ಎವರ್ ಗ್ರೀನ್ ಸಿನಿಮಾ ಬೆಳದಿಂಗಳ ಬಾಲೆ ನಟಿ ಸುಮನ್ ನಗರ್ಕರ್ ಈಗ ಹೇಗಾಗಿದ್ದಾರೆ ಗೊತ್ತಾ? ಈ ನಟಿ ಮದುವೆಯಾದದ್ದು ಯಾರನ್ನ?

ನಟಿ ಸುಮನ್ ನಗರ್ಕರ್ ಎಂಬ ಹೆಸರು ಕೇಳುತ್ತಿದ್ದ ಹಾಗೆ ನಮ್ಮೆಲ್ಲರಿಗೂ ಬೆಳದಿಂಗಳ ಬಾಲೆ ಸಿನಿಮಾ ನೆನಪಿಗೆ ಬಂದುಬಿಡುತ್ತದೆ. ತಮ್ಮ ಬಹುಕಾಲದ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ನಟಿಗೆ ಅವಕಾಶಗಳು ಕಡಿಮೆ ಆಯ್ತಾ?

ಸ್ನೇಹಿತರೆ 1980-90ರ ದಶಕದಲ್ಲಿ ಸಾಕಷ್ಟು ಅಪ್ರತಿಮ ಕಲಾವಿದರು ಕನ್ನಡ ಸಿನಿಮಾ ರಂಗವನ್ನು (Kannada Film Industry) ಪ್ರವೇಶ ಮಾಡಿ ತಮ್ಮ ಅಘಾದವಾದ ಕಲೆಯನ್ನು ಯಶಸ್ವಿ ಸಿನಿಮಾಗಳ ಮೂಲಕ ಹೊರಹಾಕಿದರು.

ಅಂಥವರ ಪಟ್ಟಿಯಲ್ಲಿ ನಟಿ ಸುಮನ್ ನಗರ್ಕರ್ (Actress Suman Nagarkar) ಇರಲೇಬೇಕು. ಹೌದು ಕಿರುತೆರೆ ಧಾರವಾಹಿಗಳಿಗೂ ಸೈ ಯಶಸ್ವಿ ಸಿನಿಮಾಗಳಿಗೂ ಸೈ ಎನ್ನುವಂತಿದ್ದ ಇವರ ಅಭಿನಯ ಮುಗ್ಧ ನಗು ಮಾದಕ ಸೌಂದರ್ಯ ಎಲ್ಲವೂ ಆಗಿನ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಹೀಗೆ ಒಂದು ಹಂತದವರೆಗೂ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಳ್ಳುತ್ತಾ ಬಹು ಬೇಡಿಕೆಯಲ್ಲಿದ್ದಾಗಲೇ ತಮ್ಮ ಬಹುಕಾಲದ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ನಟಿಗೆ ಅವಕಾಶಗಳು ಕಡಿಮೆ ಆಯ್ತಾ?

ಎವರ್ ಗ್ರೀನ್ ಸಿನಿಮಾ ಬೆಳದಿಂಗಳ ಬಾಲೆ ನಟಿ ಸುಮನ್ ನಗರ್ಕರ್ ಈಗ ಹೇಗಾಗಿದ್ದಾರೆ ಗೊತ್ತಾ? ಈ ನಟಿ ಮದುವೆಯಾದದ್ದು ಯಾರನ್ನ? - Kannada News

ನಟ ಅರ್ಜುನ್ ಸರ್ಜಾ ಕನ್ನಡ ಸಿನಿಮಾಗೆ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ? ಅವಕಾಶಗಳಿದ್ದರೂ ತಮಿಳು ಚಿತ್ರರಂಗದತ್ತ ಮುಖ ಮಾಡಿದ್ಯಾಕೆ?

ಈಕೆ ಸಿನಿಮಾ ರಂಗದಿಂದ ಕಣ್ಮರೆಯಾಗಲು ಕಾರಣವೇನು? ಈಗ ಹೇಗಿದ್ದಾರೆ ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಈ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ನಟಿ ಸುಮನ್ ನಗರ್ಕರ್ ಎಂಬ ಹೆಸರು ಕೇಳುತ್ತಿದ್ದ ಹಾಗೆ ನಮ್ಮೆಲ್ಲರಿಗೂ ಬೆಳದಿಂಗಳ ಬಾಲೆ ಸಿನಿಮಾ (Beladingala Baale Kannada Cinema) ನೆನಪಿಗೆ ಬಂದುಬಿಡುತ್ತದೆ. ಅಷ್ಟೇ ಅಲ್ಲದೆ ನಮ್ಮೂರ ಮಂದಾರ ಹೂವೆ, ಹೂ ಮಳೆ, ಮುಂಗಾರಿನ ಮಿಂಚು, ಬಬ್ರು, ಬ್ರಾಹ್ಮಿ, ನಿಷ್ಕರ್ಷ, ಇಷ್ಟಕಾಮ್ಯ, ಪ್ರೀತ್ಸೋ ತಪ್ಪಿಲ್ಲ, ದೋಣಿ ಸಾಗಲಿ ಎಂಬಂತಹ ಎವರ್ಗ್ರೀನ್ ಸಿನಿಮಾಗಳನ್ನು ಕನ್ನಡಕ್ಕೆ ಕೊಡುಗೆಯನ್ನಾಗಿ ನೀಡಿರುವ ಈ ನಟಿ ಸಾಕಷ್ಟು ಧಾರಾವಾಹಿಗಳಲ್ಲಿಯೂ ತಮ್ಮ ಅಪ್ರತಿಮಾ ಅಭಿನಯವನ್ನು ತೋರುವ ಮೂಲಕ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿದ್ದರು.

