ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ಸಮಂತಾ, ಬೆಲೆ ಎಷ್ಟು ಕೋಟಿ ಗೊತ್ತಾ? ಈ ಬೆಲೆಗೆ 50 ಮನೆ ಕಟ್ಟಬಹುದು

ಸಮಂತಾ ಇತ್ತೀಚೆಗೆ ಹೈದರಾಬಾದ್‌ನಲ್ಲಿ ಹೊಸ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದ್ದು ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ

ನಟಿ ಸಮಂತಾ (Actress Samantha) ಇತ್ತೀಚೆಗೆ ಹೈದರಾಬಾದ್‌ನಲ್ಲಿ (Hyderabad) ಹೊಸ ಐಷಾರಾಮಿ ಅಪಾರ್ಟ್‌ಮೆಂಟ್ (Luxury Apartment) ಖರೀದಿಸಿದ್ದಾರೆ, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (Social Media) ಸುದ್ದಿ ಹರಿದಾಡುತ್ತಿದ್ದು ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.

ಸ್ಟಾರ್‌ ಹೀರೋಯಿನ್‌ ನಟಿ ಸಮಂತಾ ಟಾಲಿವುಡ್ ಹೀರೋಗಳಿಗೆ ಲಕ್ಕಿ ಚಾರ್ಮ್. ಸುಮಾರು ಒಂದು ದಶಕದ ಕಾಲ ಸಮಂತಾ ದಕ್ಷಿಣದ ಟಾಪ್ ಹೀರೋಯಿನ್ ಆಗಿದ್ದರು. ಆದರೆ ಇತ್ತೀಚೆಗೆ ಸ್ವಲ್ಪ ಡಲ್ ಆಗಿದ್ದಾರೆ.

ಬಾಹುಬಲಿ ಸಿನಿಮಾ ಹೀರೋಯಿನ್ ಅನುಷ್ಕಾ ಶೆಟ್ಟಿಗೆ ಎಂತಾ ಕಷ್ಟ ಬಂದಿದೆ ಗೊತ್ತಾ? ಟಾಪ್ ನಟಿ ಸಂಕಷ್ಟದಲ್ಲಿ!

ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ಸಮಂತಾ, ಬೆಲೆ ಎಷ್ಟು ಕೋಟಿ ಗೊತ್ತಾ? ಈ ಬೆಲೆಗೆ 50 ಮನೆ ಕಟ್ಟಬಹುದು - Kannada News

ವರ್ಷಕ್ಕೆ ಎರಡ್ಮೂರು ಸಿನಿಮಾ ಮಾಡುತ್ತಿದ್ದ ಸಮಂತಾ ಕಳೆದ ಮೂರು ವರ್ಷಗಳಲ್ಲಿ ಮಾಡಿದ್ದು ಮೂರು ಸಿನಿಮಾ ಮಾತ್ರ. ಅದರಲ್ಲಿ ಒಂದು ಮಾತ್ರ ಕಮರ್ಷಿಯಲ್ ಹಿಟ್ ಆಯಿತು. ಇತ್ತೀಚೆಗಷ್ಟೇ ಇಷ್ಟಪಟ್ಟು ಕಷ್ಟಪಟ್ಟು ಕೆಲಸ ಮಾಡಿದ್ದ ಶಾಕುಂತಲಂ ಮೊದಲ ದಿನವೇ ಡಿಸಾಸ್ಟರ್ ಟಾಕ್ ಪಡೆದುಕೊಂಡು ಪ್ರಚಾರದ ಖರ್ಚನ್ನೂ ವಾಪಸ್ ತರಲಾಗಲಿಲ್ಲ.

ಈ ಬಗ್ಗೆ ಅವರು ಇತ್ತೀಚಿಗೆ ಬಹಳಷ್ಟು ಬೇಸರವಾಗಿರುವುದು ಸ್ವತಃ ಅವರೇ ಸಂದರ್ಶನದಲ್ಲಿ ಹೇಳಿಕೊಂಡಿದ್ದು ಉಂಟು, ಜೊತೆಗೆ ಸಿನಿಮಾ ಪ್ಲಾಪ್ ಆದದ್ದೇ ತಡ ಸಿನಿ ರಂಗದಲ್ಲಿ ಸಮಂತಾ ಬಗ್ಗೆ ನೆಗಿಟಿವ್ ಟಾಕ್ ಬರಲು ಶುರುವಾಯಿತು. ಇನ್ನೇನು ಸಮಂತಾ ಕರಿಯರ್ ಮುಗಿದೇ ಹೋಯಿತು ಎಂಬೆಲ್ಲಾ ಮಾತುಗಳು ಕೇಳಲಾರಂಭಿಸಿತು.

