ಐ ಲವ್ ಯು ಸಿನಿಮಾ ಒಪ್ಪಿಕೊಂಡು ತಪ್ಪು ಮಾಡಿಬಿಟ್ಟೆ ಎಂದು ಕಣ್ಣೀರಾಕಿದ ರಚಿತಾ ರಾಮ್! ಆ ಹಾಡಿನಿಂದ ರಚ್ಚು ಕರಿಯರ್ ಡ್ಯಾಮೇಜ್ ಆಯ್ತಾ?

Story Highlights

ಡಿಂಪಲ್ ಬೆಡಗಿ ಬುಲ್ ಬುಲ್ ಹುಡುಗಿಯನ್ನು ಆ ರೀತಿ ಏಕ್ದಂ ಹಾಟ್ ಆಗಿ ನೋಡಿದಂತಹ ಅಭಿಮಾನಿಗಳು ನಿಬ್ಬೆರಗಾಗಿ ಹೋದರು. ಅದೆಷ್ಟೋ ಜನರು ಇಂತಹ ಹಾಡುಗಳನ್ನು ನಮ್ಮ ಕನ್ನಡಕ್ಕೆ ತರಬೇಡಿ ಇದರಿಂದ ಸಾಕಷ್ಟು ಮಂದಿ ಹಾಳಾಗಿ ಹೋಗುತ್ತಾರೆ. ಇದನ್ನು ತಕ್ಷಣ ಸಿನಿಮಾದಿಂದ ತೆಗೆಯಿರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬುಲ್ ಬುಲ್ ಸಿನಿಮಾದಿಂದ (Bull Bull Kannada Cinema) ಹಿಡಿದು ಇಂದಿನ ಯಶಸ್ವಿ ಸಿನಿಮಾಗಳವರೆಗೂ ಅದ್ಭುತ ಮನೋರಂಜನೆ ನೀಡುತ್ತಾ ತಮ್ಮದೇ ಆದ ವಿಶಿಷ್ಟ ಅಭಿಮಾನಿ ಬಳಗವನ್ನು ಸೃಷ್ಟಿ ಮಾಡಿಕೊಂಡಿರುವಂತಹ ರಚಿತಾ ರಾಮ್ (Kannada Actress Rachita Ram) ಉಪೇಂದ್ರ ಅವರೊಂದಿಗೆ ಅಭಿನಯಿಸಿದ ಐ ಲವ್ ಯು ಸಿನಿಮಾವು (I Love You Cinema) ಸಾಕಷ್ಟು ವಿವಾದಕ್ಕೆ ಈಡಗಿತ್ತು.

ಹೌದು ಪ್ರಪ್ರಥಮ ಬಾರಿಗೆ ತೆರೆಯ ಮೇಲೆ ಎಕ್ಸ್ಪೋಸ್ ಮಾಡಲು ಮುಂದಾದಂತಹ ರಚಿತಾ ರಾಮ್ ಅವರಿಗೆ ಸಾಕಷ್ಟು ನಕಾರಾತ್ಮಕ ಪ್ರತಿಕ್ರಿಯೆಗಳು ಕೇಳಿ ಬಂದವು.

ಈ ಕುರಿತು ಹಲವು ದಿನಗಳ ಹಿಂದೆ ಸಂದರ್ಶನ ಒಂದರಲ್ಲಿ ಮಾತನಾಡಿದ ರಚ್ಚು ಐ ಲವ್ ಯು ಸಿನಿಮಾ ಒಪ್ಪಿಕೊಂಡು ತಪ್ಪು ಮಾಡಿಬಿಟ್ಟೆ ಎಂದು ಕಣ್ಣೀರು ಹಾಕಿದರು. ಹಾಗಾದ್ರೆ ಈ ಸಿನಿಮಾದಲ್ಲಿ ಆಗಿದ್ದಾದರೂ ಏನು? ಬಂಗಾರದಲ್ಲಿ ಬೊಂಬೆ ಮಾಡಿದಂತೆ ಸಾಂಗ್ ನಲ್ಲಿ ಅಭಿನಯಿಸೋಕೆ ರಚ್ಚು ಅವರನ್ನು ಅಪ್ರೋಚ್ ಮಾಡಿದ್ದು ಯಾರು?

ಕನ್ನಡ ಬಿಟ್ಟು ತೆಲುಗಿಗೆ ಹಾರಿರುವ ಶ್ರೀಲೀಲಾ, ವಿಜಯ್ ದೇವರಕೊಂಡ ಜೊತೆ ನಟಿಸಲು ಡಿಮ್ಯಾಂಡ್ ಮಾಡಿರುವ ಸಂಭಾವನೆ ಎಷ್ಟು ಕೋಟಿ ಗೊತ್ತಾ?

ಈ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಬೇರೆ ಸಿನಿಮಾ ಇಂಡಸ್ಟ್ರಿಗೆ ಹೋಲಿಸಿದರೆ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ (Kannada Film Industry) ಸಂಸ್ಕೃತಿ ಸಂಪ್ರದಾಯಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಹೀಗಾಗಿ ನಟಿಯರು ಚಿತ್ರದಲ್ಲಿ ಎಕ್ಸ್ಪೋಸ್ ಮಾಡುವುದು, ಮಡಿವಂತಿಕೆಯಿಂದ ಹೊರಬರುವುದು ಕೊಂಚ ಕಡಿಮೆ. ಯಾವುದಾದರೂ ನಟಿಯರು ಈ ರೀತಿ ಸಿನಿಮಾದಲ್ಲಿ ಅರ್ಧಂಬರ್ಧ ಬಟ್ಟೆ ತೊಟ್ಟು ಮಿಂಚಿದರೆ ಅವರನ್ನು ಟೀಕೆಗೆ ಗುರಿ ಮಾಡುತ್ತಾರೆ.

