ಸಿನಿಮಾ ರಂಗದಲ್ಲಿರುವ ಕಲಾವಿದರ ಬದುಕೆ ಹೀಗೆ, ಕೇವಲ ಒಂದೆರಡು ಸಿನಿಮಾಗಳನ್ನು ಮಾಡಿ ಉತ್ತುಂಗದ ಶಿಖರಕ್ಕೆ ಏರುವಂತಹ ಸ್ಟಾರ್ ನಟ ನಟಿಯರು ತಮ್ಮ ವೃತ್ತಿ ಬದುಕಿನಲ್ಲಿ ಯಶಸ್ಸು ಕಂಡ ಹಾಗೆ ತಮ್ಮ ವೈಯಕ್ತಿಕ ಬದುಕಿನಲ್ಲಿ ಕಾಣುವುದಿಲ್ಲ.
ಹೌದು ಗೆಳೆಯರೇ ಬಾಳ ಸಂಗಾತಿಯ ಆಯ್ಕೆಯಲ್ಲಿ ತಪ್ಪು ನಿರ್ಧಾರ ಪಡೆದುಕೊಂಡು ಜೀವನ್ಪರಿಯಂತ ಕಷ್ಟ ಅನುಭವಿಸುತ್ತಿರುವುದನ್ನು ನಾವು ಸಾಕಷ್ಟು ನಿದರ್ಶನಗಳಲ್ಲಿ ಕಂಡಿದ್ದೇವೆ.
ಟಾಪ್ ನಟ ಎನಿಸಿಕೊಂಡಿದ್ದ ನಟ ಧ್ಯಾನ್ ಸಿನಿಮಾರಂಗ ತೊರೆಯಲು ಕಾರಣವೇನು ಗೊತ್ತಾ? ಪಾಪ ಈ ನಟನ ಬದುಕು ಹೀಗಾಗಬಾರದಿತ್ತು!
ಅದರಂತೆ ಗಟ್ಟಿ ನಿರ್ಧಾರ ಮಾಡಿ ತಮ್ಮ ಪತಿಗೆ ವಿಚ್ಛೇದನ ನೀಡಿ ಮತ್ತೊಂದು ಮದುವೆ ಮಾಡಿಕೊಂಡು ಸುಖವಾಗಿ ಸಾಂಸಾರಿಕ ಜೀವನ ನಡೆಸುತ್ತಿರುವ ನಟಿಯರು ನಮ್ಮ ಕನ್ನಡ ಸಿನಿಮಾರಂಗದಲ್ಲಿದ್ದಾರೆ (Kannada Film Industry). ಹೀಗೆ ಕಲಹ, ಮನಸ್ತಾಪ ಹಾಗೂ ಅಪನಂಬಿಕೆಯಿಂದ ಮೊದಲ ಪತಿಯಿಂದ ದೂರಾಗಿ ಎರಡು ಮೂರು ಮದುವೆಯನ್ನು ಮಾಡಿಕೊಂಡಿರುವ ಕನ್ನಡದ ಸ್ಟಾರ್ ನಟಿಯರು ಯಾರ್ಯಾರು ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.
ನಿಮಗೂ ಕೂಡ ಈ ಒಂದು ಕುತೂಹಲಕಾರಿ ಮಾಹಿತಿಯನ್ನು ತಿಳಿದುಕೊಳ್ಳುವ ಇಚ್ಛೆ ಇದ್ದಲ್ಲಿ ತಪ್ಪದೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಅಭಿನಯ ಶಾರದೆ ಜಯಂತಿ – Actress Jayanthi
ಬಾಲ ಕಲಾವಿದೆಯಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಜಯಂತಿ ಅಮ್ಮನವರು ತಮ್ಮ ಅಮೋಘ ಅಭಿನಯದ ಮೂಲಕ ಅಭಿನಯ ಶಾರದೆ ಎಂಬ ಬಿರುದು ಪಡೆದು ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿ ಕನ್ನಡ ಚಿತ್ರರಂಗದಲ್ಲಿ (Kannada Cinema) ಉತ್ತುಂಗದ ಶಿಖರವನ್ನೇರಿದರು. ಹೀಗೆ ತಮ್ಮ ವೃತ್ತಿ ಬದುಕಿನಲ್ಲಿ ಯಶಸ್ಸನ್ನು ಕಂಡಂತಹ ಈ ನಟಿ ತಮ್ಮ ವೈಯಕ್ತಿಕ ಬದುಕಿನಲ್ಲಿ ಕಾಣಲಿಲ್ಲ.
