ಸೂರ್ಯವಂಶ ಸಿನಿಮಾದಲ್ಲಿ ವಿಷ್ಣು ದಾದನನ್ನೆ ಏಕವಚನದಲ್ಲಿ ಮಾತನಾಡಿಸಿದ್ದ ಮಾಸ್ಟರ್ ಚಂದನ್ ಈಗ ಹೇಗಿದ್ದಾರೆ ಗೊತ್ತಾ?

ಸೂರ್ಯವಂಶ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರ ಸತ್ಯಮೂರ್ತಿ ಪಾತ್ರದ ಮಗನಾಗಿ ಅಭಿನಯಿಸಿದಂತಹ ಮಾಸ್ಟರ್ ಚಂದನ್ ಅತಿ ಸಣ್ಣ ವಯಸ್ಸಿನಲ್ಲಿ ಪ್ರೇಕ್ಷಕರಿಗೆ ಮಹತ್ತರವಾದ ಮನೋರಂಜನೆ ನೀಡುವಲ್ಲಿ ಯಶಸ್ವಿಯಾದರು.

ಸ್ನೇಹಿತರೆ, ಇತ್ತಿಚಿನ ದಿನಗಳಲ್ಲಿ ಇನ್ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ನಂತಹ ಸೋಶಿಯಲ್ ಮೀಡಿಯಾಗಳಲ್ಲಿ (Socila Media) ‘ಹೇ ಫ್ರೆಂಡು…’ ಎಂಬ ಡೈಲಾಗ್ ಬಾರಿ ವೈರಲ್ ಆಗುತ್ತಿದ್ದು, ಇದನ್ನು ಕಂಡಂತಹ ಸಾಕಷ್ಟು ಜನರು, ಈ ಡೈಲಾಗ್ ಯಾವ ಸಿನಿಮಾದ್ದಿರಬಹುದು ಎಂಬುದನ್ನು ಚರ್ಚಿಸುತ್ತಾ ಅತಿ ಚಿಕ್ಕ ವಯಸ್ಸಿನಲ್ಲಿಯೇ ವಿಷ್ಣು ದಾದನನ್ನು ಇಷ್ಟು ಸಲಿಗೆಯಿಂದ ಮಾತನಾಡಿಸುವ ಹುಡುಗ ಯಾರಿರಬಹುದು ಎಂದು ತಲೆಕೆಡಿಸಿಕೊಳ್ಳುತ್ತಿದ್ದಾರೆ.

ಅಂತವರಿಗಾಗಿ ನಾವಿವತ್ತು ಅಭಿನಯ ಭಾರ್ಗವ ವಿಷ್ಣುವರ್ಧನ್ (Actor Vishnuvardhan) ಅವರ ಸೂರ್ಯವಂಶ ಸಿನಿಮಾದಲ್ಲಿ (Kannada Suryavamsha Cinema) ಬಾಲ ನಟನಾಗಿ ಕಮಾಲ್ ಮಾಡಿದ್ದ ಕಲಾವಿದ ಯಾರು? ಈಗ ಹೇಗಿದ್ದಾರೆ?

ಇನ್ನು ಕನ್ನಡದ ಯಾವೆಲ್ಲ ಸಿನಿಮಾಗಳಲ್ಲಿ (Kannada Movies) ಅಭಿನಯಿಸಿದ್ದಾರೆ? ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಸೂರ್ಯವಂಶ ಸಿನಿಮಾದಲ್ಲಿ ವಿಷ್ಣು ದಾದನನ್ನೆ ಏಕವಚನದಲ್ಲಿ ಮಾತನಾಡಿಸಿದ್ದ ಮಾಸ್ಟರ್ ಚಂದನ್ ಈಗ ಹೇಗಿದ್ದಾರೆ ಗೊತ್ತಾ? - Kannada News

ತರ್ಲೆ ನನ್ ಮಗ ಸಿನಿಮಾದ ಮಾದಕ ನಟಿ ಅಂಜಲಿ ಈಗ ಹೇಗಿದ್ದಾರೆ.. ಏನ್ ಮಾಡ್ತಿದ್ದಾರೆ? ಪಾಪ ಅವರ ರಿಯಲ್ ಲೈಫ್ ಹೇಗಿದೆ ಗೊತ್ತಾ?

