಕೈ ತಪ್ಪಿ ಹೋಗಲು ಮುಖ್ಯ ಕಾರಣ ದೊಡ್ಡಣ್ಣ ಹಾಗೂ ಇವರ ಸ್ನೇಹ ಮುರಿದುಬಿದ್ದದ್ದು.

ಹೌದು ಗೆಳೆಯರೇ ಆಗಿನ ಕಾಲದಲ್ಲಿ ಟೆನಿಸ್ ಕೃಷ್ಣ ಹಾಗೂ ದೊಡ್ಡಣ್ಣ ಅವರು ಒಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಹೊರ ಬಂದರೆ ಸಾಕು ಅಲ್ಲಿ ಪೈಸಾ ವಸೂಲ್ ಮನೋರಂಜನೆ ಇರುವುದು ಪಕ್ಕ ಎಂದು ಊಹಿಸುತ್ತಿದ್ದರು.

14ನೇ ವರ್ಷಕ್ಕೆ ಮದುವೆಯಾದ ನಟಿ ರಾಧಿಕಾ ಅವರ ಮೊದಲ ಪತಿ ಯಾರು? ಅತಿ ಚಿಕ್ಕ ವಯಸ್ಸಿನಲ್ಲೇ ಎಷ್ಟೆಲ್ಲಾ ಕಷ್ಟ ಅನುಭವಿಸಿದ್ರು ಗೊತ್ತಾ?

Kannada Actor Tennis Krishnaಇಷ್ಟು ದೊಡ್ಡ ಮಟ್ಟಕ್ಕೆ ಇವರಿಬ್ಬರ ಕಾಂಬಿನೇಷನ್ ಫೇಮಸ್ ಆಗಿತ್ತು. ಇಂತಹ ಸಂದರ್ಭದಲ್ಲಿ ದೊಡ್ಡಣ್ಣ ಶೂಟಿಂಗ್ ಸಮಯದಲ್ಲಿ ಟೆನಿಸ್ ಕೃಷ್ಣ ಅವರಿಗೆ ಕಪಾಳಕ್ಕೆ ಹೊಡೆಯಬೇಕಾದ ಸೀನ್ ಇದ್ದಾಗ ಜೋರಾಗಿ ಹೊಡೆದುಬಿಡುತ್ತಿದ್ದರಂತೆ.

ಇದನ್ನು ಪ್ರಶ್ನೆ ಮಾಡಿದ್ದಾಗ ಇವರಿಬ್ಬರ ನಡುವೆ ಸಣ್ಣ ಕಿರಿಕಿರಿ ಉಂಟಾಗಿತ್ತು ಆನಂತರ ದೊಡ್ಡಣ್ಣ ಹಾಗೂ ಟೆನಿಸ್ ಕೃಷ್ಣ ವೈರಿಗಳಾಗಿದ್ದಾರೆ ಇನ್ಮುಂದೆ ಒಟ್ಟಿಗೆ ಕಾಣಿಸಿಕೊಳ್ಳುವುದಿಲ್ಲ ಎಂಬ ಸುದ್ದಿ ಹರಿದಾಡಿದವು.

ಬಳುಕುವ ಬಳ್ಳಿಯಂತ್ತಿದ್ದ ನಟಿ ರಕ್ಷಿತಾ ನಟನೆಯಿಂದ ದೂರ ಉಳಿದಿದ್ದು ಯಾಕೆ? ದಪ್ಪ ಆಗಿದ್ದರಿಂದ ಅವಕಾಶವನ್ನೇ ಕಳೆದುಕೊಂಡ್ರ?

ಈ ಹಂತದಲ್ಲಿ ಟೆನ್ನಿಸ್ ಕೃಷ್ಣ ಮೊದಲ ಸೋಲನ್ನು ಕಾಣುತ್ತಾರೆ. ಅನಂತರ ಟೆನಿಸ್ ಕೃಷ್ಣ ತಮ್ಮ ಉತ್ತರ ಕರ್ನಾಟಕದಲ್ಲಿ ದೊಡ್ಡ ಮನೆಯನ್ನು ಕಟ್ಟಿಸಿ ಬಿಟ್ಟಿದ್ದಾರೆ ಅಲ್ಲದೆ ಈತ ಕುಡಿತಕ್ಕೆ ದಾಸನಾಗಿದ್ದಾನೆ ಇವನನ್ನು ಸಿನಿಮಾಗೆ ಹಾಕೋಬೇಡಿ ಎಂದು ಕಾಣದ ಕೈಗಳು ಇಲ್ಲಸಲ್ಲದ ಸುದ್ದಿಯನ್ನು ಹಬ್ಬಿಸಿದರು.

