ಎಲ್ಲಾ ಭಾಷೆಗಳಿಗೂ ರೀಮೇಕ್ ಆಗಿ ಬಾಕ್ಸ್ ಆಫೀಸ್ ದೋಚಿದ್ದ ಅಣ್ಣಾವ್ರ ಶಂಕರ್ ಗುರು ಸಿನಿಮಾ ಕಲೆಕ್ಷನ್ ಎಷ್ಟು ಗೊತ್ತಾ?

ಅಣ್ಣಾವ್ರು ತ್ರಿಪಾತ್ರದಲ್ಲಿ ಕಾಣಿಸಿಕೊಂಡಿರುವ ಶಂಕರ್ ಗುರು ಸಿನಿಮಾದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ಮೂರು ಪಾತ್ರಗಳಲ್ಲಿ ಅಣ್ಣಾವ್ರ ಅಭಿನಯ ಕಂಡು ಅಭಿಮಾನಿಗಳು ಮನಸ್ಸೋತಿದ್ದರು

ಡಾಕ್ಟರ್ ರಾಜಕುಮಾರ್ ಅವರ ವೃತ್ತಿ ಬದುಕಿನಲ್ಲಿ ಅದೆಷ್ಟೋ ಸಿನಿಮಾಗಳು ಬಂದು ಹೋಗಿರಬಹುದು ಆದರೆ ಇಂದಿಗೂ ಅಣ್ಣಾವ್ರ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುವಂತಹ ಸಿನಿಮಾ ಅಂದರೆ ಅಣ್ಣಾವ್ರು ತ್ರಿಪಾತ್ರದಲ್ಲಿ ಕಾಣಿಸಿಕೊಂಡಿರುವ ಶಂಕರ್ ಗುರು ಸಿನಿಮಾ (Kannada Shankar Guru Cinema).

ಹೌದು, ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ಮೂರು ಪಾತ್ರಗಳಲ್ಲಿ ಅಣ್ಣಾವ್ರ ಅಭಿನಯ ಕಂಡು ಅಭಿಮಾನಿಗಳು ಮನಸ್ಸೋತಿದ್ದರು..

1978 ರಲ್ಲಿ ದಾಕ್ಷಾಯಿಣಿ ಕಂಬೈನ್ಸ್ ನಿರ್ಮಾಣ ಸಂಸ್ಥೆ ಅಡಿ ತಯಾರದಂತಹ ಈ ಒಂದು ಸಿನಿಮಾ ಆಗಿನ ಕಾಲದ ಸೂಪರ್ ಡೂಪರ್ ಹಿಟ್ ಪಟ್ಟಿಗೆ ಸೇರುವ ಮೂಲಕ ಎಲ್ಲಾ ಭಾಷೆಗಳಿಗೂ ಡಬ್ ಆಗಿ ಬಹುದೊಡ್ಡ ಮಟ್ಟದ ಯಶಸ್ಸನ್ನು ಕಂಡಿತ್ತು.

ಎಲ್ಲಾ ಭಾಷೆಗಳಿಗೂ ರೀಮೇಕ್ ಆಗಿ ಬಾಕ್ಸ್ ಆಫೀಸ್ ದೋಚಿದ್ದ ಅಣ್ಣಾವ್ರ ಶಂಕರ್ ಗುರು ಸಿನಿಮಾ ಕಲೆಕ್ಷನ್ ಎಷ್ಟು ಗೊತ್ತಾ? - Kannada News

ಕನ್ನಡ ಟಾಪ್ ನಟಿ ಮಾಲಾಶ್ರೀ ಮಾತೃ ಭಾಷೆ ಯಾವುದು ಗೊತ್ತಾ? ಹುಟ್ಟಿದ್ದು ಚೆನ್ನೈನಲ್ಲಿ, ಬೆಳೆದದ್ದು ಆಂದ್ರದಲ್ಲಿ! ಗೆಸ್ ಮಾಡಿ ನೋಡೋಣ

