ನಿಜಕ್ಕೂ ರಶ್ಮಿಕಾ ಮಂದಣ್ಣಗೆ ಕನ್ನಡ ಮಾತಾಡೋಕೆ ಬರಲ್ವಾ? ಇಲ್ಲ ಎಲ್ಲಾ ಗೊತ್ತಿದ್ದು ಡ್ರಾಮಾ ಮಾಡ್ತಿದ್ದಾರಾ ಎಂದ ನೆಟ್ಟಿಗರು!

Story Highlights

ಕಿರಿಕ್ ಪಾರ್ಟಿ ಸಿನಿಮಾದ ಸಾನ್ವಿ ಜೋಸೆಫ್ ಆಗಿ ಕನ್ನಡ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿ ಇಂದು ಬಾಲಿವುಡ್ ಅಂಗಳದಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಕೂಡ ಒಬ್ಬರು.

ಕನ್ನಡ ಸಿನಿಮಾ ರಂಗದಿಂದ (Kannada Film Industry) ಹೆಸರು ಸಂಪಾದಿಸಿ ಇಂದು ಬೇರೆ ಚಿತ್ರರಂಗದಲ್ಲಿ ಹೆಚ್ಚಿನ ಅವಕಾಶ ಗಿಟ್ಟಿಸಿಕೊಂಡು ಆಯಾ ಭಾಷೆಯ ಸಿನಿಮಾದಲ್ಲಿ ಹೆಚ್ಚಾಗಿ ಅಭಿನಯಿಸುತ್ತಾ ಫೇಮಸ್ ಆಗಿರುವಂತಹ ಸಾಕಷ್ಟು ಸೆಲೆಬ್ರಿಟಿಗಳನ್ನು ಕಂಡಿದ್ದೇವೆ.

ಅದರಲ್ಲಿ ಕಿರಿಕ್ ಪಾರ್ಟಿ (Kirik Party Cinema) ಸಿನಿಮಾದ ಸಾನ್ವಿ ಜೋಸೆಫ್ ಆಗಿ ಕನ್ನಡ ಚಿತ್ರದ (Kannada Movie) ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿ ಇಂದು ಬಾಲಿವುಡ್ (Bollywood) ಅಂಗಳದಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ (Actress Rashmika Mandanna) ಕೂಡ ಒಬ್ಬರು.

ಹೌದು ಗೆಳೆಯರೇ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ನಟ ರಕ್ಷಿತ್ ಶೆಟ್ಟಿ ಅವರ ನಟನೆಯಲ್ಲಿ ಮೂಡಿ ಬಂದಿದ್ದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ನಟಿ ರಶ್ಮಿಕಾ ಮಂದಣ್ಣ ಬಣ್ಣದ ಲೋಕವನ್ನು ಪ್ರವೇಶಿಸಿದರು.

ಬರ್ತಡೇ ಶಾಪಿಂಗ್ ಮಾಡಲು ಸೋನು ಗೌಡ ಖರ್ಚು ಮಾಡಿದ ಹಣ ಎಷ್ಟು ಗೊತ್ತಾ? ಇಷ್ಟೊಂದು ಹಣ ಎಲ್ಲಿಂದ ಬರುತ್ತೆ ಗುರು?

ಹೀಗೆ ಮೊದಲ ಸಿನಿಮಾದಲ್ಲಿಯೇ ತಮ್ಮ ಅಮೋಘ ಅಭಿನಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡ ರಶ್ಮಿಕಾ ಇದೀಗ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ.

ಕನ್ನಡ ಚಿತ್ರದ ಮೂಲಕವೇ ಬೆಳೆದು ಇಂದು ಕನ್ನಡವನ್ನೇ (Kannada Language) ಮರೆಯುತ್ತಿರುವ ರಶ್ಮಿಕಾ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ (Social Media) ಒಂದಲ್ಲ ಒಂದು ಪೋಸ್ಟ್ ವೈರಲ್ ಆಗುತ್ತಲೇ ಇರುತ್ತದೆ. ಹೌದು ಗೆಳೆಯರೇ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಗೀತ ಗೋವಿಂದಂ ಸಿನಿಮಾದ ಅವಕಾಶ ಸಿಕ್ಕಿದೊಡನೆ ರಕ್ಷಿತ್ ಶೆಟ್ಟಿ ಅವರೊಂದಿಗಿನ ಎಂಗೇಜ್ಮೆಂಟ್ ಮುರಿದುಕೊಂಡು ತಮ್ಮ ಕರಿಯರ್ ನತ್ತ ರಶ್ಮಿಕಾ ಮುಖಮಾಡಿದರು.