Kannada Actress Suman Nagarkar

ಸಿಪಾಯಿ ಸಿನಿಮಾ ನೋಡಿದ ಚಿರಂಜೀವಿ ಅಭಿಮಾನಿಗಳು ರವಿಚಂದ್ರನ್ ಮೇಲೆ ಕಿಡಿ ಕಾರಿದ್ದು ಯಾಕೆ? ಅಂದು ನಿಜಕ್ಕೂ ಆಗಿದ್ದಾದರೂ ಏನು ಗೊತ್ತಾ?

ಇನ್ನು ಇವರ ವೈಯಕ್ತಿಕ ವಿಚಾರದ ಕುರಿತು ನೋಡುವುದಾದರೆ ಮೂಲತಃ ದಕ್ಷಿಣ ಭಾರತದ ಈ ನಟಿ ನ್ಯಾಷನಲ್ ಶಾಲೆ ಹಾಗೂ ಕಾಲೇಜಿನಲ್ಲಿ ತಮ್ಮ ಶಿಕ್ಷಣವನ್ನು ಮುಗಿಸಿದ ನಂತರ ಮಾಡಲಿಂಗ್ ಕ್ಷೇತ್ರದತ್ತ ಗಮನಹರಿಸುತ್ತಾರೆ.

ಅನಂತರ ಟಿ ಎಸ್ ನಾಗಾಭರಣ ಅವರ ಪರಿಚಯದಿಂದ ಚಲನಚಿತ್ರ ಉದ್ಯಮಕ್ಕೆ ಎಂಟ್ರಿ ಕೊಟ್ಟ ಸುಮನ್ ಮೊದಲ ಸಿನಿಮಾದಲ್ಲಿಯೇ ನಟ ರಾಘವೇಂದ್ರ ರಾಜಕುಮಾರ್ ಅವರ ಸಹೋದರಿ ಪಾತ್ರ ಒಂದರಲ್ಲಿ ಅಭಿನಯಿಸಿದರು.

ಆನಂತರ ಒಂದರ ಮೇಲೆ ಒಂದರಂತೆ ಹಿಟ್ ಸಿನಿಮಾಗಳನ್ನು ನೀಡಿ ಗುರುತಿಸಿಕೊಂಡಿದ್ದಂತಹ ಸುಮನ್ ನಗರ್ಕರ್ ಸಿನಿಮಾಗಳ ಅವಕಾಶ ಕುಂಠಿತವಾದ ಮೇಲೆ ಧಾರಾವಾಹಿಗಳತ್ತ ಮುಖ ಮಾಡಿ ಜನಪ್ರಿಯ ಧಾರವಾಹಿಗಳಲ್ಲಿ ಅಭಿನಯಿಸುವ ಮೂಲಕ ಸೀರಿಯಲ್ ಪ್ರೇಕ್ಷಕರ ಮನೆ ಮಗಳಾದರು.

ಡಬಲ್ ಮ್ಯಾರೇಜ್, ಡಬಲ್ ಧಮಾಕ, ಎರಡು ಮೂರು ಮದುವೆಯಾಗಿರುವ ನಮ್ಮ ಸ್ಯಾಂಡಲ್ ವುಡ್ ಚಂದುಳ್ಳಿ ಚೆಲುವೆರು ಯಾರ್ಯಾರು ಗೊತ್ತೇ?

ಈ ಮಧ್ಯೆ ಗುರುದೇವ್ ನಾಗರಾಜ್ ಎಂಬುವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು, ಮದುವೆಯಾದ ನಂತರವೂ ಸಿನಿಮಾ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದ ಸುಮನ್ ಅವರಿಗೆ ಕಾಲಕ್ರಮೇಣ ಅವಕಾಶಗಳು ಕಡಿಮೆಯಾಗುತ್ತಾ ಹೋದ ನಂತರ ಸಿನಿಮಾ ರಂಗದಿಂದ ದೂರ ಉಳಿದು ತಮ್ಮ ವಯಕ್ತಿಕ ಬದುಕಿನತ್ತ ಗಮನ ಹರಿಸುತ್ತಿದ್ದಾರೆ.

Kannada Cinema Beladingala Baale Fame Actress Suman Nagarkar Unknow Facts

Follow us On

FaceBook Google News

Kannada Cinema Beladingala Baale Fame Actress Suman Nagarkar Unknow Facts