ಟಾಪ್ ನಟ ಎನಿಸಿಕೊಂಡಿದ್ದ ನಟ ಧ್ಯಾನ್ ಸಿನಿಮಾರಂಗ ತೊರೆಯಲು ಕಾರಣವೇನು ಗೊತ್ತಾ? ಪಾಪ ಈ ನಟನ ಬದುಕು ಹೀಗಾಗಬಾರದಿತ್ತು!
ಕನ್ನಡದಿಂದ ಬಾಲಿವುಡ್ ಗೆ ಹಾರಿದ ನಟ ಧ್ಯಾನ್ ಯಶಸ್ವಿ ಸಿನಿಮಾಗಳನ್ನು ನೀಡಿ ಉತ್ತುಂಗದ ಶಿಖರದಲ್ಲಿರುವಾಗ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹೌದು ಗೆಳೆಯರೆ ಹತ್ತು ವರ್ಷಗಳ ಕಾಲ ಸಿನಿಮಾ ಪ್ರಪಂಚದಲ್ಲಿ ಮಿಂಚಿದ ಧ್ಯಾನ್ 2011 ರಲ್ಲಿ ರಿಥಿಕ ಜಾಲಿ ಎಂಬುವರೊಂದಿಗೆ...
ಸಾಮಾನ್ಯವಾಗಿ ನಟ ಧ್ಯಾನ್ (Actor Dhyan) ಎಂದರೆ ಯಾರಿಗೂ ಅಷ್ಟು ಬೇಗ ಮುಖ ಪರಿಚಯವಾಗುವುದಿಲ್ಲ, ಬದಲಿಗೆ ರಮ್ಯಾ ಅವರೊಂದಿಗೆ ಅಮೃತದಾರೆ ಸಿನಿಮಾದಲ್ಲಿ (Kannada Amrithadhare Cinema) ಅಭಿನಯಿಸಿರುವಂತಹ ನಟ ಎಂದರೆ ಎಲ್ಲರಿಗೂ ತಟ್ಟಂತ ನೆನಪಾಗಿ ಬಿಡುವ ಸುರದ್ರೂಪಿ ಸುಂದರ.
ಆಗಿನ ಕಾಲದ ಹೆಣ್ಣು ಮಕ್ಕಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿ ಕ್ರಶ್ ಎಂಬ ಪಟ್ಟಿಗೆ ಸೇರ್ಪಡೆಯಾಗುತ್ತಿದ್ದಂತಹ ಈ ನಟ ಏಕಾಏಕಿ ಸಿನಿಮಾರಂಗ ತೊರೆದು ಈಗ ಏನು ಮಾಡುತ್ತಿದ್ದಾರೆ?
ತಮ್ಮ ಪತ್ನಿ ಹಾಕಿದ ಆ ಕಂಡೀಶನ್ನಿಂದ ಬಣ್ಣದ ಬದುಕಿಗೆ ಗುಡ್ ಬೈ ಹೇಳಿದ್ರಾ, ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟ್ಟದ ಮುಖಾಂತರ ತಿಳಿಸ ಹೊರಟಿದ್ದು ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
2001ನೇ ಇಸವಿಯಲ್ಲಿ ‘ನನ್ನ ಪ್ರೀತಿಯ ಹುಡುಗಿ’ ಎಂಬ ಸಿನಿಮಾದ ಮೂಲಕ ಬಣ್ಣದ ಲೋಕವನ್ನು ಪ್ರವೇಶ ಮಾಡಿದ ಸಮೀರ್ ದತ್ತಾನಿ (Actor Sameer Dattani) ಅಲಿಯಾಸ್ ಧ್ಯಾನ್ ಮೂಲತಹ ಗುಜರಾತಿ ಕುಟುಂಬಕ್ಕೆ ಸೇರಿದವರು.
