ಸ್ನೇಹಿತರೆ, ನಟಿ ಮೀನಾ (Actress Meena) ಅವರ ಹೆಸರು ಕೇಳುತ್ತಿದ್ದ ಹಾಗೆ ಸಾಕಷ್ಟು ಜನ ಕನ್ನಡಿಗರಿಗೆ (Kannada Cinema) ಕಿಚ್ಚನ ಸ್ವಾತಿಮುತ್ತು ಸಿನಿಮಾ ನೆನಪಿಗೆ ಬಂದುಬಿಡುತ್ತದೆ. ಎಲ್ಲಾ ಭಾಷೆಯ ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡ ಈ ನಟಿ 80ರ ದಶಕದಲ್ಲಿ ತಮಿಳು, ತೆಲುಗು, ಮಲಯಾಳಂ, ಕನ್ನಡ ಹಾಗೂ ಹಿಂದಿ ಸೇರಿದಂತೆ ಎಲ್ಲಾ ಭಾಷೆಗಳ ಸಿನಿಮಾ ರಂಗದಲ್ಲಿಯೂ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದರು.
ನಟನೆಯ ಜೊತೆಗೆ ಟಿವಿ ನಿರೂಪಗಾರ್ತಿಯಾಗಿ, ಸಾಂದರ್ಭಿಕ ಡಬ್ಬಿಂಗ್ ಆರ್ಟಿಸ್ಟ್ ಆಗಿ, ಹಿನ್ನೆಲೆ ಗಾಯಕಿಯಾಗಿಯೂ ಪ್ರಖ್ಯಾತಿ ಪಡೆದಿದ್ದಂತಹ ಮೀನಾ ಅವರು ಒಂದು ಸಿನಿಮಾದಲ್ಲಿ ನಟನೆ ಮಾಡಲು ಆಗಿನ ಕಾಲಕ್ಕೆ ಪಡೆಯುತ್ತಿದ್ದ ಸಂಭಾವನೆ ಎಷ್ಟು? (Actress Meena Remuneration) ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.
ನಿಮಗೂ ಕೂಡ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ತಮ್ಮ ಅತಿ ಅದ್ಭುತ ಅಭಿನಯದ ಚಾಪಿನಿಂದಾಗಿ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಬರೋಬ್ಬರಿ ಮೂರು ದಶಕಗಳಿಂದ ಸಕ್ರಿಯರಾಗಿರುವ ಇವರು 1982 ರಲ್ಲಿ ತೆರೆಕಂಡ ತಮಿಳಿನ ನೆಂಜಂಗಲ್ ಎಂಬ ಸಿನಿಮಾದಲ್ಲಿ ಬಾಲನಟಿಯಾಗಿ ಕಾಣಿಸಿಕೊಳ್ಳುವ ಮೂಲಕ ಬಾಲ ನಟಿಯಾಗಿ ಶಿವಾಜಿ ಗಣೇಶನ್ ಅವರೊಂದಿಗೆ ಅಭಿನಯಿಸುವಂತಹ ಅವಕಾಶವನ್ನು ಹೆಚ್ಚಿಸಿಕೊಂಡರು. ಇಲ್ಲಿಂದ ಶುರುವಾದ ಇವರ ಪಯಣ ರಜನಿಕಾಂತ್, ಮುಮ್ಮುಟ್ಟಿರವರಂತಹ ದಿಗ್ಗಜ ನಟರವರೆಗೂ ಮುಂದುವರೆಯಿತು.
ಹೆಸರುವಾಸಿಯಾಗಿದ್ದ ನಟಿ ಮೀನಾ ಅವರು ನಟ ಮನೋಜ್ ಅವರಿಂದ ಕೆಲವು ಆಲ್ಬಮ್ ಹಾಡುಗಳು ಹಿನ್ನೆಲೆ ಗಾಯಕಿಯಾಗಿ ಕೆಲಸ ಮಾಡಿದರು. ಇನ್ನು ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಗುರುತಿಸಿಕೊಂಡಿದ್ದ ಮೀನಾ ಪದ್ಮಪ್ರಿಯ ಜಾನಕಿ ರಾಮನ್ ಎಂಬ ನಟಿಗೆ ಧ್ವನಿಯಾಗಿದ್ದರು.
ತಮಿಳು ಸಿನಿಮಾ ರಂಗದ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿರುವ ಇವರು ಕನ್ನಡದ (Kannada Movies) ಮೊಮ್ಮಗ, ಚೆಲುವ, ಪುಟ್ನಂಜ, ಗ್ರಾಮದೇವತೆ, ಮಹಾಸಾಧ್ವಿ ಮಲ್ಲಮ್ಮ ಎಂಬಂತಹ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಕನ್ನಡಿಗರ ಹೃದಯ ಗೆದ್ದರು.
ಹೀಗೆ ಒಟ್ಟಾರೆಯಾಗಿ 200ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಮೀನಾ, ಜುಲೈ 12ನೇ ತಾರೀಕು 2009ನೇ ಇಸವಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆದಂತಹ ವಿದ್ಯಾಸಾಗರ್ ಎಂಬುವವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಈ ದಂಪತಿಗೆ ನೈನಿಕ ಎಂಬ ಮುದ್ದು ಮಗಳಿದ್ದು ವಿದ್ಯಾಸಾಗರ್ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದಾಗಿ ಕಳೆದ ವರ್ಷ ಜೂನ್ 28ರಂದು ಇಹಲೋಕ ತ್ಯಜಿಸಿದರು. ಆನಂತರ ಈ ನಟಿಯ ಹೆಸರು ತಮಿಳುನಾಡು ಧನುಷ್ ಅವರೊಂದಿಗೆ ತಳುಕು ಹಾಕಿಕೊಂಡಿದ್ದು, ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.
ಎಲ್ಲಾ ಭಾಷೆಗಳ ಸಿನಿಮಾದಲ್ಲಿಯೂ ಅಭಿನಯಿಸಿರುವ ಮೀನಾ ಅವರು ಒಂದು ಸಿನಿಮಾದಲ್ಲಿ ಅಭಿನಯಿಸಲು ಆಗಿನ ಕಾಲಕ್ಕೆ ಬರೋಬ್ಬರಿ 60,000 ದಿಂದ ಒಂದು ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದರಂತೆ.
Putnanja Movie Actress Meena Remuneration For Kannada Movies
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.