ಸಿಪಾಯಿ ಸಿನಿಮಾ ನೋಡಿದ ಚಿರಂಜೀವಿ ಅಭಿಮಾನಿಗಳು ರವಿಚಂದ್ರನ್ ಮೇಲೆ ಕಿಡಿ ಕಾರಿದ್ದು ಯಾಕೆ? ಅಂದು ನಿಜಕ್ಕೂ ಆಗಿದ್ದಾದರೂ ಏನು ಗೊತ್ತಾ?

ಸಿಪಾಯಿ ಸಿನಿಮಾದಲ್ಲಿನ ಅದ್ಭುತ ಕಥೆ ಹಾಗೂ ಸೌಂದರ್ಯ, ಮೆಗಾಸ್ಟಾರ್ ಚಿರಂಜೀವಿ ಅವರಂತಹ ದಿಗ್ಗಜ ನಟರ ಅಭಿನಯ, ಎಲ್ಲವೂ ಸಿನಿಮಾವನ್ನು ಗೆಲ್ಲಿಸಿ ಕೊಡುವಲ್ಲಿ ಯಶಸ್ವಿಯಾಗಿತ್ತು.

ಕನ್ನಡದ ಮೆಗಾ ಬ್ಲಾಕ್ಬಸ್ಟರ್ ಹಿಟ್ ಚಿತ್ರ ಸಿಪಾಯಿ (Kannada Sipayi Cinema) ರವಿಚಂದ್ರನ್ (Actor Ravichandran) ಅವರ ವೃತ್ತಿ ಬದುಕಿನಲ್ಲಿ ಮಹತ್ತರವಾದ ಮೈಲುಗಲ್ಲನ್ನು ಹಾಕಿ ಕೊಟ್ಟಂತಹ ಸಿನಿಮಾ ಎಂದರೆ ತಪ್ಪಾಗಲಿಕ್ಕಿಲ್ಲ.

ಇದಕ್ಕೆ ಮುಖ್ಯ ಕಾರಣ ಸಿಪಾಯಿ ಸಿನಿಮಾದಲ್ಲಿನ ಅದ್ಭುತ ಕಥೆ ಹಾಗೂ ಸೌಂದರ್ಯ (Actress Soundarya), ಮೆಗಾಸ್ಟಾರ್ ಚಿರಂಜೀವಿ (Actor Chiranjeevi) ಅವರಂತಹ ದಿಗ್ಗಜ ನಟರ ಅಭಿನಯ, ಎಲ್ಲವೂ ಸಿನಿಮಾವನ್ನು ಗೆಲ್ಲಿಸಿ ಕೊಡುವಲ್ಲಿ ಯಶಸ್ವಿಯಾಗಿತ್ತು.

ಆದರೆ ಸಿನಿಮಾ ಯಶಸ್ಸಿನ ಹಾದಿ ಹಿಡಿಯುತ್ತಾ ಹೋದಾಗ ವಿವಾದಗಳ ಸುಳಿವಿನೊಳಗೆ ಸಿಲುಕಿಕೊಳ್ಳುತ್ತಾ ಹೋಗುತ್ತದೆ. ಹೌದು ಸಿನಿಮಾದಲ್ಲಿನ ಆ ಒಂದು ದೃಶ್ಯದಿಂದಾಗಿ ಚಿರಂಜೀವಿ ಅವರ ಅಭಿಮಾನಿಗಳು ರವಿಚಂದ್ರನ್ ಅವರ ಮೇಲೆ ಕಿಡಿ ಕಾರಿದರು.

ಸಿಪಾಯಿ ಸಿನಿಮಾ ನೋಡಿದ ಚಿರಂಜೀವಿ ಅಭಿಮಾನಿಗಳು ರವಿಚಂದ್ರನ್ ಮೇಲೆ ಕಿಡಿ ಕಾರಿದ್ದು ಯಾಕೆ? ಅಂದು ನಿಜಕ್ಕೂ ಆಗಿದ್ದಾದರೂ ಏನು ಗೊತ್ತಾ? - Kannada News

ಡಬಲ್ ಮ್ಯಾರೇಜ್, ಡಬಲ್ ಧಮಾಕ, ಎರಡು ಮೂರು ಮದುವೆಯಾಗಿರುವ ನಮ್ಮ ಸ್ಯಾಂಡಲ್ ವುಡ್ ಚಂದುಳ್ಳಿ ಚೆಲುವೆರು ಯಾರ್ಯಾರು ಗೊತ್ತೇ?

