ಡ್ಯಾನ್ಸ್ ರಾಜ ಡ್ಯಾನ್ಸ್ ಸಿನಿಮಾ ಸಮಯದಲ್ಲಿ ನಟ ವಿನೋದ್ ರಾಜ್ ತಮ್ಮ ಹೆಸರಿನ ಮುಂದೆ ರಾಜ್ ಎಂಬ ಹೆಸರು ಸೇರಿಸಿಕೊಂಡಿದ್ದು ಯಾಕೆ?
ನಾವಿವತ್ತು ಡ್ಯಾನ್ಸ್ ರಾಜ ಡ್ಯಾನ್ಸ್ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ವಿನೋದ್ ರಾಜ್ ತಮ್ಮ ಹೆಸರಿನ ಮುಂದೆ ರಾಜ್ ಎಂಬ ಹೆಸರು ಸೇರಿಸಿಕೊಂಡಿದ್ದು ಯಾಕೆ? ಸಿನಿಮಾಗೆ ಬರುವ ಮುಂಚೆ ಈ ಹೆಸರಿತ್ತ ಎಂಬ ಎಲ್ಲ ಮಾಹಿತಿಯನ್ನು ತಿಳಿಯ ಹೊರಟಿದ್ದೇವೆ..
ಸ್ನೇಹಿತರೆ, ಕಳೆದ ಕೆಲವು ದಿನಗಳ ಹಿಂದೆ ಎಷ್ಟೇ ನಟಿ ಲೀಲಾವತಿ (Kannada Actress Leelavathi) ಹಾಗೂ ಮಗ ವಿನೋದ್ ರಾಜ್ (Actor Vinod Raj) ಅವರ ವೈಯಕ್ತಿಕ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಬಾರಿ ಸುದ್ದಿಗೊಳಗಾಗಿದ್ದು, ರವಿ ಬೆಳಗೆರೆಯವರು ಬರೆದಿದ್ದ ರಾಜ್ ಲೀಲಾ ವಿನೋದ ಎಂಬ ಪುಸ್ತಕವನ್ನು ನಂಬಿ ಲೀಲಾವತಿ ಹಾಗೂ ರಾಜಕುಮಾರ್ ಮದುವೆಯಾಗಿದ್ದರು ಅವರಿಬ್ಬರಿಗೂ ಜನಿಸಿರುವಂತಹ ಪುತ್ರ ವಿನೋದ್ ಎಂಬ ತಪ್ಪು ಕಲ್ಪನೆಯನ್ನು ಕನ್ನಡಿಗರು ಮಾಡಿಕೊಂಡಿದ್ದರು.
ಇದೆಲ್ಲದಕ್ಕೂ ಕಳೆದ ಕೆಲವು ತಿಂಗಳುಗಳ ಹಿಂದಷ್ಟೇ ಹಿರಿಯ ನಿರ್ದೇಶಕ ಪ್ರಕಾಶ್ ರಾಜ್ ಮೇಹೂ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೆಲ ಪೋಸ್ಟ್ಗಳನ್ನು ಹಂಚಿಕೊಳ್ಳುವ ಮೂಲಕ ಲೀಲಾವತಿಯವರ ನಿಜವಾದ ಪತಿ ಭಾಗವತರು ಹಾಗೂ ವಿನೋದ್ ರಾಜ್ ಇಷ್ಟು ವರ್ಷಗಳಾದರೂ ತಮ್ಮ ತಾಯಿಗಾಗಿ ಮದುವೆಯಾಗದೆ ಒಬ್ಬಂಟಿಯಾಗಿಲ್ಲ ಬದಲಿಗೆ ತಮ್ಮ ಮನೆ ಕೆಲಸದವರನ್ನೇ ಮದುವೆಯಾಗಿದ್ದಾರೆ….