ಟಾಪ್ ನಟಿ ಆಗಿದ್ರೂ ಮಾಲಾಶ್ರೀ ಜೊತೆ, ವಿಷ್ಣುವರ್ಧನ್ ರವರು ಯಾಕೆ ನಟಿಸಲಿಲ್ಲ ಗೊತ್ತೇ?

ಈ ನಡುವೆ ಅಂತಹ ಮಾತುಗಳಿಗೆ ತಲೆ ಕೆಡಿಸಿಕೊಳ್ಳದ ಸಮಂತಾ ಅವರಿಗೆಲ್ಲ ನೇರಾನೇರ ಠಕ್ಕರ್ ಕೊಟ್ಟರು, ಸಿನಿಮಾ ಎಂದ ಮೇಲೆ ಸೋಲು ಗೆಲುವು ಇದ್ದೆ ಇರುತ್ತದೆ, ಅಂದಹಾಗೆ ತಾನು ಮಾಡುವ ಎಲ್ಲ ಸಿನಿಮಾಗಳು ಹಿಟ್ ಆಗಲೇ ಬೇಕೆಂದು ಇಲ್ಲವಲ್ಲ ಎಂದು ಹೇಳಿದ್ದರು.

Tollywood Actress Samantha

ಸದ್ಯ ವಿಜಯ್ ದೇವರಕೊಂಡ ಜೊತೆಗೆ ಖುಷಿ ಸಿನಿಮಾ, ಸಿಟಾಡೆಲ್ ವೆಬ್ ಸಿರೀಸ್ ನಂತಹ ಹಲವು ಪ್ರಾಜೆಕ್ಟ್ ಗಳಲ್ಲಿ ಸಮಂತಾ ಬ್ಯುಸಿ ಇದ್ದಾರೆ. ಈ ವೇಳೆ ಸಮಂತಾ ಇತ್ತೀಚೆಗೆ ದುಬಾರಿ ಡ್ಯೂಪ್ಲೆಕ್ಸ್ ಅಪಾರ್ಟ್ ಮೆಂಟ್ (Duplex Apartment) ಖರೀದಿಸಿರುವುದು ಗೊತ್ತಾಗಿದೆ.

ರಂಗಾ ರೆಡ್ಡಿ ಜಿಲ್ಲೆಯ ಫೈನಾನ್ಶಿಯಲ್ ಡಿಸ್ಟ್ರಿಕ್ಟ್ ಪ್ರದೇಶದ ಜಯಭೇರಿ ಕೌಂಟಿ ಗೇಟೆಡ್ ಕಮ್ಯುನಿಟಿಯಲ್ಲಿ ಸಮಂತಾ ದುಬಾರಿ ಡ್ಯೂಪ್ಲೆಕ್ಸ್ ಪ್ಲಾಟ್ ಖರೀದಿಸಿದ್ದಾರೆ ಎಂದು ವರದಿಯಾಗಿದೆ.

ಪ್ರೇಮಲೋಕ ಸಿನಿಮಾಗೆ ನಟಿ ಜೂಹಿ ಚಾವ್ಲಾ ರವಿಚಂದ್ರನ್ ಅವರಿಂದ ಪಡೆದಂತಹ ದುಬಾರಿ ಸಂಭಾವನೆ ಎಷ್ಟು ಲಕ್ಷ ಗೊತ್ತೇ?

ಈ ಡ್ಯೂಪ್ಲೆಕ್ಸ್ ಪ್ಲಾಟ್ 13 ಮತ್ತು 14ನೇ ಮಹಡಿಯಲ್ಲಿದೆ ಎಂದು ತಿಳಿದುಬಂದಿದೆ. ಇದರ ಬೆಲೆ ರೂ. 7.8 ಕೋಟಿ ಎನ್ನಲಾಗಿದೆ. ಸಮಂತಾಗೆ ಈಗಾಗಲೇ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ನೂರು ಕೋಟಿ ಮೌಲ್ಯದ ಮನೆ ಇದೆ. ಇತ್ತೀಚೆಗಷ್ಟೇ ಅವರು ಸಿಟಾಡೆಲ್ ವೆಬ್ ಸರಣಿಯ ಚಿತ್ರೀಕರಣದ ವೇಳೆ ಮುಂಬೈನಲ್ಲಿ ಐಷಾರಾಮಿ ಮನೆಯೊಂದನ್ನು (Luxury House in Mumbai) ಖರೀದಿಸಿದ್ದರು..

Actress Samantha Recently Buys A New Luxury Apartment In Hyderabad

Follow us On

FaceBook Google News

Actress Samantha Recently Buys A New Luxury Apartment In Hyderabad

Read More News Today