ಹೌದು ಗೆಳೆಯರೇ ನಟಿ ಜಯಂತಿ ಅವರು ಮೊದಲಿಗೆ ಪಿಕೆಟಿ ಶಿವರಾಮ್ ಎಂಬುವರನ್ನು ಪ್ರೀತಿಸಿ ಮದುವೆಯಾಗುತ್ತಾರೆ. ಆದರೆ ಇವರ ವೈಯಕ್ತಿಕ ಬದುಕು ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ, ನಂತರ ಅವರಿಗೆ ವಿಚ್ಛೇದನ ನೀಡಿ ಗಿರಿ ಬಾಬು ಹಾಗೂ ರಾಜಶೇಖರ್ ಎಂಬುವರೊಂದಿಗೆ ಎರಡು ಮತ್ತು ಮೂರನೆ ಮದುವೆಯಾದರು.
ನಟಿ ಜಯಮಾಲಾ – Actress Jayamala
ಸಿನಿಮಾ ಕ್ಷೇತ್ರದ ಉತ್ತುಂಗದ ಶಿಖರದಲ್ಲಿರುವಾಗಲೇ ಮದುವೆಯಾಗಿ ಮಗು ಇದ್ದಂತಹ ಪ್ರಭಾಕರ್ ಅವರೊಂದಿಗೆ ಜಯಮಾಲ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಆದರೆ ಕೆಲವೇ ಕೆಲವು ತಿಂಗಳೊಳಗೆ ಅವರಿಂದ ದೂರದ ಜಯಮಾಲಾ ಅವರು ಎಂ ರಾಮಕೃಷ್ಣ ಎಂಬುವರನ್ನು ಎರಡನೇ ಮದುವೆಯಾದರು.
ನಟಿ ಖುಷ್ಬೂ – Actress Kushboo
ರವಿಚಂದ್ರನ್ ಅವರ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡಿಗರ ಮನದರಸಿಯಾಗಿರುವ ಖುಷ್ಬು ಅವರು ತನ್ನ ಆತ್ಮೀಯ ಗೆಳೆಯ ಪ್ರಭು ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಆದರೆ ಒಂದಾಣಿಕೆ ಸರಿ ಬರದ ಕಾರಣ ಖುಷ್ಬು ಸಿ ಸುಂದರ್ ಎಂಬುವರನ್ನು ಎರಡನೇ ಮದುವೆಯಾದರು.
ನಟಿ ಶ್ರುತಿ – Actress Shruti
ಪೀಕ್ನಲ್ಲಿ ಇರುವಾಗ ನಿರ್ದೇಶಕ ಎಸ್ ಮಹೇಂದರ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶೃತಿಯವರು ಅವರೊಂದಿಗಿನ ಸಾಂಸರಿಕ ಜೀವನದಲ್ಲಿನ ಕಷ್ಟ ನೋವನ್ನು ಅನುಭವಿಸಲಾಗದೆ ವಿಚ್ಛೇದನ ಪಡೆದು ದೂರಾಗಿ ಚಕ್ರವರ್ತಿ ಚಂದ್ರ ಚೂಡ ಎಂಬುವರೊಂದಿಗೆ ಎರಡನೇ ಮದುವೆಯಾದರು. ಆದರೆ ಈ ಮದುವೆಯು ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ.
ನಟಿ ಅನುಪ್ರಭಾಕರ್ – Actress Anu Prabhakar
ಜಯಂತಿ ಅವರ ಮಗ ಕೃಷ್ಣಕುಮಾರ್ ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನು ವಿಚ್ಛೇದನ ಪಡೆದು ತಮ್ಮ ಬಹುಕಾಲದ ಗೆಳೆಯ ರಘು ಮುಖರ್ಜಿ ಎಂಬುವರನ್ನು ಎರಡನೇ ಮದುವೆಯಾಗುತ್ತಾರೆ.
Kannada Sandalwood actresses who are married two or three times
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.