ತರ್ಲೆ ನನ್ ಮಗ ಸಿನಿಮಾದ ಮಾದಕ ನಟಿ ಅಂಜಲಿ ಈಗ ಹೇಗಿದ್ದಾರೆ.. ಏನ್ ಮಾಡ್ತಿದ್ದಾರೆ? ಪಾಪ ಅವರ ರಿಯಲ್ ಲೈಫ್ ಹೇಗಿದೆ ಗೊತ್ತಾ?
ನಟಿ ಅಂಜಲಿ ಈ ಸಿನಿಮಾದ ಮೂಲಕ ಬಹು ದೊಡ್ಡ ಮಟ್ಟದ ಯಶಸ್ಸನ್ನು ಸಂಪಾದಿಸಿಕೊಂಡರು ಎಂದರೆ ತಪ್ಪಾಗಲಾರದು. ಅನಂತರ ಸಾಲು ಸಾಲು ಸಿನಿಮಾಗಳು ಈ ನಟಿಯನ್ನು ಹರಸಿ ಬಂದವು. ಹೀಗಿರುವಾಗ ನಟಿ ಅಂಜಲಿ ಅವರ ಬದುಕಿನಲ್ಲಿ ಬಹುದೊಡ್ಡ ದುರಂತ ಒಂದು ನಡೆದು ಹೋಗುತ್ತದೆ.
ಸ್ನೇಹಿತರೆ, ನಟ ಜಗ್ಗೇಶ್ (Actor Jaggesh) ಅವರ ಸಿನಿ ಬದುಕಿಗೆ ಮಹತ್ತರವಾದ ಬ್ರೇಕ್ ನೀಡಿದಂತಹ ಸಿನಿಮಾ ಎಂದರೆ ಅದು 1992 ರಲ್ಲಿ ತೆರೆಕಂಡ ತರ್ಲೇ ನನ್ನ ಮಗ ಸಿನಿಮಾ (Kannada Tharle Nan Maga Cinema). ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರು ನಿರ್ದೇಶಕನ ಕ್ಯಾಪ್ ಹಾಕಿ ಆಕ್ಷನ್ ಕಟ್ ಹೇಳಿದ್ದಂತಹ ಈ ಸಿನಿಮಾ ಆಗಿನ ಕಾಲದಲ್ಲಿ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆದ್ದು ನಗುವಿನ ಕಚಗುಳಿ ಇಡುವಲ್ಲಿ ಯಶಸ್ವಿಯಾಗಿತ್ತು.
ಇನ್ನು ವಿಶೇಷ ಎಂದರೆ ಉಪೇಂದ್ರ ನಿರ್ದೇಶಕನಾಗಿ ಯಶಸ್ಸನ್ನು ಪಡೆದಂತಹ ಪ್ರಪ್ರಥಮ ಚಿತ್ರ (Kannada Movie) ಇದು ಎಂದರೆ ತಪ್ಪಾಗಲಿಕ್ಕಿಲ್ಲ. ಅಲ್ಲಿಂದ ಶುರುವಾದಂತಹ ಉಪೇಂದ್ರ ಅವರ ನಿರ್ದೇಶನದ ಪರ್ವ ಹಾಗೂ ಜಗ್ಗೇಶ್ ಅವರ ಅದ್ಭುತ ಹಾಸ್ಯ ಪ್ರತಿಭೆಯ ಕಲೆ ಇಂದಿಗೂ ಕೂಡ ಮುಂದುವರೆಯುತ್ತಲೇ ಇದೆ.
ಇನ್ನೂ ಈ ಸಿನಿಮಾದಲ್ಲಿ ಅಪ್ರತಿಮ ಕಲಾವಿದರಾದ ನವರಸ ನಾಯಕ ಜಗ್ಗೇಶ್, ಬ್ಯಾಂಕ್ ಜನಾರ್ಧನ್, ಅಂಜಲಿ ಹಾಗೂ ಸತ್ಯಭಾಮ ಮುಂತಾದ ಕಲಾವಿದರು ಅಭಿನಯಿಸಿ ನೀಡಿದ್ದಂತಹ ಪಾತ್ರಕ್ಕೆ ಅಪ್ರತಿಮವಾಗಿ ಜೀವ ತುಂಬಿದರು.
