ಸಿನಿಮಾ ರಂಗ ಬಿಟ್ಟು ಕಾರ್ ಡ್ರೈವರ್ ಆಗಲು ನಿರ್ಧರಿಸಿದ್ದರಂತೆ ವಿಷ್ಣುವರ್ಧನ್! ಆ ನಿರ್ಧಾರಕ್ಕೆ ಬರಲು ಕಾರಣ ಏನು ಗೊತ್ತೆ?

ವಿಷ್ಣುವರ್ಧನ್ ಅವರು ಸಿನಿಮಾಗಳ ಅವಕಾಶವಿಲ್ಲದೆ ಇದ್ದಂತಹ ಸಂದರ್ಭದಲ್ಲಿ ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿ ಕಾರ್ ಡ್ರೈವರ್ ಆಗಿ ಕೆಲಸ ಮಾಡಲು ಮುಂದಾಗಿದ್ದರಂತೆ...

ಸ್ನೇಹಿತರೆ, ವಿಷ್ಣುವರ್ಧನ್ (Actor Vishnuvardhan) ಅವರ ಪ್ರೀತಿಯ ಅಳಿಯ ಆದಂತಹ ಅನಿರುದ್ಧ (Aniruddha Jatkar) ಅವರು ಸಂದರ್ಶನ ಒಂದರಲ್ಲಿ ವಿಷ್ಣುವರ್ಧನ್ ಅವರು ತಮ್ಮ ಜೀವನದಲ್ಲಿ (Life Story) ಎದುರಿಸಿದಂತಹ ನಾನಾ ರೀತಿಯ ಕಷ್ಟಗಳ ಕುರಿತು ಮಾಹಿತಿ ಒಂದನ್ನು ಹಂಚಿಕೊಂಡಿದ್ದರು.

ಆ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರು ಸಿನಿಮಾಗಳ (Cinema) ಅವಕಾಶವಿಲ್ಲದೆ ಇದ್ದಂತಹ ಸಂದರ್ಭದಲ್ಲಿ ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿ ಕಾರ್ ಡ್ರೈವರ್ ಆಗಿ ಕೆಲಸ ಮಾಡಲು ಮುಂದಾಗಿದ್ದರಂತೆ.

ಇಂತಹ ಪರಿಸ್ಥಿತಿಯಲ್ಲಿ ವಿಷ್ಣು ದಾದಾ ಅವರ ಕೈ ಹಿಡಿದದ್ದು ಯಾವ ಸಿನಿಮಾ ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಸಿನಿಮಾ ರಂಗ ಬಿಟ್ಟು ಕಾರ್ ಡ್ರೈವರ್ ಆಗಲು ನಿರ್ಧರಿಸಿದ್ದರಂತೆ ವಿಷ್ಣುವರ್ಧನ್! ಆ ನಿರ್ಧಾರಕ್ಕೆ ಬರಲು ಕಾರಣ ಏನು ಗೊತ್ತೆ? - Kannada News

ಕೊನೆಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮದುವೆ ಫಿಕ್ಸ್, ಯಾರ ಮನೆ ಸೊಸೆಯಾಗಲಿದ್ದಾರೆ ಗೊತ್ತಾ ಶ್ರೀವಲ್ಲಿ..

ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಸಿನಿಮಾದ ಮೂಲಕ ಸಂಪತ್ ಕುಮಾರ್ ಆಗಿದ್ದಂತಹ ವಿಷ್ಣುದಾದಾ ಆಂಗ್ರಿ ಯಂಗ್ ಮ್ಯಾನ್ ಪಾತ್ರದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟು, ನಂತರ ತಮ್ಮ ಅತ್ಯದ್ಭುತ ಅಭಿನಯದ ವರೆಸಿಯಿಂದ ಕನ್ನಡ ಸಿನಿಮಾ ರಂಗದ ಗಾಡ್ ಫಾದರ್ ಆದವರು ಎಂದರೆ ತಪ್ಪಾಗಲಾರದು.

ಹೀಗೆ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ತಮ್ಮ ಸ್ವಂತ ಪ್ರತಿಭೆಯ ಮೂಲಕ ಬಹು ದೊಡ್ಡ ಮಟ್ಟದಲ್ಲಿ ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಂಡಂತಹ ವಿಷ್ಣು ದಾದಾ ಆರಂಭಿಕ ದಿನಗಳಲ್ಲಿ ತಮಗೆ ಹಿಡಿಸದಿದ್ದರೂ ಕೂಡ ಬಣ್ಣ ಹಚ್ಚಿದ್ದಿದೆ.

ತಮ್ಮ ಮೊದಲ ಅಭಿ ಚಿತ್ರಕ್ಕೆ ನಟಿ ರಮ್ಯಾ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೈಯಾರೆ ಪಡೆದ ಸಂಭಾವನೆ ಎಷ್ಟು ಗೊತ್ತೇ?