1999 ರಲ್ಲಿ ಕರ್ನಾಟಕದಾದ್ಯಂತ ತೆರೆಕಂಡಂತಹ ಸೂರ್ಯವಂಶ ಸಿನಿಮಾ 15 ಕೋಟಿ ಹಣವನ್ನು ತನ್ನ ಗಲ್ಲಾ ಪೆಟ್ಟಿಗೆಗೆ ಬಾಚಿಕೊಳ್ಳುವ ಮೂಲಕ ಬ್ಲಾಕ್ಬಸ್ಟರ್ ಹಿಟ್ ಪಟ್ಟಿಗೆ ಸೇರಿಕೊಂಡಿತ್ತು.

ಎಸ್ ನಾರಾಯಣ್ ಈ ಸಿನಿಮಾದಲ್ಲಿ ಅಭಿನಯದ ಜೊತೆಗೆ ನಿರ್ದೇಶನವನ್ನು ಮಾಡಿದ್ದರು. ಹೀಗೆ ಬಹುದೊಡ್ಡ ತಾರಾ ಬಳಗದಲ್ಲಿ ತಯಾರದಂತಹ ಈ ಒಂದು ಸಿನಿಮಾ ಕೌಟುಂಬಿಕ ಕಥಾ ಹಂದರರವನ್ನು ಹೊಂದಿದ್ದು, ವಿಷ್ಣುವರ್ಧನ್ ಅವರ ದ್ವಿಪಾತ್ರಕ್ಕೆ ಅಭಿಮಾನಿಗಳು ಮನಸ್ಸೊತು ಹೋಗಿದ್ದರು.

ಅಲ್ಲದೆ ಚಿತ್ರದಲ್ಲಿ ವಿಷ್ಣುವರ್ಧನ್ ಅವರಿಗೆ ನಾಯಕಿಯಾಗಿ ವಿಜಯಲಕ್ಷ್ಮಿ ಹಾಗೂ ಇಶಾ ಕೊಪ್ಪಿಕಲ್ ಅಭಿನಯಿಸುವ ಮೂಲಕ ಕನ್ನಡಿಗರ ಮನಸನ್ನು ಗೆದ್ದಿದ್ದರು. ಹೌದು ಗೆಳೆಯರೇ, ಸತ್ಯಮೂರ್ತಿ ಎಂಬ ವ್ಯಕ್ತಿಯು ತಂದೆಯಿಂದ ಅವಮಾನಕ್ಕೊಳಗಾಗಿ ಮನೆಯಿಂದ ಆಚೆ ಹಾಕಿದ ನಂತರ ಸ್ವಾಭಿಮಾನದಿಂದ ಕಷ್ಟಪಟ್ಟು ದುಡಿದು ಮೇಲೆ ಹೇಗೆ ಬರುತ್ತಾರೆ ಎಂಬುದನ್ನು ತೋರಿಸುವ ಅದ್ಭುತ ಕೌಟುಂಬಿಕ ಚಿತ್ರ ಇದಾಗಿತ್ತು.

ಹೀರೋಯಿನ್ ಅಂದ್ರೆ ಹೀಗಿರಬೇಕು ಅನ್ನೋ ಹಾಗಿದ್ದ ಗಾಳಿಪಟ ನಟಿ ನೀತು ಏಕ್ದಂ ಈ ಪಾಟಿ ದಪ್ಪಗಾಗಲು ಕಾರಣವೇನು ಗೊತ್ತಾ? ಆಕೆಯ ಸಮಸ್ಯೆ ತಿಳಿದ್ರೆ ಹೃದಯ ಭಾರವಾಗುತ್ತೆ!