ರಶ್ಮಿಕಾ ಮಂದಣ್ಣ ಪೊಗರು ಸಿನಿಮಾದ ಪ್ರಮೋಷನ್ ಸಂದರ್ಭದಲ್ಲಿ ಸೇಮ್ ಥಿಂಗ್ ಹೇಳಬಹುದಾ? ಎನ್ನುವ ಮೂಲಕ ಕನ್ನಡ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ರು. ಇದೀಗ ಮತ್ತೊಮ್ಮೆ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿ ಒಂದರಲ್ಲಿ ಕನ್ನಡವನ್ನು ತಪ್ಪಾಗಿ ಮಾತನಾಡುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Actress Rashmika Mandanna

ಸೈಕೋ ಲವರ್ ಪಾತ್ರದಲ್ಲಿ ಅಭಿನಯಿಸಲು ಓಂ ಸಿನಿಮಾಗೆ ಶಿವಣ್ಣ ಪಡೆದಿದ್ದ ಸಂಭಾವನೆ ಎಷ್ಟು? ಅಷ್ಟಕ್ಕೂ ಆ ಸಿನಿಮಾ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?

ಹೌದು ಗೆಳೆಯರೇ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಆಗಿ ಇರುವಂತಹ ರಶ್ಮಿಕಾ ಮಂದಣ್ಣ ಕಳೆದ ಕೆಲವು ದಿನಗಳ ಹಿಂದೆ ತಮ್ಮ ಅಭಿಮಾನಿಗಳೊಡನೆ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಚಿಟ್ ಚಾಟ್ ನಡೆಸಿದರು.

ತನ್ನ ನೆಚ್ಚಿನ ನಟಿಗೆ ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಯನ್ನೇ ಕೇಳ ಹೊರಟರು, ಕನ್ನಡ ಅಭಿಮಾನಿಯೊಬ್ಬ ರಶ್ಮಿಕಾ ಮಂದಣ್ಣವರ ಈ ಒಂದು ಆಸ್ಕ್ ಮೀ ಎನಿಥಿಂಗ್ ಎಂಬ ಪ್ರಶ್ನೆಗೆ ಕನ್ನಡದ ಒಂದೆರಡು ಮಾತು ಎಂದು ಕೇಳಿಕೊಂಡಿದ್ದರು.

ಇದಕ್ಕೆ ರಶ್ಮಿಕಾ ಮಂದಣ್ಣ “ಹಾಯ್ ನಮಸ್ಕಾರ ಎಲ್ಲರೂ ಹೇಗಿದ್ದೀರಾ? ನೋವ್ತ ಇರಿ.. ಯಾವಾಗಲೂ ನಿಮ್ಮ ಬಗ್ಗೆ ಯೋಚನೆ ಮಾಡ್ತಾ ಇದ್ದೀನಿ ನಿಮ್ಮೆಲ್ಲರಿಗೂ ನನ್ನ ಪ್ರೀತಿಯನ್ನು ಕಳಿಸುತ್ತಿದ್ದೇನೆ” ಎಂದು ರಿಪ್ಲೈ ಮಾಡಿದರು.

ಡ್ಯಾನ್ಸ್ ರಾಜ ಡ್ಯಾನ್ಸ್ ಸಿನಿಮಾ ಸಮಯದಲ್ಲಿ ನಟ ವಿನೋದ್ ರಾಜ್ ತಮ್ಮ ಹೆಸರಿನ ಮುಂದೆ ರಾಜ್ ಎಂಬ ಹೆಸರು ಸೇರಿಸಿಕೊಂಡಿದ್ದು ಯಾಕೆ?

ಇದನ್ನು ಕಂಡಂತಹ ಅಭಿಮಾನಿಗಳು ಅದು ನೋವ್ತಾ ಇರಿ ಅಲ್ಲ, ನಗ್ತಾ ಇರಿ ಎನ್ನುವ ಮೂಲಕ ರಶ್ಮಿಕಾ ಅವರ ತಪ್ಪಾದ ಕನ್ನಡ ಉಚ್ಚಾರಣೆಯನ್ನು ಸರಿಪಡಿಸಿದ್ದಾರೆ. ಹೀಗೆ ಕನ್ನಡ ಸಿನಿಮಾ ರಂಗದಿಂದಲೇ ತಮ್ಮ ಬದುಕನ್ನು ಕಟ್ಟಿಕೊಂಡ ರಶ್ಮಿಕಾ ಮಂದಣ್ಣ ಮೂಲತಃ ನಮ್ಮ ಕರ್ನಾಟಕದ ಕೊಡಗಿನವರೆ ಆಗಿದ್ದು ಬೇರೆ ಭಾಷೆಗೆ ಹೋದ ನಂತರ ಕನ್ನಡವನ್ನೇ ಮರೆತಿರುವುದರ ಕುರಿತು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಸರಿಯಾದ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.

Social Media Comments Goes Viral on Actress Rashmika Mandanna speak Kannada

Related Stories