ಹೀಗಿರುವಾಗ ವಿಷ್ಣುವರ್ಧನ್ ಅವರಿಗೆ ಸತತ ಸಿನಿಮಾಗಳ ಗೆಲುವು ಸಿಕ್ಕ ನಂತರ ಭಾರತಿ ಅವರನ್ನು ಪ್ರೀತಿಸಿ ಮದುವೆಯಾಗುತ್ತಾರೆ. ಆ ಸಂದರ್ಭದಲ್ಲಿ ಭಾರತಿ ವಿಷ್ಣುವರ್ಧನ್ (Bharathi Vishnuvardhan) ಅವರು ಕೂಡ ಸಿನಿರಂಗದಲ್ಲಿ ಮಿಂಚುತ್ತಿದ್ದಂತಹ ನಟಿ.. ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಿದ್ದರು.

Kannada Actor Vishnuvardhan

ಇಬ್ಬರು ಮದುವೆಯಾಗಬೇಕು ಎಂದು ನಿರ್ಧರಿಸಿ ಮನೆಯವರ ಒಪ್ಪಿಗೆ ಪಡೆದು ಸಿನಿಮಾ ರಂಗದ ಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ಮದುವೆಯಾದ ಕೆಲ ತಿಂಗಳುಗಳ ನಂತರ ವಿಷ್ಣುವರ್ಧನ್ ಅವರು ಮಾಡಿದಂತಹ ಸಿನಿಮಾಗಳೆಲ್ಲವು ಸೋಲನ್ನು ಅನುಭವಿಸುತ್ತದೆ.

ಈ ಕಾರಣದಿಂದ ಸಾಕಷ್ಟು ಅವಕಾಶಗಳು ಕೈತಪ್ಪಿ ಹೋಗಿತ್ತು. ಇವರಿಬ್ಬರೂ ಚೆನ್ನೈನಲ್ಲಿ ನೆಲೆಸಿದ್ದ ಕಾರಣ ಖರ್ಚು ವೆಚ್ಚಗಳು ಕೂಡ ಯಥೇಚ್ಛವಾಗಿ ಇದ್ದವು.

ಅಂದು ಸಾಮಾನ್ಯ ನಟನಾಗಿದ್ದ ರಾಮಕುಮಾರ್ ಅಣ್ಣಾವ್ರ ಮಗಳನ್ನು ಮದುವೆಯಾದದ್ದು ಹೇಗೆ? ಆನಂತರ ನಡೆದದ್ದು ಏನು ಗೊತ್ತಾ?

ವಿಷ್ಣುವರ್ಧನ್ ಅವರ ಬಳಿ ಹಣ ಇಲ್ಲದೆ ಕೆಲಸವು ಇಲ್ಲದೆ ಬಹಳ ಪರದಾಡುತ್ತಿದ್ದಂತಹ ಸಂದರ್ಭದಲ್ಲಿ ಸಿನಿಮಾ ರಂಗವನ್ನು ತೊರೆದು ಕಾರ್ ಡ್ರೈವರ್ ಆಗಿ ಕೆಲಸ ಮಾಡಲು ಯೋಚಿಸಿದರಂತೆ. ಹಾಗೂ ಕೆಲಸಕ್ಕೆ ಹೋಗಲು ಕೂಡ ಮುಂದಾಗಿದ್ದರಂತೆ.

ಆದರೆ ಅದೇ ಸಮಯದಲ್ಲಿ ವಿಷ್ಣುವರ್ಧನ್ ಅವರ ಪಾಲಿಗೆ ‘ಹೊಂಬಿಸಿಲು’ ಸಿನಿಮಾ ಅರಸಿ ಬರುತ್ತದೆ. ಈ ಒಂದು ಸಿನಿಮಾದ ಮುಖ್ಯ ಪಾತ್ರ ಒಂದರಲ್ಲಿ ನಟಿಸಿ ವಿಷ್ಣುವರ್ಧನ್ ಅವರು ತಮ್ಮ ವೃತ್ತಿ ಬದುಕಿಗೆ ಮತ್ತೊಂದು ಮೈಲುಗಲ್ಲನ್ನು ಹಾಕಿಕೊಳ್ಳುತ್ತಾರೆ. ಅಂದಿನಿಂದ ವಿಷ್ಣುವರ್ಧನ್ ಅವರು ಮತ್ತೆಂದು ಹಿಂತಿರುಗಿ ನೋಡಲೇ ಇಲ್ಲ ಎಂಬ ಮಾತುಗಳನ್ನು ಅನಿರುದ್ದ್ ಅವರು ಸಂದರ್ಶನದಲ್ಲಿ ಹಂಚಿಕೊಂಡರು.

Actor Vishnuvardhan decided to become a car driver when there was no opportunity

Follow us On

FaceBook Google News

Actor Vishnuvardhan decided to become a car driver when there was no opportunity