ಸಿನಿಮಾ ಪ್ರಸಾರವಾಗಬಾರದೆಂದು ಅಡ್ಡಗೋಲು ಹಾಕಿದರು, ಆನಂತರ ಏನಾಯ್ತು? ಯಾವ ಕಾರಣದಿಂದ ಚಿರಂಜೀವಿ ಅಭಿಮಾನಿಗಳು (Actor Chiranjeevi Fans) ರವಿಚಂದ್ರನ್ ಮೇಲೆ ಎರಗಿದರು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಸ್ನೇಹಿತರೆ ಸದಾ ಕಾಲ ತಮ್ಮ ಸಿನಿಮಾದಲ್ಲಿ ಹೊಸತನವನ್ನು ತರಬೇಕು, ಯಾರು ಮಾಡಿಲ್ಲದಂತಹ ಹೊಸದೊಂದನ್ನು ತಾನು ಮಾಡಬೇಕು, ಬೇರೆ ಸಿನಿಮಾ ಇಂಡಸ್ಟ್ರಿಯ ಕಲಾವಿದರನ್ನು ಕನ್ನಡಕ್ಕೆ (Kannada Film Industry) ಕರೆತಂದು ಕನ್ನಡ ಮಾತನಾಡಿಸಬೇಕೆಂದು ಸದಾ ರವಿಚಂದ್ರನ್ ಬಯಸುತ್ತಿದ್ದರು. ಈ ಕಾರಣದಿಂದ ರವಿಚಂದ್ರನ್ ನಿರ್ದೇಶನ ಮಾಡಿದ ಎಲ್ಲಾ ಸಿನಿಮಾಗಳು ಸೂಪರ್ ಡೂಪರ್ ಹಿಟ್.

ಒಂದು ಚಿತ್ರದ ಶಾರ್ಟ್ ಸರಿಯಾಗಿ ಬರಲಿಲ್ಲವೆಂದರೆ ಅದನ್ನು ಒಮ್ಮೆಯಲ್ಲ ನೂರು ಬಾರಿಯಾದರೂ ಮಾಡಿ ಅದನ್ನು ಸರಿಪಡಿಸುವವರೆಗೂ ಬಿಡುತ್ತಿದ್ದವರಲ್ಲ ನಮ್ಮ ಕನ್ನಡದ ಕನಸುಗಾರ. ಹೀಗಿರುವಾಗ 1996ರಲ್ಲಿ ತೆರೆಕಂಡ ರವಿಚಂದ್ರನ್ ಅಭಿನಯದ, ನಿರ್ದೇಶನದ ಹಾಗೂ ನಿರ್ಮಾಣದ ಸಿಪಾಯಿ ಸಿನಿಮಾದ ಇಂಟರ್ವಲ್ ಆದ ಬಳಿಕ ಮೆಗಾಸ್ಟಾರ್ ಚಿರಂಜೀವಿ ಅವರ ಆಗಮನವಾಗುತ್ತದೆ.

Kannada Actor Ravichandran and Actor Chiranjeevi

ಟಾಪ್ ನಟ ಎನಿಸಿಕೊಂಡಿದ್ದ ನಟ ಧ್ಯಾನ್ ಸಿನಿಮಾರಂಗ ತೊರೆಯಲು ಕಾರಣವೇನು ಗೊತ್ತಾ? ಪಾಪ ಈ ನಟನ ಬದುಕು ಹೀಗಾಗಬಾರದಿತ್ತು!

ಹೀಗೆ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಬಹುದೊಡ್ಡ ಹೆಸರು ಸಂಪಾದಿಸಿದ್ದ ಚಿರಂಜೀವಿ ಅವರನ್ನು ಕನ್ನಡಕ್ಕೆ ಕರೆತರುವ ಪ್ರಯತ್ನದಲ್ಲಿ ರವಿಚಂದ್ರನ್ ಗೆದ್ದಿದ್ದರು. ಹೌದು ಗೆಳೆಯರೇ ಸಿನಿಮಾದಲ್ಲಿ ನಟಿ ಸೌಂದರ್ಯ ಹಾಗೂ ಚಿರಂಜೀವಿ ಅವರ ಪಾತ್ರ ಬಹಳನೇ ಹೈಲೈಟ್ ಆಗಿತ್ತು.

