ಟಾಪ್ ನಟಿ ಆಗಿದ್ರೂ ಮಾಲಾಶ್ರೀ ಜೊತೆ, ವಿಷ್ಣುವರ್ಧನ್ ರವರು ಯಾಕೆ ನಟಿಸಲಿಲ್ಲ ಗೊತ್ತೇ?

ಸದಾ ಕಾಲ ವಿಷ್ಣುವರ್ಧನ್ ಅವರನ್ನು ಹಾಡಿ ಹೊಗಳುತ್ತಿದ್ದ ಮಾಲಾಶ್ರೀ ಅವರು ಅವರೊಂದಿಗೆ ತೆರೆ ಹಂಚಿಕೊಳ್ಳದಿರಲು ಅಸಲಿ ಸತ್ಯ ಏನಿರಬಹುದು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ

ಸ್ನೇಹಿತರೆ ಡಾಕ್ಟರ್ ರಾಜಕುಮಾರ್ (Dr Rajkumar), ವಿಷ್ಣುವರ್ಧನ್ (Actor Vishnuvardhan), ಅಂಬರೀಶ್ (Actor Ambareesh) ಹಾಗೂ ಅನಂತನಾಗ್ (Actor Anant Nag) ಅವರಂತಹ ಅಧಿಕ ನಟರುಗಳ ಆಳ್ವಿಕೆ ಇದ್ದಂತಹ 9ನೇ ದಶಕದ ಕನ್ನಡ ಸಿನಿಮಾದಲ್ಲಿ (Kannada Cinema) ಯಾವುದೇ ಹೊಸ ನಟರ ಪ್ರವೇಶವನ್ನು ಜನರು ಮೆಚ್ಚುತ್ತಿರಲಿಲ್ಲ ಹಾಗೂ ಸಿನಿಮಾದಲ್ಲಿ ಸಕ್ಸಸ್ ಕಾಣಬೇಕು ಎಂಬ ಇಚ್ಛೆಯಿಂದ ಬಂದವರು ಸಪ್ಪೆ ಮೊರೆ ಹಾಕಿ ಸಿನಿಮಾದ ಸಹವಾಸವೇ ಬೇಡವೆಂದು ಹಿಂದಿರುಗಿ ಹೋದಂತಹ ಉದಾಹರಣೆ ಸ್ಯಾಂಡಲ್ವುಡ್ ನಲ್ಲಿ ಸಾಕಷ್ಟಿವೆ.

ಆದರೆ ಓರ್ವ ಹೆಣ್ಣು ಮಗಳಾಗಿ ಚಿತ್ರರಂಗವನ್ನು ಪ್ರವೇಶ ಮಾಡಿ ಡಾಕ್ಟರ್ ರಾಜಕುಮಾರ್ ಅವರಂತಹ ದಿಗ್ಗಜ ನಟ ನಿರ್ಮಿಸಿರುವಂತಹ ದಾಖಲೆಯನ್ನು ಮುರಿದು ಆಗಿನ ಕಾಲದ ಯಾವ ಸ್ಟಾರ್ ನಟರಿಗೂ ಕಡಿಮೆ ಇಲ್ಲದಂತಹ ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಂತಹ ನಟಿ ಮಾಲಾಶ್ರೀ (Actress Malashree) ಅವರು ಅದೆಷ್ಟೇ ಪ್ರಯತ್ನ ಪಟ್ಟರು ಕೂಡ ವಿಷ್ಣುವರ್ಧನ್ ಅವರೊಂದಿಗೆ ನಟಿಸಲು ಸಾಧ್ಯವಾಗಲಿಲ್ಲವಂತೆ.

ಪ್ರೇಮಲೋಕ ಸಿನಿಮಾಗೆ ನಟಿ ಜೂಹಿ ಚಾವ್ಲಾ ರವಿಚಂದ್ರನ್ ಅವರಿಂದ ಪಡೆದಂತಹ ದುಬಾರಿ ಸಂಭಾವನೆ ಎಷ್ಟು ಲಕ್ಷ ಗೊತ್ತೇ?

