ಶಾಕುಂತಲ ಪಾತ್ರಕ್ಕೆ ಏನೇ ಆದರೂ ಸೆರಗಿಲ್ಲದ ಉಡುಪನ್ನು ಧರಿಸುವುದಿಲ್ಲ ಎಂದು ಹಠ ಹಿಡಿದಿದ್ದ ಜಯಪ್ರದಾ ಅವರಿಗೆ ಅಣ್ಣಾವ್ರು ಮಾಡಿದ್ದೇನು?
ನಟಿ ಜಯಪ್ರದಾ ಅವರಿಗೆ ಕವಿರತ್ನ ಕಾಳಿದಾಸ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಸೆರಗು ಇಲ್ಲದಂತ ಬಟ್ಟೆಯನ್ನು ಧರಿಸುವಂತೆ ನಿರ್ದೇಶಕರು ಹೇಳುತ್ತಾರೆ.
ಸ್ನೇಹಿತರೆ, ಕನ್ನಡ ಸಿನಿಮಾ ರಂಗದ (Kannada Film News) ದ್ರುವ ತಾರೆ, ನಟಸಾರ್ವಭೌಮ ಅಣ್ಣಾವ್ರು (Dr Rajkumar) ಅಭಿನಯಿಸಿರುವಂತಹ ಬಹುತೇಕ ಎಲ್ಲಾ ಸಿನಿಮಾಗಳು ಆಗಿನ ಕಾಲದ ಬ್ಲಾಕ್ಬಾಸ್ಟರ್ ಹಿಟ್ ಪಟ್ಟಿಗೆ ಸೇರುತ್ತಿದ್ದವು.
ಅಭಿಮಾನಿಗಳು ಅಣ್ಣಾವ್ರ ಯಾವುದೇ ಸಿನಿಮಾ ಬಿಡುಗಡೆಗೊಂಡರು ಥಿಯೇಟರ್ಗೆ ಹೋಗಿ ತನ್ನ ಆರಾಧ್ಯ ದೇವರನ್ನು ಕಣ್ತುಂಬಿಕೊಂಡು ಶಿಳ್ಳೆ ಚಪ್ಪಾಳೆ ಕೇಕೆಯ ಮೂಲಕ ಅವರ ಅಭಿನಯಕ್ಕೆ ಫುಲ್ ಮಾರ್ಕ್ಸ್ ನೀಡುತ್ತಿದ್ದರು.
ಹೀಗೆ ಮುನ್ನೂರಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿರುವಂತಹ ಡಾಕ್ಟರ್ ರಾಜಕುಮಾರ್ 70-80ರ ದಶಕದಲ್ಲಿ ಹೆಚ್ಚಿನದಾಗಿ ಪೌರಾಣಿಕ ಭಕ್ತಿ ಪ್ರಧಾನ ಹಾಗೂ ಆಧ್ಯಾತ್ಮಿಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.
ಹೀಗೆ ಶ್ರೀ ಕೃಷ್ಣದೇವರಾಯ, ಭಕ್ತ ಪ್ರಹ್ಲಾದ, ಕವಿರತ್ನ ಕಾಳಿದಾಸ, ಭಕ್ತ ಕುಂಬಾರ, ಮುಂತಾದ ಐತಿಹಾಸಿಕ ಪಾತ್ರಗಳಲ್ಲಿ ಅಭಿನಯಿಸಿ ತಮ್ಮ ಅಪ್ರತಿಮ ಅಭಿನಯದ ಮೂಲಕ ಅಬ್ಬರಿಸಿ ಬೊಬ್ಬಿರಿದವರು. ಹೀಗಿರುವಾಗ ನಾವಿವತ್ತು ಅಣ್ಣಾವ್ರ ಕವಿರತ್ನ ಕಾಳಿದಾಸ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ನಡೆದಂತಹ ಘಟನೆಯುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಸ ಹೊರಟಿದ್ದೇವೆ.
