ಸ್ನೇಹಿತರೆ, ಸಾಂಕ್ರಾಮಿಕ ಕಾಯಿಲೆಯು ಜಗತ್ತಿನಾದ್ಯಂತ ಅಬ್ಬರಿಸಿ ಬೊಬ್ಬೆಯುತ್ತಿದ್ದಾಗ ಜನರಿಗೆ ಯಾವುದೇ ರೀತಿಯಾದಂತಹ ಮನೋರಂಜನೆ ಇರಲಿಲ್ಲ. ಆ ಸಂದರ್ಭದಲ್ಲಿ ಶುರುವಾದಂತ ಟಿಕ್ ಟಾಕ್ ಡಬ್ಸ್ಮ್ಯಾಶ್ ಹಾಗೂ ರೀಲ್ಸ್ ವಿಡಿಯೋಗಳ ಹವಾ ಇಂದು ಪ್ರತಿಯೊಬ್ಬ ನೆಟ್ಟಿಗರಿಗೂ ವ್ಯಸನದಂತಾಗಿಬಿಟ್ಟಿದೆ. ಹೌದು ಗೆಳೆಯರೇ ಇನ್ಸ್ಟಾಗ್ರಾಮ್ಗಳನ್ನು ಆನ್ ಮಾಡಿ ಕುಳಿತರೆ ಸಾಕು ಗಂಟೆ ಹೋಗುವುದೇ ಗೊತ್ತಾಗುವುದಿಲ್ಲ.
ಇಷ್ಟರ ಮಟ್ಟಿಗೆ ಜನರಿಗೆ ಅಡಿಕ್ಟ್ ಆಗಿರುವಂತಹ ಸೋಶಿಯಲ್ ಮೀಡಿಯಾದಂತಹ (Social Media) ಪ್ಲಾಟ್ಫಾರ್ಮ್ಗಳನ್ನು ಉಪಯೋಗಿಸಿಕೊಳ್ಳುತ್ತಾ ಕೆಲ ಕಲಾವಿದರು ಬಾರಿ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.
ಹೌದು ಗೆಳೆಯರೇ ಈಗಾಗಲೇ ಇನ್ಸ್ಟಾಗ್ರಾಮ್ ಮೂಲಕ ಗುರುತಿಸಿಕೊಂಡಂತಹ ಸಾಕಷ್ಟು ನಟ ನಟಿಯರು ಸಿನಿಮಾ (Kannada Cinema), ಸೀರಿಯಲ್ ಹಾಗೂ ಕಿರು ಚಿತ್ರಗಳಲ್ಲಿ (Kannada Short Films) ಅಭಿನಯಿಸುತ್ತಾ ಪ್ರಸಿದ್ಧಿ ಪಡೆದಿದ್ದಾರೆ.
ಇನ್ನು ಕೆಲವರಂತೂ ರಿಲ್ಸ್ ಮಾಡುತ್ತಲೇ ಬಿಗ್ ಬಾಸ್ ನಂತಹ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋಗಳಿಗೂ ಕಾಲಿಟ್ಟಿದ್ದಾರೆ. ಅಂತವರಲ್ಲಿ ನಮ್ಮ ಸೋನು ಶ್ರೀನಿವಾಸ್ ಗೌಡ (Sonu Gowda) ಹಾಗೂ ಧನುಶ್ರೀ (Actress Dhanushree) ಕೂಡ ಸೇರಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ (Colors Kannada TV) ಪ್ರಸಾರವಾಗುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಅವರ ಸಾರಥ್ಯದಲ್ಲಿ ಮೂಡಿಬರುವ ಬಿಗ್ ಬಾಸ್ ಸೀಸನ್ ಎಂಟಕ್ಕೆ ಸ್ಪರ್ದಿಯಾಗಿ ಮನೆ ಒಳಗೆ ಪ್ರವೇಶ ಮಾಡಿದಂತಹ ಧನುಶ್ರೀ ಅವರು ತಮ್ಮ ವ್ಯಕ್ತಿತ್ವವನ್ನು ಗುರುತಿಸಿಕೊಳ್ಳಲಾಗದೆ ಮೊದಲ ವಾರದಲ್ಲಿ ಮನೆಯಿಂದ ಹೊರಬಂದರು.