ಕನ್ನಡ ಮಾತ್ರವಲ್ಲದೆ ತೆಲುಗು ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಿನಿಮಾ ಸಹಕಾರಿಯಾಗಿತ್ತು. ಹೀಗೆ ತಮ್ಮ ಅಮೋಘ ಅಭಿನಯದ ಮೂಲಕ ರವಿಮಾಮನ ಸಿನಿಮಾದಲ್ಲಿ ಮಿಂಚಿದಂತಹ ಚಿರಂಜೀವಿ ರವಿಚಂದ್ರನ್ ಅವರು ಸಿನಿಮಾದಲ್ಲಿ ನಟಿಸಲು ಕೇಳಿಕೊಂಡದ್ದೇ ಬಹಳಷ್ಟು ಪ್ರೀತಿಯಿಂದಲೇ ಬಂದು ನಟಿಸಿದ್ದರು.

ಹೀಗೆ ಎಲ್ಲವೂ ಚೆನ್ನಾಗಿದೆ ಎನ್ನುವಾಗ ಸಿನಿಮಾ ಸಕ್ಸಸ್ ಹಾದಿಯನ್ನು ಹಿಡಿಯುತ್ತದೆ ಇಂತಹ ಸಂದರ್ಭದಲ್ಲಿ ಸಿನಿಮಾ ನೋಡಿದ ಕೆಲ ತೆಲುಗು ಅಭಿಮಾನಿಗಳು ರವಿಚಂದ್ರನ್ ಅವರ ವಿರುದ್ಧ ಕಿಡಿ ಕಾರಲು ಆರಂಭಿಸುತ್ತಾರೆ.

ನಾಚಿಕೆ ಬಿಟ್ಟು ದೇಹ ಪ್ರದರ್ಶನ ಮಾಡ್ತಿರಲ್ವಾ ಏನು ಅನ್ಸೋದಿಲ್ವಾ ಎಂದವರಿಗೆ ನಟಿ ಸಿಲ್ಕ್ ಸ್ಮಿತಾ ಮಾಡಿದ್ದೇನು ಗೊತ್ತಾ? ನಿಜಕ್ಕೂ ಆಕೆ ಗಟ್ಟಿಗಿತ್ತಿ

ಹೌದು ಗೆಳೆಯರೇ ಸಿನಿಮಾದ ಕ್ಲೈಮಾಕ್ಸ್ ಹಂತದಲ್ಲಿ ಚಿರಂಜೀವಿ ಸಾಯುವಂತಹ ದೃಶ್ಯ ಇರುತ್ತದೆ. ಹೀಗಾಗಿ ಅದನ್ನು ನೋಡಲಾಗದ ಅಭಿಮಾನಿಗಳು ಸಿನಿಮಾ ಪ್ರಸಾರವಾಗುವುದನ್ನು ತಡೆಗೋಲು ಹಾಕಲು ಮುಂದಾದರು.

ಆದರೆ ಚಿರಂಜೀವಿ ಮಾಧ್ಯಮದ ಮುಂದೆ ಬಂದು ಇದರ ಸ್ಪಷ್ಟನೆ ನೀಡಿ ಪಾತ್ರವನ್ನು ಕೇವಲ ಪಾತ್ರವನ್ನಾಗಿ ನೋಡಿ ಎಂದು ಅಭಿಮಾನಿಗಳ ಮನವೊಲಿಸುವ ಮೂಲಕ ಆಗುತ್ತಿದ್ದಂತಹ ಅಹಿತಕಾರಿ ಘಟನೆಗೆ ಬ್ರೇಕ್ ಹಾಕಿದರು. ಅಂದಿನಿಂದ ಇಂದಿನವರೆಗೂ ಚಿರಂಜೀವಿ ಹಾಗೂ ರವಿಚಂದ್ರನ್ ಅವರ ಬಾಂಧವ್ಯ ಅಷ್ಟೇ ಮಧುರವಾಗಿ ಉಳಿದುಕೊಂಡು ಬಂದಿರುವುದು ವಿಶೇಷ.

ದುನಿಯಾ ಸಿನಿಮಾ ಮೂಲಕ ರಾತ್ರೋ ರಾತ್ರಿ ಸ್ಟಾರ್ ನಟಿಯಾದ ರಶ್ಮಿ ಇಂಡಸ್ಟ್ರಿಯಿಂದ ಕಣ್ಮರೆ ಆಗಿದ್ದೇಕೆ? ಪಾಪ ಅವರ ಈಗಿನ ಸ್ಥಿತಿ ಹೇಗಿದೆ ಗೊತ್ತಾ?

Interesting Facts About Actor Ravichandran Actor Chiranjeevi Starrer Kannada Cinema Sipayi

Follow us On

FaceBook Google News

Interesting Facts About Actor Ravichandran Actor Chiranjeevi Starrer Kannada Cinema Sipayi