ನಟ ರವಿಚಂದ್ರನ್ ದ್ವಿಪಾತ್ರದಲ್ಲಿ ನಟಿಸಿದ್ದ ಶ್ರೀರಾಮಚಂದ್ರ ಸಿನಿಮಾ ನಟಿ ಮೋಹಿನಿ ಈಗ ಹೇಗಾಗಿದ್ದಾರೆ? ಎಲ್ಲಿದ್ದಾರೆ ಗೊತ್ತಾ?
ತಮಿಳು ಹಾಗೂ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದಂತಹ ನಟಿ ಮೋಹಿನಿ ಅವರು ಪ್ರಪ್ರಥಮ ಬಾರಿಗೆ ಕನ್ನಡ ಸಿನಿಮಾರಂಗವನ್ನು ರವಿಚಂದ್ರನ್ ಅವರ ಶ್ರೀರಾಮಚಂದ್ರ ಚಿತ್ರದ ಮೂಲಕ ಪ್ರವೇಶ ಮಾಡಿದರು.
ಸ್ನೇಹಿತರೆ, 1992 ರಲ್ಲಿ ರವಿಚಂದ್ರನ್ (Actor Ravichandran) ಅವರು ದ್ವಿಪಾತ್ರದಲ್ಲಿ ಅಭಿನಯಿಸಿ ತಮ್ಮ ಅದ್ಭುತ ಹಾಸ್ಯ ಪ್ರಜ್ಞೆಯ ಮೂಲಕ ಮಸ್ತ್ ಮನೋರಂಜನೆ ನೀಡಿದಂತಹ ಶ್ರೀರಾಮಚಂದ್ರ ಸಿನಿಮಾ (Kannada Sriramachandra Movie) ಇಂದಿಗೂ ಕೂಡ ಅದೆಷ್ಟೋ ಕ್ರೇಜಿಸ್ಟಾರ್ ಅಭಿಮಾನಿಗಳ ಹಾರ್ಟ್ ಫೇವರೆಟ್.
ಹೌದು ಗೆಳೆಯರೇ ಅವಳಿ ಜವಳಿ ಸಹೋದರರ ಪಾತ್ರದಲ್ಲಿ ನಟ ರವಿಚಂದ್ರನ್ ಅಭಿನಯಿಸುವ ಮೂಲಕ ತಮ್ಮ ವಿಶಿಷ್ಟ ಹಾಸ್ಯ ಪ್ರಜ್ಞೆಯ ಮೂಲಕ ಕಮಾಲ್ ಮಾಡಿದರು.
ಹಲ್ಲುಬ್ಬು ಹಾಗೂ ಬುದ್ಧಿಮಾಂದ್ಯ ಹುಡುಗನ ಪಾತ್ರದಲ್ಲಿ ರವಿಚಂದ್ರನ್ ಅಭಿನಯಿಸಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಸಿನಿಮಾ ಸೂಪರ್ ಹಿಟ್ ಪಟ್ಟಿಯಲ್ಲಿ ಸೇರಿಕೊಂಡಿತ್ತು. ಆಗಿನ ಕಾಲದಲ್ಲಿ ಎಲ್ಲಿ ನೋಡಿದರೂ ಇದೆ ಸಿನಿಮಾದ ಹಾಡುಗಳು ಕೇಳಿ ಬರುತ್ತಿದ್ದವು.
ಡಿ ರಾಜೇಂದ್ರ ಬಾಬು ಅವರ ಅದ್ಭುತ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಸಿನಿಮಾಗೆ ಹಂಸಲೇಖ ಅವರ ಸಂಗೀತ ಸಂಯೋಜನೆ ಇತ್ತು. ಎಸ್ ಪಿ ಬಾಲಸುಬ್ರಮಣ್ಯಂ ಅವರು ಹಿನ್ನೆಲೆ ಗಾಯಕನಾಗಿ.. ಸುಂದರಿ ಸುಂದರಿ ನಿನ್ನ ಸುಂದರ ನಗುವಲ್ಲೇನೋ ಚಿಂತೆ ಇದೆ? ಎಂಬ ಹಾಡಿಗೆ ಕಂಟಧಾನ ಮಾಡಿದರು.
ಅಲ್ಲದೆ ಈ ಹಾಡು ಆಗಿನ ಕಾಲದಲ್ಲಿ ಬಹು ದೊಡ್ಡ ಮಟ್ಟದ ವೈರಲ್ ಕೂಡ ಆಗಿತ್ತು. ಹೀಗೆ 1992 ರಲ್ಲಿ ಶ್ರೀ ಧನಲಕ್ಷ್ಮಿ ಕ್ರಿಯೇಷನ್ ನಿರ್ಮಾಣ ಸಂಸ್ಥೆಯ ತೆರೆಕಂಡಂತಹ ಈ ಚಿತ್ರ ಬಹುದೊಡ್ಡ ಮಟ್ಟದಲ್ಲಿ ಸಕ್ಸಸ್ ಕಾಣುತ್ತದೆ. ಸಿನಿಮಾದಲ್ಲಿ ಅಭಿನಯಿಸಿದಂತಹ ಎಲ್ಲಾ ಕಲಾವಿದರು ಕೂಡ ಬಹುದೊಡ್ಡ ಜನಪ್ರಿಯತೆ ಪಡೆದುಕೊಂಡಿದ್ದರು. ಅದರಲ್ಲೂ ನಾಯಕಿ ಮೋಹಿನಿ ಅವರಿಗೆ ಸಾಲು ಸಾಲು ಸಿನಿಮಾಗಳ ಅವಕಾಶ ಹರಸಿ ಬಂದವು.