ಸಿನಿಮಾದಲ್ಲಿ ರಾಜಕುಮಾರ್ (Dr Rajkumar) ಅವರಿಗೆ ನಾಯಕಿಯಾಗಿ ಜಯಮಾಲಾ, ಪದ್ಮಪ್ರಿಯ, ಕಾಂಚನ ಕಾಣಿಸಿಕೊಂಡರೆ ವೈಶಾಲಿ ಕಾಸರವಳ್ಳಿ ವಜ್ರಮುನಿ, ತೂಗುದೀಪ್ ಶ್ರೀನಿವಾಸ್ ಮುಂತಾದ ಕಲಾವಿದರು ಕೂಡ ತಮ್ಮ ಭಾಗಿತ್ವದಲ್ಲಿ ಅಭೂತಪೂರ್ವ ಅಭಿನಯ ಮಾಡಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದರು.

ವಿ ಸೋಮಶೇಖರ್ ಅವರ ನಿರ್ದೇಶನದಲ್ಲಿ ಮೂಡಿ ಬಂದಂತಹ ಶಂಕರ್ ಗುರು ಸಿನಿಮಾಗೆ ಸ್ವತಃ ರಾಜಕುಮಾರ್ ಧರ್ಮ ಪತ್ನಿ ಪಾರ್ವತಮ್ಮನವರೇ ಹಣ ಹೂಡಿಕೆ ಮಾಡಿದ್ದರು. ಕೇವಲ 48 ಲಕ್ಷ ಬಜೆಟ್ನಲ್ಲಿ ತಯಾರದಂತಹ ಈ ಒಂದು ಸಿನಿಮಾ ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಸೇರಿದಂತೆ ಎಲ್ಲಾ ಭಾಷೆಗಳಿಗೂ ಡಬ್ಬಾಗಿ ಬಹುದೊಡ್ಡ ಮಟ್ಟದ ಸಕ್ಸಸ್ ಕಂಡಿತ್ತು. 3.78 ಕೋಟಿ ಹಣವನ್ನು ತನ್ನ ಗಲ್ಲ ಪೆಟ್ಟಿಗೆಗೆ ಬಾಚಿಕೊಳ್ಳುವ ಮೂಲಕ ಶಂಕರ್ ಗುರು ಸಿನಿಮಾ ಸಾರ್ವಕಾಲಿಕ ಹಿಟ್ ಸಿನಿಮಾ ಎಂಬ ಪಟ್ಟಿಗೆ ಸೇರಿಕೊಂಡಿತು.

Dr Rajkumar with Wife Parvathammaಅದರಲ್ಲಿಯೂ ಬೆಂಗಳೂರಿನ ಪ್ರತಿಷ್ಠಿತ ಕೆಂಪೇಗೌಡ ಚಿತ್ರಮಂದಿರದಲ್ಲಿ ಸತತ 50 ವಾರಗಳ ಕಾಲ ಸಿನಿಮಾ ರನ್ ಆಗಿತ್ತು. ಹೀಗೆ ಕರ್ನಾಟಕದದ್ಯಂತ ಇರುವ ಎಲ್ಲಾ ಚಿತ್ರಮಂದಿರಗಳಲ್ಲಿ ಮಲ್ಟಿಪ್ಲೆಕ್ಸ್ಗಳಲ್ಲಿ ಸುಮಾರು 365 ದಿನಗಳ ಕಾಲ ರಾರಾಜಿಸಿದಂತಹ ಶಂಕರ್ ಗುರು ಸಿನಿಮಾ 70ರ ದಶಕದಲ್ಲಿ ಅತಿ ಹೆಚ್ಚು ಹಣವನ್ನು ಗಳಿಕೆ ಮಾಡಿದಂತಹ ಚಿತ್ರವಾಗಿತ್ತು (Kannada Cinema). ಅಷ್ಟೇ ಅಲ್ಲದೆ ಈ ಒಂದು ಬ್ಲಾಕ್ಬಸ್ಟರ್ ಸಿನಿಮಾಗೆ ಕರ್ನಾಟಕ ರಾಜ್ಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಕೂಡ ದೊರಕುತ್ತದೆ.

