Actress Harshika Poonacha: ಸ್ನೇಹಿತರೆ ತಮ್ಮ ಅಭಿನಯದ ಮೂಲಕ ಹಲವಾರು ದಶಕ ಗಳಿಂದ ಕನ್ನಡ ಸಿನಿಮಾ ರಂಗದಲ್ಲಿ ಸಕ್ರಿಯರಾಗಿ ಒಂದರ ಮೇಲೆ ಒಂದರಂತೆ ಹಿಟ್ ಸಿನಿಮಾಗಳನ್ನು ನೀಡುತ್ತಾ, ಇಂದಿಗೂ ಅಷ್ಟೇ ಬೇಡಿಕೆಯನ್ನು ಗಿಟ್ಟಿಸಿಕೊಂಡಿರುವಂತಹ ನಟಿ ಹರ್ಷಿಕಾ ಪೂಣಚ್ಚ (Actress Harshika Poonacha) ಅವರು ಸದ್ಯ ಸಿನಿಮಾ ರಂಗದಿಂದ ಕೊಂಚ ಬ್ರೇಕ್ ಪಡೆದು ರಾಜಕೀಯ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ ಎಂದರೆ ತಪ್ಪಾಗಲಾರದು.
ಕಳೆದ ಎರಡು ಮೂರು ದಿನಗಳಿಂದ ಮನೆ ಮನೆಗು ತೆರಳಿ ಮುಂಬರಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಅಂದರೆ ಬಿಜೆಪಿ ಪಕ್ಷಕ್ಕೆ ಮತ ನೀಡುವಂತೆ ಚಿಕ್ಕಬಳ್ಳಾಪುರದ ಹಳ್ಳಿ ಹಳ್ಳಿಯ ಮನೆಯಲ್ಲಿ ಇರುವಂತಹ ಪ್ರತಿಯೊಬ್ಬರನ್ನು ಕೇಳಿಕೊಳ್ಳುತ್ತಿದ್ದಾರೆ.
ಯಾಕಾದ್ರೂ ಮದುವೆಯಾದ್ನೋ ನನ್ನ ಜೀವನವೇ ಹಾಳಾಗಿ ಹೋಯಿತು ಎಂದು ಮಾಧ್ಯಮದ ಮುಂದೆ ಕಣ್ಣೀರಾಕಿದ ಸೋನು ಗೌಡ!
ಹೌದು ಗೆಳೆಯರೇ ಕರ್ನಾಟಕದ ವಿಧಾನಸಭಾ ಚುನಾವಣೆಗೆ ಇನ್ನೇನು ಬೆರಳಿಕೆಯಷ್ಟು ದಿನ ಮಾತ್ರ ಉಳಿದಿದ್ದು, ರಾಜಕಾರಣಿಗಳು ತಮ್ಮ ಚಾತುರ್ಯತೆಯಿಂದ ಪ್ರಚಾರದ ಕೆಲಸವನ್ನು ಬಹಳ ಜೋರಾಗಿ ನಡೆಸುತ್ತಿದ್ದು, ಸಿನಿಮಾ ಸೆಲೆಬ್ರೆಟಿಗಳನ್ನು ತಮ್ಮ ಪಕ್ಷಕ್ಕೆ ಕರೆದುಕೊಂಡು ಜನರ ಗಮನವನ್ನು ತಮ್ಮ ಪಕ್ಷದ ಮೇಲೆ ಹರಿಸುತ್ತಿದ್ದಾರೆ.
ಹೌದು ಗೆಳೆಯರೇ ಕಳೆದ ಕೆಲವು ದಿನಗಳ ಹಿಂದೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Actor Kiccha Sudeep) ಅವರು ಬಿಜೆಪಿ ಪಕ್ಷದ ಪರ ಪ್ರಚಾರ ಮಾಡುವುದಾಗಿ ತಿಳಿಸಿದ ಬೆನ್ನೆಲ್ಲೇ ಇತ್ತ ದರ್ಶನ್ (Challenging Star Darshan) ಅವರು ಸುಮಲತಾ ಅವರ ಪರವಾಗಿ ನಿಂತರು.