ಟಾಪ್ ನಟಿ ಆಗಿದ್ರೂ ಮಾಲಾಶ್ರೀ ಜೊತೆ, ವಿಷ್ಣುವರ್ಧನ್ ರವರು ಯಾಕೆ ನಟಿಸಲಿಲ್ಲ ಗೊತ್ತೇ? - Kannada News

ಇದರ ಅಸಲಿ ಕಾರಣವೇನು ಸದಾ ಕಾಲ ವಿಷ್ಣುವರ್ಧನ್ ಅವರನ್ನು ಹಾಡಿ ಹೊಗಳುತ್ತಿದ್ದ ಮಾಲಾಶ್ರೀ (Actress Malashree) ಅವರು ಅವರೊಂದಿಗೆ ತೆರೆ ಹಂಚಿಕೊಳ್ಳದಿರಲು ಅಸಲಿ ಸತ್ಯ ಏನಿರಬಹುದು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು‌ ಗೆಳೆಯರೇ 1972ರಲ್ಲಿ ತೆರೆಕಂಡ ವಂಶವೃಕ್ಷ ಎಂಬ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ವಿಷ್ಣು ದಾದಾ 200ಕ್ಕು ಅಧಿಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಸಿನಿಮಾರಂಗಕ್ಕೆ (Kannada Film Industry) ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿ ಚಿತ್ರರಂಗದ ಸಾಧನೆಗೆ ಮೈಲುಗಲ್ಲನ್ನು ಹಾಕಿದರು.

ನೆನ್ನೆ ಮೊನ್ನೆಯಷ್ಟೆ ಚಿತ್ರರಂಗಕ್ಕೆ ಬಂದ ಕೃತಿ ಶೆಟ್ಟಿ ಸಂಪಾದನೆ ಮಾಡಿರುವ ಒಟ್ಟು ಆಸ್ತಿ ಎಷ್ಟು ಕೋಟಿ ಗೊತ್ತೇ?

ತಮ್ಮ ನಟನ ಕೌಶಲ್ಯ ಹಾಗೂ ವಯಕ್ತಿಕ ಗುಣಗಳ ಮೂಲಕವೇ ಹೆಸರುವಾಸಿಯಾಗಿದಂತಹ ವಿಷ್ಣುವರ್ಧನ್ ಅವರು ನಾಗರಹಾವು, ಮುತ್ತಿನ ಹಾರ, ಬಂಧನ, ಅಪೂರ್ವ ಸಂಗಮ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಗಮನಾರ್ಹ ನಟನೆ ಮಾಡುವ ಮೂಲಕ ತಮ್ಮದೇ ಆದ ವಿಶಿಷ್ಟ ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡರು.

Kannada Actor Vishnuvardhan

ಮತ್ತೊಂದೆಡೆ ಮಾಲಾಶ್ರೀ ಅವರು ರಾಘವೇಂದ್ರ ರಾಜಕುಮಾರ್ ಅವರ ನಂಜುಂಡಿ ಕಲ್ಯಾಣ ಎಂಬ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 80ಕ್ಕೂ ಹೆಚ್ಚು ಪಾತ್ರಗಳಿಗೆ ಜೀವ ತುಂಬಿ ತಮ್ಮ ದಿಟ್ಟ ಹಾಗೂ ಅದ್ಭುತ ಅಭಿನಯದ ಮೂಲಕ ಆಗಿನ ಕಾಲದ ಎಲ್ಲಾ ಸ್ಟಾರ್ ನಟಿಯರನ್ನು ಹಿಂದಿಟ್ಟು ಅಗ್ರಸ್ಥಾನವನ್ನು ಏರಿದರು.

ನಟಿ ಸಂಜನಾ ಆನಂದ್ ಒಂದು ಸಿನಿಮಾಗೆ ಪಡೆಯುವ ಸಂಭಾವನೆ ವೈರಲ್! ಎಷ್ಟು ಡಿಮ್ಯಾಂಡ್ ಮಾಡ್ತಾರೆ ಗೊತ್ತಾ?

ಹೀಗೆ ಆ ಒಂದು ಕಾಲದಲ್ಲಿ ಎಲ್ಲಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡ ಮಾಲಾಶ್ರೀ ಅವರು ವಿಷ್ಣುವರ್ಧನ್ ಅವರೊಂದಿಗೆ ನಟಿಸಲಾಗಲಿಲ್ಲ ಎಂಬ ಬೇಸರವನ್ನು ಆಗಾಗ ಸಂದರ್ಶನಗಳಲ್ಲಿ ವ್ಯಕ್ತಪಡಿಸುತ್ತಲೆ ಇರುತ್ತಾರೆ.