ಹೌದು ಗೆಳೆಯರೇ ಆಗಿನ ಕಾಲದಲ್ಲಿ ಕನ್ನಡ ಚಿತ್ರರಂಗ (Kannada Industry) ಆಗಷ್ಟೇ ಮಡಿವಂತಿಕೆಯ ಸೆರಗಿನಿಂದ ಹೊರ ಬರುತ್ತಿತ್ತು ಎಲ್ಲೋ ಬೆರಳೆಣಿಕೆಯಷ್ಟು ನಟಿಯರು ಮಾತ್ರ ತಮ್ಮ ದೇಹದ ತೋರ್ಪಡಿಕೆಗೆ ಒಪ್ಪಿಗೆ ಸೂಚಿಸುತ್ತಿದ್ದರು.
ಆದರೆ ಆರತಿ ಭಾರತಿ ಮಂಜುಳಾ ಜಯಪ್ರದ ಕಲ್ಪನಾ ಅವರಂತಹ ನಟಿಯರು ಎಲ್ಲಾ ಸಿನಿಮಾಗಳಲ್ಲಿಯೂ ಸಾಂಪ್ರದಾಯಿಕ ಹಾಗೂ ಲಕ್ಷಣವೆನಿಸುವಂತಹ ಉಡುಗೆಯನ್ನು ಮಾತ್ರ ತೊಡುತ್ತಿದ್ದರು.
ಹೀಗಿರುವಾಗ ನಟಿ ಜಯಪ್ರದಾ (Actress Jayaprada) ಅವರಿಗೆ ಕವಿರತ್ನ ಕಾಳಿದಾಸ ಸಿನಿಮಾದ (Kannada Kaviratna Kalidasa Cinema) ಶೂಟಿಂಗ್ ಸಂದರ್ಭದಲ್ಲಿ ಸೆರಗು ಇಲ್ಲದಂತ ಬಟ್ಟೆಯನ್ನು ಧರಿಸುವಂತೆ ನಿರ್ದೇಶಕರು ಹೇಳುತ್ತಾರೆ.
ಹೌದು ಗೆಳೆಯರೇ ಕವಿರತ್ನ ಕಾಳಿದಾಸ ಸಿನಿಮಾದಲ್ಲಿ ನಟಿ ಜಯಪ್ರದಾ ಅವರು ಶಾಕುಂತಲೆಯ ಪಾತ್ರದಲ್ಲಿ ಅಭಿನಯಿಸಿದರು. ಶಾಕುಂತಲೆ ಆಶ್ರಮವಾಸಿಯಾಗಿದ್ದ ಕಾರಣ ಕುಂಚಕ ಬಟ್ಟೆಗಳನ್ನು ಧರಿಸುತ್ತಿದ್ದರು, ಹೂವಿನಿಂದ ಮಾಡಲಾದ ಆಭರಣಗಳನ್ನು ತನ್ನ ಅಲಂಕಾರಿಕ ವಸ್ತುಗಳನ್ನಾಗಿ ಮಾಡಿಕೊಂಡಿದ್ದ ಸುಂದರ ಯುವತಿ.
ಇಂತಹ ಸನ್ನಿವೇಶದಲ್ಲಿ ಅದಕ್ಕೆ ಸೂಕ್ತವಾಗುವಂತಹ ಉಡುಪನ್ನು ಧರಿಸಬೇಕು ಎಂದು ಅಣ್ಣವ್ರು ಸಮಾಧಾನದಿಂದ ಜಯಪ್ರದಾ ಅವರನ್ನು ತಮ್ಮೆದುರಿಗೆ ಕೂರಿಸಿಕೊಂಡು ಕಥೆಯ ವಿವರಣೆಯನ್ನು ನೀಡಿದರು.
ಅದರ ಜೊತೆಗೆ ಆ ಪಾತ್ರಕ್ಕೆ ಇದೇ ರೀತಿ ಉಡುಪು ಬೇಕಾಗುತ್ತದೆ ನೀವು ಧರಿಸಲೇಬೇಕು ಎಂದು ಅಣ್ಣಾವ್ರು ಮನವರಿಕೆ ಮಾಡುತ್ತಾರೆ. ಇದಕ್ಕೆ ಜಯಪ್ರದಾ ಒಪ್ಪಿಗೆ ಸೂಚಿಸಿ ಸಿನಿಮಾದಲ್ಲಿ ಬಹಳನೇ ಮಾದಕವಾಗಿ ಕಾಣಿಸಿಕೊಂಡಿದ್ದರು.
Interesting Facts About Kannada Kaviratna Kalidasa Cinema
Follow us On
Google News |