ಈ ದಂಪತಿಗಳಿಗೆ ಇಂಜಿನಿಯರಿಂಗ್ ಓದುತ್ತಿರುವಂತಹ ಮಗನಿದ್ದಾನೆ ಎಂಬ ಕಟು ಸತ್ಯವನ್ನು ಹೊರಹಾಕುವ ಮೂಲಕ ಹರಿದಾಡುತ್ತಿದ್ದಂತಹ ಎಲ್ಲಾ ಊಹಾಪೋಹಗಳಿಗೆ ಬ್ರೇಕ್ ಹಾಕಿಬಿಟ್ಟರು. ಇದರ ಬೆನ್ನೆಲೆ ನಾವಿವತ್ತು ಡ್ಯಾನ್ಸ್ ರಾಜ ಡ್ಯಾನ್ಸ್ ಸಿನಿಮಾದ (Dance Raja Dance Kannada Cinema) ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ವಿನೋದ್ ರಾಜ್ ತಮ್ಮ ಹೆಸರಿನ ಮುಂದೆ ರಾಜ್ ಎಂಬ ಹೆಸರು ಸೇರಿಸಿಕೊಂಡಿದ್ದು ಯಾಕೆ?
ಸಿನಿಮಾ ಗೆ ಬರುವ ಮುಂಚೆ ಈ ಹೆಸರಿತ್ತ ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ಸಂಕ್ಷಿಪ್ತವಾಗಿ ತಿಳಿಸ ಹೊರಟಿದ್ದು ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಖಾಸಗಿ ಯೂಟ್ಯೂಬ್ ಚಾನೆಲ್ನ ಸಂದರ್ಶನ ಒಂದರಲ್ಲಿ ಮಾತನಾಡುವಾಗ ನಟ ದ್ವಾರಕೀಶ್ ಅವರು ಇದರ ಅಸಲಿ ಮಾಹಿತಿಯೊಂದನ್ನು ಬಿಚ್ಚಿಟ್ಟರು.
ಆಗಿನ ಕಾಲದಲ್ಲಿ ದ್ವಾರಕೀಶ್ ಹಾಗೂ ಪುಟ್ಟಣ್ಣ ಆತ್ಮೀಯ ಸ್ನೇಹಿತರಾಗಿರುತ್ತಾರೆ. ಹೀಗಿರುವಾಗ ನಾನೊಂದು ಸಿನಿಮಾ ಕೊಡ್ತೀನಿ ನೀನು ನಿರ್ಮಾಣ ಮಾಡು ಎಂದು ಪುಟ್ಟಣ್ಣ ದ್ವಾರಕೇಶ್ ಅವರ ಬಳಿ ಕೇಳಿಕೊಂಡಾಗ ನಾನು ಕಥೆ ಕೇಳದೆ ಸಿನಿಮಾ ಮಾಡುವ ತಾಪತ್ರೆಯಕ್ಕೆ ಹೋಗುವುದಿಲ್ಲ. ಮೊದಲಿಗೆ ಕಥೆ ಹೇಳು ಎನ್ನುತ್ತಾರೆ.. ಆದರೆ ಪುಟ್ಟಣ್ಣ ನನಗೆ ಕಥೆ ಹೇಳೋಕೆ ಬರೋದಿಲ್ಲ ಬದಲಿಗೆ 25 ದಿನಗಳ ಕಾಲಾವಧಿಯನ್ನು ನನಗೆ ಕೊಡು ಸಿನಿಮಾ ಚಿತ್ರಿಸಿ ಹೇಗಿದೆ ಎಂಬುದನ್ನು ತೋರಿಸಿ ಕೊಡುತ್ತೇನೆ ಎನ್ನುತ್ತಾರೆ.