ಹೀಗೆ ಪ್ರತಿಯೊಬ್ಬ ಸ್ಟಾರ್ ಸೆಲೆಬ್ರಿಟಿಗಳು ಕೂಡ ಒಂದೊಂದು ಪಕ್ಷದ ಪರ ನಿಂತು ಪ್ರಚಾರದ ಕೆಲಸದಲ್ಲಿ ತೊಡಗಿಸಿಕೊಂಡಿದ್ದು ಸದ್ಯ ಸ್ಯಾಂಡಲ್ ವುಡ್ ನ (Sandalwood) ಕ್ಯೂಟ್ ಬೆಡಗಿ ಎಂದೇ ಕರೆಯಲ್ಪಡುವ ಹರ್ಷಿಕಾ ಪೂಣಚ್ಚ ಅವರು ಎರಡು ಮೂರು ದಿನಗಳಿಂದ ಚಿಕ್ಕಬಳ್ಳಾಪುರದಲ್ಲಿರುವಂತಹ ಸಣ್ಣ ಸಣ್ಣ ಹಳ್ಳಿಯ ಪ್ರತಿಯೊಂದು ಮನೆಗಳಿಗೂ ತೆರಳಿ ಬಿಜೆಪಿಗೆ ಮತ ನೀಡುವಂತೆ ಕೇಳಿಕೊಳ್ಳುತ್ತಿದ್ದಾರೆ.
ಈ ಸಂದರ್ಭದಲ್ಲಿ ಹಳ್ಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಎಮ್ಮೆ ಮರಿ ಒಂದನ್ನು ಕಂಡಿದ್ದಾರೆ. ಅದರ ಬಳಿ ಹೋಗಿ ಮುದ್ದಾಡುವಾಗ ತಲೆ ಸವರುತ್ತಾ ಅದರ ಗಲ್ಲವನ್ನು ಅಲ್ಲಾಡಿಸುತ್ತಾ ಅದಕ್ಕೆ ಮಾತು ಕಲಿಸುವ ಪ್ರಯತ್ನ ಮಾಡಿದ್ದಾರೆ.
ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ (Social Media) ಬಾರಿ ವೈರಲ್ ಆಗುತ್ತಿದ್ದು, ಹರ್ಷಿಕಾ ಪೂಣಚ್ಚ ಅವರಿಗೆ ಜನಸಾಮಾನ್ಯರ ಜೊತೆಗೆ ಮೂಕ ಪ್ರಾಣಿಗಳ ಮೇಲೆ ಇರುವಂತಹ ಪ್ರೀತಿ ಒಲವನ್ನು ಕಂಡು ಅಭಿಮಾನಿಗಳು ಮನಸ್ಸೋತಿದ್ದಾರೆ.
ಹೌದು ಗೆಳೆಯರೇ ಪುಟ್ಟ ಮಗುವಿನಂತೆ ಎಮ್ಮೆ ಮರಿಯನ್ನು ಮುದ್ದಾಡುತ್ತಾ ಅದಕ್ಕೆ ಹುಲ್ಲು ತಿನ್ನಿಸಿ ಅಪ್ಪಿಕೊಂಡು ಮುತ್ತಿಟ್ಟಿದ್ದಾರೆ. ಈ ವಿಡಿಯೋ ಸದ್ಯ ನೆಟ್ಟಿಗರ ಗಮನ ಸೆಳೆಯುತ್ತಿದ್ದು, ಚುನಾವಣಾ ಕೆಲಸದ ನಡುವೆಯೂ ಹರ್ಷಿಕಾ ಪೂಣಚ್ಚ ಅವರ ಈ ಕ್ಯೂಟ್ ವಿಡಿಯೋಗೆ ಮೆಚ್ಚುಗೆಯ ಸುರಿಮಳೆ ಹರಿದು ಬಂದಿದೆ.
Actress Harshika Poonacha with Buffalo Video Goes Viral
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.