ಆದರೆ ಹೆಸರು ಮಾಡಿದ್ದು ಕನ್ನಡ ಸಿನಿಮಾರಂಗದಿಂದ, ಹೌದು ಗೆಳೆಯರೇ ನಟ ಧ್ಯಾನ್ ಅಭಿನಯದ ಅಮೃತದಾರೆ, ಮೊನಾಲಿಸಾ, ಐ ಹೇಟ್ ಲವ್ ಸ್ಟೋರೀಸ್, ಓ ಮನಸೇ, ಸಿಹಿಮುತ್ತು, ಉದ್ಯಾನ್ ಎಕ್ಸ್ಪ್ರೆಸ್, ಮಥುನಾ ನಗರಿಯಂತಹ ಸಿನಿಮಾಗಳು ಬಹು ದೊಡ್ಡ ಮಟ್ಟದ ಹೆಸರನ್ನು ತಂದುಕೊಡುತ್ತದೆ. ಹೀಗೆ ಹಂತ ಹಂತವಾಗಿ ಸಿನಿಮಾ ರಂಗದಲ್ಲಿ ಬೆಳೆಯುತ್ತಾ ಹೋದಂತಹ ಧ್ಯಾನ್ ಅವರಿಗೆ ಅವಕಾಶಗಳ ಸಾಗರವೇ ಹರಿದು ಬಂದವು.
ಮದುವೆಯ ನಂತರ ಪತ್ನಿ ಸಿನಿಮಾ ಬದುಕಿನಿಂದ ದೂರ ಇರುವಂತೆ ಕಂಡೀಶನ್ ಹಾಕುತ್ತಾರೆ, ಪತ್ನಿಗಿಂತ ಹೆಚ್ಚು ಬೇರೆ ಏನು ಇಲ್ಲ ಎಂದು ನಿರ್ಧರಿಸಿದ ಧ್ಯಾನ್ ಅವರಿಗೆ ಕಾಲಕ್ರಮೇಣ ಅವಕಾಶಗಳು ಕೂಡ ಕಡಿಮೆಯಾಗಿ ಸಿನಿಮಾ ಬದುಕಿನಿಂದ ಸಂಪೂರ್ಣ ದೂರ ಉಳಿಯುತ್ತಾರೆ.
ಆದರೆ ರಾಕಿಂಗ್ ಸ್ಟಾರ್ ಯಶ್ ಹಾಗು ರಾಧಿಕಾ ಪಂಡಿತ್ ಅಭಿನಯದ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಹಾಗೂ ಲವ್ ಯು ಆಲಿಯಾ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡಿದ ಧ್ಯಾನ್ ಮತ್ತೆ ಬಣ್ಣದ ಬದುಕಿಗೆ ಕಂಬ್ಯಾಕ್ ಮಾಡುವ ಪ್ರಯತ್ನ ಮಾಡಿದರು, ಆದರೆ ಹೇಳಿಕೊಳ್ಳುವಂತಹ ಅವಕಾಶಗಳು ಇವರನ್ನು ಹರಿಸಿ ಬರುತ್ತಿಲ್ಲ.
ಅದಕ್ಕಾಗಿಯೇ ಈ ಸಿನಿಮಾ ರಂಗವೇ ಬೇಡ ಎಂದು ನಿರ್ಧರಿಸಿ ಬಿಟ್ಟರೋ ಏನೋ… ಮತ್ತೆ ಕಂಬ್ಯಾಕ್ ಮಾಡುವ ಪ್ರಯತ್ನ ಮಾಡಲಿಲ್ಲ. ಜೊತೆಗೆ ಹೇಳಿಕೊಳ್ಳುವಷ್ಟು ಅವಕಾಶಗಳೂ ಸಿಗದ ಕಾರಣ ಸುಮ್ಮನಾಗಿಬಿಟ್ಟರು.
why Top Actor Kannada Amrithadhare Cinema Fame Dhyan left the film industry
Follow us On
Google News |