ಆಟೋರಾಜ ಶಂಕ್ರಣ್ಣ ಚಿತ್ರರಂಗದಲ್ಲಿ ಇದ್ದದ್ದು ಎಷ್ಟು ವರ್ಷ ಗೊತ್ತಾ? ಈ ಅವಧಿಯಲ್ಲಿ ಅವರು ನೀಡಿದ ಮಹಾನ್ ಸಿನಿಮಾಗಳು ಎಷ್ಟು?

Actor Shankar Nag : ಸ್ನೇಹಿತರೆ ನಟನೆ ಮಾತ್ರವಲ್ಲದೆ ನಿರ್ದೇಶನದಲ್ಲಿಯೂ ಚಾಪು ಮೂಡಿಸಿದಂತಹ ಆಟೋರಾಜ ಶಂಕ್ರಣ್ಣ ಚಿತ್ರರಂಗದಲ್ಲಿ ಇದ್ದದ್ದು ಎಷ್ಟು ವರ್ಷ ಗೊತ್ತಾ? ಇಷ್ಟು ಕಡಿಮೆ ಅವಧಿಯಲ್ಲಿ ಅದೆಂತೆ ಸಿನಿಮಾಗಳನ್ನು ನೀಡಿದ್ದಾರೆ

- - - - - - - - - - - - - Story - - - - - - - - - - - - -

Actor Shankar Nag : ಸ್ನೇಹಿತರೆ ನಟನೆ ಮಾತ್ರವಲ್ಲದೆ ನಿರ್ದೇಶನದಲ್ಲಿಯೂ ಚಾಪು ಮೂಡಿಸಿದಂತಹ ಆಟೋರಾಜ ಶಂಕ್ರಣ್ಣ (ನಟ ಶಂಕರ್ ನಾಗ್) ಚಿತ್ರರಂಗದಲ್ಲಿ ಇದ್ದದ್ದು ಎಷ್ಟು ವರ್ಷ ಗೊತ್ತಾ? ಇಷ್ಟು ಕಡಿಮೆ ಅವಧಿಯಲ್ಲಿ ಅದೆಂತೆ ಸಿನಿಮಾಗಳನ್ನು ನೀಡಿದ್ದಾರೆ?

ಸ್ನೇಹಿತರೆ, ಶಂಕರ್ ನಾಗ್ ಅವರ ಹೆಸರು ಕೇಳುತ್ತಿದ್ದ ಹಾಗೆ ನಮ್ಮೆಲ್ಲರಿಗೂ ಅವರ ಸಂತೋಷಕ್ಕೆ ಹಾಡು ಸಂತೋಷಕ್ಕೆ.. ಎಂಬುದು ನೆನಪಿಗೆ ಬಂದು ಕುಣಿಯಲು ಪ್ರಾರಂಭ ಮಾಡುತ್ತೇವೆ. ಹೀಗೆ ತಮ್ಮ ಅದ್ಭುತ ನಿರ್ದೇಶನ ಹಾಡುಗಾರಿಕೆ ಹಾಗೂ ನಟನೆಯ ಮೂಲಕ ಆಗಿನ ಕಾಲದ ಸಿನಿ ಪ್ರೇಕ್ಷಕರ ಮನಸ್ಸನ್ನು ಮುದಗೊಳಿಸಿದಂತಹ ನಟ ಶಂಕರ್ ನಾಗ್ ಕನ್ನಡ ಸಿನಿಮಾ ರಂಗದ (Kannada Cinema Industry) ಸಾರ್ವಕಾಲಿಕ ಶ್ರೇಷ್ಠ ವ್ಯಕ್ತಿತ್ವ ಎಂದರೆ ತಪ್ಪಾಗಲಾರದು.

ಕಾಂತಾರ ಸಿನಿಮಾದ ಮೂಲಕ ಅಬ್ಬರಿಸಿದ ನಟ ರಿಷಬ್ ಶೆಟ್ಟಿ ಓದಿರುವುದು ಎಷ್ಟನೇ ತರಗತಿ ಗೊತ್ತಾ?

How Many Years Actor Shankar Nag was in the film industry, What are his movies

ಹೌದು ಗೆಳೆಯರೇ ತಮ್ಮೊಳಗಿದ್ದಂತಹ ಅಗಾಧವಾದ ಕಲೆಯ ಮೂಲಕ ಇಡೀ ಭಾರತ ಸಿನಿಮಾ ರಂಗವನ್ನು ತಮ್ಮತ್ತ ತಿರುಗಿ ನೋಡುವಂತೆ ಮಾಡಿದ ಸರ್ವ ಶ್ರೇಷ್ಠ ನಟ ಶಂಕರ್ ನಾಗ್ (Shankar Nag).

ಅವರು ಸದಾ ಕಾಲ ಮಲಗುವುದು ಇದ್ದೆ ಇದೆ ಬದುಕಿದ್ದಾಗ ಏನಾದರೂ ಮಾಡು.. ಎಂದು ಯುವಕರನ್ನು ಉರಿದುಂಬಿಸಿ ಸ್ಪೂರ್ತಿದಾಯಕವಾಗಿ ಬದುಕಿ ತೋರಿಸಿದಂತಹ ಶ್ರೇಷ್ಠ ವ್ಯಕ್ತಿತ್ವ.