ಇದರ ಜೊತೆಗೆ ಒಂದು ಸಿನಿಮಾಗೆ 35ರಿಂದ 40ಸಾವಿರ ಸಂಭಾವನೆ (Remuneration) ಡಿಮ್ಯಾಂಡ್ ಮಾಡ್ತಿದ್ದಾರೆ, ಇವರ ಬದಲು ಬೇರೆ ಯಾರನ್ನಾದರೂ ಹಾಕಿಕೊಳ್ಳೋಣ ಎಂಬ ಅಪಪ್ರಚಾರ ಮಾಡಿ ಅವಕಾಶಗಳು ಕೈತಪ್ಪಿ ಹೋಗುವಂತೆ ಕೆಲ ಕಿಡಿಗೇಡಿಗಳು ಮಾಡಿದರು.

ಇಂತಹ ಸಂದರ್ಭದಲ್ಲಿ ಅವರ ವೈಯಕ್ತಿಕ ಬದುಕಿನಲ್ಲೂ ಸಾಕಷ್ಟು ಏರುಪೇರುಗಳಾದವು. ಹೌದು ಗೆಳೆಯರೇ ಟೆನ್ನಿಸ್ ಕೃಷ್ಣ ಹಗಲು ರಾತ್ರಿ ಏನ್ನದೆ ದುಡಿದ ದುಡ್ಡಿನಲ್ಲಿ ಕಟ್ಟಿದ ಮನೆಯನ್ನು ಅವರ ತಮ್ಮ ಹೊಡೆದು ಬಡೆದು ಕಿತ್ತುಕೊಂಡು ಬಿಡುತ್ತಾರೆ.

ತಲೆ ಬಾಚ್ಕೋಳಿ ಪೌಡ್ರ್ ಹಾಕ್ಕೊಳ್ಳಿ.. ರಂಗಾಯಣ ರಘು ಅವರನ್ನು ಬಣ್ಣದ ಲೋಕ ಕೈಬಿಟ್ಟ ಮೇಲೆ ಅವರ ಸ್ಥಿತಿ ಏನಾಗಿದೆ ಗೊತ್ತಾ? ಅವಕಾಶಗಳೇ ಇಲ್ಲದಾಯ್ತ ಪಾಪ

ಅಲ್ಲದೆ ಟೆನಿಸ್ ಕೃಷ್ಣ ಅವರ ಪತ್ನಿಯನ್ನು ಕೊಲೆ ಮಾಡುವ ಪ್ರಯತ್ನಕ್ಕೂ ಬಂದುಬಿಡುತ್ತಾರೆ. ಹೀಗೆ ಒಂದು ಕಡೆ ಸಿನಿಮಾಗಳಿಂದ ಒತ್ತಡ ಮತ್ತೊಂದು ಕಡೆ ವೈಯಕ್ತಿಕ ಬದುಕಿನಲ್ಲಿಯೂ ಸಾಕಷ್ಟು ಸಂಕಷ್ಟ. ಈ ಎಲ್ಲವನ್ನು ಎದುರಿಸುತ್ತಾ ಬಂದಿರುವ ಟೆನ್ನಿಸ್ ಕೃಷ್ಣ ಈಗಲೂ ಕೆಲಸ ಇಲ್ಲದೆ ಉಳಿದುಕೊಳ್ಳಲು ಸ್ವಂತ ಮನೆ ಇಲ್ಲದೆ ಒಪ್ಪತ್ತು ಊಟಕ್ಕಾಗಿಯೂ ಪರದಾಡುತ್ತಿದ್ದಾರೆ.

ಕಳೆದ ಕೆಲವು ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣದ ಲೈವ್ ಬಂದು ಕೈಮುಗಿತೀನಿ ಅವಕಾಶ ಕೊಡ್ರಿ ಎಂದು ಟೆನಿಸ್ ಕೃಷ್ಣ ಕಣ್ಣೀರು ಹಾಕಿದರು. ಈ ಎಲ್ಲವನ್ನು ಗಮನಿಸುತ್ತಿರುವಂತಹ ಕನ್ನಡ ಸಿನಿಮಾ ರಂಗ (Kannada Film Industry) ಹಿರಿಯ ಪ್ರತಿಭೆಗಳಿಗೆ ಅವಕಾಶ ನೀಡಿ ಪ್ರೋತ್ಸಾಹಿಸಬೇಕೆಂದು ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ.

Unknown Facts of Kannada Actor Tennis Krishna Real Life Story

Follow us On

FaceBook Google News

Unknown Facts of Kannada Actor Tennis Krishna Real Life Story