ಹೀಗೆ ಬಿಗ್ ಬಾಸ್ ಮೂಲಕ ತಮ್ಮ ಐಡೆಂಟಿಟಿಯನ್ನು ಸೃಷ್ಟಿ ಮಾಡಿಕೊಳ್ಳಲಾಗದೆ ಹೋದರೂ ಸೋಶಿಯಲ್ ಮೀಡಿಯಾಗಳ ಮೂಲಕ ಸದಾ ಟ್ರೆಂಡಿಂಗ್ನಲ್ಲಿ ಇರುವಂತಹ ನಟಿ ಧನುಶ್ರೀ ಇದೀಗ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿರುವ ಫೋಟೋ ಬಾರಿ ವೈರಲ್ ಆಗುತ್ತಿದೆ.
ಹೌದು ಗೆಳೆಯರೇ ಎಲ್ಲರೂ ಟ್ರೆಂಡಿಂಗ್ ವಿಡಿಯೋಗಳನ್ನು ಮಾಡುತ್ತಾ ಸಾವಿರಾರು ಸಂಖ್ಯೆಯ ಫಾಲೋವರ್ಸ್ಗಳನ್ನು ಹೊಂದಿದ್ದ ಕಾಲದಲ್ಲಿ ಲೇಟಾಗಿ ಸೋಶಿಯಲ್ ಮೀಡಿಯಾ ಎಂಬ ಜಾಲಕ್ಕೆ ಎಂಟ್ರಿ ಕೊಟ್ಟ ಧನುಶ್ರೀ ಅವರು ತಮ್ಮ ಮೊದಲ ವಿಡಿಯೋದಲ್ಲಿ ನೆಟ್ಟಿಗರ ಆಕರ್ಷಣೆಗೆ ಗುರಿಯಾದರು.
ಹೌದು ಗೆಳೆಯರೇ ಹಾಡಿಗೆ ವಿಭಿನ್ನವಾಗಿ ಮುಖಭಾವವನ್ನು ತೋರುವ ಮೂಲಕ ರೀಲ್ಸ್ ಯುಗದಲ್ಲೇ ಸೆನ್ಸೇಷನ್ ಸೃಷ್ಟಿ ಮಾಡಿದ ಧನುಶ್ರೀ ಅವರು ಓರ್ವ ಮೇಕಪ್ ಆರ್ಟಿಸ್ಟ್ ಆಗಿದ್ದು, ಆಗಾಗ ತಮ್ಮ ಮೇಕಪ್ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಿದ್ದರು. ಇದೀಗ ಬಾತ್ ಟಬ್ನಲ್ಲಿ ಕೆಂಪು ಬಣ್ಣದ ಉಡುಪನ್ನು ತೊಟ್ಟು ಕುಳಿತು ಫೋಟೋಗೆ ಫೋಸ್ ನೀಡಿರುವಂತಹ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ.
ಈ ಪೋಸ್ಟನ್ನು ಕಣ್ಣು ತುಂಬಿಕೊಂಡಂತಹ ನೆಟ್ಟಿಗರು ಅಯ್ಯೋ ದೇವರೇ ಇಲ್ಲೂ ಮೇಕಪಾ?? ಸ್ನಾನ ಮಾಡುವಾಗ ಮೇಕಪ್ ಬೇಕಾ? ಪೈಂಟ್ ಹಾಕಿರೋದ ಎಂದೆಲ್ಲ ನಟಿ ಧನುಶ್ರೀ ಅವರ ಪೋಸ್ಟಿಗೆ ವಿಧವಿಧವಾಗಿ ಕಮೆಂಟ್ ಮಾಡುವ ಮೂಲಕ ಕಾಲೆಳೆಯುತ್ತಿದ್ದಾರೆ.
ಈ ಫೋಟೋ ಸಾಕಷ್ಟು ಟ್ರೋಲ್ಗಳಿಗೂ ಒಳಗಾಗುತ್ತಿದ್ದು, ಇದು ಖಂಡಿತ ಧನುಶ್ರೀ ಅವರ ನ್ಯಾಚುರಲ್ ಬ್ಯೂಟಿ ಅಲ್ಲ.. ಸ್ನಾನ ಮಾಡುವಾಗ ಯಾರಾದ್ರೂ ಮೇಕಪ್ ಉಪಯೋಗಿಸುತ್ತಾರಾ ಎಂದೆಲ್ಲ ಕಮೆಂಟ್ ಮಾಡ ತೊಡಗಿದ್ದಾರೆ.
Actress Dhanushree Bath Tub Photos Goes Viral
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.