Kannada Suryavamsha Cinema Fame Master Chandan1999 ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಂಡಂತಹ ಈ ಸಿನಿಮಾ 200ಕ್ಕೂ ಅಧಿಕ ಥಿಯೇಟರ್ಗಳಲ್ಲಿ ಬರೋಬ್ಬರಿ ಆರು ತಿಂಗಳುಗಳ ಕಾಲ ರಾರಾಜಿಸಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಅಲ್ಲದೆ ವಿಷ್ಣುವರ್ಧನ್ ಅವರ ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳ ಪಟ್ಟಿಗೂ ಸೇರ್ಪಡೆಯಾಯಿತು, ಅದರಂತೆ ಈ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಸತ್ಯಮೂರ್ತಿ ಪಾತ್ರದ ಮಗನಾಗಿ ಅಭಿನಯಿಸಿದಂತಹ ಮಾಸ್ಟರ್ ಚಂದನ್ (Master Chandan) ಅತಿ ಸಣ್ಣ ವಯಸ್ಸಿನಲ್ಲಿ ಪ್ರೇಕ್ಷಕರಿಗೆ ಮಹತ್ತರವಾದ ಮನೋರಂಜನೆ ನೀಡುವಲ್ಲಿ ಯಶಸ್ವಿಯಾದರು.

ಶಾಕುಂತಲ ಪಾತ್ರಕ್ಕೆ ಏನೇ ಆದರೂ ಸೆರಗಿಲ್ಲದ ಉಡುಪನ್ನು ಧರಿಸುವುದಿಲ್ಲ ಎಂದು ಹಠ ಹಿಡಿದಿದ್ದ ಜಯಪ್ರದಾ ಅವರಿಗೆ ಅಣ್ಣಾವ್ರು ಮಾಡಿದ್ದೇನು?

ತಮ್ಮ ತುಂಟತನ ಹಾಗೂ ಹಾಸ್ಯಸ್ಪದ ಅಭಿನಯದಿಂದ ಆಗಿನ ಸಿನಿ ಪ್ರೇಕ್ಷಕರ ಮನೆ ಮಗನಾಗಿದ್ದ ಚಂದನ್ ಅನಂತರ ಕಿಚ್ಚ ಸುದೀಪ್ ಅವರ ತಮ್ಮನಾಗಿಯೂ ಸಿನಿಮಾ (Kannada Cinema) ಒಂದರಲ್ಲಿ ಅಭಿನಯಿಸುವ ಮೂಲಕ ಕನ್ನಡ ಸಿನಿಮಾರಂಗದ ಯಶಸ್ವಿ ಬಾಲ ನಟನಾಗಿ ಗುರುತಿಸಿಕೊಂಡರು.

ಕಾಲಕ್ರಮೇಣ ಅವಕಾಶಗಳು ಕುಂಠಿತವಾದ ಬಳಿಕ ಸಿನಿಮಾ ರಂಗದಿಂದ ದೂರ ಉಳಿದು ವಿದ್ಯಾಭ್ಯಾಸದತ್ತ ಗಮನಹರಿಸಿದ ಈ ನಟ ಕಳೆದ ಕೆಲವು ದಿನಗಳ ಹಿಂದೆ ಸಿನಿಮಾ ನೋಡಲು ಥಿಯೇಟರ್ಗೆ ಹೋಗಿದ್ದಾಗ, ಅಲ್ಲಿನ ಸಂದರ್ಶಕರು ಇವರನ್ನು ಕಂಡುಹಿಡಿದು ಮಾತನಾಡಿಸಿದ್ದಾರೆ.

ಆ ಸಂದರ್ಭದಲ್ಲಿ ನಟ ಚಂದನ್ ತಮ್ಮ ಸಿನಿ ಬದುಕಿನ ಪಯಣದ ಕುರಿತು ಮೆಲುಕು ಹಾಕಿದ್ದಾರೆ, ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು ಬರೋಬ್ಬರಿ 24 ವರ್ಷಗಳ ನಂತರ ಬಾಲ ನಟನನ್ನು ಬೆಳೆದು ದೊಡ್ಡವನಾದ ಮೇಲೆ ನೋಡಿದಂತಹ ಅಭಿಮಾನಿಗಳು ಅಚ್ಚರಿಗೊಳಗಾಗಿದ್ದಾರೆ.

Interesting Facts About Kannada Suryavamsha Cinema Fame Master Chandan

Follow us On

FaceBook Google News

Interesting Facts About Kannada Suryavamsha Cinema Fame Master Chandan