ಇದಕ್ಕೆ ಮುಖ್ಯ ಕಾರಣ ಆಗಿನ ಕಾಲದಲ್ಲಿ ಮಾಲಾಶ್ರೀ ಅವರೊಂದಿಗೆ ಅಭಿನಯಿಸಿದಂತಹ ಪ್ರತಿಯೊಂದು ನಟ ಕೂಡ ಬಹು ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಳ್ಳುತ್ತಿದ್ದರು. ಹೀಗೆ ಸಂದರ್ಶನ ಒಂದರಲ್ಲಿ ಮಾತನಾಡುವಾಗ “ಮಾಲಾಶ್ರೀ ನನ್ನ ಜೊತೆ ಒಂದು ಮೃಗ ನಟಿಸಿದರು ಕೂಡ ಅದು ತುಂಬಾನೇ ಫೇಮಸ್ ಆಗುತ್ತದೆ ಎಂಬ ಹೇಳಿಕೆ ನೀಡಿಬಿಟ್ಟಿದ್ದರು.

ನಾಗರಹಾವು ಚಿತ್ರದಲ್ಲಿ ಬುಲ್ ಬುಲ್ ಮಾತಾಡಕ್ಕಿಲ್ವಾ ಪಾತ್ರಕ್ಕೆ ಅಂಬರೀಶ್ ಪಡೆದ ಸಂಭಾವನೆ ಎಷ್ಟು ಗೊತ್ತೇ ?

Kannada Actress Malashree

ಈ ಒಂದು ಸುದ್ದಿ ವಿಷ್ಣುವರ್ಧನ್ ಅವರ ಕಿವಿಗೆ ಬಿದ್ದ ಕಾರಣ ವಿಷ್ಣುದಾದಾ ಅವರೊಟ್ಟಿಗೆ ನಟಿಸಲು ಮನಸ್ಸು ತೋರಲಿಲ್ಲ ಎಂಬ ಗಾಳಿ ಸುದ್ದಿ ಇಂದಿಗೂ ಹರಿದಾಡುತ್ತಿರುತ್ತದೆ. ಇನ್ನು ಮತ್ತೊಂದು ಕಡೆ ವಿಷ್ಣುವರ್ಧನ್ ಅವರ ಲಯನ್ ಜಗಪತಿರಾವ್ ಸಿನಿಮಾ ಬಿಡುಗಡೆಗೆ ಸಿದ್ಧವಿರುವಾಗಲೇ ಮಾಲಾಶ್ರೀ ಹೃದಯ ಹಾಡಿತು ಸಿನಿಮಾವನ್ನು ಬಿಡುಗಡೆ ಮಾಡಲು ಮುಂದಾಗುತ್ತಾರೆ.

ಉತ್ತುಂಗದ ಶಿಖರದಲ್ಲಿದ್ದ ನಟಿ ಕಲ್ಪನಾ, ಇದ್ದಕಿದ್ದ ಹಾಗೆ ಸಾವಿಗೆ ಶರಣಾಗಲು ಕಾರಣವೇನು ಗೊತ್ತೇ ?

ಲಯನ್ ಜಗಪತಿರಾವ್ ಸಿನಿಮಾ ಅಷ್ಟು ದೊಡ್ಡ ಮಟ್ಟದ ಯಶಸ್ಸು ಸಾಧಿಸಲಿಲ್ಲ. ಈ ಕಾರಣದಿಂದ ಭಿನ್ನಾಭಿಪ್ರಾಯಗಳು ಮೂಡಿದವು ಎಂಬ ಸುದ್ದಿ ಆಗಾಗ ಚರ್ಚೆಯಾಗುತ್ತಿರುತ್ತದೆ. ಇದೆಲ್ಲಾ ಒಂದೆಡೆ ಗಾಳಿ ಮಾತಾದರೂ ಇಬ್ಬರಿಗೂ ಒಟ್ಟಿಗೆ ನಟಿಸುವ ಅವಕಾಶ ಸಿಗದೇ ಸಹ ಇರಬಹುದು, ಅದರಿಂದಲೇ ನಟಿಸಲಿಲ್ಲವೇನೋ ಎಂಬ ಮಾತುಗಳು ಸಹ ಕೇಳಿ ಬರುತ್ತವೆ.

Do you know why Actor Vishnuvardhan didn’t act with Actress Malashree

Follow us On

FaceBook Google News

Do you know why Actor Vishnuvardhan didn't act with Actress Malashree

Read More News Today