ಆಗ ದ್ವಾರಕೀಶ್ ನಾನು ಕಥೆಯನ್ನು ಕೇಳದೆ ಯಾವತ್ತಿಗೂ ಯಾರಿಗಾದರೂ ಸಿನಿಮಾ ಮಾಡುವುದೇ ಇಲ್ಲ ಎಂದು ಖಡಕಂಡಿತವಾಗಿ ಹೇಳಿಬಿಡುತ್ತಾರೆ. ಆನಂತರ ಪುಟ್ಟಣ್ಣ ಕಣಗಾಲ್ ಬೇರೆ ನಿರ್ಮಾಪಕರನ್ನು ಹುಡುಕಿ ತೆಗೆದು ಅದ್ಭುತ ಯಶಸ್ಸನ್ನು ಕಂಡ ಚಿತ್ರ ಮಾನಸ ಸರೋವರ. ಹೀಗೆ ಸಿನಿಮಾದ ಯಶಸ್ಸಿನ ನಂತರ ತಮ್ಮ ಆತ್ಮೀಯ ಗೆಳೆಯ ದ್ವಾರಕೀಶ್ ಅವರನ್ನು ಭೇಟಿ ಮಾಡಿ ಮಾತನಾಡಿದ ಪುಟ್ಟಣ್ಣ ಕಣಗಾಲ್ ದ್ವಾರಕೀಶ್ ಅವರಿಗೆ ನೀನು ಯಾವುದೇ ಸಿನಿಮಾ ಮಾಡ ಹೊರಟರು ಹೊಸದೊಬ್ಬ ನಾಯಕನನ್ನು ಹಾಕಿಕೊಂಡು ಮಾಡು.
ಖಂಡಿತ ಸಕ್ಸಸ್ ಕಾಣ್ತೀಯ ಎಂಬ ಸೂಚನೆ ನೀಡುತ್ತಾರೆ ಅದರಂತೆ ದ್ವಾರಕೀಶ್ ಅವರಿಗೆ ಸಿನಿಮಾದ ಕಥೆ ಸಿಕ್ಕಾಗ ತಮ್ಮ ಮದರಾಸಿನಲ್ಲಿದ್ದ ಮನೆಯ ಪಕ್ಕದ ಮನೆಯಲ್ಲೇ ವಾಸವಿದ್ದಂತಹ ಲೀಲಾವತಿ ಅಮ್ಮ ಹಾಗೂ ವಿನೋದ್ ರಾಜ್ ಅವರ ನೆನಪಾಗುತ್ತದೆ. ತನ್ನ ಕಣ್ಣೆದುರೇ ಅದ್ಬುತವಾಗಿ ಡಾನ್ಸ್ ಮಾಡಬಲ್ಲ ಆಕ್ಟಿಂಗ್ ಕುರಿತು ಆಸಕ್ತಿ ಇರುವ ಹುಡುಗನಿದ್ದಾನಲ್ಲ ಎಂದು ವಿನೋದ್ ರಾಜ್ ಅವರನ್ನು ತಮ್ಮ ಡಾನ್ಸ್ ರಾಜ ಡಾನ್ಸ್ ಸಿನಿಮಾದ ನಾಯಕನನ್ನಾಗಿ ಇಂಟ್ರೊಡ್ಯೂಸ್ ಮಾಡಿದರು.
ಹೀಗೆ ಮೊದಲ ಚಿತ್ರದಲ್ಲಿಯೇ ಅಪ್ರತಿಮ ಅಭಿನಯದ ಮೂಲಕ ಬಹುದೊಡ್ಡ ಮಟ್ಡದ ಯಶಸ್ಸನ್ನು ಕಂಡ ವಿನೋದ್ ರಾಜ್ ಅವರ ಹೆಸರು ಬಾಲ್ಯದಿಂದಲೂ ವಿನೋದ್ ರಾಜ್ ಎಂದೇ ಇರುತ್ತದೆ. ಇದನ್ನು ಸಿನಿಮಾರಂಗಕ್ಕೆ ಬರುವಾಗಾಗಲಿ ಅಥವಾ ಯಶಸ್ಸು ಕಂಡ ನಂತರವಾಗಲಿ ವಿನೋದ್ ರಾಜ್ ತಮ್ಮ ಹೆಸರಿನ ಬದಲಾವಣೆಯನ್ನು ಮಾಡಿಕೊಳ್ಳಲು ಹೋಗಲೇ ಇಲ್ಲ. ಆದರೆ ಜನರು ರಾಜ್ ಎಂಬ ಹೆಸರನ್ನು ರಾಜಕುಮಾರ್ ಅವರ ಹೆಸರಿಗೆ ಹೋಲಿಸುತ್ತಾ ತಪ್ಪು ತಿಳುವಳಿಕೆ ಮಾಡಿಕೊಂಡಿದ್ದಾರೆ.
Why did Kannada actor Vinod Raj added the name Raj to his name