Kannada Actress Rachita Ram I Love You Cinemaಹೀಗೆ ನಟಿ ರಚಿತಾ ರಾಮ್ ಅವರು ಕೂಡ ಐ ಲವ್ ಯು ಸಿನಿಮಾದ ಬಂಗಾರದಲ್ಲಿ ಬೊಂಬೆ ಮಾಡಿದ ಹಾಡು ಬಿಡುಗಡೆಯಾದ ಬೆನ್ನಲ್ಲೇ ಸಾಕಷ್ಟು ನಕಾರಾತ್ಮಕ ಪ್ರತಿಕ್ರಿಯೆಯನ್ನು ಕೇಳಿಬಂದವು.

ಡಿಂಪಲ್ ಬೆಡಗಿ ಬುಲ್ ಬುಲ್ ಹುಡುಗಿಯನ್ನು ಆ ರೀತಿ ಏಕ್ದಂ ಹಾಟ್ ಆಗಿ ನೋಡಿದಂತಹ ಅಭಿಮಾನಿಗಳು ನಿಬ್ಬೆರಗಾಗಿ ಹೋದರು. ಅದೆಷ್ಟೋ ಜನರು ಇಂತಹ ಹಾಡುಗಳನ್ನು ನಮ್ಮ ಕನ್ನಡಕ್ಕೆ ತರಬೇಡಿ ಇದರಿಂದ ಸಾಕಷ್ಟು ಮಂದಿ ಹಾಳಾಗಿ ಹೋಗುತ್ತಾರೆ. ಇದನ್ನು ತಕ್ಷಣ ಸಿನಿಮಾದಿಂದ ತೆಗೆಯಿರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಎಲ್ಲಾ ಭಾಷೆಗಳಿಗೂ ರೀಮೇಕ್ ಆಗಿ ಬಾಕ್ಸ್ ಆಫೀಸ್ ದೋಚಿದ್ದ ಅಣ್ಣಾವ್ರ ಶಂಕರ್ ಗುರು ಸಿನಿಮಾ ಕಲೆಕ್ಷನ್ ಎಷ್ಟು ಗೊತ್ತಾ?

ಹೀಗೆ ಅಭಿಮಾನಿಗಳ ಬೇಸರದ ಕುರಿತು ಪ್ರತಿಕ್ರಿಯೆಸಿದ ರಚಿತಾ ರಾಮ್ “ನನ್ನ ತಂದೆ ಈಗಲೂ ನನ್ನನ್ನು ಚಿಕ್ಕ ಮಗುವಿನಂತೆ ನೋಡುತ್ತಾರೆ. ನನ್ನ ಅಮ್ಮ ಐ ಲವ್ ಯು ಸಿನಿಮಾ ನೋಡಿದರು ಇದೇನಿದು ಚಿತ್ರದಲ್ಲಿ ಇಷ್ಟೊಂದು ಬೋಲ್ಡ್ ದೃಶ್ಯಗಳಿವೆ. ಈ ರೀತಿಯ ಪಾತ್ರವನ್ನು ಒಪ್ಪಿಕೊಳ್ಳಬಾರದಿತ್ತು ಎಂದರು. ಆ ಬಳಿಕ ತನ್ನ ಅಪ್ಪನಿಗೂ ಈ ಸಿನಿಮಾದ ಬಗ್ಗೆ ಹೇಳಿದಾಗ ಅವರು ಈ ರೀತಿಯ ದೃಶ್ಯಗಳಿರುವ ಕಾರಣ ಸಿನಿಮಾ ನೋಡಲು ಒಪ್ಪಲಿಲ್ಲ.

ಆಗ ನಾನು ಅಳುತ್ತಲೇ ಅಪ್ಪನ ಮುಂದೆ ಹೋಗಲಿ ಬಿಡಪ್ಪ ಇನ್ನು ಮುಂದೆ ಈ ರೀತಿ ಮಾಡೋಲ್ಲ ಎಂದೆ. ತಾನು ಈ ರೀತಿಯ ದೃಶ್ಯಗಳಿಗೆ ಓಕೆ ಹೇಳಬಾರದಾಗಿತ್ತು, ಐ ಲವ್ ಯು ಸಿನಿಮಾ ಒಪ್ಪಿಕೊಂಡು ತಪ್ಪು ಮಾಡಿಬಿಟ್ಟೆ” ಎಂದು ರಚಿತಾ ರಾಮ್ ಸಂದರ್ಶನ ಒಂದರಲ್ಲಿ ಮಾತನಾಡುವಾಗ ಕಣ್ಣೀರು ಹಾಕಿದರು.

ಕನ್ನಡ ಟಾಪ್ ನಟಿ ಮಾಲಾಶ್ರೀ ಮಾತೃ ಭಾಷೆ ಯಾವುದು ಗೊತ್ತಾ? ಹುಟ್ಟಿದ್ದು ಚೆನ್ನೈನಲ್ಲಿ, ಬೆಳೆದದ್ದು ಆಂದ್ರದಲ್ಲಿ! ಗೆಸ್ ಮಾಡಿ ನೋಡೋಣ

Kannada Actress Rachita Ram Reaction About Her Movie I Love You

Related Stories