ಹೌದು ಗೆಳೆಯರೇ ಅಷ್ಟು ಒಳ್ಳೆ ಒಳ್ಳೆಯ ಸಿನಿಮಾಗಳನ್ನು ನೀಡಿರುವಂತಹ ಶಂಕರ್ ನಾಗ್ ಅವರು ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಸಕ್ರಿಯ ರಾಗಿದ್ದು ಕೇವಲ 13 ವರ್ಷಗಳು ಎಂದರೆ ನೀವು ನಂಬಲೇಬೇಕು. 1977 ರಿಂದ ಶುರುವಾದ ಶಂಕ್ರಣ್ಣನ ಸಿನಿ ಬದುಕು 1990ರಂದು ಅವರ ಮರಣದ ಕಪ್ಪು ನೆರಳಿನಿಂದಾಗಿ ಮಾಸಿಹೋಯಿತು.

ಕನಸಿನ ರಾಣಿ ಮಾಲಾಶ್ರೀ ಅವರ ಮೊದಲ ಸಿನಿಮಾ ಯಾವುದು ಗೊತ್ತಾ? ಕ್ಲೂ ಬೇಕಾ… ಕನ್ನಡ ಸಿನಿಮಾ ಅಲ್ಲ!

Actor Shankar Nag

ಅಂದೇ ಕನ್ನಡ ಚಿತ್ರರಂಗ ಮಹಾನ್ ನಟನನ್ನು ಕಳೆದುಕೊಂಡು ಅನಾಥವಾಯಿತು, ಓರ್ವ ಚಿಂತನಶೀಲ ವ್ಯಕ್ತಿಯನ್ನೇ ಆ ಭಗವಂತ ತನ್ನತ್ತ ಕರೆದುಕೊಂಡು ಬಿಟ್ಟ. ಇಂದಿಗೂ ಅವರ ಅಗಲಿಕೆ ನಮ್ಮ ಮನಸ್ಸಿನ ಮೇಲೆ ಅಗಾಧವಾದ ನೋವುಂಟು ಮಾಡಿದೆ.

ಈಗಲೂ ಅಷ್ಟೇ ಬೇಡಿಕೆಯಿರುವ ನಟಿ ರಮ್ಯಾ ಕೃಷ್ಣ ಅವರ ನಿಜವಾದ ವಯಸ್ಸೆಷ್ಟು ಗೊತ್ತಾ? ನಂಬಲು ಅಸಾಧ್ಯ!

ಆದರೂ ಕೂಡ ಅವರ ಪ್ರತಿಭೆ ನಟನೆ ನಿರ್ದೇಶನ ಎಲ್ಲವೂ ಇಂದಿಗೂ ಕನ್ನಡಿಗರ ಮನಸ್ಸಿನಿಂದ ಮಾಸಿಲ್ಲ ಎಂದರೆ ತಪ್ಪಾಗುವುದಿಲ್ಲ. ಹೌದು ಗೆಳೆಯರೆ ಆಟೋ ರಾಜ, ಸಾಂಗ್ಲಿಯಾನ, ಗೀತಾ, ಸಿಬಿಐ ಶಂಕರ್, ಮಿಂಚಿನ ಓಟ, ಹೊಸ ಜೀವನ, ನೋಡಿ ಸ್ವಾಮಿ ನಾವಿರೋದು ಹೀಗೆ, ಆಕ್ಸಿಡೆಂಟ್, ಒಂದಾನೊಂದು ಕಾಲದಲ್ಲಿ, ಒಂದು ಮುತ್ತಿನ ಕಥೆ, ಭಾರಿ ಭರ್ಜರಿ ಬೇಟೆ, ಜನ್ಮ ಜನ್ಮದ ಅನುಬಂಧ, ಬೆಂಕಿ ಬಿರುಗಾಳಿ, ಮೂಗನ ಸೇಡು, ಅಪೂರ್ವ ಸಂಗಮ,

ಮುನಿಯನ ಮಾದರಿ, ಆರದ ಗಾಯ, ನಿಗೂಢ ರಹಸ್ಯ, ಪ್ರಾಣ ಸ್ನೇಹಿತ, ಸೀತಾರಾಮ, ನ್ಯಾಯ ಎಲ್ಲಿದೆ, ಚಂಡಿ ಚಾಮುಂಡಿ, ಕಾಳಿಂಗ ಸರ್ಪ, ದಿಗ್ವಿಜಯ, ತರ್ಕ, ಆಟ ಬೊಂಬಾಟ, ಆವೇಶ, ಹುಲಿ ಹೆಬ್ಬುಲಿ, ಕಾರ್ಮಿಕ ಕಳ್ಳನಲ್ಲ,

ನಟಿ ಗಾಯತ್ರಿ ಸಿನಿಮಾ ರಂಗದಿಂದ ದೂರ ಉಳಿಯಲು ಕಾರಣವೇನು? ಅನಂತನಾಗ್ ನಟಿಸಕೂಡದು ಎಂಬ ಶರತ್ತನ್ನು ಹಾಕಿದ್ರಾ?

ಉತ್ಸವ ಗಂಡು, ಬೇರುಂಡ, ಜೀವಕ್ಕೆ ಜೀವ, ತಾಳಿಯ ಭಾಗ್ಯ, ಜಯಭೇರಿ, ನಾಗಿಣಿ, ಶಕ್ತಿ, ಮಾನವ ದಾನವ, ದೇವರ ಆಟ, ವಜ್ರಮುಷ್ಟಿ, ಕೆರಳಿದ ಹೆಣ್ಣು, ಸೇರಿದಂತೆ ಇನ್ನೂ ಹಲವಾರು ಸಿನಿಮಾಗಳ ಪಾತ್ರಗಳಿಗೆ ಶಂಕರ್ ನಾಗ್ ಅವರು ಜೀವ ತುಂಬಿದ್ದಾರೆ.

How Many Years Actor Shankar Nag was in the film industry, What are his movies

Related Stories