ಸೂರ್ಯವಂಶ ಸಿನಿಮಾದಲ್ಲಿ ವಿಷ್ಣು ದಾದನನ್ನೆ ಏಕವಚನದಲ್ಲಿ ಮಾತನಾಡಿಸಿದ್ದ ಮಾಸ್ಟರ್ ಚಂದನ್ ಈಗ ಹೇಗಿದ್ದಾರೆ ಗೊತ್ತಾ?

ಹೀಗೆ ವ್ಯಾಪಕ ವಿಮರ್ಶಾತ್ಮಕ ಮೆಚ್ಚುಗೆ ಪಡೆದುಕೊಂಡು ಬಹುದೊಡ್ಡ ಮಟ್ಟದ ಯಶಸ್ಸನ್ನು ಸಂಪಾದಿಸಿದ ಈ ಚಿತ್ರದಲ್ಲಿ ಅಣ್ಣಾವ್ರ ಪಾತ್ರ ಬಹುಮುಖ್ಯವಾಗಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ. ಹೌದು ಗೆಳೆಯರೇ ಆಗಿನ ಕಾಲದಲ್ಲಿ ತ್ರಿಪಾತ್ರದಲ್ಲಿ ನಟಿಸಿ ಬಿಡುಗಡೆಯಾಗಿದ್ದ ಏಕೈಕ ಬಣ್ಣದ ಚಿತ್ರ ಇದಾಗಿತ್ತು, ಎಂತಹ ಪಾತ್ರ ನೀಡಿದರು ಸುಲಲಿತವಾಗಿ ಅಭಿನಯಿಸುವ ಅಣ್ಣಾವ್ರು ಈ ಸಿನಿಮಾದಲ್ಲಿಯೂ ಅಷ್ಟೇ ಲೀಲಾಜಾಲವಾಗಿ ಅಭಿನಯಿಸಿ ಪ್ರೇಕ್ಷಕ ಪ್ರಭುಗಳಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುವಲ್ಲಿ ಯಶಸ್ವಿಯಾಗಿದ್ದರು.

ತರ್ಲೆ ನನ್ ಮಗ ಸಿನಿಮಾದ ಮಾದಕ ನಟಿ ಅಂಜಲಿ ಈಗ ಹೇಗಿದ್ದಾರೆ.. ಏನ್ ಮಾಡ್ತಿದ್ದಾರೆ? ಪಾಪ ಅವರ ರಿಯಲ್ ಲೈಫ್ ಹೇಗಿದೆ ಗೊತ್ತಾ?

ಸಿನಿಮಾದಲ್ಲಿನ ಪ್ರತಿಯೊಂದು ಹಾಡು ಕೇಳುಗರ ಮನಸ್ಸನ್ನು ಮುದಗೊಳಿಸುವಂತಿತ್ತು. ಹೀಗೆ ಸಿನಿಮಾದ ಪ್ರತಿಯೊಂದು ಸೀನ್ಗಳು ಟ್ವಿಸ್ಟ್ ಮೇಲೆ  ಟ್ವಿಸ್ಟ್ ನೀಡುತ್ತಿದ್ದಿದ್ದು ಪ್ಲಸ್ ಪಾಯಿಂಟ್ ಆಗಿ ಮಾರ್ಪಟ್ಟಿತ್ತು, ಇವುಗಳೇ ಸಿನಿಮಾದ ಯಶಸ್ಸಿಗೆ ಕಾರಣವಾಗಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ

Kannada Shankar Guru Cinema Budget and Collections on that days

Follow us On

FaceBook Google News

Kannada Shankar Guru Cinema Budget and Collections on that days