ನಾಗರಹಾವು ಚಿತ್ರದಲ್ಲಿ ಬುಲ್ ಬುಲ್ ಮಾತಾಡಕ್ಕಿಲ್ವಾ ಪಾತ್ರಕ್ಕೆ ಅಂಬರೀಶ್ ಪಡೆದ ಸಂಭಾವನೆ ಎಷ್ಟು ಗೊತ್ತೇ ?
ಸ್ನೇಹಿತರೆ, ಪುಟ್ಟಣ್ಣ ಕಣಗಾಲ್ ಅವರ ಅದ್ಭುತ ನಿರ್ದೇಶನದಲ್ಲಿ ಮೂಡಿ ಬಂದ ನಾಗರಹಾವು (Nagarahavu Cinema) ಸಿನಿಮಾದಿಂದಾಗಿ ಅದೆಷ್ಟೋ ಕಲಾವಿದರು ತಮ್ಮ ಬದುಕನ್ನು ಕಟ್ಟಿಕೊಂಡರು ಎಂದರೆ ತಪ್ಪಾಗಲಾರದು.
ಆಂಗ್ರಿ ಯಂಗ್ ಮ್ಯಾನ್ ಪಾತ್ರದಲ್ಲಿ ನಾಯಕ ನಟನಾಗಿ ಡಾಕ್ಟರ್ ವಿಷ್ಣುವರ್ಧನ್ (Actor Vishnuvardhan) ಅವರು ಮಿಂಚಿದರೆ, ಖಳ ನಟನಾಗಿ ಜಲೀಲ ಪಾತ್ರದಲ್ಲಿ ಅಂಬರೀಶ್ (Actor Ambarish) ಅವರು ಸಿನಿಮಾದಲ್ಲಿ ಬಹಳ ಅದ್ಬುತವಾಗಿ ನಟಿಸುವ ಮೂಲಕ ತಮ್ಮ ಸಿನಿ ಬದುಕಿನ ದಾರಿಯನ್ನು ಇನ್ನಷ್ಟು ಸುಗಮವಾಗಿಸಿಕೊಂಡರು.
ಉತ್ತುಂಗದ ಶಿಖರದಲ್ಲಿದ್ದ ನಟಿ ಕಲ್ಪನಾ, ಇದ್ದಕಿದ್ದ ಹಾಗೆ ಸಾವಿಗೆ ಶರಣಾಗಲು ಕಾರಣವೇನು ಗೊತ್ತೇ ?
ಹೀಗೆ ಇಂದಿಗೂ ಕೂಡ ಅಂಬರೀಶ್ ಅವರ ಅಭಿಮಾನಿಗಳ ಬಾಯಲ್ಲಿ ಬರುವುದು ವುದು ಒಂದೇ ಡೈಲಾಗ್ ಬುಲ್ ಬುಲ್ ಮಾತಾಡಕ್ಕಿಲ್ವಾ? ಹೌದು ಗೆಳೆಯರೇ ಇಷ್ಟರ ಮಟ್ಟಿಗೆ ರೆಬಲ್ ಸ್ಟಾರ್ ಅಂಬರೀಶ್ ಅವರ ನಟನೆ ಸುಪ್ರಸಿದ್ಧಿ ಪಡೆದಿತ್ತು ಎಂದರೆ ನೀವು ನಂಬಲೇಬೇಕು.
ಶಾಲೆಗೆ ಹೋಗುವ ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದ ಮುದುಕ ಮುದುಕಿಯರವರೆಗೂ ಈ ಒಂದು ಡೈಲಾಗ್ ಹಿಡಿದು ತಮ್ಮ ಸ್ನೇಹಿತರನ್ನು ರೇಗಿಸುತ್ತಿದ್ದಂತಹ ಕಾಲವದು.
ಟಾಪ್ ನಲ್ಲಿರುವ ಕನ್ನಡ ಧಾರಾವಾಹಿಗಳು ಯಾವುದು ಗೊತ್ತೇ? ಮೊದಲ ಸ್ಥಾನವನ್ನು ಯಾವ ಸೀರಿಯಲ್ ಪಡೆದುಕೊಂಡಿದೆ?
ಹೀಗೆ ಸಿನಿಮಾದಲ್ಲಿ ಅಂಬರೀಶ್ ಅವರದ್ದು ಸಣ್ಣ ಪಾತ್ರವಾಗಿದ್ದರೂ ಕೂಡ ಅದನ್ನು ಜನರು ನೆನಪಿಟ್ಟುಕೊಳ್ಳುವಂತಹ ಅಭಿನಯ ಮಾಡಿ ಇಂದಿಗೂ ಅಜರಾಮರ ರಾಗಿರುವಂತಹ ಅಂಬಿ ಈ ಒಂದು ಪಾತ್ರಕ್ಕೆ ಪಡೆದ ಸಂಭಾವನೆ (Actor Ambarish Remuneration For Nagarahavu Cinema) ಎಷ್ಟು ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.
ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲ ಇದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
20 ಲಕ್ಷ ಸಂಭಾವನೆ ಪಡೆಯೋ ಕಾಂತಾರ ಖ್ಯಾತಿಯ ನಟ ಕಿಶೋರ್ ಅವರ ಹೆಂಡತಿ ಮಾಡುತ್ತಿರುವುದೇನು ಗೊತ್ತೇ?
ಹೌದು ಗೆಳೆಯರೆ ಜಲೀಲ ಎಂಬ ಪಾತ್ರದ ಮೂಲಕ ಬಣ್ಣದ ಲೋಕವನ್ನು ಪ್ರವೇಶ ಮಾಡಿದಂತಹ ಅಂಬರೀಶ್ ಅವರು ಇದುವರೆಗೂ ಬರೋಬ್ಬರಿ 208 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಪುಟ್ಟಣ್ಣ ಕಣಗಾಲ್ (Puttanna Kanagal) ಅವರ ನಿರ್ದೇಶನದಲ್ಲಿ ಅಂಬರೀಶ್ ಅವರ ನಟನೆಯಲ್ಲಿ ಮೂಡಿ ಬಂದಂತಹ ಸಿನಿಮಾಗಳೆಲ್ಲವು ಜನರಿಗೆ ಇಂದಿಗೂ ಕೂಡ ಅಚ್ಚುಮೆಚ್ಚು.
ಪಡುವಾರಳ್ಳಿ ಪಾಂಡವರು (Paduvaaralli Pandavaru), ರಂಗನಾಯಕಿ (Ranganayaki), ಶುಭ ಮಂಗಳ (Shubhamangala) ಮತ್ತು ಮಸಣದ ಹೂವು (Masanada Hoovu) ಸಿನಿಮಾಗಳಲ್ಲಿ ಪುಟ್ಟಣ್ಣ ಹಾಗೂ ಅಂಬರೀಶ್ ಅವರು ಮಾಡಿದಂತಹ ಮೋಡಿಯನ್ನು ಜನರು ಇಂದಿಗೂ ಸಹ ಮರೆತಿಲ್ಲ.
ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಾ ಕನ್ನಡ ಸಿನಿಮಾ ರಂಗವನ್ನು (Kannada Cinema Industry) ಬೇರೊಂದು ಲೋಕಕ್ಕೆ ಕೊಂಡಯುವಲ್ಲಿ ಅಂಬರೀಶ್ ಅವರು ತಮ್ಮದೇ ಆದ ನಿಸ್ವಾರ್ಥ ಸೇವೆಯನ್ನು ಮಾಡಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ.
ಇನ್ನು 1972ರಲ್ಲಿ ಅಂದರೆ ಬರೋಬ್ಬರಿ ನಾಲ್ಕು ದಶಕದ ಹಿಂದೆ ತೆರೆಕಂಡಂತಹ ನಾಗರಹಾವು ಸಿನಿಮಾ ನಿರೀಕ್ಷೆಗೂ ಮೀರಿದಂತಹ ಯಶಸ್ಸನ್ನು ಪಡೆದುಕೊಳ್ಳುತ್ತದೆ.
ಕಾಂತಾರ ಸಿನಿಮಾದ ಮೂಲಕ ಅಬ್ಬರಿಸಿದ ನಟ ರಿಷಬ್ ಶೆಟ್ಟಿ ಓದಿರುವುದು ಎಷ್ಟನೇ ತರಗತಿ ಗೊತ್ತಾ?
ಅಂದಿನ ಕಾಲಕ್ಕೆ ಬರೋಬ್ಬರಿ ಒಂದು ಕೋಟಿ ಹಣವನ್ನು ತನ್ನ ಗಲ್ಲ ಪೆಟ್ಟಿಗೆಗೆ ಬಾಚಿಕೊಳ್ಳುವ ಮೂಲಕ ತಿಂಗಳಾನುಗಟ್ಟಲೆ ಈ ಒಂದು ಸಿನಿಮಾ ತೆರೆ ಮೇಲೆ ರಾಜರಾಜಿಸಿ ಬಹುದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು.
ಈ ಒಂದು ಸಿನಿಮಾದ ಜಲೀಲ ಪಾತ್ರದಲ್ಲಿ ಅಭಿನಯಿಸಲು ಅಂದು ಅಂಬರೀಶ್ ಅವರು ಕೇವಲ 3000 ಹಣವನ್ನು ಸಂಭಾವನೆಯನ್ನಾಗಿ ಪಡೆದಿದ್ದರಂತೆ. ಮೊದಲಿಗೆ ಇವರಿಗೆ ಕೇವಲ 1500 ನಿಗದಿ ಮಾಡಲಾಗಿತ್ತು. ಆದರೆ ಸಿನಿಮಾ ಬಹು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡ ನಂತರ ದುಪ್ಪಟ್ಟು ಹಣವನ್ನು ನೀಡಿ ಅಂಬರೀಶ್ ಅವರ ಅಭಿನಯವನ್ನು ಗೌರವಿಸಿದರಂತೆ.
Actor Rebel Star Ambarish Remuneration For Nagarahavu Cinema