ಆಕ್ಷನ್ ಕಿಂಗ್ ಎಂದೇ ಪ್ರಸಿದ್ಧಿ ಪಡೆದಿರುವಂತಹ ಅರ್ಜುನ್ ಸರ್ಜಾ ಕನ್ನಡ (Kannada Movies), ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ಎಲ್ಲಾ ಭಾಷೆಗಳಲ್ಲಿಯೂ ತಮ್ಮ ಅಮೋಘ ಅಭಿನಯದ ಮೂಲಕ ಆಗಿನಿಂದ ಈಗಿನವರೆಗೂ ಅಷ್ಟೇ ಬೇಡಿಕೆಯನ್ನು ಪಡೆದು ಪ್ರಸಿದ್ಧಿಯಲ್ಲಿರುವಂತಹ ನಟ.
ಮೂಲತಃ ನಮ್ಮ ಕರ್ನಾಟಕದ ತುಮಕೂರು (Tumakur, Karnataka) ಜಿಲ್ಲೆಯವರಾದ ಅರ್ಜುನ್ ಸರ್ಜಾ (Actor Arjun Sarja) ಅವರ ಕುಟುಂಬವೇ ಚಲನಚಿತ್ರ ರಂಗದಲ್ಲಿ ತೊಡಗಿಕೊಂಡಿದ್ದ ಕಾರಣ ಇವರಿಗೆ ಸಿನಿ ಬದುಕಿನ ಪ್ರವೇಶ ಅಷ್ಟು ಕಷ್ಟಕರವಾಗಿರಲಿಲ್ಲ.
1993ರಲ್ಲಿ ಜಂಟಲ್ ಮ್ಯಾನ್ ಎಂಬ ಸಿನಿಮಾದ ಮೂಲಕ ಬಣ್ಣದ ಲೋಕವನ್ನು ಪ್ರವೇಶ ಮಾಡಿದ ಅರ್ಜುನ್ ಸರ್ಜಾ (Actor Arjun Sarja Cinema Journey) ಅನಂತರಾ ತಮ್ಮ ಕಟ್ಟು ಮಸ್ತಾದ ದೇಹ, ಕಂಚಿನ ಕಂಠ ಹಾಗೂ ಸಕಾರಾತ್ಮಕ ಕ್ಯಾರೆಕ್ಟರ್ನಿಂದಾಗಿ ಸಾಕಷ್ಟು ಚಿತ್ರಗಳ ಅವಕಾಶ ಪಡೆದುಕೊಂಡು ಅತ್ಯುತ್ತಮ ನಟನಾಗಿ ಹೊರಹೊಮ್ಮಿದರು.
ಹೌದು ಗೆಳೆಯರೇ ಈ ಹಿಂದೆ ಸಿಂಹದಮರಿ ಸೈನ್ಯ ಎಂಬ ಸಿನಿಮಾದಲ್ಲಿ ಬಾಲ ನಟನಾಗಿ ಅಭಿನಯಿಸಿದ್ದಂತಹ ಅರ್ಜುನ್ ಸರ್ಜಾ ಜಂಟಲ್ ಮ್ಯಾನ್ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ಹೊರಹೊಮ್ಮಿದರು.
ಇದಾದ ಬಳಿಕ ಪರಶುರಾಮ ಶಂಕರ್ ಗುರು, ಕರ್ಣ, ಜೈ ಹಿಂದ್, ಜೈ ಹಿಂದ್೨, ಅಭಿಮನ್ಯು, ಕುರುಕ್ಷೇತ್ರ, ಪ್ರೇಮ ಬರಹ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ ಇವರಿಗೆ ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಹೆಚ್ಚಿನ ಅವಕಾಶಗಳು ಬರಲಾರಂಬಿಸಿದವು.
ಅದರಲ್ಲೂ 2001ರಲ್ಲಿ ತೆರೆಕಂಡ ಭಕ್ತಿ ಪ್ರಧಾನ ಸಿನಿಮಾ ಶ್ರೀ ಮಂಜುನಾಥ ಸಿನಿಮಾದಲ್ಲಿ ನಟ ಅರ್ಜುನ್ ಸರ್ಜಾ ಅವರ ಅಮೋಘ ಅಭಿನಯವನ್ನು ಎಂದಾದರೂ ಕನ್ನಡಿಗರು ಮರೆಯಲು ಸಾಧ್ಯವೇ? ಭಾವಪರವಶಕ ಅಭಿನಯದಿಂದ ಆಗಿನ ಪ್ರೇಕ್ಷಕರಲ್ಲಿ ಶಿವನಾಮ ಜಪ ಮಾಡುವಂತೆ ಉತ್ತೇಜಿಸಿದಂತಹ ನಟ.
ಹೀಗಾಗಿ ಕನ್ನಡ ಸಿನಿಮಾರಂಗವನ್ನು (Kannada Film Industry) ತೊರೆದು ತಮಿಳಿನತ್ತ ಮುಖ ಮಾಡಿದ ಅರ್ಜುನ್ ಸರ್ಜಾ ಇಂದು ಅಲ್ಲಿನ ಬಿಗ್ ಬಿಗ್ ಹಿಟ್ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಆಕ್ಷನ್ ಕಿಂಗ್ ಆಗಿದ್ದಾರೆ.
ಇನ್ನು 80ರ ದಶಕದಿಂದಲೂ ಇಂಡಸ್ಟ್ರಿಯಲ್ಲಿರುವ ಇವರು ಕೇವಲ ನಟನಾಗಿ ಮಾತ್ರವಲ್ಲದೆ ನಿರ್ದೇಶಕ, ನಿರ್ಮಾಪಕ, ವಿತರಕ ಹಾಗೂ ಬರಹಗಾರನಾಗಿಯು ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡುತ್ತಿದ್ದಾರೆ.
ಇವರ ತಂದೆ ಶಕ್ತಿ ಪ್ರಸಾದ್ ಕೂಡ ಸಿನಿಮಾ ರಂಗದಲ್ಲಿದ್ದ ಕಾರಣ ಆರಂಭಿಕ ದಿನಗಳಲ್ಲಿಯೇ ನಟ ಅರ್ಜುನ್ ಸರ್ಜಾ ಅವರು 5,000 ಸಂಭಾವನೆಯನ್ನು ಪಡೆಯಲಾರಂಭಿಸಿದ್ದರು. ಇಂದಿಗೆ ಒಂದು ಸಿನಿಮಾದಲ್ಲಿ ಅಭಿನಯಿಸಿದರು ಕನಿಷ್ಠ ಒಂದು ಕೋಟಿ ಸಂಭಾವನೆಯನ್ನು ಪಡೆಯುತ್ತಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ಟಾಪ್ ನಟ ಎನಿಸಿಕೊಂಡಿದ್ದ ನಟ ಧ್ಯಾನ್ ಸಿನಿಮಾರಂಗ ತೊರೆಯಲು ಕಾರಣವೇನು ಗೊತ್ತಾ? ಪಾಪ ಈ ನಟನ ಬದುಕು ಹೀಗಾಗಬಾರದಿತ್ತು!
Unknown Facts and Remuneration of Actor Arjun Sarja for Kannada Movies on that Days
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.