ಹುಟ್ಟಿದ ಮೂರೇ ತಿಂಗಳಿಗೆ ತಂದೆಯನ್ನು ಕಳೆದುಕೊಂಡ ನಟ ದೇವರಾಜ್ ಬಾಲ್ಯದಲ್ಲೆ ಎಷ್ಟೆಲ್ಲಾ ಕಷ್ಟ ಅನುಭವಿಸಿದ್ರು ಗೊತ್ತಾ? ಒಪ್ಪತ್ತು ಊಟಕ್ಕೂ ಪರದಾಡಿದ ಅವರು ಚಿತ್ರರಂಗಕ್ಕೆ ಬಂದಿದ್ದೇಗೆ
ಡೈನಾಮಿಕ್ ಹೀರೋ ದೇವರಾಜ್ ಸಮಸ್ಯೆಗಳ ಸಾಗರದಿಂದ ಹೊರಬಂದು ಸಿನಿ ಬದುಕಿನಲ್ಲಿ ತಮ್ಮ ಪಯಣವನ್ನು ಕಟ್ಟಿಕೊಂಡದ್ದು ಹೇಗೆ? ಬಾಲ್ಯದಲ್ಲಿ ಎಷ್ಟೆಲ್ಲಾ ಕಷ್ಟ ನೋವು ಸಂಕಟವನ್ನು ಅನುಭವಿಸಿದ್ದರು ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.
ಸ್ನೇಹಿತರೆ, ನಟ ದೇವರಾಜ್ (Actor Devaraj) ಅವರ ಹೆಸರು ಕೇಳುತ್ತಿದ್ದ ಹಾಗೆ ಅದ್ಭುತ ಬಾಡಿ ಲ್ಯಾಂಗ್ವೇಜ್ ಕಂಚಿನ ಕಂಠ ಎಂತಹ ಪಾತ್ರ ನೀಡಿದರು ಅದರೊಳಗೆ ಪರಕಾಯ ಪ್ರವೇಶ ಮಾಡಿ ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದಂತಹ ಪರಿ ಎಲ್ಲವೂ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ. ಕನ್ನಡ ಚಿತ್ರರಂಗಕ್ಕೆ (Kannada Film Industry) ಅವರ ಕೊಡುಗೆ ಅಪಾರ ಎಂದರೆ ತಪ್ಪಾಗಲಾರದು.
ಹೀಗಿರುವಾಗ ಡೈನಾಮಿಕ್ ಹೀರೋ ದೇವರಾಜ್ (Dynamic Hero Devaraj) ಸಮಸ್ಯೆಗಳ ಸಾಗರದಿಂದ ಹೊರಬಂದು ಸಿನಿ ಬದುಕಿನಲ್ಲಿ ತಮ್ಮ ಪಯಣವನ್ನು ಕಟ್ಟಿಕೊಂಡದ್ದು ಹೇಗೆ?
ಬಾಲ್ಯದಲ್ಲಿ ಎಷ್ಟೆಲ್ಲಾ ಕಷ್ಟ ನೋವು ಸಂಕಟವನ್ನು ಅನುಭವಿಸಿದ್ದರು ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ. ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಮೂಲತಃ ಮೈಸೂರಿನವರಾದ (Mysore) ದೇವರಾಜ್ ಅವರು ರಾಮಚಂದ್ರಪ್ಪ ಮತ್ತು ಲಿಂಗಮ್ಮ ದಂಪತಿಗೆ 20ನೇ ತಾರೀಕು ಸೆಪ್ಟೆಂಬರ್ 1953 ರಂದು ಜನಿಸಿದರು. ಹೀಗೆ ಮನೆಯಲ್ಲಿ ಗಂಡು ಮಗು ಜನಿಸಿದ ಮೂರೇ ತಿಂಗಳಿಗೆ ಐಟಿಸಿ ಕಾರ್ಖಾನೆ ಒಂದರಲ್ಲಿ ಕೆಲಸ ಮಾಡುತ್ತಿದ್ದಂತಹ ಅವರ ತಂದೆ ರಾಮಚಂದ್ರಪ್ಪನವರು ಮಲೇರಿಯಾ ಕಾಯಿಲೆಯಿಂದಾಗಿ ಇಹಲೋಕ ತ್ಯಜಿಸಿದರು.
ಕೇವಲ ಮೂರು ತಿಂಗಳ ಮಗುವಾಗಿದ್ದಾಗಲೇ ತಮ್ಮ ತಂದೆಯನ್ನು ಕಳೆದುಕೊಂಡಂತಹ ದೇವರಾಜ್ ಅವರು ಬಾಲ್ಯದಿಂದಲೂ (Childhood) ಸಾಕಷ್ಟು ಕಷ್ಟ ನೋವನ್ನು ಅನುಭವಿಸಿದಂತಹ ನಟ. 1976ರಲ್ಲಿ ಮನೆಯಲ್ಲಿನ ಆರ್ಥಿಕ ಸಂಕಟವನ್ನು ನೋಡಲಾಗದೆ ದೇವರಾಜ್ ಅವರು ಎಚ್ಎಂಟಿಯ ವಾಚ್ ಕಂಪನಿಯಿಂದ (HMT Watch Company) ಅತಿ ಚಿಕ್ಕ ವಯಸ್ಸಿಗೆ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.