ಅದರಲ್ಲೂ ನಟಿ ಅಂಜಲಿ (Kannada Actress Anjali) ಈ ಸಿನಿಮಾದ ಮೂಲಕ ಬಹು ದೊಡ್ಡ ಮಟ್ಟದ ಯಶಸ್ಸನ್ನು ಸಂಪಾದಿಸಿಕೊಂಡರು ಎಂದರೆ ತಪ್ಪಾಗಲಾರದು. ಅನಂತರ ಸಾಲು ಸಾಲು ಸಿನಿಮಾಗಳು ಈ ನಟಿಯನ್ನು ಹರಸಿ ಬಂದವು. ಹೀಗಿರುವಾಗ ನಟಿ ಅಂಜಲಿ ಅವರ ಬದುಕಿನಲ್ಲಿ ಬಹುದೊಡ್ಡ ದುರಂತ ಒಂದು ನಡೆದು ಹೋಗುತ್ತದೆ.
ಹೌದು ಗೆಳೆಯರೇ ಅಂಜಲಿ ಮತ್ತು ಅವರ ತಮ್ಮ ಮನೆಯ ಖಾಸಗಿ ಕಾರ್ಯಕ್ರಮ ಒಂದಕ್ಕೆ ಹೋಗಿದ್ದಾಗ ಅಲ್ಲಿ ಅಂಜಲಿಯವರು ಇದ್ದಂತಹ ಮಕ್ಕಳನ್ನೆಲ್ಲ ತನ್ನ ಕಾರಿನಲ್ಲಿ ಕರೆದುಕೊಂಡು ಬರ್ತೀನಿ ನೀನು ಇನ್ನೊಂದು ಕಾರಿನಲ್ಲಿ ಹೋಗು ಎಂದು ಅವರ ತಮ್ಮನಾದ ನಾಗನಿಗೆ ಹೇಳುತ್ತಾರೆ.
ಆಗ ಮನೆಯ ಮುಂದೆ ಹಾಕಿದ್ದಂತಹ ಬೃಹತ್ ಆದ ಆರ್ಚ್ ಅಚಾನಕ್ಕಾಗಿ ಅವರ ತಲೆ ಮೇಲೆ ಬಿದ್ದು ಪ್ರಾಣ ಕಳೆದು ಕಳೆದುಕೊಳ್ಳುತ್ತಾರೆ. ತಮ್ಮ ಕಣ್ಣೆದುರೇ ತಮ್ಮನ ಪ್ರಾಣ ಪಕ್ಷಿ ಹಾರಿ ಹೋದುದನ್ನು ನೋಡಿದಂತಹ ನಟಿ ಅಂಜಲಿ ಅಲ್ಲೇ ದಿಗ್ಬರಂತರಾಗಿ ಹೋದರು.
ತಾನು ಆತನನ್ನು ಬೇರೆ ಕಾರಿಗೆ ಕಳಿಸಲಿಲ್ಲ ಎಂದಿದ್ದರೆ ಆತ ಇಂದು ಬದುಕಿರುತ್ತಿದ್ದ ಇದೆಲ್ಲವೂ ಆದದ್ದು ನನ್ನಿಂದಲೇ ಎಂದು ಬೇಸರ ವ್ಯಕ್ತ ಪಡಿಸಿಕೊಂಡು ಅಂದು ಸಾಯುವ ನಿರ್ಧಾರಕ್ಕೆ ತಾವೂ ಬಂದಿದ್ದರಂತೆ.
ಇದೀಗ ಇದೆಲ್ಲದರಿಂದ ಹೊರ ಬರುತ್ತ ಸಂದರ್ಶನಗಳನ್ನು ಅಟೆಂಡ್ ಮಾಡುತ್ತಾ ಪೋಷಕ ಪಾತ್ರದಲ್ಲಿಯೂ ಅಭಿನಯಿಸುತ್ತ ನಟಿ ಅಂಜಲಿ ತೊಡಗಿಕೊಂಡಿದ್ದಾರೆ.
Interesting Facts About Kannada Tharle Nan Maga Cinema Fame Actress Anjali Real Life Story
Follow us On
Google News |