ಹೌದು ಗೆಳೆಯರೇ ಆಗಿನ ತಮಿಳು ಹಾಗೂ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದಂತಹ ನಟಿ ಮೋಹಿನಿ (Actress Mohini) ಅವರು ಪ್ರಪ್ರಥಮ ಬಾರಿಗೆ ಕನ್ನಡ ಸಿನಿಮಾರಂಗವನ್ನು (Kannada Film Industry) ರವಿಚಂದ್ರನ್ ಅವರ ಶ್ರೀರಾಮಚಂದ್ರ ಚಿತ್ರದ ಮೂಲಕ ಪ್ರವೇಶ ಮಾಡಿದರು.
ಬರ್ತಡೇ ಶಾಪಿಂಗ್ ಮಾಡಲು ಸೋನು ಗೌಡ ಖರ್ಚು ಮಾಡಿದ ಹಣ ಎಷ್ಟು ಗೊತ್ತಾ? ಇಷ್ಟೊಂದು ಹಣ ಎಲ್ಲಿಂದ ಬರುತ್ತೆ ಗುರು?
ಇದಾದ ಬಳಿಕ ಜ್ವಾಲಾ, ಸಿಡಿದೆದ್ದ ಪಾಂಡವರು, ಗಡಿಬಿಡಿ ಅಳಿಯ, ರೌಡಿ, ಲಾಲಿ, ನಿಶ್ಯಬ್ದ ಹೀಗೆ ಮುಂತಾದ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ತಮ್ಮದೇ ಆದ ವಿಶೇಷ ಕನ್ನಡ ಅಭಿಮಾನಿಗಳನ್ನು ಮೋಹಿನಿ ಸಂಪಾದಿಸಿಕೊಂಡರು.
ಹೀಗೆ ಯಶಸ್ವಿ ಸಿನಿಮಾಗಳನ್ನು ನೀಡುತ್ತಾ 2011ರವರೆಗೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದಂತಹ ಮೋಹಿನಿ ಅವರಿಗೆ ಕಾಲಕ್ರಮಣ ಅವಕಾಶಗಳು ಕಡಿಮೆಯಾದ ಬೆನ್ನಲ್ಲೇ ದೂರದರ್ಶನದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.
ಆನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಬಣ್ಣದ ಬದುಕಿನಿಂದ ದೂರ ಉಳಿದಿರುವ ಮೋಹಿನಿ ಅವರು 1999 ರಲ್ಲಿ ಅಮೆರಿಕ ಮೂಲದ ಕ್ರೈಸ್ಟ್ ಸಂಪ್ರದಾಯದ ಹುಡುಗನೊಬ್ಬನನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಅಮೆರಿಕದಲ್ಲಿ ಸೆಟ್ಟಲ್ ಆದರು.
ಹೀಗೆ ಮದುವೆಯ ಸಂದರ್ಭದಲ್ಲಿ ಬ್ರಾಹ್ಮಣರಾಗಿದ್ದ ಮೋಹಿನಿ ಅವರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರು. ಹೀಗೆ ಕ್ರೈಸ್ತ ಧರ್ಮದ ಆಚರಣೆಗಳನ್ನೆಲ್ಲ ಅನುಸರಿಸುತ್ತ ಅದರ ಮೇಲೆ ಹೆಚ್ಚಿನ ಭಕ್ತಿ ಗೌರವ ಹೊಂದಿರುವಂತಹ ನಟಿ ಮೋಹಿನಿ ಸದ್ಯ ಕ್ರೈಸ್ತ ಧರ್ಮದ ಕೌನ್ಸಿಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮದುವೆಯಾದ ಬಳಿಕ ಸಿನಿಮಾ ರಂಗದಿಂದ ಸಂಪೂರ್ಣ ದೂರ ಉಳಿದು ಆಧ್ಯಾತ್ಮಿಕತೆಯ ಕಡೆಗೆ ಗಮನ ಹರಿಸುತ್ತಿರುವ ಮೋಹಿನಿ ಅವರಿಗೆ ಎರಡು ಮುದ್ದಾದ ಮಕ್ಕಳಿದ್ದು, ಮುಂದಿನ ದಿನಗಳಲ್ಲಿ ಅವರು ಸಹ ಸಿನಿಮಾ ಕ್ಷೇತ್ರದಲ್ಲಿ ತೊಡಗಿಕೊಳ್ಳಲಿದ್ದಾರಾ? ಎಂಬುದನ್ನು ಕಾದು ನೋಡಬೇಕಿದೆ.
Interesting Facts About Kannada Sriramachandra Movie Fame Actress Mohini