ಹೀಗೆ ಕೇವಲ ಒಂಬತ್ತು ವರ್ಷ ಹುಡುಗನಿದ್ದಾಗಲೇ ದುಡಿಯಲು (Earning) ಪ್ರಾರಂಭ ಮಾಡಿದ ದೇವರಾಜ್ ಅವರು ಸಣ್ಣಪುಟ್ಟ ಕೆಲಸದಿಂದ (Jobs) ಹಿಡಿದು ಸಿಕ್ಕ ಸಿಕ್ಕ ಎಲ್ಲಾ ವೃತ್ತಿಯನ್ನು ಮಾಡುತ್ತ ಹಣ ಸಂಪಾದಿಸಿ ತಮ್ಮ ತಾಯಿಗೆ ತಂದು ಕೊಡುತ್ತಿದ್ದರು.
ಇಂತಹ ದೇವರಾಜ್ ಅವರಿಗೆ ಸಿನಿಮಾ ರಂಗದ (Kannada Movie) ಬಣ್ಣ ಅಂಟಿಕೊಂಡಿದ್ದು ತ್ರಿಶೂಲ ಎಂಬ ಸಿನಿಮಾದ ಮೂಲಕ. ಹೌದು ಗೆಳೆಯರೇ ಸಹ ನಟನಾಗಿ ಈ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದ ದೇವರಾಜ್ ಅವರು ಮಳವಳ್ಳಿ ಸರ್ಕಲ್ ಎಂಬ ಚಿತ್ರದ ಮೂಲಕ ತಮ್ಮ ಗಮನಾರ್ಹ ಅಭಿನಯದಿಂದಾಗಿ ಎಲ್ಲರ ಮನಸ್ಸನ್ನು ಗೆದ್ದರು.
ಅನಂತರ ಹತ್ಯಾಕಾಂಡ ಎಂಬ ಚಿತ್ರದಲ್ಲಿ ಪ್ರಪ್ರಥಮ ಬಾರಿಗೆ ನಾಯಕನಾಗುವ ಅವಕಾಶ ಗಿಟ್ಟಿಸಿಕೊಂಡು ಪ್ರೀತಿ, ಆಗಂತುಕ, ರಾವಣ ರಾಜ್ಯ, ಬದುಕು ಮುಕ್ತ, ಸಂಗ್ರಾಮ, ಆಪತ್ಬಾಂಧವ, ಅರ್ಜುನ್, ಕೆಂಡದ ಗಂಡು, ಅಂಜದಗಂಡು, ಕೃಷ್ಣ ರುಕ್ಮಿಣಿ, ದಾದಾ, ರಾಮಣ್ಣ ಶಾಮಣ್ಣ, ಸಾಂಗ್ಲಿಯಾನ, ಜನನಾಯಕ ಮತ್ತು ನೀ ನನ್ನ ದೈವ ಸೇರಿದಂತೆ 150ಕ್ಕೂ ಅಧಿಕ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಇನ್ನು ತಮ್ಮದೇ ಕ್ಷೇತ್ರದಲ್ಲಿ ಚಂದ್ರಲೇಖ ಎಂಬ ಹುಡುಗಿಯನ್ನು ಮೊದಲ ಬಾರಿಗೆ ನೋಡಿ ಆಕೆಯ ಮೇಲೆ ಮನಸಾಗಿ ಸ್ವತಃ ದೇವರಾಜ್ ಅವರೇ ಪ್ರೇಮ ನಿವೇದನೆ ಮಾಡುತ್ತಾರೆ.
ಹೀಗೆ 1986ರಲ್ಲಿ ಇಬ್ಬರು ಮನೆಯವರ ಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ (Marriage) ಕಾಲಿಟ್ಟರು. ಅಷ್ಟೇ ಅಲ್ಲದೆ 1992ರಲ್ಲಿ ಗಂಡ ಹೆಂಡತಿ ಇಬ್ಬರು ಕೆಂಡದ ಮಳೆ ಎಂಬ ಚಿತ್ರದಲ್ಲಿ ಒಟ್ಟಾಗಿ ಅಭಿನಯಿಸಿ ಬಹುದೊಡ್ಡ ಮಟ್ಟದ ಸದ್ದು ಮಾಡಿದರು.
ಈ ದಂಪತಿಗಳಿಗೆ ಪ್ರಜ್ವಲ್ ಮತ್ತು ಪ್ರಣಂ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದು ಅವರು ಕೂಡ ತಮ್ಮ ತಂದೆ ತಾಯಿಯಂತೆಯ ಸಿನಿಮಾ ರಂಗದಲ್ಲಿ (Sandalwood Cinema) ಸಕ್ರಿಯರಾಗಿದ್ದಾರೆ.
Interesting Facts and Cinema Journey of Kannada Actor Devaraj